ಹಾಲು ಉತ್ಪಾದಕರಿಗೆ ಹಾಮೂಲ್‌ನಿಂದ ದೀಪಾವಳಿ ಗಿಫ್ಟ್
Team Udayavani, Oct 27, 2019, 3:00 AM IST
ಹಾಸನ: ಹಾಲು ಉತ್ಪಾದಕರಿಗೆ ಹಾಸನ ಹಾಲು ಒಕ್ಕೂಟ ( ಹಾಮೂಲ್) ಪ್ರತಿ ಲೀಟರ್‌ಗೆ ಒಂದು ರೂ. ಹೆಚ್ಚಿನ ದರವನ್ನು ತಕ್ಷಣದಿಂದಲೇ ನೀಡಲು ನಿರ್ಧರಿಸಿದ್ದು, ದೀಪಾವಳಿ ಗಿಫ್ಟ್ ನೀಡಿದೆ. ಈಗ ಪ್ರತಿ ಲೀಟರ್‌ಗೆ 25.50 ರೂ. ದರ ಇದ್ದು, ಇನ್ನು ಮುಂದೆ ಮಾ.31 ರ ವರೆಗೆ ಹಾಲಿನ ಖರೀದಿ ದರ 26.50 ರೂ. ಇರಲಿದೆ.
ಲಾಭಾಂಶ ವಿತರಣೆ: ಸುದ್ದಿಗೋಷ್ಠಿಯಲ್ಲಿ ಹಾಲಿನ ಖರೀದಿ ದರ ಹೆಚ್ಚಳ ಘೋಷಣೆ ಮಾಡಿದ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು, ಈ ವರ್ಷ ಹಾಸನ ಹಾಲು ಒಕ್ಕೂಟವು ಸೆಪ್ಟಂಬರ್ ಅಂತ್ಯದವರೆಗೆ 40 ಕೋಟಿ ರೂ. ಲಾಭ ಗಳಿಸಿದ್ದು, ಲಾಭಾಂಶವನ್ನು ಹಾಲು ಉತ್ಪಾದಕರಿಗೆ ಹಂಚುವ ನಿಟ್ಟಿನಲ್ಲಿ ಹಾಲಿನ ಖರೀದಿ ದರವನ್ನು ಒಂದು ರೂ. ಹೆಚ್ಚಳ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹೆಚ್ಚುವರಿ ದರವನ್ನು ಮಾರ್ಚ್ ಅಂತ್ಯದವರೆಗೂ ಮುಂದುವರಿಸಲಿದ್ದು, ಲಾಭಾಂಶದಲ್ಲಿ 20 ಕೋಟಿ ರೂ.ಗಳನ್ನು ಹಾಲು ಖರೀದಿಯ ಹೆಚ್ಚುವರಿ ದರಕ್ಕೆ ಭರಿಸಲಾಗುವುದು ಎಂದ ಅವರು, ಹಾಲು ಉತ್ಪಾದಕರಿಗೆ ಹೆಚ್ಚು ದರ ನೀಡುವುದರಲ್ಲಿ ಹಾಸನ ಹಾಲು ಒಕ್ಕೂಟವು 2ನೇ ಸ್ಥಾನದಲ್ಲಿದೆ. ಶಿವಮೊಗ್ಗ ಒಕ್ಕೂಟವು ಅ.25ರಿಂದ 27 ರೂ. ದರ ನೀಡುತ್ತಿದೆ. ಆದರೆ ಹಾಸನ ಹಾಲು ಒಕ್ಕೂಟವು ಹಿಂದಿನಿಂದಲೂ ಹೆಚ್ಚು ದರ ಪಾವತಿಸುತ್ತಾ ಬಂದಿದೆ ಎಂದು ಹೇಳಿದರು.
ಶಾಲಾ ಕಾಲೇಜುಗಳಿಗೆ ಕಂಪ್ಯೂಟರ್ ವಿತರಣೆ: ಹಾಸನ ಹಾಲು ಒಕ್ಕೂಟಟವು ಪ್ರತಿ ವರ್ಷ ಸರ್ಕಾರಿ ಕಾಲೇಜುಗಳಿಗೆ ಕಂಪ್ಯೂಟರ್‌ಗಳು ಹಾಗೂ ಇತರೆ ಮೂಲ ಸೌಕರ್ಯಕ್ಕೆ ನರವು ನೀಡುತ್ತಿದೆ. ಕಳೆದ ವರ್ಷ 1.25 ಕೋಟಿ ರೂ.ಗಳನ್ನು ವಿವಿಧ ಕಾಲೇಜುಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸಲು ವೆಚ್ಚ ಮಾಡಲಾಗಿತ್ತು. ಈ ವರ್ಷವೂ ವಿವಿಧ ಕಾಲೇಜುಗಳಿಗೆ ಕೊಡುಗೆ ನೀಡಲಾಗುವುದು ಎಂದರು.
ದಕ್ಷಿಣ ಭಾರತದ ಪ್ರಥಮ ಪೆಟ್ ಬಾಟಲ್ ಘಟಕ: ಹಾಸನ ಹಾಲು ಒಕ್ಕೂಟವು ಹಾಸನ ಡೇರಿ ಆವರಣದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಸುವಾಸಿತ ಹಾಲಿನ ಪೆಟ್ ಬಾಟಲ್ ಘಟಕವನ್ನು ನಿರ್ಮಿಸಿದ್ದು, ಮಾರ್ಚ್‌ನಿಂದ ಕಾರ್ಯಾರಂಭ ಮಾಡಲಿದೆ. ಗುಜರಾತ್‌ನ ಆನಂದ್‌ನಲ್ಲಿ 2 ಪೆಟ್ ಬಾಟಲ್ ಘಟಕಗಳ ನಂತರ ಹಾಸನ ಪೆಟ್ ಬಾಟಲ್ ಘಟಕ ದೇಶದ ಮೂರನೇ ಘಟಕ ಎಂದ ರೇವಣ್ಣ ಅವರು, ಪ್ರತಿ ಗಂಟೆಗೆ 30ಸಾವಿರ ಪೆಟ್ ಬಾಟಲ್‌ಗಳಲ್ಲಿ ಸುವಾಸಿತ ಹಾಲು ಬಾಟಲ್‌ಗಳು ನೂತನ ಘಟಕವು ಉತ್ಪಾದಿಸಲಿದೆ ಎಂದು ಹೇಳಿದರು.
ಹಾಸನ ಹಾಲಿನ ಡೇರಿಯಲ್ಲಿರುವ ಯುಎಚ್‌ಟಿ ಹಾಲಿನ ಘಟಕವನ್ನು 2 ಲಕ್ಷ ಲೀ. ನಿಂದ 4 ಲಕ್ಷ ಲೀ.ಗೆ ವಿಸ್ತರಿಸಲಾಗುತ್ತಿದೆ. ವಿಸ್ತರಿತ ಘಟಕವು ಡೆಸೆಂಬರ್‌ನಿಂದ ಕಾರ್ಯಾರಂಭ ಮಾಡಲಿದೆ. ಹಾಸನ ಹಾಲು ಒಕ್ಕೂಟದ ಅಭಿವೃದ್ಧಿ ಯೋಜನೆಗಳಿಗೆ ಹಿಂದಿನ ಸಮ್ಮಿಶ್ರ ಸರ್ಕಾರ 504 ಕೋಟಿ ರೂ. ಯೋಜನೆಗಳಿಗೆ ಮಂಜೂರಾತಿ ನೀಡಿತ್ತು. ಆ ಪೈಕಿ 330 ಕೋಟಿ ರೂ. ಅಂದಾಜಿನ ಮೆಗಾಡೇರಿ ನಿರ್ಮಾಣ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಕೌಶಿಕ ಬಳಿ ನಿರ್ಮಾಣವಾಗಲಿದೆ. ಮೆಗಾಡೇರಿ ನಿರ್ಮಾಣಕ್ಕಾಗಿ 50 ಎಕರೆಯನ್ನು 10 ಕೋಟಿ ರೂ.ಗೆ ಕೈಗಾರಿಕಾಭಿವೃದ್ಧಿ ಕೇಂದ್ರದಿಂದ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು. ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ವ್ಯವಸ್ಥಾಪಕ ಜಯಪ್ರಕಾಶ್ ಅವರೂ ಉಪಸ್ಥಿತರಿದ್ದರು.
ರಾಜ್ಯವು ಆರ್‌ಸಿಇಪಿ ವಿರೋಧಿ ನಿರ್ಣಯ ಅಂಗೀಕರಿಸಲಿ: ಕೇಂದ್ರ ಸರ್ಕಾರವು 16 ದೇಶಗಳೊಂದಿಗೆ ಅಮದು ಮತ್ತು ರಫ್ತು ವ್ಯವಹಾರ ಸುಂಕ ವಿನಾಯತಿ ಒಪ್ಪಂದ ( ಆರ್‌ಸಿಇಪಿ) ಮಾಡಿಕೊಳ್ಳುವುದರಿಂದ ದೇಶದ ಹೈನು ಉದ್ಯಮಕ್ಕೆ ಭಾರೀ ಪೆಟ್ಟು ಬೀಳಲಿದೆ. ಆದ್ದರಿಂದ ಕೇಂದ್ರ ಸರ್ಕಾರವು ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಒತ್ತಾಯಿಸುವ ನಿರ್ಣವನ್ನು ರಾಜ್ಯ ಸರ್ಕಾರ ಅಂಗೀಕರಿಸಲು ವಿಧಾನಸಭೆ ವಿಶೇಷ ಅಧಿವೇಶನ ಕರೆಯಬೇಕೆಂದು ಕೆಎಂಎಫ್ ನಿರ್ದೇಶಕರೂ ಆದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದರೆ ಹೈನು ಉದ್ಯಮಕ್ಕೆ ರೇಷ್ಮೆ ಉದ್ಯಮದ ಪರಿಸ್ಥಿತಿ ಬರಲಿದೆ. ನ್ಯೂಜಿಲೆಂಡ್ ಹಾಗೂ ಆಸ್ಪ್ರೆಲಿಯಾ ಉತ್ಪಾದಿಸುವ ಹಾಲಿನಲ್ಲಿ ತಮ್ಮ ದೇಶಗಳಲ್ಲಿ ಕೇವಲ ಶೇ. 10 ರಷ್ಟನ್ನು ಮಾತ್ರ ಬಳಸುತ್ತಿವೆ. ಅಲ್ಲಿನ ಶೇ.90 ರಷ್ಟು ಹೈನು ಉತ್ಪನ್ನಗಳಿಗೆ ಭಾರತ ಮಾರುಕಟ್ಟೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಆರ್‌ಸಿಇಪಿ ಒಪ್ಪಂದದಿಂದ ಮೊದಲು ಹೊಡೆತ ಬೀಳುವುದು ಗುಜರಾತ್ ಮತ್ತು ಕರ್ನಾಟಕಕ್ಕೆ. ಏಕೆಂದರೆ ದೇಶದಲ್ಲಿ ಇ ಎರಡೂ ರಾಜ್ಯಗಳೂ ಹಾಲು ಉತ್ಪಾದನೆಯಲ್ಲಿ ಒಂದು ಮತ್ತು 2 ನೇ ಸ್ಥಾನದಲ್ಲಿವೆ.
ಆದ್ದರಿಂದ ರಾಜ್ಯದಿಂದ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದರು. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಾಡ ಏರಲು ಮುಂದಾಗಬೇಕು. ವಿರೋಧ ಪಕ್ಷಗಳ ಮುಖಂಡರೂ ಪ್ರಧಾನಿಯವರ ಬಳಿ ನಿಯೋಗ ತೆರಳಿ ಆರ್‌ಸಿಇಪಿ ಒಪ್ಪಂದದಿಂದ ದೇಶದ ಹೈನುಗಾರಿಕೆ ಮತ್ತು ತೋಟಗಾರಿಕೆಯ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.