ಚಿಣ್ಣರನ್ನು ಸೆಳೆದ ದಸರಾ ಬೊಂಬೆ ಉತ್ಸವ
ಮೈಸೂರು ಅಷ್ಟೇ ಅಲ್ಲ ನಾಡಿನ ಹಲವೆಡೆ ರೂಢಿಯಲ್ಲಿರುವ ಬೊಂಬೆ ಕೂರಿಸುವ ಸಂಪ್ರದಾಯ
Team Udayavani, Oct 6, 2022, 2:46 PM IST
ಚನ್ನರಾಯಪಟ್ಟಣ: ತಾಲೂಕಿನ ವಿವಿಧ ಹೋಬಳಿಯಲ್ಲಿರುವ ಮಹಾಲಕ್ಷ್ಮೀ ಹಾಗೂ ದುರ್ಗಾ ದೇವಾಲಯ ಸೇರಿದಂತೆ ಪಟ್ಟಣದಲ್ಲಿ ನೂರಾರು ಮನೆಗಳಲ್ಲಿ ದಸರಾ ಬೊಂಬೆ ಕೂರಿಸುವ ಮೂಲಕ ಸನಾತನ ಸಂಪ್ರದಾಯವನ್ನು ಆಧುನಿಕ ಯುಗದಲ್ಲಿಯೂ ಪಾಲಿಸಲಾಗುತ್ತಿದೆ.
ನಾಡಿನ ಅಧಿದೇವತೆ ಹಬ್ಬವಾಗಿರುವ ಮೈಸೂರು ದಸರಾ ಉತ್ಸವಕ್ಕೆ ಚಾಲನೆ ದೊರೆತ ಬೆನ್ನಲ್ಲೇ ಚನ್ನರಾಯಪಟ್ಟಣದ ನೂರಾರು ಮನೆಗಳಲ್ಲಿ ದಸರಾ ಬೊಂಬೆ ದರ್ಬಾರ್ ಆರಂಭಗೊಂಡಿದೆ. ಪ್ರತಿದಿನ ಸಂಜೆ ಬೊಂಬೆ ಕೂರಿಸಿರುವ ಮನೆ ಗಳಿಗೆ ಚಿಣ್ಣರು ತೆರಳಿ ಬೊಂಬೆಗಳನ್ನು ನೋಡಿ ಸಂಭ್ರಮಿಸಿದ್ದಾರೆ.
ಶತಮಾನದ ಹಿಂದೆ ಕೆಲವರ ಮನೆಯವರು ಮಾತ್ರ ದಸರಾ ಬೊಂಬೆ ಕೂರಿಸುತ್ತಿದ್ದ ರು. ಆಧುನಿಕತೆ ಬೆಳೆದಂತೆ ಸನಾತನ ಸಂಪ್ರದಾಯವೂ ಬೃಹದಾಕಾರವಾಗಿ ಬೆಳೆಯುತ್ತಿದೆ. ಎಲ್ಲ ವರ್ಗದವರೂ ಸಂಪ್ರದಾಯ, ಆಚಾರ ವಿಚಾರ ಮೈಗೂಡಿಸಿಕೊಂಡು ಹಿಂದೂ ಸಂಪ್ರದಾವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ಕಠಿಣ ನಿಯಮವೇನಿಲ್ಲ: ನವರಾತ್ರಿಗೆ ಬೊಂಬೆಯನ್ನು ಹೀಗೆ ಕೂರಿಸಬೇಕೆಂಬ ನಿಯಮವೇನಿಲ್ಲ. ಆದರೆ, ಬೊಂಬೆಗಳನ್ನು ಕೂರಿಸುವಾಗ ಒಂದು ವಿಷಯ (ಥೀಮ್) ಹಿನ್ನೆಲೆ ಇಟ್ಟುಕೊಂಡು ಕೂರಿಸುವುದು ವಾಡಿಕೆ. ಬೊಂಬೆಯನ್ನು ಕೂರಿಸಲು ಹಂತ- ಹಂತ ವಾಗಿ ಹಲಗೆಯನ್ನು ಮೆಟ್ಟಿಲಿನ ರೀತಿಯಲ್ಲಿ ಜೋಡಿಸಿ ಅವುಗಳಲ್ಲಿ ಬೊಂಬೆ ಕೂರಿಸಲಾಗುವುದು. ಒಂದೊಂದೆ ಮೆಟ್ಟಿಲಿ ನಲ್ಲಿ ಕೂರಿಸುವ ಬೊಂಬೆಗಳು ಒಂದೊಂದು ಕಥೆಯನ್ನು ಆದರಿಸಿರುತ್ತವೆ. ಸಾಮಾನ್ಯವಾಗಿ ಬೊಂಬೆ ಕೂರಿಸುವಾಗ ಮೇಲಿನ ಮೂರು ಮೆಟ್ಟಿಲುಗಳಲ್ಲಿ ದೇವಾನು-ದೇವತೆಯನ್ನು ಕೂರಿಸಲಾಗುವುದು.
ಕೆಲ ಕ್ರಮವಿದೆ: ಮೂರು ಮೆಟ್ಟಿಲುಗಳನ್ನು ನರ ದೇವತೆ, ಋಷಿ ಮುನಿಗಳು, ಸಾಧು ಸಂತರು ಹಾಗೂ ರಾಜ-ರಾಣಿಯರಿಗೆ ಮೀಸಲಿಡುತ್ತಾರೆ. ಮೈಸೂರು ರಾಜ-ರಾಣಿಯರ ಬೊಂಬೆ ಕೂರಿಸಲಾಗುವುದು. 7ನೇ ಮೆಟ್ಟಿಲಿನಲ್ಲಿ ಹಬ್ಬದ ಸಡಗರ ಬಿಂಬಿಸುವ ಬೊಂಬೆಗಳನ್ನು ಇಡಲಾಗುವುದು. 8ನೇ ಮೆಟ್ಟಿಲಿನಲ್ಲಿ ನಾವು ನೋಡೋ ಸನ್ನಿವೇಶ, ನಡೆದ ಘಟನೆಗಳು, ದಿನ ನಿತ್ಯ ಜೀವನವನ್ನು ಬಿಂಬಿಸುವ ಬೊಂಬೆ ಇಟ್ಟಿರುತ್ತಾರೆ. 9ನೇ ಮೆಟ್ಟಿಲಿನಲ್ಲಿ ಪ್ರಾಣಿ-ಪಕ್ಷಿಗಳ ಬೊಂಬೆ ಇಡಲಾಗು ವುದು. ಈ ರೀತಿಯಾಗಿ ನವರಾತ್ರಿಗೆ ಗೊಂಬೆ ಕೂರಿಸುವ ಕ್ರಮ ರೂಢಿಸಿಕೊಂಡು ಬರಲಾಗಿದೆ.
ಬೊಂಬೆ ಹಬ್ಬದ ಹಿನ್ನೆಲೆ: ಮೈಸೂರು ದಸರಾ ಹಾಗೂ ಬೊಂಬೆ ಹಬ್ಬಕ್ಕೂ ಐತಿಹಾಸಿಕ ನಂಟಿದೆ. ಬೊಂಬೆಗಳ ಸಂಪ್ರದಾಯ ಹಿಂದೂ ನಾಗರಿಕ ಅರಂಭದಿಂದ ಬಂದಿದೆ. ನವರಾತ್ರಿ ಬೊಂಬೆ ಉತ್ಸವ ಮಾತ್ರ ರಾಜವಂಶಸ್ಥರಿಂದ ಆರಂಭವಾಗಿ ನಂತರ ಅದು ಅವರ ನಿಕಟವರ್ತಿಗಳಿಂದ ಆಚರಿಸಲ್ಪಟ್ಟು ಸಾರ್ವತ್ರಿಕವಾಗಿದೆ. ಹೆಣ್ಣು ಮಕ್ಕಳು, ರಾಜ, ಮಂತ್ರಿ ಆಸ್ಥಾನದವರ ಪ್ರತೀಕವಾಗಿ ಬೊಂಬೆಯನ್ನು ಕೂರಿಸಿ, ಅದಕ್ಕೆ ಕಲಾತ್ಮಕ ಅಲಂಕಾರ ಮಾಡುತ್ತಿದ್ದರು. ರಾಜ ಪರಿವಾರದವರ ವೈಭವದ ಆಟಿಕೆಗಳ ಪ್ರ ದರ್ಶನ ಮಕ್ಕಳಿಗೆ ಮನರಂಜನೆ ನೀಡುವ ಸಲುವಾಗಿ, ಆರಂಭಗೊಂಡು ಬೊಂಬೆ ಕೂರಿಸುವುದು ನಂತರದ ದಿವಸ ಗಳಲ್ಲಿ ಸಂಪ್ರದಾಯವಾಗಿ ರೂಪ ಪಡೆಯಿತು.
ಹಲವು ದಿವಸ ಆಚರಣೆ ಹಬ್ಬ: ನವರಾತ್ರಿಯು ಹಿಂದೂ ಹಬ್ಬವಾಗಿದ್ದು ಅದು ಒಂಬತ್ತು ರಾತ್ರಿಯನ್ನು ಮತ್ತು ಹತ್ತು ದಿವಸವನ್ನು ವ್ಯಾಪಿಸಿದೆ. ಪ್ರತಿ ವರ್ಷವೂ ಶರತ್ಕಾಲದಲ್ಲಿ ಆಚರಿಸಲಾಗುತ್ತದೆ. ಇದನ್ನು ವಿಭಿನ್ನ ಕಾರಣಕ್ಕಾಗಿ ಆಚರಿಸಲಾಗುವುದು. ಭಾರತೀಯ ಉಪ ಖಂಡದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ದುರ್ಗಾ ಪೂಜೆ ನವರಾತ್ರಿಯ ಸಮಾನಾರ್ಥಕವಾಗಿದೆ. ಇದರಲ್ಲಿ ದುರ್ಗಾ ದೇವಿ ಧರ್ಮವನ್ನು ಪುನಃಸ್ಥಾಪಿಸಲು ಸಹಾಯ ಮಾಡಲು, ಎಮ್ಮೆ ರಾಕ್ಷಸನ ವಿರುದ್ಧ ಹೋರಾಡುತ್ತಾನೆ ಮತ್ತು ವಿಜಯಶಾಲಿಯಾಗುತ್ತಾನೆ. ಈ ದಿವಸವನ್ನು ವಿಜಯದಶಮಿ ಆಚರಣೆ ಮಾಡುವ ಮೂಲಕ ನವರಾತ್ರಿ ಹಬ್ಬ ವನ್ನು ಮುಕ್ತಾಯ ಮಾಡಲಾಗುತ್ತದೆ.
ಶತಮಾನಗಳಿಂದಲೂ ಜಾರಿಯಲ್ಲಿದೆ: ಬೊಂಬೆ ಕೂರಿಸುವುದು ಇಂದು ನಿನ್ನೆ ಆಚ ರ ಣೆಯಲ್ಲ. ಹಲವು ಮನೆಗಳಲ್ಲಿ ತಲೆ ತಲಾತರದಿಂದ ಬೊಂಬೆ ಕೂರಿಸ ಲಾಗುತ್ತಿದೆ. ಇನ್ನು ಕೆಲವು ಮನೆಯವರು ಹತ್ತಾರು ವರ್ಷದಿಂದ ಬೊಂಬೆ ಕೂರಿಸುವುದನ್ನು ರೂಢಿಸಿಕೊಂಡಿದ್ದಾರೆ. ಇತ್ತೀಚಿನ ದಿವಸದಲ್ಲಿ ಕೆಲ ಮನೆಯ ಮಹಿಳೆಯರು ತಾವು ಪ್ರವಾಸ ಹೋದಾಗ, ತಂದಂತಹ ಬೊಂಬೆಗಳನ್ನು ಪ್ರದರ್ಶನ ಮಾಡಲಿಕ್ಕಾಗಿ ನವರಾತ್ರಿಯ ಬೊಂಬೆ ಹಬ್ಬದ ದಿವಸ ಅದ್ಧೂರಿಯಾಗಿ ಅಲಂಕಾರ ಮಾಡಿದ ಮಂಟಪದಲ್ಲಿ ಬೊಂಬೆ ಕೂರಿಸುತ್ತಿದ್ದಾರೆ. ಸಂಪ್ರದಾಯದ ಬೊಂಬೆಗಳೊಂದಿಗೆ ಕ್ರಿಕೆಟ್, ಕಬಡ್ಡಿ, ಶಾಲೆಯಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ಸೇರಿದಂತೆ ಆಧುನಿಕತೆಯ ಬೊಂಬೆಗಳನ್ನು ಕೂರಿಸಲಾಗುತ್ತಿದೆ.
ನಮಗೆ ತಿಳಿದಂತೆ ಕಳೆದ 70 ವರ್ಷದಿಂದ ಮನೆಯಲ್ಲಿ ಬೊಂಬೆ ಕೂರಿಸಲಾಗುತ್ತಿದೆ. ನಮ್ಮ ಸಂಪ್ರದಾಯ ಮುಂದು ವರಿಯಬೇಕು. ವಿಜಯದಶಮಿ ನಮ್ಮ ಪವಿತ್ರವಾದ ಹಬ್ಬ. ಹಿರಿಯರು ಆಚರಿಸಿಕೊಂಡು ಬಂದಿರುವ ನವರಾತ್ರಿ ಬೊಂಬೆ ಉತ್ಸವ ಮುಂದುವರೆಸಿ ಕೊಂಡು ಹೋಗುತ್ತಿದ್ದೇವೆ. ಇದರಲ್ಲಿ ವಿಶೇಷವೇನೂ ಇಲ್ಲ. ●ಅಂಜಲಿ, ಮಹಾಲಕ್ಷ್ಮೀ ದೇವಸ್ಥಾನದ ಟ್ರಸ್ಟಿ.
●ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.