ಇದ್ದು ಇಲ್ಲದಂತಾದ ದಿಂಡಗೂರು ಗ್ರಾಪಂ ಕಚೇರಿ!
Team Udayavani, Feb 25, 2023, 3:16 PM IST
ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೊಬಳಿ ದಿಂಡಗೂರು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸೆತ್ತು ಸಾರ್ವಜನಿಕರು ಹಾಗೂ ಸದಸ್ಯರು ಧರಣಿ ನಡೆಸಿದರು.
ಧರಣಿ ಉದ್ದೇಶಿಸಿ ಜೋಗಿಪುರ ನಂದನ್ ಮಾತನಾಡಿ, ಗ್ರಾಮ ಪಂಚಾಯಿತಿ ಬಾಗಿಲು ತೆರೆಯುವ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿಲ್ಲ, ಬೆಳಗ್ಗೆ 12 ಗಂಟೆಗೆ ಕಚೇರಿಗೆ ಆಗಮಿಸಿದ್ದೇನೆ. ಸಂಜೆ 4 ಗಂಟೆಯಾದರು ಇತ್ತು ಅಧಿಕಾರಿಗಳು ಸುಳಿದಿಲ್ಲ, ಇನ್ನು ಸಿಬ್ಬಂದಿಗಳು ಕಚೇರಿ ಯಲ್ಲಿ ಕುಳಿತ್ತಿಲ್ಲ ಎಂದು ಆಪಾದನೆ ಮಾಡಿದರು.
ದೂರು ನೀಡಿದರೂ ಕ್ರಮವಿಲ್ಲ: ಒಂದು ದಿವಸ ಈ ರೀತಿಯಾದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ ವಾರದಲ್ಲಿ ಎರಡು ದಿವಸ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದ್ದೆ. ಎರಡೂ ದಿವಸವೂ ಇದೇ ರೀತಿಯಾಗಿದೆ. ಈ ಬಗ್ಗೆ ದೂರವಾಣಿ ಮೂಲಕ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನಿಲ್‌ಕುಮಾರ್ ಗಮನಕ್ಕೆ ತಂದರೂ ಅವರು ತಾಲೂಕು ಪಂಚಾಯಿತಿಗೆ ಆಗಮಿಸಿ ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎನ್ನುತ್ತಾರೆ ಎಂದರು.
ಗ್ರಾಪಣ ಕಚೇರಿ ಬಂದ್ ಮಾಡಿ: ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಾಜರಾಗದೆ ಬಾಗಿಲು ತೆರೆದು ಈ ರೀತಿ ಹೋರ ಹೋಗುವುದಾದರೆ ಗ್ರಾಮ ಪಂಚಾಯಿತಿಗೆ ಕಾರ್ಯಾಲಯ ಅಗತ್ಯವಿಲ್ಲ, ಇದನ್ನು ಸಂಪೂರ್ಣ ಬಾಗಿಲು ಹಾಕಿ ತಾಲೂಕು ಪಂಚಾಯಿತಿಯಲ್ಲಿ ಎಲ್ಲಾ ಕೆಲಸ ಮಾಡಲಿ, ಮೇಲಾಧಿಕಾರಿಗಳ ನಿರ್ಲಕ್ಷದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ಕಚೇರಿಗೆ ಆಗಮಿಸುತ್ತಿಲ್ಲ ಎಂದು ದೂರಿದರು.
ಗೈರಾದರೂ ಹಾಜರಾತಿ ಪುಸ್ತಕದಲ್ಲಿ ಸಹಿ: ಪಿಡಿಒ ರಾಮಸ್ವಾಮಿ ಕಚೇರಿಗೆ ಆಗಮಿಸಿಲ್ಲ. ಆದರೂ, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆ ಇದನ್ನು ಗಮನಿಸಿದರೆ, ಪಿಡಿಒ ಎರಡ್ಮೂರು ದಿವಸದ ಸಹಿಯನ್ನು ಒಂದೇ ದಿವಸ ಮಾಡಿರುವುದ ಅನುಮಾನ ಕಾಡುತ್ತಿದೆ, ಇವರು ಜನರಿಗೆ ಸಿಗುತ್ತಿಲ್ಲ ದೂರವಣಿ ಕರೆ ಮಾಡಿದರೆ ಪುನ್ ಆ್ಯಪ್ ಮಾಡಿಕೊಂಡಿದ್ದಾರೆ, ಇಂದಹ ಅಧಿಕಾರಿ ವಿರುದ್ದ ಜಿಲ್ಲಾ ಪಂಚಾಯಿತಿ ಸಿಇಒ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಆಲಿಸುವ ಸೌಜನ್ಯವಿಲ್ಲ: ಕಚೇರಿಯಲ್ಲಿ ನೀರುಘಟಿ, ಡಿಗ್ರೂಪ್ ನೌಕರರು ಕುಳಿತುಕೊಂಡು ಕಚೇರಿಗೆ ಆಗಮಿಸುವ ಜನರ ಸಮಸ್ಯೆ ಆಲಿಸುವ ಸೌಜನ್ಯ ಬೆಳೆಸಿಕೊಂಡಿಲ್ಲ, ಚನ್ನರಾಯಟಪಟ್ಟಣಕ್ಕೆ ಕೇಲವ ಎರಡು ಕೀಮಿ ಸಮೀಪದಲ್ಲಿ ದಿಂಡಗೂರು ಗ್ರಾಮ ಪಂಚಾಯಿತಿ ಇದೆ ಇಂತಹ ಗ್ರಾಪಂಗಳ ಗತಿ ಈ ರೀತಿಯಾದರೆ ಇನ್ನು ಗಡಿಯಲ್ಲಿ ಗ್ರಾಮ ಪಂಚಾಯಿತಿಗಳ ಸಮಸ್ಯೆ ಎಷ್ಟು ಇದೆ ಎನ್ನುವುದನ್ನು ಜಿಲ್ಲಾಧಿ ಕಾರಿಗಳು ಅರಿಯಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಹಣ ಪೋಲು: ಗ್ರಾಮ ಪಂಚಾಯಿತಿ ಸದಸ್ಯ ಮಂಜೇಗೌಡ ಮಾತನಾಡಿ, ಸ್ವತ್ಛ ಭಾರತ್ ವಿಷನ್ ಮೂಲಕ ಮೂರು ಲಕ್ಷ ರೂ.ವೆಚ್ಚ ಮಾಡಿ ಕಸ ಸಂಗ್ರಹ ಮಾಡಲು ಆಟೋ ಖರೀದಿಸಲಾಗಿದೆ. ಒಂದು ದಿವಸವೂ ರಸ್ತೆಯಲ್ಲಿ ಆಟೋ ಸಂಚಾರ ಮಾಡಿಲ್ಲ, ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ, ಅಧಿಕಾರಿಗಳ ನಿರ್ಲಕ್ಷಕ್ಕೆ ಜನರ ಹಣ ಮಣ್ಣು ಪಾಲು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ತಾಪಂ ಇಒ ರಾಜೀನಾಮೆ ನೀಡಲಿ : ತಾಲೂಕು ಪಂಚಾಯಿತಿ ಇಒ ಸುನಿಲ್ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಿಬ್ಬಂದಿಗಳಿಂದ ಸರಿಯಾಗಿ ಕೆಲಸ ಮಾಡಿಸಲು ಸಾಧ್ಯವಾಗದೆ ಇದ್ದರೆ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಇಲ್ಲವೆ ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬೇಕು, ಬದಲಾಗಿ ಸಾರ್ವಜನಿಕರಿಗೆ ಉಡಾಫೆ ಉತ್ತರ ನೀಡುವುದು ಎಷ್ಟು ಸರಿ? ಸರ್ಕಾರ ವೇತನ ನೀಡುವುದು ಜನರಿ ಸಮಸ್ಯೆ ಬಗೆ ಹರಿಸಲೆಂದು ಆದರೆ ಇವರು ಜನರನ್ನು ಮನೆ ಕೆಲಸದವರ ರೀತಿ ಮಾತನಾಡಿಸುತ್ತಾರೆ ಎಂದು ಜೋಗಿಪುರ ನಂದನ್ ಆಪಾದನೆ ಮಾಡಿದರು.
15ನೇ ಹಣಕಾಸಿನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದ್ದೇನೆ. ಕಳೆದ ಒಂದು ತಿಂಗಳಿನಿಂದ ಮಾಹಿತಿ ನೀಡುತ್ತಿಲ್ಲ, ತಾಪಂ ಇಒ ಸುನಿಲ್ ಭೇಟಿ ಮಾಡಿದರೆ ಗ್ರಾಪಂ ಅಡಳಿತ ಮಂಡಳಿಯೇ ಸುಪ್ರೀಂ. ಇದಕ್ಕೂ ನನಗೂ ಸಂಬಂಧವಿಲ್ಲ ಅಂತಾರೆ. – ಚೇನತ್, ಆರ್‌ಟಿಐ ಕಾರ್ಯಕರ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.