ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ
Team Udayavani, Jun 9, 2019, 3:00 AM IST
ಹಳೇಬೀಡು: ಪರಿಸರವನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೂ ಉಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರ ಆಪ್ತ ಕಾರ್ಯದರ್ಶಿ ಡಾ.ನೆಲ್ಲುಕುಂಟೆ ವೆಂಕಟೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಚನ್ನಮ್ಮ ನಂಜೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ನಮ್ಮ ಭೂಮಿ ನಮ್ಮ ಹೆಮ್ಮೆ ರಾಜ್ಯ ಪರಿಸರ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಮನುಷ್ಯನ ದೇಹದಲ್ಲಿ ನಿರಂತರ ಉಸಿರಾಟ ಕ್ರಿಯೆ ನಡೆಯುತ್ತದೆಯೋ ಹಾಗೆಯೇ ಪರಿಸರ ಸಂರಕ್ಷಣೆಯೂ ಒಂದು ದಿನಕ್ಕೆ ನೀಮಿತವಾಗದೇ ನಿರಂತರವಾಗಿ ನಡೆಯಬೇಕು ಆಗ ಮಾತ್ರ ನಮ್ಮ ಭೂಮಿ ನಮ್ಮ ಜಲ, ನಮ್ಮ ಪರಿಸರ ಉಳಿಸಲುಸಾಧ್ಯ ಎಂದರು.
ಮನುಷ್ಯ, ಮರ,ಮಣ್ಣು, ನೀರು ಪ್ರಕೃತಿ ಇವುಗಳ ನಡುವೆ ಅವಿನಾಭಾವ ಸಂಬಂಧವಿದೆ, ಮಳೆ ಬರಬೇಕಾದರೆ ಮರಗಿಡಗಳಿರಬೇಕು. ಉತ್ತಮ ಬೆಳೆಬರಬೇಕಾದರೆ ಫಲವತ್ತಾದ ಭೂಮಿ ಇರಬೇಕು. ಭೂಮಿಯನ್ನು ನಂಬಿ ಬದುಕನ್ನು ನಡೆಸುತ್ತಿರುವ ಮನುಷ್ಯ ಮೊದಲು,ಗಿಡ ಮರ, ಮಣ್ಣು, ನೀರು ಗಾಳಿ, ಪ್ರಕೃತಿ ಇವುಗಳನ್ನು ಸಂರಕ್ಷಿಸಲೇ ಬೇಕು.ಬೆಟ್ಟ ಗುಡ್ಡಗಳು ಹಾಲಾಗದಂತೆ ನೋಡಿಕೊಳ್ಳಲೇಬೇಕು ಎಂದರು.
ದೇಶದಲ್ಲಿ ಹೇರಳವಾಗಿ ನೈಸರ್ಗಿಕ ಸಂಪನ್ಮೂಲವಿದೆ. ನಿಸರ್ಗದತ್ತ ಸಂಪತ್ತನ್ನು ಹಾಳು ಮಾಡುವುದರಲ್ಲಿ ಭಾರತ ದೇಶವೇ ಮೊದಲ ಸ್ಥಾನದಲ್ಲಿ ರುವುದು ಬೇಸರದ ಸಂವರಿಯಯಾಗಿದೆ ಎಂದರು.
ವಿನಾಶ ಕಟ್ಟಿಟ್ಟ ಬುತ್ತಿ: ಮನುಷ್ಯ ಪ್ರಕೃತಿಯಿಂದ ಸಾಕಷ್ಟು ಅನುಕೂಲ ಪಡೆಯುತ್ತಿದ್ದರೂ ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿದ್ದಾನೆ. ಇದೇ ಪರಿಸ್ಥಿತಿ ಮುಂದುವರಿದರೆ ಪರಿಸರದ ವಿನಾಶ ಕಟ್ಟಿಟ್ಟ ಬುತ್ತಿ. ಆದ್ದರಿಂದ ನಾವು ಪ್ರಕೃತಿಯಿಂದ ಏನು ಪಡೆದುಕೊಳ್ಳುತ್ತೇವೆ ಅದಕ್ಕೆ ಪ್ರತಿಯಾಗಿ ಹತ್ತು ಪಟ್ಟು ಪ್ರಕೃತಿಗೆ ಮನುಷ್ಯ ಕೊಡುಗೆಯನ್ನು ನೀಡಬೇಕು. ಆಗ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ತಿಳಿಸಿದರು.
ಮಳೆ ನೀರು ಸಂರಕ್ಷಿಸಿ: ಮಳೆಯ ನೀರನ್ನು ಸಂರಕ್ಷಣೆ ಮಾಡುವುದು ಅಗತ್ಯವಿದೆ. ಕೆರೆಗಳ ಹೂಳೆತ್ತುವುದು, ನಾಲೆಗಳನ್ನು ಸ್ವತ್ಛಗೊಳಿಸುವ ಮೂಲಕ ಅವುಗಳ ಪುನಶ್ಚೇತನಕ್ಕೆ ಆಧ್ಯತೆ ಕೊಟ್ಟು ಅವುಗಳನ್ನು ಉಳಿಸಬೇಕಿದೆ ಎಂದು ತಿಳಿಸಿದರು.
ಪರಿಸರ ಸಮಾವೇಶಕ್ಕೆ ಪುಷ್ಪಗಿರಿ ಮಠದ ಶ್ರೀ ಡಾ. ಸೋಮಶೇಖರ ಸ್ವಾಮೀಜಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ್, ಪರಿಸರ ಸಂರಕ್ಷಣೆಯ ರಾಜ್ಯ ಸಂಚಾಲಕ ಧನಂಜಯ್ ಜೀವಾಳ್, ಪರಿಸರ ಮತ್ತು ವನ್ಯ ಜೀವಿತಜ್ಞ ಡಾ. ಎ.ಸಿ.ಲಕ್ಷ್ಮಣ್, ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ್ ಹೆಗ್ಡೆ ಆಶೀರಸ,
ಪ್ರಗತಿಪರ ಚಿಂತಕರಾದ ವೆಂಕಟೇಶ್ ಮೂರ್ತಿ, ತಹಶೀಲ್ದಾರ್ ಜಿ.ಮೇಘನಾ, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜಪ್ಪ, ಪ್ರಗತಿಪರ ರೈತ ಮಹಿಳೆ ಹೇಮಶ್ರೀ ಅನಂತ್, ಎಚ್.ಎಂ. ಪರಮೇಶ್, ಪರಿಸರ ತಜ್ಞ ದಿನೇಶ್ ಹೊಳ್ಳ, ಕಾಳೇಗೌಡ ನಾಗವಾರ, ಗಿರಿಜಾ ಶಂಕರ್, ಸೋಮಶೇಖರ್, ಅನಂತರಾಮು, ಗಂಗೂರು ಶಿವಕುಮಾರ್, ಚಂದ್ರಶೇಖರ್ ಹಾಜರಿದ್ದರು.
ಸಮುದಾಯದ ಸಹಭಾಗಿತ್ವ ಅಗತ್ಯ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, ಸಮುದಾಯದ ಸಹಭಾಗಿತ್ವವಿಲ್ಲದೇ ಪರಿಸರದ ಉಳಿವು ಅಸಾಧ್ಯ. ಪ್ರಕೃತಿಯ ಏರು ಪೇರುಗಳಿಗೆ ನಾವೇ ಕಾರಣರಾಗಿದ್ದೇವೆ. ಇದರಿಂದ ದುಷ್ಪರಿಣಾಮವನ್ನು ನಾವೇ ಅನುಭವಿಸುತ್ತಿದ್ದೇವೆ. ಪ್ರಕೃತಿ ನಮ್ಮ ಆಸ್ತಿ ಅದನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ ಸರ್ಕಾರಗಳು ಪರಿಸರವನ್ನು ಉಳಿಸುತ್ತವೆ ಎಂದು ಕೈಕಟ್ಟಿ ಕೂರುವು ಬದಲು ಜನರೂ ಪರಿಸರ ಉಳಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದರು.
ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಜೂ.11 ರಿಂದ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 500 ಗಿಡಗಳನ್ನು ನೆಡುವ ಕೆಲಸ ಪ್ರಾರಂಭಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟು 3 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ, ಜೊತೆಗೆ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಕಾರ ಕೂಡ ಅಗತ್ಯವಿದೆ ಎಂದರು.
ಪರಿಸರ ಪ್ರಜ್ಞೆ ಅಗತ್ಯ: ಪುಷ್ಪಗಿರಿ ಮಠದ ಶ್ರೀ ಡಾ. ಸೋಮಶೇಖರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಿಗೂ ಪರಿಸರ ಪ್ರಜ್ಞೆ ಅತ್ಯವಶ್ಯ. ಜಾಗತಿಕ ತಾಪಮಾನ ವೈಪರೀತ್ಯವನ್ನು ನಿಯಂತ್ರಿಸಲು ಪರಿಸರ ಪ್ರಜ್ಞೆ ಇರಬೇಕು. ಗಿಡ ಮರಗಳು ಮನುಷ್ಯ, ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣ. ಅವುಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳುಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಅರಳಿ, ಬೇವು, ಬಿಲ್ವ,ಬನ್ನಿ, ಇತ್ಯಾದಿ ವೃಕ್ಷಗಳನ್ನು ದೇವರೆಂದು ನಂಬಿ ಪೂಜಿಸಲಾಗುತ್ತಿತ್ತು. ಆದರೆ ಆಧುನೀಕರಣದ ಜಗತ್ತಿನಲ್ಲಿ ಪರಿಸರದ ಕಾಳಜಿ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.