ಪ್ರವಾಸಿಗರನ್ನು ಸೆಳೆದ ದ್ವಾರಸಮುದ್ರ ಕೆರೆ
Team Udayavani, Aug 8, 2022, 5:21 PM IST
ಹಳೇಬೀಡು: ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ಧ ದ್ವಾರಸಮುದ್ರ ಕರೆ “ಭರ್ತಿಯಾಗಿದ್ದು, ಈ ವರ್ಷದಲ್ಲಿ ಎರಡನೇ ಬಾರಿ ಧಾರಕಾರವಾಗಿ ಸುರಿದ ಮಳೆಯಿಂದ ಹಳ್ಳ- ಕೊಳ್ಳಗಳಿಂದ ಕೆರೆಗೆ ಹರಿದು ಬಂದು ಕೋಡಿ ಬಿದ್ದು ಹೋಬಳಿ ಜನತೆ ಮತ್ತು ರೈತರ ಮುಖದಲ್ಲಿ ಸಂತಸ ಮೂಡಿಸಿದೆ.
ಈ ಕೆರೆ ಸಮುದ್ರಾಕಾರ ರೀತಿಯಲ್ಲಿದ್ದು ಕೆರೆ ವಿಸ್ತಿರ್ಣ ಸುಮಾರು 850 ಹೆಕ್ಟೇರ್ ವ್ಯಾಪಿಸಿದೆ. 14 ವರ್ಷಗಳ ನಂತರ ಎರಡನೇ ಬಾರಿ ದ್ವಾರಸಮುದ್ರ ಕರೆ ಒಡಲು ತುಂಬಿದ್ದು ಭಾರೀ ಮಳೆ ನಡುವೆಯೂ ಪ್ರವಾಸಿಗರನ್ನು ಸೆಳೆದಿದೆ. ಇಲ್ಲಿ ಬೋಟಿಂಗ್ ವ್ಯವಸ್ಥೆ, ಕೆರೆ ಮಧ್ಯದಲ್ಲಿ ಒಂದು ಸುಂದರ ದ್ವೀಪ, ಅದರಲ್ಲಿ ಹಲವಾರು ದೇಶಗಳ ಪಕ್ಷಿ ಬಂದು ಮೊಟ್ಟೆಗಳನ್ನು ಇಟ್ಟು ಅದರ ರಕ್ಷಣೆ ಮಾಡುತ್ತದೆ. ಹಳೇಬೀಡು ಗ್ರಾಮದ ಮಳೆಯರು ಕೋಡಿ ಸ್ಥಳದಲ್ಲಿರುವ ಬಸವಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿ ಗಂಗೆ ಪೂಜೆ ಮಾಡಿ ವರುಣ ದೇವನಿಗೆ ನಮಸ್ಕಾರ ಸಲ್ಲಿಸಿ, ಆನಂತರ ಕೆರೆ ಕೋಡಿ ನೀರಿನಲ್ಲಿ ಮಿಂದೆದ್ದು, ಕುಣಿದು ಕುಪ್ಪಳಿಸಿ ಸಂತೋಷ ಪಡುತ್ತಿರುವ ದೃಶ್ಯ ಮನಮೋಹಕವಾಗಿದೆ.
ರೈತರಲ್ಲಿ ಮಂದಹಾಸ: ಹೋಬಳಿಗಳ ಜೀವನಾಡಿ ದ್ವಾರಸಮುದ್ರ: ಸಾವಿರಾರು ಮಂದಿ ಅನ್ನದಾತ ರೈತರ ಜೀವನದಿ ದ್ವಾರಸಮುದ್ರಕೆರೆ ದ್ವಾರಸಮುದ್ರ ಕೆರೆ ತುಂಬಿ ರುವುದರಿಂದ ಸುಮಾರು 35 ರಿಂದ 45 ಕಿ. ಮೀ.ವ್ಯಾಪ್ತಿಯ ನೂರಾರು ಗ್ರಾಮಗಳ ಬೋರ್‌ವೆಲ್ ಬಾಗಳ ಅಂತರ್ಜಲ ಹೆಚ್ಚುತ್ತದೆ. ಇದರಿಂದ ರೈತರು ವರ್ಷಕ್ಕೆ ಎರಡರಿಂದ ಮೂರು ಬೆಳೆಗಳನ್ನು ತೆಗೆದು ಸಮೃದ್ಧ ಜೀವನ ಸಾಗಿಸುತ್ತಾರೆ. ಆದರೆ ಕಳೆದ 14 ವರ್ಷಗಳಿಂದ ಈ ಜಾಗದಲ್ಲಿ ಸರಿಯಾಗಿ ಮುಂಗಾರು ಮತ್ತು ಹಿಂಗಾರು ಮಳೆಯಾಗದೇ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಬೆಳೆ ಕೂಡ ಬೆಳೆಯಲಾಗದೇ ರೈತರ ಬದುಕು ಅಂತ್ರವಾಗಿತ್ತು. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಈ ಬಾರಿ ಉತ್ತಮ ಮಳೆಯಿಂದಾಗಿ ದ್ವಾರಸಮುದ್ರ ಕೆರೆಗೆ ನೀರು ಹರಿದು ಬಂದುಕೆರೆ ತುಂಬಿರು ವುದು ರೈತರ ಮೊಗದಲ್ಲಿ ಖುಷಿ ಮೂಡಿದೆ.
ಪ್ರವಾಸಿಗರ ಆಕರ್ಷಣೀಯ ಕೇಂದ್ರ: ದಿನಂಪ್ರತಿ ಹಳೇಬೀಡಿನ ವಿಶ್ವ ಪ್ರಸಿದ್ಧ ಹೊಯ್ಸಳೇಶ್ವರ ದೇವಾ ಲಯಕ್ಕೆ ಸಾರಾರು ಪ್ರವಾಸಿಗರು ಆಗಮಿಸುತ್ತಾರೆ. ದೇವಾಲಯಕ್ಕೆ ಹೊಂದಿ ಕೊಂಡತ್ತಿರುವ ದ್ವಾರ ಸಮುದ್ರ ಕೆರೆ ಭರ್ತಿಯಾಗಿ ಕೋಡಿ ಹರಿಯುತ್ತಿದೆ. ಪ್ರವಾಸಿಗರಿಗೆ ಅದರಲ್ಲೂ ಮಕ್ಕಳಿಗೆ ಮನೋರಂಜನಾ ತಾಣವಾಗಿದೆ. ನೂರಾರು ಮಕ್ಕಳು, ಪ್ರವಾಸಿಗರು ನೀರಿನಲ್ಲಿ ಆಟವಾಡಿ ಮನರಂಜನೆ ಪಡೆಯುತ್ತಿರು ವುದು ಮತ್ತಷ್ಟು ಪ್ರವಾಸಿಗರನ್ನು ಆರ್ಕಸುತ್ತಿದೆ.
ರಣಘಟ್ಟ ಯೋಜನೆ ಜಾರಿ: ಹೊಯ್ಸಳರ ಕಾಲದ ರಾಜ ವಿಷ್ಣುವರ್ದನನ ಸಮಯದಲ್ಲಿ ರಣಘಟ್ಟ ಒಡ್ಡಿನ ಮುಖಾಂತರ ಹಳೇಬೀಡು ದ್ವಾರಸಮುದ್ರ ಕೆರೆಗೆ ನೀರು ಹರಿಸುತ್ತಿರುವುದ್ದಕ್ಕೆ ಪುರಾವೆಗಳು ಇದೆ. ಇದೇ ರಣಘಟ್ಟ ಒಡ್ಡಿನ ಮುಖಾಂತರ ಶಾಶ್ವತ ನೀರಾವರಿ ಯೋಜನೆ ಮೂಲಕ ದ್ವಾರಸಮುದ್ರ ಕೆರೆಗೆ ನೀರು ಹರಿಸಲು ಹಲವು ಸ್ವಾಮೀಜಿಗಳ ಒಳಗೊಂಡಂತೆ ರೈತಸಂಘಗಗಳು ನೀರಿಗಾಗಿ ಹೋರಾಟ ಮಾಡಿಕೊಂಡು ಬಂದಿದ್ದವು.
ಇದರ ಪರಿಣಾಮ ಎಂಬಂತೆ ಕಳೆದ ವರ್ಷ ಕೈ-ದಳ ಸಮಿಶ್ರ ಸರ್ಕಾರದಲ್ಲಿ ಮಾನ್ಯ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸ್ಥಳೀಯ ಶಾಸಕ ಕೆ.ಎಸ್.ಲಿಂಗೇಶ್ ಒತ್ತಡ, ಹಲವು ಸ್ವಾಮೀಜಿಗಳ ಹೋರಾಟಕ್ಕೆ ಮಣಿದು ತಮ್ಮ ಸರ್ಕಾ ರದ ಅವಧಿಯ ಬಜೆಟ್‌ನಲ್ಲಿ ಸುಮಾರು 100 ಕೋಟಿ ಹಣವನ್ನು ರಣಘಟ್ಟ ಯೋಜನೆ ಮೀಸಲಿಟ್ಟರು. ಆದರೆ ಬದಲಾದ ರಾಜಕೀಯ ಸನ್ನಿವೇಶಗಳಿಂದ ಸಮಿಶ್ರ ಸರ್ಕಾರ ಬಿದ್ದು ಹೋದ ಮೇಲೆ ಹಣ ಬಿಡು ಗಡೆಯ ಭಾಗ್ಯ ದೊರೆಯಲಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಮಾಜಿ ಸಿಎಂ ಬಿಎಸ್‌ವೈ, ಕುಮಾರಸ್ವಾಮಿ ಬಜೆಟ್‌ನಲ್ಲಿ ಮೀಸಲಿಟ್ಟ ಹಣಕ್ಕೆ ಅನುಮೋದನೆ ನೀಡಿದರು.
ಇದರಿಂದ ರಣಘಟ್ಟ ಶಾಶ್ವತ ನೀರಾವರಿ ಯೋಜನೆ ಜೀವ ಪಡೆಯಿತು. ಈಗಾಗಲೇ ಕಾಮಗಾರಿ ಪ್ರಾರಂಭವಾಗಿದ್ದು, ಸುಮಾರು 200 ಮೀಟರ್ ಸುರಂಗ ಮಾರ್ಗ ನಿರ್ಮಾಣ ಕಾಮ ಗಾರಿ ಮುಗಿದಿದೆ. 3 ಕಿ.ಮೀ. ಸುರಂಗ ಮಾರ್ಗದ ಕಾಮಗಾರಿ ಆಗಬೇಕಿದ್ದು, 2 ವರ್ಷಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಕಾಮ ಗಾರಿ ಟೆಂಡರ್ ಪಡೆದಿರುವ ಬಿಎಸ್‌ಆರ್ ಕಂಪನಿ ತಿಳಿಸಿದೆ.
ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಶ್ವ ಪ್ರಸಿದ್ಧ ದ್ವಾರಸಮುದ್ರ ಕೆರೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಹೂವಿನ ಜತೆ ನಾರು ಸ್ವರ್ಗ ಸೇರಿತ್ತು ಎಂಬಂತೆ ಕೆರೆ ತುಂಬಲು ಏತನೀರಾವರಿ ಯೋಜನೆ ಕೂಡ ಸಹಕಾರಿಯಾಗಿದೆ. ಮಳೆ ಮತ್ತು ಏತನೀರಾವರಿ ಯೋಜನೆ ಸೇರಿ ದ್ವಾರಸಮುದ್ರ ಕೆರೆವರ್ಷದಲ್ಲಿ ಎರಡನೇ ಬಾರಿ ತುಂಬಿದೆ. ಈ ಭಾಗದ ರೈತರು ದಶಕಗಳಿಂದ ಕಾಯುತ್ತಿರುವ ರಣಘಟ್ಟ ಯೋಜನೆ ನನಸು ಮಾಡುವದೇ ನನ್ನ ಗುರಿ – ಕೆ.ಎಸ್.ಲಿಂಗೇಶ್, ಬೇಲೂರು ಕ್ಷೇತ್ರ ಶಾಸಕ
– ಡಾ. ಎಂ.ಸಿ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.