ಯಶವಂತಪುರ- ಹಾಸನಕ್ಕೆ ರೈಲು ಸೇವೆ ವಿಸ್ತರಿಸಿ
Team Udayavani, Jun 1, 2023, 2:50 PM IST
ಸಕಲೇಶಪುರ: ಹಾಸನ- ಯಶವಂತಪುರ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವಂತೆ ಮಲೆ ನಾಡಿಗರಿಂದ ಬೇಡಿಕೆ ಕೇಳಿ ಬರುತ್ತಿದೆ.
ಹಾಸನದಿಂದ ಬೆಳಿಗ್ಗೆ 7 ಗಂಟೆಗೆ ಹೊರಟು 10.10ಕ್ಕೆ ಬೆಂಗಳೂರಿನ ಯಶವಂತಪುರಕ್ಕೆ ಬರುವ ಹಾಗೂ ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಡುವ ಇದೇ ರೈಲು ರಾತ್ರಿ 9.10ಕ್ಕೆ ಹಾಸನ ನಿಲ್ದಾಣಕ್ಕೆ ಬರುತ್ತದೆ.ಈ ಹಿನ್ನೆಲೆ ಇಂಟರ್ ಸಿಟಿ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸ ಬೇಕೆಂಬ ಬೇಡಿಕೆ ವ್ಯಾಪಕವಾಗಿ ಮಲೆನಾಡಿಗರಿಂದ ಕೇಳಿ ಬರುತ್ತಿದೆ. ಬೆಳಗ್ಗೆ 6 ಗಂಟೆಗೆ ಸಕಲೇಶಪುರ ರೈಲು ನಿಲ್ದಾಣದಿಂದ ಈ ರೈಲು ಹೊರಡುವಂತೆ ಮಾಡಿದರೆ ಬೆಂಗಳೂರಿಗೆ 10.10ಕ್ಕೆ ಹೋಗಿ ಕೆಲಸಗಳನ್ನು ಮುಗಿಸಿಕೊಂಡು ಇದೇ ರೈಲಿನಲ್ಲಿ ಸಂಜೆ 6 ಗಂಟೆಗೆ ಹೊರಟು ರಾತ್ರಿ 10.10ರವೇಳೆಗೆ ಸಕಲೇಶಪುರಕ್ಕೆ ಹಿಂತಿರುಗಿ ಬರಬಹುದಾಗಿದೆ. ಇದರಿಂದ ಮಲೆನಾಡಿನ ಜನಸಾಮಾನ್ಯರಿಗೆ ಹಾಗೂ ವರ್ತಕರಿಗೆ ಬಹಳ ಅನುಕೂಲವಾಗುತ್ತದೆ.
ರೈಲು ಸೇವೆಯಿಂದ ಅನುಕೂಲಕರ: ಕಾಫಿ, ಮೆಣಸು, ಏಲಕ್ಕಿ, ಜೇನುತುಪ್ಪದಂತಹ ಮಲೆನಾಡಿನ ಉತ್ಪನ್ನಗಳನ್ನು ಸಹ ಬೆಂಗಳೂರಿಗೆ ಕೊಂಡೊಯ್ದು ಮಾರಾಟ ಮಾಡಲು ಅನುಕೂಲ ವಾಗುತ್ತದೆ. ಪ್ರಸ್ತುತ ಇಂಟರ್ ಸಿಟಿ ರೈಲು ಹಾಸನದಲ್ಲಿ ನಿಲುಗಡೆ ಯಾಗುವುದರಿಂದ ಈ ರೈಲಿನಲ್ಲಿ ಬೆಳೆಗ್ಗೆ ಬೆಂಗಳೂರಿಗೆ ಹೋಗಬೇಕಾದವರು ಬೆಳಗ್ಗೆ 4.75ಕ್ಕೆ ಸಕಲೇಶಪು ರದಿಂದ ಹಾಸನಕ್ಕೆ ಬಸ್‌ನಲ್ಲಿ ದುಬಾರಿ ದರ ತೆತ್ತು ಮತ್ತೆ ಆಟೋ ಮೂಲಕ ಅಧಿಕ ಹಣ ಕೊಟ್ಟು ರೈಲು ನಿಲ್ದಾಣಕ್ಕೆ ಹೋಗಬೇಕಾಗಿದೆ. ಇನ್ನು ಬೆಂಗಳೂರು ಕಡೆಯಿಂದ ಸಕಲೇಶಪುರಕ್ಕೆ ಬರುವವರು ರಾತ್ರಿ ವೇಳೆ ಹಾಸನ ರೈಲು ನಿಲ್ದಾಣಕ್ಕೆ ಹೊಸ ಬಸ್ ನಿಲ್ದಾಣಕ್ಕೆ ಬಂದು ಬಸ್ ಮೂಲಕ ಸಕಲೇಶಪುರಕ್ಕೆ ಬರಬೇಕಾಗಿರುತ್ತದೆ. ಈ ಹಿನ್ನೆಲೆ ಕೂಡಲೆ ಈ ರೈಲನ್ನು ಹಾಸನದಿಂದ ಸಕಲೇಶಪುರದವರೆಗೆ ವಿಸ್ತರಿಸಿದರೇ ಮಲೆನಾಡಿಗರಿಗೆ ಬಹಳ ಅನುಕೂಲವಾಗುತ್ತದೆ.
ಹಾಸನ ಯಶವಂತಪುರ ಇಂಟರ್ ಸಿಟಿ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವಂತೆ ಆಗ್ರಹಿಸಿ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಸಲ್ಲಿಸುತ್ತೇನೆ. – ಸಿಮೆಂಟ್ ಮಂಜು, ಸಕಲೇಶಪುರ ಶಾಸಕ
ಹಾಸನ ಯಶವಂತಪುರ ಇಂಟರ್ ಸಿಟಿ ರೈಲನ್ನು ಸಕಲೇಶಪುರ ದವರೆಗೆ ವಿಸ್ತರಿಸುವಂತೆ ಹಲವು ಬಾರಿ ಉನ್ನತ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ . -ನಾರಾಯಣ ಆಳ್ವ, ಅಧ್ಯಕ್ಷರು, ರೈಲು,ಪ್ರಯಾಣಿಕರ ಹಿತ ರಕ್ಷಣಾ ವೇದಿಕೆ ಪ್ರಯಾಣಿಕರ ಹಿತ ರಕ್ಷಣಾ ವೇದಿಕೆ
ಬದುಕಿಗಾಗಿ ನಾನು ಬೆಂಗಳೂರಿನಲ್ಲಿ ವಾಸವಿದ್ದರು ಸಹ ನಿರಂತರವಾಗಿ ಊರ ಕಡೆ ಹೋಗುತ್ತೇನೆ. ಯಶವಂತಪುರ ಹಾಸನ ಇಂಟರ್ ಸಿಟಿ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸಿದರೆ ನಮ್ಮಂತಹವರಿಗೆ ಬಹಳ ಅನುಕೂಲವಾಗುತ್ತದೆ. – ಚಿದನ್, ಬೆಂಗಳೂರು ವರ್ತಕ
-ಸುಧೀರ್ ಎಸ್.ಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.