ಕುಣಿಗನಹಳ್ಳಿ ಸುತ್ತ – ಮುತ್ತ ಕಾಡಾನೆಗಳ ಹಾವಳಿ


Team Udayavani, Dec 12, 2021, 3:25 PM IST

ಕಾಡಾನೆ

ಸಕಲೇಶಪುರ: ಕಾಡಾನೆಗಳ ಹಿಂಡೊಂದು ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಭತ್ತವನ್ನು ನಾಶಪಡಿಸಿರುವ ಘಟನೆ ತಾಲೂಕಿನ ಕುಣಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕುಣಿಗನಹಳ್ಳಿ ಗ್ರಾಮದ ಸಮೀಪ ಸುಮಾರು 30ಕ್ಕೂ ಹೆಚ್ಚಿದ ಕಾಡಾನೆಗಳ ಹಿಂಡೊಂದು ದಾಳಿ ನಡೆಸಿ ರತ್ನಮ್ಮ, ಚನ್ನಯ್ಯ, ತಿಮ್ಮಪ್ಪ ಎಂಬುವರ ಗದ್ದೆಗಳನ್ನು ಸಂಪೂರ್ಣವಾಗಿ ತುಳಿದು ಹಾಕಿವೆ.

ಒಂದೆಡೆ ಅಕಾಲಿಕ ಮಳೆಯಿಂದ ರೈತರು ತತ್ತರಿಸಿದ್ದು, ಹಾಗೂ ಕೈಗೆ ಬಂದ ಬೆಳೆಯನ್ನು ಕಾಡಾನೆಗಳು ನಾಶ ಪಡಿರುವುದರಿಂದ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಮೂವರ ಗದ್ದೆಯಲ್ಲದೆ ಇನ್ನು ಹಲವು ಕಾಫಿ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿದ ಪರಿಣಾಮ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

15ವರ್ಷಗಳಿಂದ ಕಾಡಾನೆಗಳ ಸಮಸ್ಯೆ ಬಗೆಹರಿಸುವಂತೆ ಹೋರಾಟ ಮಾಡಿದರು ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು , ಸಂಘಟನೆಗಳು ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫ‌ಲವಾಗಿದ್ದು ಯಾರೂ ಗಮನವರಿಸುತ್ತಿಲ್ಲ, ಹಗಲಿಡಿ ಕಷ್ಟಪಟ್ಟು ದುಡಿಯುವ ರೈತ ರಾತ್ರಿ ಮಲಗಿ ಬೆಳಗ್ಗೆ ಬರುವಷ್ಟರಲ್ಲಿ ಜಮೀನುಗಳು ಕಾಡಾನೆಗಳಿಂದ ಹಾನಿಗೀಡಾಗುತ್ತಿರುವುದು ರೈತರಲ್ಲಿ ಆತಂಕ ತಂದಿದೆ. ರೈತರಿಗೆ ಕನಿಷ್ಠ ಸಾಂತ್ವನ ಹಾಗೂ ಪರಿಹಾರ ನೀಡುವಲ್ಲಿ ತಾಲೂಕು ಆಡಳಿತ ವಿಫ‌ಲಗೊಂಡಿದೆ.

ರೈತರು ಕಾಡಾನೆಗಳ ಕಾಟದಿಂದ ಕೃಷಿಯನ್ನು ತೊರೆಯುತ್ತಿರುವುದೂ ಅಲ್ಲದೆ ಹಲವು ರೈತರು ಸಾಲಗಾರರಾಗಿ ಆತ್ಮಹತ್ಯೆಯತ್ತ ಮುಖ ಮಾಡುತ್ತಿರುವುದು ಆತಂಕಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಾಡಾನೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಒಂದೆಡೆ ಅಕಾಲಿಕ ಮಳೆ ಮತ್ತೂಂದೆಡೆ ಕಾಡಾನೆಯ ಹಾವಳಿಯಿಂದ ರೈತರು ತತ್ತರಿಸಿದ್ದು, ಸರ್ಕಾರ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಮುಂದಾಗುತ್ತಿಲ್ಲ.

ಇದನ್ನೂ ಓದಿ;- ಬೆಳೆ ನಷ್ಟ: ಜಮೀನಿಗೆ ಅಧಿಕಾರಿಗಳ ಭೇಟಿ

ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ನೂರಾರು ಪ್ರತಿಭಟನೆ ಮಾಡಿದರು ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ನೂರಾರು ರೈತರೊಂದಿಗೆ ಶೀಘ್ರವಾಗಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಕಾಡಾನೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಲಾಗುವುದು ಎಂದು ಕುಣಿಗನಹಳ್ಳಿ ಗ್ರಾಪಂ ಸದಸ್ಯ ಪ್ರಕಾಶ್‌ ತಿಳಿಸಿದರು.

ಪರಿಹಾರ ನೀಡದಿದ್ದರೆ ವಿಷ ಕುಡಿಯದೇ ವಿಧಿಯಿಲ್ಲ

ಆಲೂರು: ಆಲೂರು-ಸಕಲೇಶಪುರ ಗಡಿ ಭಾಗದ ಕೆಂಚಮ್ಮನ ಹೊಸಕೋಟೆ ಸಮೀಪವಿರುವ ಕುಣಿಗನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿ ಗದ್ದೆಯಲ್ಲಿ ಕಟಾವಿಗೆ ಬಂದಿದ್ದ ಭತ್ತ, ಅಡಿಕೆ, ತೆಂಗು ಬೆಳೆಯನ್ನು ತುಳಿದು ನಾಶ ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ನಷ್ಟವಾಗಿರುವ ಬೆಳೆಗೆ ತಕ್ಕ ಪರಿಹಾರ ನೀಡಬೇಕು. ಇಲ್ಲದಿದ್ದರೆ ವಿಷ ಕುಡಿದು ಸಾಯುತ್ತೇನೆ ಎಂದು ರೈತ ಮಹಿಳೆ ರತ್ನಮ್ಮ ಎಚ್ಚರಿಸಿದ್ದಾರೆ.

ರತ್ನಮ್ಮ, ತನ್ನ ಮನೆಯಲ್ಲಿದ್ದ ಅಲ್ಪಸ್ವಲ್ಪ ಚಿನ್ನವನ್ನು ಅಡವಿಟ್ಟು ಹಣ ತಂದು, ಎರಡೂವರೆ ಎಕರೆ ಗದ್ದೆಯಲ್ಲಿ ಭತ್ತ, ಅಡಿಕೆ, ತೆಂಗು ಬೆಳೆದಿದ್ದರು. ಆನೆಗಳ ಗುಂಪು ಒಂದೆ ರಾತ್ರಿಯಲ್ಲಿ ಸಂಪೂರ್ಣ ತುಳಿದು ನಾಶ ಮಾಡಿವೆ. ಒಂದು ಪಾವು ಭತ್ತವೂ ಸಿಗುವುದಿಲ್ಲ. ಮನೆ ಸುತ್ತಮುತ್ತಲೂ ಆನೆಗಳು ಮಲಗುತ್ತಿವೆ. ಜೀವ ಭಯದಿಂದ ದಿನ ದೂಡುತ್ತಿದ್ದೇವೆ. ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ನಷ್ಟ ಭರಿಸಬೇಕು ಇಲ್ಲದಿದ್ದರೆ ವಿಷ ಕುಡಿದು ಸಾಯುತ್ತೇನೆ ಎಂದಿದ್ದಾರೆ.

ಸುಮಾರು 30-45 ಕಾಡಾನೆಗಳ ಹಿಂಡು ಸಕಲೇಶಪುರ-ಆಲೂರು ತಾಲೂಕು ಗಡಿಯಲ್ಲಿರುವ ಕುಣಿಗನಹಳ್ಳಿ ಗ್ರಾಮದಲ್ಲಿ ಬೀಡು ಬಿಟ್ಟಿವೆ. ಬೆಳೆ ಫ‌ಸಲು ಬರುವ ವೇಳೆಗೆ ತಪ್ಪದೆ ಆನೆಗಳು ಪ್ರತಿ ವರ್ಷ ಬರುತ್ತಿವೆ. ರಾತ್ರಿ ವೇಳೆ ಕೊಯ್ಲಿಗೆ ಬಂದಿರುವ ಬೆಳೆಯನ್ನು ತುಳಿದು ನಾಶ ಮಾಡುತ್ತಿವೆ. ಒಂದು ಎಕರೆ ಗದ್ದೆಯಲ್ಲಿ ಭತ್ತ ಬೆಳೆಯಬೇಕಾದರೆ ಸುಮಾರು 20 ಸಾವಿರ ರೂ. ಖರ್ಚಾಗುತ್ತದೆ.

ಸರ್ಕಾರ ಕೇವಲ 2-3ಸಾವಿರ ರೂ. ಪರಿಹಾರ ಕೊಟ್ಟರೆ ಸಾಕಾಗುವುದಿಲ್ಲ. ಖರ್ಚಾಗಿರುವ ಹಣವನ್ನು ಕೊಡಬೇಕು ಎಂದು ಕೆಂಚಮ್ಮನ ಹೊಸಕೋಟೆ ರೈತ ಸಂಘದ ಕಾರ್ಯದರ್ಶಿ ಕಾಡೂÉರು ಜಯಣ್ಣ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

11

Hasan: 100 ರೂ.ಗೆ ಸ್ನೇಹಿನನ್ನೇ ಹತ್ಯೆಗೈದ ಕಿರಾತಕರು

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

ಸರಕಾರದ ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

State Govt ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

A vehicle caught fire at Shiradi Ghat

Shiradi ಘಾಟ್‌ನಲ್ಲಿ ವಾಹನ ಬೆಂಕಿಗೆ ಆಹುತಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.