ರೈತರಿಗೆ ಸನಿಹದಲ್ಲಿ ಖರೀದಿ ಕೇಂದ್ರ ಸ್ಥಾಪಿಸಿ
Team Udayavani, Feb 23, 2021, 3:59 PM IST
ಹಾಸನ: ಬೆಂಬಲ ಬೆಲೆಯಲ್ಲಿ ರಾಗಿ, ಭತ್ತ ಖರೀದಿಗೆ ರೈತರಿಗೆ ಅನುಕೂಲವಾಗುವಂತೆ ಅಗತ್ಯ ಇರುವ ಕಡೆಗಳಲ್ಲಿ ಹೆಚ್ಚಿನ ಖರೀದಿ ಕೇಂದ್ರಗಳನ್ನು ಜಿಲ್ಲೆಯಲ್ಲಿ ತೆರೆಯಬೇಕು ಎಂದು ಈ ಬಗ್ಗೆ ಪ್ರಚಾರಗೊಳಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಖರೀದಿ ಕೇಂದ್ರಗಳನ್ನು ತೆರೆಯುವ ಸಂಬಂಧ ಸೋಮವಾರ ವಿಡಿಯೋ ಸಂವಾದ ನಡೆಸಿದ ಅವರು, ಎಲ್ಲಾ ಜಿಲ್ಲೆಗಳಲ್ಲಿಯೂ ರಾಗಿ, ಭತ್ತ ಖರೀದಿಯ ನಿಗದಿತ ಗುರಿ ಸಾಧಿಸಬೇಕು ಎಂದು ಅವರು ಹೇಳಿದರು. ಪಡಿತರ ವ್ಯವಸ್ಥೆಗಳಲ್ಲಿ ಅಕ್ಕಿ, ಗೋಧಿ, ಆಹಾರ ಧಾನ್ಯಗಳು ದುರುಪಯೋಗವಾಗುತ್ತಿರುವುದು ಕೇಳಿ ಬರುತ್ತಿದ್ದು, ಅದರ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಜಿಲ್ಲೆಗಳಲ್ಲಿ ಆಹಾರ ಪದಾರ್ಥಗಳನ್ನು ಖರೀದಿ ಮಾಡುವ ಗೋದಾಮುಗಳು ರೈತರಿಗೆ ಹತ್ತಿರವಾಗುವಂತಿರಬೇಕು. ಅಧಿಕಾರಿಗಳ ಜೊತೆ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ನಡೆಸಿ ಗುರಿಗಳನ್ನು ಸಾಧಿಸಿ ಎಂದು ನಿರ್ದೇಶನ ನೀಡಿದರು.
ಪಟ್ಟಿಯಿಂದ ಕೈಬಿಡಿ: ಬಡತನ ರೇಖೆಗಿಂತ ಮೇಲಿರುವವರು ಹಾಗೂ 7 ಎಕರೆ ಜಮೀನನ್ನುಹೊಂದಿದ್ದು, ಎಲ್ಲಾ ರೀತಿಯ ಸೌಕರ್ಯಗಳುಹೊಂದಿರುವವರ ಹೆಸರನ್ನು ಬಿಪಿಎಲ್ ಪಟ್ಟಿಯಿಂದತೆಗೆಯಲು ಕ್ರಮ ಕೈಗೊಳ್ಳಬೇಕು. ಕೆಲವೆಡೆ ಅಕ್ರಮವಾಗಿ ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಕೊಡುತ್ತಿರುವುದು ಕೇಳಿ ಬರುತ್ತಿದ್ದು ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪಡಿತರ ಅಂಗಡಿಗಳಲ್ಲಿ ಸರಿಯಾದ ಸಮಯಕ್ಕೆ ಜನರಿಗೆ ಆಹಾರ ಧಾನ್ಯಗಳನ್ನು ವಿತರಿಸಬೇಕು, ಮರಣಹೊಂದಿದ ಕಾರ್ಡ್‌ದಾರರ ಹೆಸರನ್ನು ಬಿಪಿಎಲ್ ಪಟ್ಟಯಿಂದ ಕೈಬಿಡಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಜಿಲ್ಲೆಗೆ 7 ಲಕ್ಷ ಗುರಿಯನ್ನು ಹೊಂದಿದ್ದು, ನಮಗೆ ಮಾ.30ರ ಒಳಗೆ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆಹಾಗೂ ಕೊನೆಯ ದಿನದವರೆಗೆ, ರಾಗಿ, ಭತ್ತ ಖರೀದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕ ಪುಟ್ಟಸ್ವಾಮಿ, ಕೃಷಿ ಇಲಾಖೆ ಉಪನಿರ್ದೇಶಕಿ ಕೋಕಿಲ, ಮಹಿಳಾ ಮತ್ತು ಮಕ್ಕಳಕಲ್ಯಾಣ ಅಭಿವೃದ್ಧಿ ಉಪನಿರ್ದೇಶಕ ದಿಲೀಪ್, ರಾಜ್ಯಸಹಕಾರ ಮಹಾ ಮಂಡಳಿ ಶಾಖಾ ವ್ಯಸ್ಥಾಪಕರಂಗಸ್ವಾಮಿ, ಚನ್ನರಾಯಪಟ್ಟಣ ಶಾಖಾ ವ್ಯಸ್ಥಾಪಕ ಚೇತನ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್: ಬಿ.ವೈ.ವಿಜಯೇಂದ್ರ
Hasan; ಹಾಸನಾಂಬೆಗೆ 4 ದಿನದಲ್ಲಿ 3 ಕೋಟಿ ರೂ. ಆದಾಯ
H. D. Kumaraswamy: ನಿಖಿಲ್‌ಗೆ ಅಭಿಮನ್ಯು ಪಾತ್ರ ಬೇಡ ಅರ್ಜುನನ ಪಾತ್ರ
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.