ಮತ್ತೆ ವಾಯುಭಾರ ಕುಸಿತ: ಬೆಳೆಗಾರರಲ್ಲಿ ಆತಂಕ

Team Udayavani, Dec 18, 2020, 8:16 PM IST

ಮತ್ತೆ ವಾಯುಭಾರ ಕುಸಿತ: ಬೆಳೆಗಾರರಲ್ಲಿ ಆತಂಕ

ಸಕಲೇಶಪುರ: ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರಕುಸಿತದಿಂದ ತಾಲೂಕಿನಲ್ಲಿ ಮೋಡ ಮುಸುಕಿದವಾತಾವರಣ ಇದ್ದು, ಯಾವುದೇ ಕ್ಷಣದಲ್ಲಿ ಮಳೆಬೀಳುವ ಸಾಧ್ಯತೆ ಇದೆ. ಇದರಿಂದ ತಾಲೂಕಿನ ಭತ್ತ,ಕಾಫಿ, ಮುಸುಕಿನ ಜೋಳದ ಬೆಳೆಗಾರರಲ್ಲಿ ತೀವ್ರಆತಂಕ ತರಿಸಿದೆ.

ಕಳೆದ ತಿಂಗಳು ಉಂಟಾಗಿದ್ದ ನಿವಾರ್‌ ಚಂಡಮಾರುತದಿಂದ ತಾಲೂಕು ಸೇರಿದಂತೆಜಿಲ್ಲೆಯಲ್ಲಿ ಮಳೆ ಸುರಿದು ಅಪಾರ ಪ್ರಮಾಣದಲ್ಲಿಕೊಯ್ಲಿಗೆ ಬಂದಿದ್ದ ಬೆಳೆ ನಷ್ಟ ಉಂಟು ಮಾಡಿತ್ತು. ಇದಾದ ನಂತರ ಬಂದ ಬುರೆವಿ ಚಂಡಮಾರುತ ಕೂಡ ಒಂದು ವಾರ ತುಂತುರು ಸಹಿತ ಗುಡುಗು, ಸಿಡಿಲಿನೊಂದಿಗೆ ಮಳೆ ತಂದಿತ್ತು. ಇದೀಗ ಮತ್ತೆ ವಾಯುಭಾರ ಕುಸಿತ ಉಂಟಾಗಿದ್ದು,ತಾಲೂಕಿನಲ್ಲಿ ಮಳೆ ಸುರಿಯುವ ಸಾಧ್ಯತೆ ಹೆಚ್ಚಿದೆ, ಮೋಡಮುಸುಕಿದ ವಾತಾವರಣ, ತಂಪು ಗಾಳಿ ಕಾಫಿ, ಮೆಣಸು ಬೆಳೆಗಾರರಿಗೆ ಆತಂಕ ತರಿಸಿದೆ.

ಒಣಗಿಸಲು ಬಿಸಿಲೇ ಇಲ್ಲ: ತಾಲೂಕಿನಲ್ಲಿ ಬಹುತೇಕವಾಗಿ ಅರೇಬಿಕಾ ಕಾಫಿ ಕೊಯ್ಲುಮುಗಿದಿದೆ. ರೋಬಾಸ್ಟ ಕಾಫಿ ಕೊಯ್ಲು ಪ್ರಾರಂಭವಾಗಿದೆ. ಕೊಯ್ಲು ಮಾಡಿದ ಕಾಫಿಯನ್ನು ಕಣದಲ್ಲಿ ಒಣಗಿಸಲು ಹಾಕಲಾಗಿದೆ. ಈವರೆಗೂ ಬಿಸಿಲು ಇತ್ತು, ಇದೀಗ ಮೋಡ ಮುಸುಕಿದ ವಾತಾವರಣ ಇರುವುದರಿಂದ ಅರೆಬರೆ ಒಣಗಿದ ಕಾಫಿ ಬೀಜ ಬೂಸ್ಟ್‌ ಬಂದು, ತನ್ನ ಮೂಲ ಸ್ವರೂಪಕಳೆದುಕೊಳ್ಳುವ ಆತಂಕ ಬೆಳೆಗಾರರಿಗೆಕಾಡುತ್ತಿದೆ.ಕಾರ್ಮಿಕರು ಸಿಗುತ್ತಿಲ್ಲ: ಈಗಾಗಲೇ ತಾಲೂಕಿನಲ್ಲಿ ಗ್ರಾಪಂ ಚುನಾವಣಾ ಜ್ವರ ವ್ಯಾಪಿಸಿದೆ. ಇದರಿಂದಾಗಿಕೂಲಿ ಕಾರ್ಮಿಕರು ಸರಿಯಾಗಿ ಕೆಲಸ ಕಾರ್ಯಗಳಿಗೆ ಬರುತ್ತಿಲ್ಲ. ಕಣದಲ್ಲಿ ಹಾಕಿರುವ ಕಾಫಿ ಬೀಜ ಮಳೆಯಿಂದ ರಕ್ಷಿಸಲು ಕಾರ್ಮಿಕರು ದೊರಕುತ್ತಿಲ್ಲ, ಇದರಿಂದ ಬೆಳೆಗಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗುಣಮಟ್ಟ ಕಳೆದುಕೊಳ್ಳುವ ಭೀತಿ: ಒಣಗಿಸಲು ಹಾಕಿರುವ ಕಾಫಿಯನ್ನು ರಕ್ಷಣೆ ಮಾಡದಿದ್ದರೆ, ಮಳೆನೀರು ಬಿದ್ದು ಕಾಫಿಯಲ್ಲಿ ನೀರಿನ ಅಂಶ ಸೇರಿಒಣಗಿಸಲು ಮತ್ತಷ್ಟು ಪರದಾಡಬೇಕಾಗುತ್ತದೆ. ಜೊತೆಗೆಮಳೆ ನೀರು ಸೇರುವುದರಿಂದ ಕಾಫಿಯ ಗುಣಮಟ್ಟವುಹಾಳಾಗಿ ಉತ್ತಮ ದರ ದೊರಕುವುದಿಲ್ಲ.

ಭತ್ತ ಮಣ್ಣು ಪಾಲಾಗುವ ಸಾಧ್ಯತೆ: ಇದೇ ರೀತಿ ಹಲವೆಡೆ ಭತ್ತದ ಗದ್ದೆ ಕೊಯ್ಲು ನಡೆಯುತ್ತಿದೆ. ಕೆಲವರು ಕೊಯ್ಲು ಮಾಡಿದ ಭತ್ತ ಕಣದಲ್ಲಿಒಣಗಿಸಲು ಹಾಕಿದ್ದರೆ, ಇನ್ನು ಕೆಲವರು ಕಾರ್ಮಿಕರ ಸಮಸ್ಯೆಯಿಂದ ಕೊಯ್ಲು ಮಾಡದೇ ಗದ್ದೆಯಲ್ಲೇಬಿಟ್ಟಿದ್ದಾರೆ. ಇದೀಗ ವಾಯುಭಾರ ಕುಸಿತ ಉಂಟಾಗಿದ್ದು, ಒಂದು ವೇಳೆ ಮಳೆ ಸುರಿದರೆ,ಕೊಯ್ಲಿಗೆ ತುಂಬಾ ತೊಂದರೆ ಆಗುತ್ತದೆ, ಮಾಗಿರುವಭತ್ತವೂ ಮಣ್ಣು ಪಾಲಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಎರಡು ಮೂರು ದಿನ ಮೋಡ ಮುಸುಕಿದವಾತಾವರಣ, ಚದುರಿದಂತೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಇದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಕೃಷಿಯಿಂದ ವಿಮುಖರಾಗುವ ಸಾಧ್ಯತೆ:

ಮಳೆಯಿಂದ ಗಿಡದಲ್ಲಿ ಕಟ್ಟಿರುವ ಕಾಫಿ ಉದುರುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಅತಿವೃಷ್ಟಿ, ಕಾಡಾನೆಸಮಸ್ಯೆಯಿಂದ ತತ್ತರಿಸಿರುವ ಬೆಳೆಗಾರರು ಇದೀಗಪ್ರತಿಕೂಲದ ವಾತಾವರಣದಿಂದ ಮತ್ತಷ್ಟು ಸಮಸ್ಯೆಗೆ ಸಿಲುಕುವಂತಾಗಿದೆ. ಒಟ್ಟಾರೆಯಾಗಿ ಮಲೆನಾಡಿನಲ್ಲಿ ಒಂದಲ್ಲ ಒಂದು ಸಮಸ್ಯೆ ಕಾಫಿ ಬೆಳೆಗಾರರಿಗೆ ಕಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೃಷಿ ಕಾಯಕದತ್ತ ಯುವ ಪೀಳಿಗೆ ವಿಮುಖರಾಗುವ ಸಾಧ್ಯತೆಯಿದೆ.

ವಾಯುಭಾರಕುಸಿತದಿಂದ ವಾತಾವರಣದಲ್ಲಿ ಮತ್ತೆ ಬದಲಾವಣೆ ಆಗಿದೆ.ಕಾಫಿ ಬೆಳೆಗಾರರು ಮಾತ್ರವಲ್ಲದೆ, ಭತ್ತಬೆಳೆದ ರೈತರೂ ತೊಂದರೆಗೆ ಸಿಲುಕುವಂತಾಗಿದೆ. ತಾಲೂಕಿನ ಮಟ್ಟಿಗೆ ಈವೇಳೆ ಮಳೆ ಬೀಳುವುದು ವಿರಳವಾಗಿತ್ತು.ಇಂತಹ ಸಮಯದಲ್ಲಿ ಮಳೆ ಬೀಳುತ್ತಿರುವುದರಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದುಕಷ್ಟಕರವಾಗಿದೆ. ಪ್ರದೀಪ್‌, ಕಾಫಿ ಬೆಳೆಗಾರ, ಕುಡುಗರ ಹಳ್ಳಿ

ಪದೇಪದೆ ವಾತಾವರಣದಲ್ಲಿ ಬದಲಾವಣೆ ಆಗುತ್ತಿರುವುದರಿಂದ ಬೆಳೆಗಾರರಿಗೆ ಬೆಳೆಯನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಮುಂದಿನ ದಿನಗಳಲ್ಲಿ ವಾತಾವರಣದಲ್ಲಿನ ಬದಲಾವಣೆಗೆ ತಕ್ಕಂತೆ ಕೆಲವೊಂದು ಮಾರ್ಪಾಡುಗಳನ್ನು ಬೆಳೆಗಾರರು ಅಳವಡಿಸಿಕೊಳ್ಳಬೇಕಾಗುವ ಅಗತ್ಯವಿದೆ. ತೋ.ಚಾ.ಅನಂತಸುಬ್ಬರಾಯ, ಅಧ್ಯಕ್ಷರು, ಜಿಲ್ಲಾ ಬೆಳೆಗಾರರ ಸಂಘ

-ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

9-

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್‌ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.