ಜಿಲ್ಲಾ ಕಸಾಪ ಚುನಾವಣೆ ಪ್ರಚಾರ ಶುರು
Team Udayavani, Oct 16, 2021, 3:41 PM IST
ಹಾಸನ: ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಎಚ್.ಎಲ್.ಮಲ್ಲೇಶ್‌ಗೌಡ ಶುಕ್ರ ವಾರ ವಿಜಯದಶಮಿ ಅಂಗವಾಗಿ ಹಾಸನದ ರಿಂಗ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.
ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಿದ್ದ ಕಸಾಪ ಚುನಾವಣೆ ನ. 21ಕ್ಕೆ ಮರು ನಿಗದಿಯಾಗಿದೆ. ವಿಜಯದಶಮಿಯ ಶುಭದಿನದಿಂದ ಚುನಾ ವಣಾ ಪ್ರಚಾರ ಕಾರ್ಯವನ್ನು ಆರಂಭಿಸುತ್ತಿ ದ್ದೇನೆ.
ನ.21 ರಂದು ನಡೆಯುವ ಚುನಾವಣೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸದಸ್ಯರು ತಪ್ಪದೇ ಮತದಾನ ಮಾಡಬೇಕು ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇನ್ನೂ ಸಾಕಷ್ಟು ಸಾಹಿತ್ಯಾತ್ಮಕವಾಗಿ ಕೆಲಸ-ಕಾರ್ಯಗಳು ಆಗಬೇಕಿದೆ.
ಆ ಮೂಲಕ ಗ್ರಾಮ ಮಟ್ಟದ ವರೆಗೂ ಪರಿಷತ್ತಿನ ಚಟುವಟಿಕೆಗಳನ್ನು ಕೊಂಡೊಯ್ದು ಅದನ್ನು ಮತ್ತಷ್ಟು ಸದೃಢಗೊಳಿಸ ಬೇಕಿದೆ. ಇದಕ್ಕಾಗಿ ನನ್ನನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಹಾಸನ ಜಿಲ್ಲೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಹಿರಿಮೆಗೆ ಮತ್ತಷ್ಟು ಮೆರುಗು ನೀಡಬೇಕು. ಇದಕ್ಕೆ ಪೂರಕವಾಗಿ ಹಲವು ವಿಭಿನ್ನ ಹಾಗೂ ನೂತನವಾದ ಯೋಜನೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಅನುಷ್ಠಾನ ಗೊಳಿಸುವ ಹೆಬ್ಬಯಕೆ ನನ್ನದಾಗಿದೆ.
ಇದನ್ನೂ ಓದಿ;- ಬಾಲಕಿಯ ಪ್ರಾಣ ಬಲಿ ಪಡೆಯಿತು ದಸರಾ ಘಟ ವಿಸರ್ಜನೆ ಘಟನೆ!
ಕನ್ನಡ ನಾಡು-ನುಡಿಯ ಪರವಾಗಿರುವ ನನ್ನೊಳಗಿನ ಕಲ್ಪನೆ, ಕನಸುಗಳನ್ನು ಸರ್ವರ ಸಹಕಾರದೊಂದಿಗೆ ಅನುಷ್ಠಾನಗೊಳಿಸುವ ಹಂಬಲದೊಂದಿಗೆ ಸಾಹಿತ್ಯ ಪರಿಷತ್ತಿನ ಜಿಲಾ Éಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ. ಪರಿಷತ್ತಿನ ಸದಸ್ಯರು ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದು ಹೇಳಿದರು. ಮೂರು ದಶಕಗಳಿಗೂ ಹೆಚ್ಚು ಕಾಲ ಕಾಲೇಜಿ ನಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ಕನ್ನಡ ಸಾಹಿತ್ಯದ ಜತೆ ಜತೆಗೆ ನಾಡು-ನುಡಿಯ ಸೇವೆ ಮಾಡಿ ದ್ದೇನೆ. ಈಗ ಸೇವಾ ನಿವೃತ್ತಿ ಹೊಂದಿರುವ ನಾನು, ಸಾಹಿತ್ಯ ಸೇವೆಯ ಹೆಗ್ಗುರಿ, ಮನೋಧರ್ಮ ದೊಂದಿಗೆ ಸ್ಪರ್ಧೆ ಮಾಡಿದ್ದು, ಎಲ್ಲರ ಸಹಕಾರ ದೊಂದಿಗೆ ಚುನಾವಣೆ ಎದುರಿಸುತ್ತಿದ್ದೇನೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಮಂಜಪ್ಪಗೌಡ, ನಗರಸಭೆ ಮಾಜಿ ಅಧ್ಯಕ್ಷ ಡಾ.ಎಚ್.ಎಸ್. ಅನಿಲ್ ಕುಮಾರ್, ಕಸಾಪ ಮಾಜಿ ಕಾರ್ಯ ದರ್ಶಿ ಜಾವಗಲ್ ಪ್ರಸನ್ನ, ನಗರಸಭೆ ಸದಸ್ಯ ಚಂದ್ರೇಗೌಡ, ಪ್ರಾಂಶುಪಾಲ ಜಿ.ಡಿ. ನಾರಾ ಯಣ್, ಪುಟ್ಟರಾಜು, ನಿವೃತ್ತ ಪ್ರಾಧ್ಯಾಪಕ ಕುಶಾಲಪ್ಪ, ಪ್ರಾಧ್ಯಾಪಕ ಪ್ರಕಾಶ್, ಹೆರಗು ಸುರೇಶ್, ಹೊಳೆನರಸೀಪುರ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಅಧ್ಯಾಪಕ ಬಿ.ಡಿ. ಶಂಕರೇಗೌಡ, ಪ್ರದೀಪ್ ಇಂಟರ್ ನ್ಯಾಷನಲ್ ಶಾಲೆ ಮುಖ್ಯಸ್ಥ ಪ್ರದೀಪ್, ಯುವ ಮುಖಂಡ ಸುನೀಲ್, ರೋಟರಿ ಕ್ಲಬ್ ಆಫ್ ಕ್ವಾಂಟಾ ಅಧ್ಯಕ್ಷ ಬಂಟರಹಳ್ಳಿ ಶಿವಕುಮಾರ್, ಹನುಮಂತಪುರ ಚಂದ್ರಶೇಖರ್, ಮಲ್ಲೇಶಗೌಡ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.