ನೀರಿಗಾಗಿ ಮಲೆನಾಡಿನಲ್ಲಿ ಹಾಹಾಕಾರ
Team Udayavani, May 10, 2019, 3:11 PM IST
ಸಕಲೇಶಪುರ: ಹಿಂದೆಂದೂ ಕಾಣದ ರಣಬಿಸಿಲಿಗೆ ಸಕಲೇಶಪುರ ತಾಲೂಕು ತತ್ತರಿಸಿ ಹೋಗಿದ್ದು ಹನಿ ನೀರಿಗಾಗಿ ಮಲೆನಾಡಿನಲ್ಲೂ ಹಾಹಾಕಾರ ಶುರುವಾಗಿದೆ. ವಾರದಲ್ಲಿ ಮಲೆನಾಡಿನಲ್ಲಿ ಸತತ ಮಳೆ ಬೀಳ ಲಿಲ್ಲ ಅಂದರೆ ಜಲಕ್ಷಾಮ ಶುರುವಾಗುವು ದರಲ್ಲಿ ಯಾವುದೇ ಅನುಮಾನವಿಲ್ಲ.
ಬಡವರ ಊಟಿ ಎಂದೇ ಖ್ಯಾತಿ ಪಡೆದಿರುವ ಮಲೆನಾಡು ಸಕಲೇಶಪುರ ಅಕ್ಷರಶಃ ಬಿಸಿಲಿನ ತಾಪಕ್ಕೆ ನಲುಗಿ ಹೋಗಿದೆ. ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಸಕಲೇಶಪುರದ ಮಲೆನಾಡು ಭಾಗದಲ್ಲಿ ಜಲಕ್ಷಾಮ ಕಾಣಿಸಿಕೊಂಡಿದ್ದು, ಪಶ್ಚಿಮಘಟ್ಟದ ನದಿ ತೊರೆಗಳು ಬತ್ತಿ ಹೋಗಿವೆ. ಜೊತೆಗೆ ಕಾಫೀ ಏಲಕ್ಕಿ ಬೆಲೆ ಒಣಗುತ್ತಿದ್ದರೆ, ಪಶ್ಚಿಮ ಘಟ್ಟದ ಕಾಡಿನ ಪ್ರಾಣಿಗಳು ನೀರಿಗಾಗಿ ಪರದಾಡುತ್ತಿವೆ.
ಬಡವರ ಊಟಿ: ಸಕಲೇಶಪುರ ಅಂದ್ರೆ ಬಡವರ ಊಟಿ. ವರ್ಷದ 365 ದಿನವೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಮಲೆ ನಾಡು ಇಂದು ಬಿಸಿಲಿನ ತಾಪಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಕರ್ನಾಟಕದ ಸ್ವಿಟ್ಜರ್‌ಲ್ಯಾಂಡ್ ಎಂದೇ ಹೆಸರುವಾಸಿ ಆಗಿರುವ ಸಕಲೇಶಪುರದ ಮಲೆನಾಡು ಪ್ರದೇಶದಲ್ಲಿ ಕಂಡರಿಯದ ಬರದ ಛಾಯೆ ಆವರಿಸಿದೆ.
ಅತಿ ಮುಖ್ಯವಾಗಿ ಸಾವಿರಾರು ಕೋಟಿ ಎತ್ತಿನಹೊಳೆ ಯೋಜನೆಯ ನೀರಿನ ಮೂಲದ ನದಿಗಳಾದ ಕೆಂಪು ಹೊಳೆ, ಅಡ್ಡ ಹೊಳೆ, ಎತ್ತಿನ ಹಳ್ಳ ನದಿ ತೊರೆಗಳಲ್ಲಿ ಜಲಕ್ಷಾಮ ಉಂಟಾಗಿದ್ದು, ದಶಕಗಳಿಂದ ನೀರಿಗಾಗಿ ಕಾಯುತ್ತಿರುವ ಬಯಲುಸೀಮೆ ಜಿಲ್ಲೆಗಳಿಗೂ ಆತಂಕ ಎದುರಾಗಿದೆ. ವರ್ಷ ಪೂರ್ತಿ ಮೈದುಂಬಿ ಹರಿಯುತ್ತಿದ್ದ ನದಿ ತೊರೆಗಳು ಬತ್ತಿ ಹೋಗಿದ್ದು, ಪಶ್ಚಿಮ ಘಟ್ಟದ ಕಾಡಿನ ಪ್ರಾಣಿಗಳು ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಹಾಗಾಗಿಯೇ ನೀರು ಆಹಾರ ಹುಡುಕಿ ಕಾಡಾನೆಗಳು ಕಾಡು ಕೋಣ ಸೇರಿದಂತೆ ಹಲವಾರು ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಜನರಿಗೆ ತೊಂದರೆ ನೀಡುತ್ತಿವೆ.
ಕಳೆದ ಬಾರಿ ಅತಿ ಯಾದ ಮಳೆಯಿಂದ ಬೆಳೆ ನಷ್ಟ ಅನುಭವಿಸಿದ್ದ ಸಕಲೇಶಪುರ ಭಾಗದ ಕಾಫಿ, ಮೆಣಸು, ಏಲಕ್ಕಿ ಬೆಳೆಗಾರರು, ಸದ್ಯ ಅತಿಯಾದ ತಾಪಮಾನ ದಿಂದ ಬೆಳೆ ಹಾನಿಯ ಆತಂಕದಲ್ಲಿ ಇದ್ದಾರೆ. ಕಳೆದ ವರ್ಷ ಅತಿವೃಷ್ಟಿ ಮಳೆಯಿಂದ ತತ್ತರಿಸಿದ ಜನ ಇದೀಗ ಅನಾವೃಷ್ಟಿಯಿಂದ ತತ್ತರಿಸುವಂತಾಗಿದೆ.
ಜಲ ಕ್ಷಾಮ: ಮಲೆನಾಡು ಭಾಗದ ಜಲಕ್ಷಾಮ ಹೇಮಾವತಿ ಹಾಗೂ ಧರ್ಮಸ್ಥಳದ ನೇತ್ರಾವತಿ ನದಿಗಳಿಗೂ ತಟ್ಟಲಿದ್ದು, ಶೀಘ್ರದಲ್ಲಿ ಮಳೆ ಬಾರದಿದ್ದರೆ ಮಲೆನಾಡು ಬಿಸಿಲಿಗೆ ತತ್ತರಿಸಿ ಹೋಗಲಿದೆ.
ನಿರಂತರ ಅರಣ್ಯ ನಾಶ: ಮಲೆನಾಡಿನಲ್ಲೂ ಈ ರೀತಿಯ ತಾಪಮಾನ ಹೆಚ್ಚಾಗಲು, ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟಗಳ ಕಾಡನ್ನು ನಾಶ ಮಾಡಿರುವುದೇ ಕಾರಣ ಎಂದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣ ವಾಗಿದೆ. ಪವರ್ ಪ್ರಾಜೆಕ್ಟ್ಗಳು, ಎತ್ತಿನಹೊಳೆ ಯೋಜನೆ, ರಾಷ್ಟ್ರೀಯ ಹೆದ್ದಾರಿ ಅಗಲೀಕ ರಣ, ಹೇಮಾವತಿ ತೀರದಲ್ಲಿ ಮರಳು ಲೂಟಿ, ಟಿಂಬರ್ ಮಾಫಿಯಾ ಸೇರಿದಂತೆ ಇನ್ನು ಹಲವು ಯೋಜನೆಗಳಿಂದ ಮಲೆನಾಡಿನ ಪರಿಸ್ಥಿತಿ ಈ ರೀತಿಯಾಗಲು ಕಾರಣವಾಗಿದೆ. ಒಟ್ಟಾರೆ ಬಡವರ ಊಟಿ ಎಂದು ನೂರಾರು ಸಿನಿಮಾಗಳ ಚಿತ್ರೀಕರಣ ವಾಗಿದ್ದ ಸಕಲೇಶಪುರ, ಸದ್ಯ ಅಕ್ಷರಶಃ ಒಣ ಕಾಡಿನಂತಿದೆ. ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಕಾಡಿಗೆ ಕನ್ನ ಹಾಕುವ ಕೆಲಸ ಬಿಟ್ಟು, ಹಸಿರು ತಾಣವನ್ನು ಉಳಿಸಬೇಕಿದೆ.
ಎತ್ತಿನಹೊಳೆ ಹೊಳೆ ಸೇರಿದಂತೆ ವಿವಿಧ ಪರಿಸರಕ್ಕೆ ಮಾರಕವಾ ಗಿರುವ ಯೋಜನೆ ಗಳಿಂದ ತಾಲೂ ಕಿನ ಪರಿಸರಕ್ಕೆ ನೇರ ಹಾನಿಯುಂಟಾ ಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ತಾಲೂಕಿನ ಪರಿಸರವನ್ನು ನಾಶ ಮಾಡಿರುವುದರ ನೇರ ಪರಿಣಾಮ ವನ್ನು ನಾವು ಅನುಭವಿಸುತ್ತಿದ್ದೇವೆ.
● ರಶ್ಮಿ ಹಿರಿಯೂರು, ಪರಿಸರ ಪ್ರೇಮಿ
ಎತ್ತಿನಹೊಳೆ ಯೋಜನೆ ಸಂಪೂರ್ಣವಾಗಿ ಪರಿಸರಕ್ಕೆ ಮಾರಕವಾಗಿದೆ. ಈ ಯೋಜನೆ ಯಿಂದ ವ್ಯಾಪಕ ನಷ್ಟವುಂಟಾ ಗುತ್ತಿದ್ದು ಒಂದು ಕಡೆ ಮಲೆನಾಡಿನ ಪರಿಸರದ ಮೇಲೆ ಹಾನಿಯುಂಟಾ ಗುತ್ತಿದೆ. ಮತ್ತೂಂದು ಕಡೆ ಸರ್ಕಾರದ ಬೊಕ್ಕಸವನ್ನು ಯೋಜನೆಯ ಹೆಸರಿನಲ್ಲಿ ಖಾಲಿ ಮಾಡಲಾ ಗುತ್ತಿದೆ.ಈ ಯೋಜನೆಯಿಂದ ಬರಪೀಡಿತ ಪ್ರದೇಶಗಳಿಗೆ ನೀರು ಹರಿಯುವುದು ಅನುಮಾನವಾಗಿದೆ.
● ಕವನ್ ಗೌಡ, ವಕೀಲರು
ಸುಧೀರ್ ಎಸ್.ಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.