ಅಂಗನವಾಡಿ ಕಾರ್ಯಕರ್ತೆಯರ ಸೇವೆ ಕಾಯಂ ಮಾಡಿ
Team Udayavani, Oct 21, 2020, 4:21 PM IST
ಹೊಳೆನರಸೀಪುರ: ಅಂಗನವಾಡಿ ಕಾರ್ಯಕರ್ತರಿಗೆ ಹೆಚ್ಚಿನ ಸಂಬಳ ನೀಡಿ, ಸೇವೆ ಕಾಯಂಗೊಳಿಸುವನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದು ಶಾಸಕ ಎಚ್.ಡಿ ರೇವಣ್ಣ ಮನವಿ ಮಾಡಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಮಂಗಳವಾರ ನಡೆದ ಪೋಷಣ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ 263 ಅಂಗನವಾಡಿ ಕಾರ್ಯಕರ್ತರು ಮತ್ತು 10 ಮೇಲ್ವಿಚಾರಕರಿಗೆ ಮೊಬೈಲ್ ಫೋನ್ ವಿತರಿಸಿ ಮಾತನಾಡಿದರು.
ಮಕ್ಕಳ ಪೌಷ್ಟಿಕತೆ, ರಕ್ತಹೀನತೆ, ತಾಯಿಯ ಮರಣ ಪ್ರಮಾಣ ಕುಗ್ಗಿಸುವುದು, ಮಕ್ಕಳ ಶಿಕ್ಷಣಮತ್ತು ಹಾಜರಾತಿಯನ್ನು ವೃದ್ಧಿಸಿ, ಅದನ್ನು ಸ್ನೇಹ ಎಂಬ ಇಲಾಖೆಯ ಆ್ಯಪ್‌ನಲ್ಲಿ ಅಳವಡಿ ಸಲು ಮೊಬೈಲ್ ವಿತರಿಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ಶಿಕ್ಷಣಕ್ಷೇತ್ರದಲ್ಲಿ ಕ್ರಾಂತಿಕಾರಿ ಕೆಲಸ ಆಗಿದೆ. ಈ ಶೆ„ಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚು ವಿದ್ಯಾರ್ಥಿಗಳ ಪ್ರವೇಶಾತಿ ಯಾಗಿದೆ. ಖಾಸಗಿ ಶಾಲೆಗಳು ಹಣ ಲೂಟಿಮಾಡುತ್ತಿವೆ, ಕೊರೊನಾ ನೆಪದಲ್ಲಿ ರೈತರು ಹಾಗೂ ಬಡವರು ಖಾಸಗಿ ಆಸ್ಪತ್ರೆಗೆ ಸೇರಿದರೆ ಸಾಕು ಲಕ್ಷಾಂತರ ರೂ. ವಸೂಲಿ ಮಾಡುತ್ತವೆ ಎಂದು ಆರೋಪಿಸಿ, ಇಂತಹವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಮಾತನಾಡಿ, ಮೊದಲು ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆ ಪ್ರಕ್ರಿಯೆ ಸ್ಥಳೀಯ ಎಂ.ಎಲ್.ಎ ಅವರ ಅಧ್ಯಕ್ಷತೆಯಲ್ಲಿತ್ತು. ಆದರೆ, ಈಗ ವಿವಿಧ ತಿದ್ದುಪಡಿ ತಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನೇಮಕಾತಿ ಮಾಡಲಾಗುತ್ತಿದೆ. ನಮ್ಮ ಬಳಿ ಕೆಲಸ ಕೇಳಿಕೊಂಡು ಬರುವ ಮಹಿಳೆಯರಿಗೆ ಕೆಲಸ ನೀಡಲು ತೊಂದರೆಯಾಗುತ್ತಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಯಾವುದೇ ಹೆಣ್ಣು ಮಕ್ಕಳಿಗೆ ತೊಂದರೆಯಾದರೆ ನಾನು ಅವರ ಪರ ನಿಲ್ಲುತ್ತೇನೆ. ಅಂಗನವಾಡಿ ಕಾರ್ಯಕರ್ತರ ಕೆಲಸ ಬಹಳ ಕಷ್ಟವಾಗಿದೆ. ಚಿಕ್ಕಮಕ್ಕಳನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ, ಸರ್ಕಾರ ಅವರ ಗೌರವ ಧನ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲಾ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಆರ್.ಪ್ರಸನ್ನ ಕುಮಾರ್, ತಾಪಂ ಇಒ ಯೋಗೇಶ್,ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ತಹಶೀಲ್ದಾರ್ ಶ್ರೀನಿವಾಸ್,ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಮೇಲ್ವಿಚಾರಕರು, ಕಚೇರಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಡಾನೆ ಹಾವಳಿ ತಡೆ: ಗಡಿ ಭಾಗದಲ್ಲಿ ರೈಲ್ವೆ ಕಂಬಿಬ್ಯಾರಿಕೇಡ್ :
ಬೇಲೂರು: ಜಿಲ್ಲೆಯ ಮಲೆನಾಡು ಪ್ರದೇಶಗಳಾದ ಆಲೂರು, ಬೇಲೂರು, ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ಹೆಚ್ಚಾಗಿದ್ದು, ಹಾಸನ, ಕೊಡಗು
ಜಿಲ್ಲೆಗಳ ಗಡಿಭಾಗದಲ್ಲಿ ರೈಲ್ವೆ ಕಂಬಿಗಳನ್ನು ಒಳಗೊಂಡ ಬ್ಯಾರಿಕೇಡ್ ಹಾಕಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಹೇಳಿದರು.
ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಕಾಫಿ ಬೆಳೆಗಾರರಿಗೆ ಹಾಗೂ ರೈತರಿಗೆ ಕಾಡಾನೆ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವನ್ಯಜೀವಿಗಳು ಅತ್ಯಂತ ಸೂಕ್ಷ್ಮ. ಅವುಗಳಿಗೆ ತೊಂದರೆ ನೀಡಿದಾಗ ಮಾತ್ರ ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ 40 ಜನ ಆನೆ ದಾಳಿಗೆ ಬಲಿಯಾಗಿದ್ದಾರೆ. ಮಲೆನಾಡು ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರಲ್ಲಿಆನೆ ಹಾವಳಿ ಮೀತಿ ಮೀರಿದೆ. ಅರಣ್ಯದಲ್ಲಿ ಆನೆಗಳಿಗೆ ಸಮರ್ಪಕ ಆಹಾರ ದೊರೆಯುತ್ತಿಲ್ಲ. ಇದನ್ನು ನೀಗಿಸಲು ಬಿದಿರು, ಹಲಸು, ಆಲ, ಬೈನೆ, ಮುಂತಾದ ಗಿಡ ನೆಟ್ಟು ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದರು.
ರೈತ ಸಂಘದ ಮುಖಂಡ ರಾಜೇಗೌಡ ಮಾತನಾಡಿ, ತಾಲೂಕಿನ ಮಲೆನಾಡು ಪ್ರದೇಶ ಹೊಂದಿರುವ ಅರೇಹಳ್ಳಿ, ಬಿಕ್ಕೋಡು,ಚೀಕನಹಳ್ಳಿ, ಸುತ್ತಮುತ್ತಲಿನ ಹಳ್ಳಿಗಳ ರೈತರು ಮತ್ತು ಕಾಫಿ ಬೆಳೆಗಾರರು ಆರು ತಿಂಗಳಿಂದ ಕಾಡಾನೆ ದಾಳಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಳಲು ತೋಡಿಕೊಂಡರು.
ಸರ್ಕಾರ ಮತ್ತು ಅರಣ್ಯ ಇಲಾಖೆ ಆನೆಗಳ ಸ್ಥಳಾಂತರಕ್ಕೆ ಮುಂದಾಗದಿದ್ದಾರೆ, ಜಿಲ್ಲೆಯ ಎಲ್ಲಾ ಅರಣ್ಯ ಇಲಾಖೆಗಳ ಕಚೇರಿಗೆ ರೈತ ಸಂಘದಿಂದ ಬೀಗ ಹಾಕಲಾಗುವುದು. ಕಳೆದ ಒಂದು ತಿಂಗಳಿನಿಂದ 30 ಆನೆಗಳ ಹಿಂಡು ಕಾಫಿ, ಬಾಳೆ, ಮೆಣಸು, ಅಡಕೆ, ಭತ್ತ, ಜೋಳ, ರಾಗಿ, ಮುಂತಾದ ಫಸಲಿಗೆ ಬಂದ ಬೆಳೆಗಳನ್ನು ನಾಶಪಡಿಸಿದೆ. ಅರಣ್ಯ ಇಲಾಖೆ ಆನೆ ಸ್ಥಳಾಂತರ ಮಾಡದೆ ಸೂಕ್ತ ಪರಿಹಾರನೀಡದೆ ಇರುವುದರಿಂದ ಬೆಳೆಗಾರರು ತೊಂದರೆ ಅನುಭವಿಸುವಂತಾಗಿದೆ ಎಂದರು.
ಕಾರ್ಯಾಗಾರದಲ್ಲಿ ತಾಪಂ ಸದಸ್ಯ ಸೋಮಯ್ಯ, ಅರೇಹಳ್ಳಿ ಹೋಬಳಿ ಕಾಫಿ ಬೆಳೆಗಾರರ ಸಂಘದಅಧ್ಯಕ್ಷ ಖಲೀಲ್, ವಲಯ ಅರಣ್ಯಾಧಿಕಾರಿ ಯಾಶ್ಮಾ ಮಾಚಮ್ಮ, ಕಾಫಿ ಬೆಳೆಗಾರ ನಟರಾಜು, ಬಿಜೆಪಿ ಮುಖಂಡ ಅಮಿತ್‌ಶೆಟ್ಟಿ,ಮಂಜುನಾಥಶೆಟ್ಟಿ, ರೈತ ಮುಖಂಡ ಶಿವಪ್ಪ, ವಿಶ್ವನಾಥನಾಯಕ್,ನಾಗರಾಜು,ರಘುಕುಮಾರ್, ವೇದರಾಜು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.