ಪೂರ್ವ ಮುಂಗಾರು ವಿಫಲ: ತಾಲೂಕಿಗೆ ಬರದ ಭೀತಿ
ಈ ವರ್ಷ ಶೇ.23ರಷ್ಟು ಮಳೆ ಕೊರತೆ, ಬಿತ್ತನೆ ಕಾರ್ಯದಲ್ಲಿ ತೀವ್ರ ಹಿನ್ನಡೆ
Team Udayavani, May 16, 2019, 10:42 AM IST
ಚನ್ನರಾಯಪಟ್ಟಣ: ಸತತ ಆರು ವರ್ಷದ ಬರಗಾಲದಿಂದ ತತ್ತರಿಸಿರುವ ತಾಲೂಕಿನಗೆ ಪ್ರಸಕ್ತ 2019ನೇ ಸಾಲಿನಲ್ಲಿಯೂ ಪೂರ್ವ ಮುಂಗಾರು ಕೈಕೊಟ್ಟ ಪರಿಣಾಮ ಮತ್ತೂಮ್ಮೆ ಬರದ ಭೀತಿ ಎದುರಾಗುವ ಲಕ್ಷಣಗಳು ಗೋಚರವಾಗುತ್ತಿದೆ.
ಮಳೆ ಕೊರತೆ: ತಾಲೂಕಿನಲ್ಲಿ ಪೂರ್ವ ಮುಂಗಾರು ವಾಡಿಕೆಯಂತೆ 86 ಮಿ.ಮೀ. ಮಳೆಯಾಗಬೇಕಿತ್ತು ಆದರೆ 66 ಮಿ.ಮೀ. ಮಾತ್ರ ಮಳೆಯಾಗಿದ್ದು ಶೇ.23 ರಷ್ಟು ಮಳೆ ಕೊರತೆ ಉಂಟಾಗಿದ್ದು ಪೂರ್ವ ಮುಂಗಾರು ಕೂಡಾ ವೈಫಲ್ಯ ಹೊಂದಿದೆ, ತಾಲೂಕಿನ 6 ಹೋಬಳಿಯಲ್ಲಿ ಶೇಕಡಾವಾರು ಮಳೆ ಕೊರತೆ ಅಂಕಿ ಅಂಶ ಈ ರೀತಿ ಇದೆ. ಕಸಬಾ ಹೋಬಳಿಯಲ್ಲಿ ಶೇ.10ರಷ್ಟು, ಬಾಗೂರು ಶೇ.30ರಷ್ಟು, ದಂಡಿಗನಹಳ್ಳಿ ಶೇ.34, ಹಿರೀಸಾವೆ ಶೇ.32, ನುಗ್ಗೇಹಳ್ಳಿ ಶೇ.21 ಹಾಗೂ ಶ್ರವಣಬೆಳಗೊಳ ಹೋಬಳಿ ಶೇ.10 ರಷ್ಟು ಮೈನಸ್ ಮಳೆಯಾಗಿದೆ.
ಬಿತ್ತನೆಯಲ್ಲಿ ಹಿನ್ನೆಡೆ: ಮಳೆ ಕೊರತೆಯಿಂದಾಗಿ ಪೂರ್ವ ಮುಂಗಾರು ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದೆ, ಈಗಾಗಲೇ ತಾಲೂಕಿ ನಲ್ಲಿ ಎರಡು ಬಾರಿ ವರಣನ ಆಗಮನದಿಂದ ರೈತರು ಸಂತಸ ಪಟ್ಟು ತಮ್ಮ ಕೃಷಿ ಭೂಮಿ ಅಣಿಮಾಡಿ ಬಿತ್ತನೆಗೆ ಸಕಲ ರೀತಿಯಲ್ಲಿ ಸಿದ್ಧರಾಗಿ ಮಳೆಯನ್ನು ಎದುರು ನೋಡುತ್ತಿದ್ದಾರೆ. ಒಂದು ವಾರದಲ್ಲಿ ಮಳೆ ಬಾರದಿದ್ದರೆ ತಾಲೂಕಿನಲ್ಲಿ ಧಾನ್ಯ ಬೆಳೆ ಮಾಡುವುದನ್ನು ರೈತ ಕೈ ಬಿಟ್ಟು ಬರದ ಭೀತಿಗೆ ಸಿಲುಕಲಿದ್ದಾನೆ.
ಈ ಬಾರಿ ಧಾನ್ಯ ಬಿತ್ತನೆಯಾಗಿಲ್ಲ್ಲ: ತಾಲೂಕಿ ನಲ್ಲಿ 2,700 ಹೆಕ್ಟೇರ್ ಪ್ರದೇಶದಲ್ಲಿ 185 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು ಶೇ.4.3 ರಷ್ಟು ಮಾತ್ರ ಧಾನ್ಯಗಳ ಬಿತ್ತನೆ ಯಾಗಿದೆ, ತಾಲೂಕಿನಲ್ಲಿ 1,100 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ ಕೃಷಿ ಮಾಡಬೇಕಿದ್ದ ರೈತ ಕೇವಲ 120 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಿದ್ದಾನೆ.
ತೊಗರಿ 400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಬೇಕಿದ್ದು ಇದುವರೆಗೆ ಬಿತ್ತನೆಯಾಗಿಲ್ಲ. ಉದ್ದು 600 ಕ್ಕೆ 15 ಹೆಕ್ಟೇರ್ ಮಾತ್ರ, ಹೆಸರು 600ಕ್ಕೆ 50 ಮಾತ್ರ, ಎಳ್ಳು 900 ಹೆಕ್ಟೇರ್‌ನಲ್ಲಿ ಬೆಳೆಯಬೇಕಿದ್ದು ಈವರೆಗೆ ಬಿತ್ತನೆಯಾಗಿಲ್ಲ.
ಬಿತ್ತನೆ ಬೀಜದ ದಾಸ್ತಾನು: ಈಗಾಗಲೆ ಸರ್ಕಾರ ಬಿತ್ತನೆ ಬೀಜವನ್ನು ತಾಲೂಕು ಕೃಷಿ ಇಲಾಖೆಗೆ ಸರಬರಾಜು ಮಾಡಿದ್ದು, ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜವನ್ನು ರವಾನೆ ಮಾಡಲಾಗಿದೆ. ಕೊಳವೆ ಬಾವಿ ಹೊಂದಿರುವವರನ್ನು ಹೊರತುಪಡಿಸಿದರೆ ಮಳೆ ಕೈಕೊಟ್ಟಿರುವುದ ರಿಂದ ಬಿತ್ತನೆ ಬೀಜ ಪಡೆಯಲು ರೈತರು ಕೃಷಿ ಇಲಾಖೆಗೆ ಆಗಮಿಸದೆ ಇರುವುದಿಂದ ದಾಸ್ತಾನು ಇಲಾಖೆಯಲ್ಲಿ ಉಳಿದಿದೆ.
ಮುಂಗಾರು ಎದುರು ನೋಡುತ್ತಿದ್ದಾನೆ ರೈತ: ಪೂರ್ವ ಮುಂಗಾರು ಉತ್ತಮವಾಗಿ ಆಗಿದ್ದರೆ ತಾಲೂಕಿನ ರೈತರು ಧಾನ್ಯ ಬೆಳೆ ಗಳನ್ನು ಮಾಡಿ ಮನೆ ವೆಚ್ಚಕ್ಕೆ ಹಣ ನೋಡು ತ್ತಿದ್ದ ಹಾಗೂ ರಾಸುಗಳ ಮೇವಿಗಾಗಿ ಜೋಳ ಬೆಳೆಯಲು ಮುಂದಾಗುತ್ತಿದ್ದರು.
ಆದರೆ ಪೂರ್ವ ಮುಂಗಾರು ಸಂಪೂರ್ಣ ಕೈಕೊಟ್ಟಿದೆ ಹಾಗಾಗಿ ವಿಧಿ ಇಲ್ಲದೆ ಜೂನ್ ಮೊದಲ ವಾರ ಮುಂಗಾರನ್ನು ಎದುರು ನೋಡುವಂತಾಗಿದೆ. ಮುಂಗಾರು ಸಕಾಲಕ್ಕೆ ಆಗದೆ ವೈಫಲ್ಯವಾದರೆ ಮತ್ತೂಂದು ಬರವನ್ನು ಎದುರಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ನಡೆಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.