ಡಿಕೆಶಿಯನ್ನು ಪಕ್ಷದಿಂದ ಉಚ್ಛಾಟಿಸಲು ಆಗ್ರಹ
ಶಾಸಕರ ರಾಜೀನಾಮೆ ವೇಳೆ ಸ್ವೀಕೃತಿ ಪತ್ರ ಹರಿದು ಹಾಕಿದ ಸಚಿವರ ವಿರುದ್ಧ ಎ.ಮಂಜು ವಾಗ್ಧಾಳಿ
Team Udayavani, Jul 7, 2019, 11:58 AM IST
ಮಾಜಿ ಸಚಿವ ಎ.ಮಂಜು ಸುದ್ದಿಗಾರೊಂದಿಗೆ ಮಾತನಾಡಿದರು.
ಚನ್ನರಾಯಪಟ್ಟಣ: ರಾಜ್ಯದ ಅಪವಿತ್ರ ಮೈತ್ರಿ ಸರ್ಕಾರದಿಂದ ಬೇಸತ್ತ್ತ ಹತ್ತಾರು ಶಾಸಕರು ಸಭಾಪತಿಗೆ ರಾಜೀನಾಮೆ ನೀಡಿದರೆ ಅವರ ಸ್ವೀಕೃತಿ ಪತ್ರ ವನ್ನು ಹರಿದು ಹಾಕುವ ಮೂಲಕ ಸಂವಿಧಾನಕ್ಕೆ ದಕ್ಕೆ ತಂದಿರುವ ಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಈ ಕೂಡಲೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಮಾಜಿ ಮಂತ್ರಿ ಎ.ಮಂಜು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಸರಿಯಾಗಿ ಆಡಳಿತ ನಡೆಸದೆ ಇರುವುದರಿಂದ ಕ್ಷೇತ್ರದ ಜನತೆ ಮುಂದೆ ಸಂಚಾರ ಮಾಡಲು ಆಗದೆ ಬೇಸತ್ತು ಹಾಗೂ ವೈಯಕ್ತಿಕ ಕಾರಣದಿಂದ ಹಲವು ಶಾಸಕರು ಸಭಾಪತಿಗೆ ರಾಜಿನಾಮೆ ನೀಡಿದ್ದಾರೆ ಈ ವೇಳೆ ಗೂಡಾಂವರ್ತನೆ ಅನುಸರಿಸಿದ ಮಂತ್ರಿ ಶಾಸಕರ ರಾಜಿನಾಮೆ ಸ್ವೀಕೃತಿಯನ್ನು ಬಲವಂತವಾಗಿ ಶಾಸಕರ ಕೈನಲ್ಲಿ ಕಿತ್ತು ಹರಿದು ಹಾಕಿರುವುದು ಅಕ್ಷಮ್ಯ ಅಪರಾಧ ಎಂದರು.
ಸಂವಿಧಾನಕ್ಕೆ ಗೌರವ ನೀಡಬೇಕೆಂದರೆ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ತಮ್ಮ ಸಚಿವನ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ಥಳದಲ್ಲಿ ಇದ್ದ ಪೊಲೀಸರು ಕಣ್ಣಾರೆ ಕಂಡಿರುವುದರಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಬೇಕು ಇಲ್ಲದೆ ಹೋದರೆ ರಾಜ್ಯದಲ್ಲಿ ಇಂತಹ ಗೂಂಡಾ ಮಂತ್ರಿಗಳ ಹಾವಳಿಗೆ ಶಾಸಕರು ಹೆದರಿ ಜೀವನ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಹಿಂದೆಯೂ ಬೆಂಗಳೂರಿನ ರೆಸಾರ್ಟ್‌ನಲ್ಲಿ ಹಲವು ಶಾಸಕರ ರಾಜಿನಾಮೆ ಪತ್ರವನ್ನು ಬಲವಂತ ವಾಗಿ ಶಾಸಕರ ಕಿಸೆಗೆ ಕೈಹಾಕಿ ಕಿತ್ತುಕೊಂಡು ಹರಿದು ಹಾಕಿದ್ದರು. ಅಂದು ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳದೆ ಇದುದ್ದರಿಂದ ಸ್ವೀಕರ್ ಸಂಮುಖದಲ್ಲಿ ಗೂಂಡಾವರ್ತನೆ ನಡೆಸಿದ್ದಾರೆ. ಇಂತಹವರಿಗೆ ಕಾನೂನು ರೀತಿ ತಕ್ಕ ಪಾಠ ಕಲಿಸಬೇಕಿದೆ. ವಿಧಾನ ಸೌಧದಲ್ಲಿ ದುರ್ನಡತೆ ತೋರುವ ಮಂತ್ರಿ ತಮ್ಮ ಕ್ಷೇತ್ರದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ ಎನ್ನುವುದು ಜನರ ಕಣ್ಣ ಮುಂದಿದೆ ಎಂದರು.
ತಮ್ಮ ಪಕ್ಷದ ಶಾಸಕರು ರಾಜಿನಾಮೆ ನೀಡುವಾಗ ಪಕ್ಷದ ಹಿರಿಯರ ಸಮ್ಮುಖದಲ್ಲಿ ಮಾತನಾಡಿ ರಾಜಿನಾಮೆ ನೀಡದಂತೆ ತಡೆಯಬೇಕು ಅದರ ಬದಲಾಗಿ ಸಭಾಪತಿ ಮುಂದೆ ಗುಂಡಾವರ್ತನೆ ಮಾಡುವ ಮಟ್ಟಕ್ಕೆ ಇಳಿಯಬಾರದು. ತಮ್ಮ ಅಧಿಕಾರಿ ಕೈ ತಪ್ಪುತ್ತದೆ ಎಂದು ಬುದ್ಧಿ ಭ್ರಮಣೆಯಾದವರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.