ಜಾವಗಲ್ ಸುತ್ತಮುತ್ತ ಭೂಕಂಪನ ಅನುಭವ
Team Udayavani, Oct 31, 2018, 6:00 AM IST
ಜಾವಗಲ್: ಹಾಸನ ಜಿಲ್ಲೆ ಜಾವಗಲ್ ಹೋಬಳಿಯ 10-15 ಗ್ರಾಮಗಳಲ್ಲಿ ಸೋಮವಾರ ರಾತ್ರಿ ಭೂಕಂಪನದ ಅನುಭವವಾಗಿದೆ. ಇಲ್ಲಿನ ಉಂಡಿಗನಾಳು, ದೇಶಾಣಿ, ಕರಗುಂದ, ವಡೇರಹಳ್ಳಿ, ಕಲ್ಯಾಡಿ, ಗೇರಮರ, ವೃಂದಾವನಹಳ್ಳಿ, ಮಾದಾಪುರ, ಹರಳಹಳ್ಳಿ, ಹಾರನಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ರಾತ್ರಿ 10.15 ರ ಸಮಯದಲ್ಲಿ ಭಾರೀ ಸ್ಫೋಟದ ಶಬ್ದ ಕೇಳಿಬಂದಿದ್ದು, ಕೆಲ ಕ್ಷಣದಲ್ಲಿ ಮನೆಯಲ್ಲಿದ್ದ ಪಾತ್ರೆ ಮತ್ತಿತರ ವಸ್ತುಗಳು ಅಲ್ಲಾಡಿವೆ. ಇದರಿಂದ ಗಾಬರಿಗೊಂಡು ಮನೆಯಲ್ಲಿದ್ದವರು ಹೊರಬಂದಿದ್ದಾರೆ. ಬಳಿಕ 10.30 ರ ವೇಳೆಯಲ್ಲೂ ಮತ್ತೂಮ್ಮೆ ಇದೇ ರೀತಿಯ ಅನುಭವವಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಭಾಗದಲ್ಲಿ ಎತ್ತಿನಹೊಳೆ ಯೋಜನೆಯ ನಾಲಾ ಕಾಮಗಾರಿ ನಡೆಯುತ್ತಿರುವುದರಿಂದ ಸ್ಫೋಟಕಗಳನ್ನು ಬಳಸಿರುವುದರಿಂದ ಈ ರೀತಿ ಶಬ್ದ ಬಂದಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಮಗಾರಿಯ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳು, ಸಂಜೆಯ ನಂತರ ಸ್ಫೋಟಕ ಬಳಸುವುದಿಲ್ಲ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.