ಪರಿಸರ ಸಂರಕ್ಷಣೆ ಇಂದಿನ ಅಗತ್ಯ
Team Udayavani, Jun 6, 2021, 8:43 PM IST
ಹಾಸನ: ಈಗಿನಿಂದಲಾದರೂ ಎಚ್ಚೆತ್ತುಕೊಂಡುಪರಿಸರ ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿಭಾರೀ ಅನಾಹುತ ಸಂಭವಿಸಬಹುದು ಎಂದುಜಿಲ್ಲಾಧಿಕಾರಿ ಆರ್.ಗಿರೀಶ್ ಎಚ್ಚರಿಸಿದರು.
ನಗರದ ಕೇಂದ್ರೀಯ ಬಸ್ ನಿಲ್ದಾಣ ಸಮೀಪದನ್ಯಾಯಾಲಯದ ಎದುರು ಸಸಿ ನೆಡುವುದರಮೂಲಕ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರ ಸಂರಕ್ಷಣೆಮಾಡದಿದ್ದರೆ ಅನೇಕ ಅವಘಡಗಳು ಸಂಭವಿಸುತ್ತವೆ. ಅರಣ್ಯ ನಾಶದಿಂದ ವಾತಾವರಣದ ಮೇಲೆದುಷ್ಪರಿಣಾಮ ಬೀರಿರುವುದರಿಂದ ಅನೇಕಸಮಸ್ಯೆಗಳು ತಲೆ ದೋರುತ್ತಿವೆ.
ನಿಗದಿತಅವಧಿಯಲ್ಲಿ ಮಳೆಯಾಗದೆ ರೈತರಿಗೆ ಹಾಗೂಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆಎಂದರು.ಪ್ರತಿ ಮನೆಗಳ ಮುಂದೆ ಒಂದೊಂದುಗಿಡಗಳನ್ನು ಬೆಳೆಸುವುದು ಹಾಗೂ ಜಮೀನುಗಳಲ್ಲಿಬೆಳೆಸುವುದರಿಂದ ಮರಗಳ ಹಸಿರಿನ ವಾತಾವರಣಸೃಷ್ಟಿಯಾಗುತ್ತದೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದು ನೆಟ್ಟು ಪೋಷಿಸಬೇಕು ಎಂದರು.ಜಿಪಂ ಸಿಇಒ ಬಿ.ಎ.ಪರಮೇಶ್, ಉಪ ಅರಣ್ಯಸಂರಕ್ಷಣಾಧಿಕಾರಿ ಬಸವರಾಜ್, ಸಹಾಯಕಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.