ಹಾಸನ ಕೋವಿಡ್-19 ಆಸ್ಪತ್ರೆಯಲ್ಲಿ ಸುಸಜ್ಜಿತ ವ್ಯವಸ್ಥೆ ; ಲಾಕ್‌ಡೌನ್‌ಗೆ ಹೊಂದಿಕೊಂಡ ಜನ
ಮುಂಜಾಗ್ರತಾ ಕ್ರಮವೇ ಜಿಲ್ಲೆಗೆ ವರದಾನ
Team Udayavani, Apr 12, 2020, 3:06 PM IST
ಹಾಸನ: ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಪರಿಣಾಮಕಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಈವರೆಗೂ ಕೋವಿಡ್-19 ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಕೊರೊನಾ ಪ್ರಕರಣಗಳು ವರದಿಯಾದರೂ ಚಿಕಿತ್ಸೆಗೆ ಸಕಲ ವ್ಯವಸ್ಥೆ ಮಾಡಿಕೊಂಡು ಸನ್ನದ್ಧವಾಗಿದೆ.
1.99 ಲಕ್ಷ ಕ್ವಿಂಟಲ್ ಅಕ್ಕಿ ವಿತರಣೆ: ಜಿಲ್ಲೆಯಲ್ಲಿ ಒಟ್ಟು 4,54,560 ಅನ್ನ ಅಂತೋದ್ಯಯ ಮತ್ತು ಬಿಪಿಎಲ್ ಕಾರ್ಡುದಾರರಿದ್ದು, ಪ್ರತಿ ತಿಂಗಳು 99,577 ಕ್ವಿಂಟಲ್ ಅಕ್ಕಿ ವಿತರಣೆಯಾಗುತ್ತಿದ್ದು, ಎರಡು ತಿಂಗಳ ಪಡಿತರ ಅಕ್ಕಿ 1.99 ಲಕ್ಷ ಕ್ವಿಂಟಲ್ ಅಕ್ಕಿ ಹಾಗೂ 18,182 ಕ್ವಿಂಟಲ್ ಗೋಧಿ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿರುವ 873 ನ್ಯಾಯಬೆಲೆ ಅಂಗಡಿಗಳ ಮೂಲಕ ಏ.10ರ ಗಡುವಿನೊಳಗೆ ಶೇ.98 ರಷ್ಟು ಪಡಿತರ ವಿತರಣೆಯಾಗಿದೆ.
ತರಕಾರಿ ಮಾರುಕಟ್ಟೆ: ಲಾಕ್‌ಡೌನ್ ಜಾರಿಯಾದ ನಂತರ ಕಿಷ್ಕಿಂಧೆಯಾಗಿದ್ದ ಹಾಸನದ ದೇವರಾಜ ಅರಸ್ ಮಾರುಕಟ್ಟೆ (ಕಟ್ಟಿನಕೆರೆ ಮಾರುಕಟ್ಟೆ)ಯನ್ನು ಬಂದ್ ಮಾಡಿಸಿ ಎರಡು ಬಸ್ ನಿಲ್ದಾಣ, ಜಿಲ್ಲಾ ಕ್ರೀಡಾಂಗಣದಲ್ಲಿ ತರಕಾರಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಯಿತು. ಕಳೆದೆರಡು ದಿನಗಳಿಂದ ಮತ್ತೆ ವಿವಿಧ ಬಡಾವಣೆಗಳ ಮೈದಾನದಲ್ಲಿ 4 ತರಕಾರಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಸಗಟು ಮಾರಾಟ ವ್ಯವಸ್ಥೆ
ಮಾಡಲಾಗಿದೆ.
30 ಸಾವಿರ ಲೀ. ಹಾಲು ವಿತರಣೆ: ಕೊಳಚೆ ಪ್ರದೇಶಗಳು, ನಿರಾಶ್ರಿತರ ಶಿಬಿರಗಳಿಗೆ ಉಚಿತ ಹಾಲು ವಿತರಿಸಲು ಜಿಲ್ಲೆಗೆ 25 ಸಾವಿರ ಲೀ. ಹಾಲು ಹಂಚಿಕೆಯಾಗಿತ್ತು. ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಗೂ 25 ಸಾವಿರ ಲೀ. ಹಾಲು ಹಂಚಿಕೆಯಾಗಿದ್ದರೂ ಅಲ್ಲಿ ವಿತರಣೆಯಾಗದೇ ಉಳಿಯುತ್ತಿದ್ದ 5 ಸಾವಿರ ಲೀ. ಸೇರಿ ಜಿಲ್ಲೆಯಲ್ಲಿ 30 ಸಾವಿರ ಲೀ.ಹಾಲನ್ನು ಆಯಾಕ್ಷೇತ್ರದ ಶಾಸಕರು ಸೂಚಿಸಿದ ಪ್ರದೇಶಗಳಲ್ಲಿ ವಿತರಿಸಲಾಗುತ್ತಿದೆ.
21 ಚೆಕ್‌ಪೋಸ್ಟ್: ಹೊರ ಜಿಲ್ಲೆಯವರು ಪ್ರವೇಶಿಸದಂತೆ ನಿರ್ಬಂಧಿಸಲು ಪೊಲೀಸ್ ಇಲಾಖೆ 21 ಚೆಕ್‌ಪೋಸ್ಟ್ ತೆರೆದು
ಕಣ್ಗಾವಲಿರಿಸಿದೆ. ಹಾಸನದಲ್ಲಿ ನಿಯಮ ಉಲ್ಲಂಘಿಸಿ ರಸ್ತೆಗಿಳಿದ 1,150 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊರೊನಾ ಚಿಕಿತ್ಸೆಗೆ ಹಿಮ್ಸ್ ಆಸ್ಪತ್ರೆ ಸಜ್ಜು
ಹಾಸನದ ವೈದ್ಯಕೀಯ ಕಾಲೇಜು ಬೋಧಕ ಆಸ್ಪತ್ರೆಯನ್ನು ಕೊರೊನಾ ಆಸ್ಪತ್ರೆಯೆಂದು ಘೋಷಣೆ ಮಾಡಿದ್ದು, ಕೊರೊನಾ ಪರೀಕ್ಷಾ ಪ್ರಯೋಗಾಲವೂ ಇದೆ. ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಕೊರೊನಾ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ 300 ಹಾಸಿಗೆಗಳ ಕೊರೊನಾ ಚಿಕಿತ್ಸಾ ವಾರ್ಡ್ ವಿಸ್ತರಣೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 50 ಐಸಿಯು ಹಾಗೂ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ 3 ಹಾಸಿಗೆಗಳ ಐಸಿಯು ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 18, ತಾಲೂಕು ಆಸ್ಪತ್ರೆಗಳಲ್ಲಿ ತಲಾ ಒಂದರಂತೆ 8 ವೆಂಟಿಲೇಟರ್ ಸೇರಿ ಜಿಲ್ಲೆಯಲ್ಲಿ ಒಟ್ಟು 26 ವೆಂಟಿಲೇಟರ್‌ಗಳ ವ್ಯವಸ್ಥೆ ಕೊರೊನಾ ಚಿಕಿತ್ಸೆಗಾಗಿ ಸನ್ನದ್ಧವಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಜ್ವರ ತಪಾಸಣಾ ವ್ಯವಸ್ಥೆ ಮಾಡಲಾಗಿದೆ.
ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.