ಕಂದಾಯೋತ್ಸವದಲ್ಲಿ ಪರಿಸರ ಮಾಲಿನ್ಯ: ಆಕ್ರೋಶ
Team Udayavani, Feb 28, 2021, 1:11 PM IST
ಚನ್ನರಾಯಪಟ್ಟಣ: ಒಂದು ದಶಕದ ನಂತರ ತಾಲೂಕಿನಲ್ಲಿ ಕಂದಾಯೋತ್ಸವವನ್ನು ತಾಲೂಕುಆಡಳಿತ ಕಂದಾಯ ಇಲಾಖೆ ನೌಕರರ ಸಂಘದ ವತಿಯಿಂದ ಸಂಘಟಿಸಿದೆ. ಆದರೆ, ಕ್ರೀಡಾಂಗಣದ ಪ್ರಾಂಗಣದಲ್ಲಿ ಮದ್ದು ಗುಂಡು ಸಿಡಿಸುವ ಮೂಲಕ ಪರಿಸರ ಮಾಲಿನ್ಯ ಮಾಡಿದ್ದು ಎಷ್ಟು ಸರಿ ಎಂದು ಪರಿಸರ ವಾದಿಗಳು ಪ್ರಶ್ನಿಸುತ್ತಿದ್ದಾರೆ.
ಸರ್ಕಾರ ಪರಿಸರ ಮಾಲಿನ್ಯ ತಪ್ಪಿಸಲು ಅದಕ್ಕಾಗಿಯೇ ಪ್ರತ್ಯೇಕ ಇಲಾಖೆ ತೆರೆದಿದೆ. ಆದರೆ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ಸಭೆ ಸಮಾರಂಭದಲ್ಲಿ ಸಾವಿರಾರು ಪಟಾಕಿ ಸಿಡಿಸಿವಾಯುಮಾಲಿನ್ಯ ಉಂಟು ಮಾಡಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಬೇಕಿರುವ ಜಿಲ್ಲಾಧಿಕಾರಿಗಳೇ ಇದನ್ನು ತಡೆಯಬಹುದಿತ್ತು. ಆದರೆ, ಇದಾಗಲಿಲ್ಲ, ಪರಿಸರ ಅಸಮತೋಲನವಾಗುತ್ತಿದ್ದು ತಾಪಮಾನ ಹೆಚ್ಚಾಗುತ್ತಿದೆ. ಇಂತಹವೇಳೆ ಪರಿಸರಕ್ಕೆ ಮಾರಕವಾಗುವ ಪಟಾಕಿಯ ಅಗತ್ಯವೇನಿತ್ತು ಎಂದು ದೂರುತ್ತಿದ್ದಾರೆ.
ಪ್ರಚಾರದ ಹುಚ್ಚೇಕೆ?: ಕಂದಾಯ ಮಹೋತ್ಸವ ನಡೆಸುವಾಗ ತಾಲೂಕಿನ ಪ್ರತಿ ಹೋಬಳಿಯವರು ತಮ್ಮ ಉಪತಹಶೀಲ್ದಾರ್ ಸೇರಿದಂತೆ ಎಲ್ಲಾಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳನ್ನುಒಳಗೊಂಡಂತೆ ಫ್ಲೆಕ್ಸ್ ಹಾಕುವ ಮೂಲಕ ಪ್ರಚಾರಕ್ಕೆ ಏಕೆ ಜೋತುಬಿದ್ದರು. ಪ್ಲಾಸ್ಟಿಕ್ ನಿಷೇಧ ಮಾಡಬೇಕಾಗಿರುವ ತಾಲೂಕಿನ ತಹಶೀಲ್ದಾರ್,ಸಿಬ್ಬಂದಿ ಒಳಗೊಂಡಂತೆ ಹತ್ತಾರು ಫ್ಲೆಕ್ಸ್‌ಗಳನ್ನುಹಾಕಿಸಿಕೊಂಡು ಫ್ಲೆಕ್ಸ್ ನಿಷೇಧ ಪಟ್ಟಣಕ್ಕೆ ಮಸಿ ಬಳಿದಿದ್ದಾರೆ.
ರಾಜಕಾರಣಿಗಳಂತಾದರು: ದಶಕದ ನಂತರ ನಡೆಯುತ್ತಿರುವ ಕಂದಾಯೋತ್ಸವ ಇತಿಹಾಸ ಪುಟ ಸೇರುವ ರೀತಿಯಲ್ಲಿ ನಡೆಯಬೇಕು. ಪರಿಸರಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯದಿಂದದೂರವಿದ್ದು ವಿನೂತನವಾಗಿ ಉತ್ಸವ ಸಂಘಟನೆ ಮಾಡಬೇಕು. ಆದರೆ, ರಾಜಕೀಯ ಪಕ್ಷದ ನಾಯಕರ ರೀತಿಯಲ್ಲಿ ರಸ್ತೆ ಇಕ್ಕೆಲದಲ್ಲಿ ಫ್ಲೆಕ್ಸ್‌ಗಳನ್ನು ಹಾಕಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸುವುದರಲ್ಲಿ ಅರ್ಥವೇನು, ಇಂತಹ ಪರಿಸರಕ್ಕೆ ಮಾರಕವಾಗುವ ಕಾರ್ಯಕ್ರಮಗಳು ತಾಲೂಕಿನಲ್ಲಿ ಮುಂದೆ ನಡೆದರೆಖಂಡಿಸಲಾಗುವುದು ಎಂದು ಪ್ರಗತಿಪರ ಚಿಂತಕರು ಎಚ್ಚರಿಸಿದ್ದಾರೆ.
ಬೇಲಿಯೇ ಎದ್ದು ಹೊಲ ಮೇಯಿತೆ? : ಪರಿಸರದ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು, ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ತಾಲೂಕು ಆಡಳಿತ ಮುಂದಾ ಗಬೇಕು. ಆದರೆ, ತಾಲೂಕಿನಲ್ಲಿ ಮಾತ್ರ ಬೇಲಿನೇ ಎದ್ದು ಹೊಲ ಮೇಯ್ದಂತಿದೆ. ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದರೆ, ಇದರ ಉತ್ಪನ್ನವಾದ ಫ್ಲೆಕ್ಸ್ ಕೂಡ ಹಾಕುವಂತಿಲ್ಲ. ಸರ್ಕಾರದ ಕಾಯ್ದೆ ಜಾರಿಗೆ ತರಬೇಕಿರುವ ಅಧಿಕಾರಿಗಳು, ಕಾಯ್ದೆಯನ್ನು ಮೂಲೆ ಗುಂಪು ಮಾಡಿದ್ದಾರೆ. ಈ ಬಗ್ಗೆ ಯಾರನ್ನು ಪ್ರಶ್ನಿಸಬೇಕು ಎಂದು ಪರಿಸರವಾದಿ ಹಾಗೂ ಸಾವಯವ ಕೃಷಿಕ ರವಿಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
– ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.