ಜಿಪಂ-ತಾಪಂಚುನಾವಣೆಗೆ ಸರ್ಧಾಂಕ್ಷಿ ಗಳ ಸಿದ್ದತೆ
Team Udayavani, Jul 7, 2021, 7:39 PM IST
ಹಾಸನ: ಜಿಲ್ಲಾ ಮತ್ತು ತಾಲೂಕು ಪಂಚಾಯತಿಕ್ಷೇತ್ರಗಳ ಮೀಸಲಾತಿಯ ಕರಡು ಅಧಿಸೂಚನೆ ಪ್ರಕಟಗೊಂಡ ಬೆನ್ನಲ್ಲೇ ° ರಾಜಕೀಯಚಟುವಟಿಕೆ ಗರಿಗೆದರಿದೆ.ಕ್ಷೇತ್ರಗಳ ಮೀಸಲಾತಿ ಬಗ್ಗೆ ಅಸಮಾಧಾನವಿದ್ದವರುಆಕ್ಷೇಪಣೆ ಸಲ್ಲಿಸಲು ಸಜ್ಜಾಗಿದ್ದರೆ, ಮತ್ತೆ ಕೆಲವರುಚುನಾವಣೆಗೆ ಟಿಕೆಟ್ ಪಡೆಯಲು ಪ್ರಮುಖ ಮೂರೂ ಪಕ್ಷಗಳ ಮುಖಂಡರ ಮನವೊಲಿಕೆಗೆ ಆಯಾಯಪಕ್ಷದ ಕಾರ್ಯಕರ್ತರು ಸಿದ್ಧತೆ ನಡೆಸುತ್ತಿದ್ದಾರೆ.
ಆಕ್ಷೇಪಣೆ ಸಲ್ಲಿಸಲು ದುಂಬಾಲು: ಈ ಹಿಂದೆ 40ಕ್ಷೇತ್ರಗಳಿದ್ದ ಹಾಸನ ಜಿಲ್ಲಾ ಪಂಚಾಯತಿಯಲ್ಲಿ ಈಗ4 ಕ್ಷೇತ್ರಗಳು ಹೆಚ್ಚುವರಿಯಾಗಿ ಸೃಷ್ಟಿಯಾಗಿ ಕ್ಷೇತ್ರಗಳಸಂಖ್ಯೆ 44 ಕ್ಕೇರಿದೆ. ಆದರೆ ತಾಪಂ ಕ್ಷೇತ್ರಗಳ ಸಂಖ್ಯೆಮಾತ್ರ 153 ರಿಂದ 120 ಕ್ಕೆ ಇಳಿದಿವೆ. ಮಹಿಳೆಯರಿಗೆಶೇ.50 ಕ್ಷೇತ್ರಗಳು ಮೀಸಲಾಗಿವೆ.
ಕ್ಷೇತ್ರಗಳ ಪುನರ್ವಿಂಗಡಣೆ ನಂತರ ಹಿಂದಿನ ಮೀಸಲಾತಿ ಆಧಾರದ ಮೇಲೆ ಲೆಕ್ಕಾಚಾರ ಹಾಕಿಕೊಂಡು ಚುನಾವಣೆ ಸ್ಪರ್ಧೆಗೆ ಮುಂದಾಗಿದ್ದವರಿಗೆ ಈಗ ಪ್ರಕಟವಾಗಿರುವ ಕರಡು ಮೀಸಲಾತಿಯು ನಿರಾಸೆಯನ್ನುಂಟುಮಾಡಿದೆ. ಅಂತಹ ಕ್ಷೇತ್ರಗಳ ಸ್ಪರ್ಧಾಕಾಂಕ್ಷಿಗಳುಚುನಾವಣಾ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಲು ತಮ್ಮಪಕ್ಷಗಳ ಮುಖಂಡರಿಗೆ ದುಂಬಾಲು ಬಿದ್ದಿದ್ದಾರೆ.
ಖಚಿತ ಭರವಸೆ ನೀಡುತ್ತಿಲ್ಲ: ನವೆಂಬರ್ ಅಥವಾಡಿಸೆಂಬರ್‌ನಲ್ಲಿ ಜಿಪಂ, ತಾಪಂ ಚುನಾವಣೆನಡೆಯುವ ಸಾಧ್ಯತೆ ಇದೆ. ಅಷ್ಟರೊಳಗೆ ಚುನಾವಣೆಗೆಸಿದ್ಧತೆ ಮಾಡಿಕೊಳ್ಳಬೇಕು. ಟಿಕೆಟ್ ಖಾತರಿಪಡಿಸಿದರೆ ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಹಾಗಾಗಿಖಚಿತವಾಗಿ ಹೇಳಿ ಎಂದು ತಮ್ಮ ಹಿಂಬಾಲಕರಪಡೆಯೊಂದಿಗೆ ಪಕ್ಷಗಳ ಮುಖಂಡರ ಮನೆಗಳಿಗೆಭೇಟಿ ನೀಡುತ್ತಿದ್ದಾರೆ.
ಆದರೆ ಯಾವುದೇ ಪಕ್ಷದಮುಖಂಡರೂ ಖಚಿತ ಭರವಸೆ ನೀಡುತ್ತಿಲ್ಲ. ನೇರವಾಗಿ ಹೇಳಿದರೆ ಕೆಲವರು ಪಕ್ಷ ಬಿಡುವ ಆತಂಕವಿರುವುದರಿಂದ ಸ್ಪರ್ಧಾಕಾಂಕ್ಷಿಗಳಿಗೆಲ್ಲ ಚುನಾವಣೆಗೆಸಜ್ಜಾಗಿ ಎಂದಷ್ಟೇ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.
ಮೀಸಲು ನಿಗದಿಯಲ್ಲಿ ಶಾಸಕರ ಪ್ರಭಾವ:ಅರಸೀಕೆರೆ ಮತ್ತು ಅರಕಲಗೂಡು ವಿಧಾನಸಭಾಕ್ಷೇತ್ರ ಹೊರತುಪಡಿಸಿ ಇನ್ನುಳಿದ ವಿಧಾನಸಭಾಕ್ಷೇತ್ರಗಳಲ್ಲಿ ಆಯಾಯ ಕ್ಷೇತ್ರಗಳ ಶಾಸಕರು ಪ್ರಭಾವಬೀರಿ ಕೆಲ ಜಿಪಂ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆಮೀಸಲಿಡುವಂತೆ ನೋಡಿಕೊಂಡು ತಮ್ಮ ಆಪ್ತಬೆಂಬಲಿಗರ ಸ್ಪರ್ಧೆಗೆ ಅನುವು ಮಾಡಿಕೊಟ್ಟಿದ್ದಾರೆ ಎಂಬ ದೂರುಗಳೂ ಆಯಾಯ ಪಕ್ಷಗಳ ಕೆಲಮುಖಂಡರಿಂದ ಕೇಳಿ ಬರುತ್ತಿವೆ.
ಭವಾನಿ ಸ್ಪರ್ಧೆ ಹಾದಿ ಸುಗಮ: ಹೊಳೆನರಸೀಪುರಕ್ಷೇತ್ರದ ಹಳೆಕೋಟೆ ಜಿಪಂ ಕ್ಷೇತ್ರ ಸಾಮಾನ್ಯ ಮಹಿಳೆಗೆಮೀಸಲಾಗಿದೆ. ಕಳೆದ ಬಾರಿ ಈ ಕ್ಷೇತ್ರದಿಂದ ಮಾಜಿಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣಅವರು ಆಯ್ಕೆಯಾಗಿದ್ದರು.ಈಬಾರಿಯೂ ಭವಾನಿಅವರ ಸ್ಪರ್ಧೆಗೆ ಹಳೆಕೋಟೆ ಕ್ಷೇತ್ರದ ಮೀಸಲಾತಿನಿಗದಿ ಸುಗಮ ಹಾದಿ ಮಾಡಿಕೊಟ್ಟಿದೆ.
ಅತ್ಯಾಪ್ತರ ಸ್ಪರ್ಧೆಗೆ ಅವಕಾಶ: ದುದ್ದ ಕ್ಷೇತ್ರಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹಾಸನ ಕ್ಷೇತ್ರದಸಾಲಗಾಮೆ ಕ್ಷೇತ್ರದ ಮೀಸಲಾತಿ ಸಾಮಾನ್ಯ ವರ್ಗಕ್ಕೆಮೀಸಲಾಗಲು ಶಾಸಕ ಪ್ರೀತಂ ಜೆ.ಗೌಡ ಅವರುಪ್ರಭಾವ ಬೀರಿದ್ದಾರೆ ಎನ್ನಲಾಗಿದೆ.ಹಾಗೆಯೇ ಆಯಾಯ ವಿಧಾನಸಭಾ ಕ್ಷೇತ್ರಗಳಲ್ಲಿಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕàತ ೆÒ Åಗಳಲ್ಲಿಶಾಸಕರು ಪ್ರಭಾವ ಬೀರಿ ತಮ್ಮ ಅತ್ಯಾ±ರ ¤ ಸ್ಪರ್ಧೆಗೆಅವಕಾಶ ಕಲ್ಪಿಸಿದ್ದಾರೆ ಎನ್ನಲಾಗಿದೆ.
ವಿಧಾನಸಭಾ ಚುನಾವಣೆಗೆ ದಿಕ್ಸೂಚಿ: ಜಿಪಂ ಮತ್ತುತಾಪಂ ಚುನಾವಣಾ ಫಲಿತಾಂಶವು ಮುಂಬರುವವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ದಿಕ್ಸೂಚಿಎಂದೇ ಭಾವಿಸುವ ಶಾಸಕರು ಹಾಗೂ ವಿಧಾನಸಭೆಚುನಾವಣೆಯ ಸ್ಪರ್ಧಾಕಾಂಕ್ಷಿಗಳಿಗೆ ತಮ್ಮ ಪಕ್ಷದಅಭ್ಯರ್ಥಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳುವಅನಿವಾರ್ಯತೆ ಎದುರಾಗಿದೆ. ಹಾಗಾಗಿಯೇಕ್ಷೇತ್ರಗಳ ಮೀಸಲಾತಿ ನಿಗದಿ ಹಾಗೂ ಮೀಸಲಾತಿಬದಲಾವಣೆಗೆ ಪ್ರಯತ್ನ ನಡೆಸುತ್ತಿದ್ದಾರೆ.
ಹಿಂದಿನಬಾರಿ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯುತ್ತಿತ್ತು. ಈಬಾರಿ ರಾಜ್ಯದಲ್ಲಿ ಬಿಜೆಪಿಸರ್ಕಾರಅಧಿಕಾರದಲ್ಲಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೂನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.ಶ್ರವಣಬೆಳಗೊಳ ಕ್ಷೇತ್ರದ ಶಾಸಕಸಿ.ಎನ್.ಬಾಲಕೃಷ್ಣಅವರಕುಟುಂಬದವರ ಸ್ಪರ್ಧೆಗೆಈ ಬಾರಿಮೀಸಲಾತಿ ತೊಡಕಾಗಿದೆ. ಗೌಡಗೆರೆ ಹಾಗೂ ಡಿಂಡಗೂರುಕ್ಷೇತ್ರಗಳು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದಮಹಿಳೆಗೆ ಮೀಸಲಾಗಿವೆ. ಹಾಗಾಗಿ ಅವರ ಕುಟುಂಬದವರು ಈ ಬಾರಿ ಚುನಾವಣೆಯಿಂದ ಹಿಂದೆ ಸರಿಯಬಹುದೆಂದು ಹೇಳಲಾಗುತ್ತಿದೆ.
ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.