ಉತ್ತರಖಂಡ್‌ ದುರಂತದಿಂದ ಮಲೆನಾಡಲ್ಲಿ ತಲ್ಲಣ

ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮಘಟ್ಟದ ಕಾಡು ನಾಶ, ಎತ್ತಿನಹೊಳೆ, ಇತರೆ ಯೋಜನೆಗಳಿಂದ ಗುಡ್ಡ ಕುಸಿತ, ನೆರೆ ಹಾವಳಿ

Team Udayavani, Feb 10, 2021, 3:39 PM IST

ಉತ್ತರಖಂಡ್‌ ದುರಂತದಿಂದ ಮಲೆನಾಡಲ್ಲಿ ತಲ್ಲಣ

ಸಕಲೇಶಪುರ ತಾಲೂಕಿನಲ್ಲಿ ನಡೆಯುತ್ತಿರುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ.

ಸಕಲೇಶಪುರ: ಎತ್ತಿನಹೊಳೆ ಯೋಜನೆ, ರಸ್ತೆ ಅಗಲೀಕರಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಮಲೆನಾಡಿನಲ್ಲಿ ವ್ಯಾಪಕ ಪರಿಸರ ಹಾನಿಯಾಗುತ್ತಿದ್ದು,ಹವಾಮಾನ್ಯ ವೈಪರೀತ್ಯದಿಂದ ಗುಡ್ಡ ಕುಸಿತ, ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ನಷ್ಟ ಉಂಟಾಗುತ್ತಿದೆ. ಇದು ಪ್ರತಿವರ್ಷವೂ ಸಂಭವಿಸುತ್ತಿರುವ ಕಾರಣ ಮಲೆನಾಡಿನಲ್ಲೂಉತ್ತರಖಂಡ್‌ನ‌ಂತೆ ದುರಂತ ಸಂಭವಿಸುವುದರಲ್ಲಿಅನುಮಾನವಿಲ್ಲ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತರಾಖಂಡದಲ್ಲಿ ಹಿಮನದಿ ಸ್ಫೋಟಗೊಂಡು ದೊಡ್ಡದುರಂತ ಸಂಭವಿಸಿ, ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಈ ಹಿಂದೆಯೂ ದೇವ ಭೂಮಿಯಲ್ಲಿ ಪ್ರಕೃತಿ ಮುನಿಸಿಗೆನೂರಾರು ಜೀವಗಳು ಬಲಿಯಾಗಿದ್ದವು. ಜೊತೆಗೆಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಸಿಡಿಮದ್ದುಗಳ ಲಾರಿಸ್ಫೋಟಗೊಂಡು ಹಲವು ಜೀವಗಳು ಬಲಿಯಾಗಿದ್ದವು.ಇವೆಲ್ಲದಕ್ಕೆ ಪ್ರಕೃತಿಯ ಮಡಿಲಲ್ಲಿ ನಡೆಯುತ್ತಿರುವ ಅಕ್ರಮಕಲ್ಲು, ಮರಳು ಗಣಿಗಾರಿಕೆ, ಅಭಿವೃದ್ಧಿ ಕಾಮಗಾರಿಗಳೇಕಾರಣ ಎಂಬುವುದನ್ನು ತಳ್ಳಿ ಹಾಕುವಂತಿಲ್ಲ. ಮಿತಿ ಮೀರಿದ ಅಭಿವೃದ್ಧಿ ಕಾರ್ಯಗಳಿಂದ ಇಂತಹದ್ದೇದುರಂತ ರಾಜ್ಯದ ಮಲೆನಾಡು ಮತ್ತು ಪಶ್ಚಿಮಘಟ್ಟಪ್ರದೇಶಗಳಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು. ಆದರೆ, ಇದ್ಯಾವುದನ್ನೂ ಸರ್ಕಾರ ಮತ್ತು ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲ. ತಾಲೂಕಿನ ಶಿರಾಡಿ ಘಾಟ್‌ ಪಕ್ಕದ ಕೊಡಗು, ಚಿಕ್ಕಮಗಳೂರುಜಿಲ್ಲೆಗಳಲ್ಲಿ ಪ್ರತಿ ವರ್ಷ ಬೆಟ್ಟ ಗುಡ್ಡಗಳ ಕುಸಿತಸಂಭವಿಸುತ್ತಲೇ ಇದೆ. ತಾಲೂಕಿನಲ್ಲೂ ಇಂತಹದ್ದೇಅನಾಹುತ ಸಂಭವಿಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ.

ಗುಡ್ಡ ಕುಸಿತ ಸಾಮಾನ್ಯ: ಪಶ್ಚಿಮಘಟ್ಟದಲ್ಲಿ ಎಗ್ಗಿಲ್ಲದೆ ಅವೈಜ್ಞಾನಿಕವಾಗಿ ನಡೆಯುತ್ತಿರುವ ಎತ್ತಿನಹೊಳೆ ಮತ್ತುಇತರೆ ಕಿರು ಜಲ ವಿದ್ಯುತ್‌ ಯೋಜನೆಗಳಿಂದ ಪರಿಸರಕ್ಕೆತೀವ್ರಪೆಟ್ಟು ಬಿದ್ದಿದೆ. ಈ ಹಿಂದೆ ಕಿರು ವಿದ್ಯುತ್‌ಯೋಜನೆಗಳ ಹೆಸರಿನಲ್ಲಿ ಮರಗಳ ಮಾರಣಹೋಮವಾಗಿದೆ. ನಂತರ ಎತ್ತಿನಹೊಳೆ ಮತ್ತು ರಾಷ್ಟ್ರೀಯಹೆದ್ದಾರಿ-75ರ ಅಗಲೀಕರಣ ಹೆಸರಿನಲ್ಲಿ ಅಪಾರ ಪ್ರಮಾಣದ ಮರಗಳನ್ನು ಕಡಿಯಲಾಗಿದೆ. ಕಾಮಗಾರಿಗಾಗಿ ಗುಡ್ಡ ಕೊರೆದು ಹಲವೆಡೆ ಮಣ್ಣು ತುಂಬಿಸಲಾಗುತ್ತಿದೆ.

ಕಳೆದ ಎರಡು ಮೂರು ವರ್ಷಗಳಿಂದ ಶಿರಾಡಿ ಘಾಟ್‌ ರೈಲ್ವೆ ಹಳಿಯ ಬಳಿ ಹಾಗೂ ರಾಷ್ಟ್ರೀಯ ಹೆದ್ದಾರಿ ಮಾರನಹಳ್ಳಿ ಸುತ್ತಮುತ್ತ ಗುಡ್ಡ ಕುಸಿಯುವುದು ಸಾಮಾನ್ಯವಾಗಿದೆ. ಜೊತೆಗೆ ತಾಲೂಕಿನ ಬೆಳಗೋಡು ಸಮೀಪದ ಹೆಬ್ಬನಹಳ್ಳಿಸುತ್ತಮುತ್ತ ಎತ್ತಿನಹೊಳೆ ಯೋಜನೆಗಾಗಿ ಸುರಂಗಮಾರ್ಗದ ಕಾಮಗಾರಿ ಮಾಡಲಾಗುತ್ತಿದೆ. ಈಕಾಮಗಾರಿಗಾಗಿ ಅಪಾರ ಪ್ರಮಾಣದ ಸ್ಫೋಟಕಗಳನ್ನುಬಳಸಲಾಗುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಪ್ರಾಣಿಗಳ ಸಂತತಿಯೂ ನಾಶ: ಈಗಾಗಲೇ ಕಾಡಾನೆಗಳು ಅರಣ್ಯ ನಾಶದಿಂದ ತಮ್ಮ ಆವಾಸವನ್ನು ಕಳೆದುಕೊಂಡಿದ್ದು, ಇದರಿಂದಾಗಿ ಮಲೆನಾಡಿನಲ್ಲಿ ಕಾಡಾನೆ ಹಾಗೂ ಮಾನವಸಂಘರ್ಷ ಸಾಮಾನ್ಯವಾಗಿದೆ. ರೈತರ ನೆಮ್ಮದಿಯನ್ನುಕಾಡಾನೆಗಳು ಕಸಿದಿವೆ. ಜೊತೆಗೆ ಪರಿಸರ ನಾಶದಿಂದಹಲವು ಕಾಡು ಪ್ರಾಣಿಗಳ ಸಂತತಿ ಕಡಿಮೆಯಾಗುತ್ತಿದೆ.ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅಪಾಯಕಟ್ಟಿಟ್ಟ ಬುತ್ತಿಯಾಗಿದೆ. ಹಿಮಾಲಯ ಪರ್ವತಕ್ಕಿಂತ ಪಶ್ಚಿಮಘಟ್ಟ ಗಟ್ಟಿ ಎಂದು ಹೇಳಿಕೊಂಡಿದ್ದ ವಿಜ್ಞಾನಿಗಳಿಗೆ, ಈಗ ಆ ಬಗ್ಗೆಯೂ ಚಿಂತಿಸುವ ಕಾಲ ಸನಿಹವಾಗಿದೆ. ಒಂದು ವೇಳೆ ಅಭಿವೃದ್ಧಿ ಹೆಸರಲ್ಲಿ ಮತ್ತೆ ಶಿರಾಡಿ ಘಾಟ್‌ ಸೇರಿದಂತೆ ಇದಕ್ಕೆ ಹೊಂದಿಕೊಂಡಿರುವ ಎತ್ತರದ ಪ್ರದೇಶಗಳನ್ನು ಬೇಕಾಬಿಟ್ಟಿಕೊರೆದರೆ, ಇದಕ್ಕೆ ಬೆಲೆ ತೆರಬೇಕಾದ ಕಾಲ ದೂರವಿಲ್ಲ ಎಂಬುವುದು ಪರಿಸರವಾದಿಗಳ ಆತಂಕವಾಗಿದೆ.

ಶಿರಾಡಿ ಘಾಟ್‌ ಅಡ್ಡ ಹೊಳೆಯಿಂದ ಮಂಗಳೂರು ಕಡೆಗೆ ಸುರಂಗ ಮಾರ್ಗಗೆ ಸಿದ್ಧತೆ : ಸಾವಿರಾರು ಅಪರೂಪದ ವನ್ಯ ಜೀವಿಗಳು, ಔಷಧೀಯ ಸಸ್ಯಗಳ ತಾಣವಾಗಿರುವ ಪಶ್ಚಿಮ ಘಟ್ಟದ ಪ್ರಮುಖ ಭಾಗ ಶಿರಾಡಿ ಘಾಟ್‌ನಲ್ಲಿ ಬೆಂಗಳೂರು -ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ,ರೈಲ್ವೆ ಮಾರ್ಗ ಹಾದು ಹೋಗಿವೆ. ಜೊತೆಗೆ 4 ರಿಂದ 5 ಕಿರು ಜಲ ವಿದ್ಯುತ್‌ಯೋಜನೆಗಳೂ ಇವೆ. ಈ ಜಲವಿದ್ಯುತ್‌ ಯೋಜನೆಗಳು ಪ್ರಾರಂಭಿಸದಂತೆದೊಡ್ಡ ಹೋರಾಟಗಳು ಈ ಹಿಂದೆ ನಡೆದಿವೆ. ಆದರೆ, ಅವು ಗಳನ್ನು ನಿಲ್ಲಿಸಲು ಆಗಲಿಲ್ಲ. ಇನ್ನು ಶಿರಾಡಿ ಘಾಟ್‌ನ ಅಡ್ಡಹೊಳೆಯಿಂದ ಮಂಗಳೂರು ಕಡೆಗೆಸಂಪರ್ಕಿಸುವ 30 ಕಿ.ಮೀ. ದೂರದ ಸುರಂಗ ಮಾರ್ಗ ಕಾಮಗಾರಿ ಮಾಡುವಯೋಜನೆ ಇದೆ. ಜೊತೆಗೆ ಕಡೂರು- ಸಕಲೇಶಪುರ ರೈಲು ಮಾರ್ಗ ಸಹ ಆಗಬೇಕಿದೆ. ಇದು ಸಹ ಪರಿಸರ ಪ್ರೇಮಿಗಳಲ್ಲಿ ಆತಂಕ ತಂದಿದೆ.

ದಿಕ್ಕು ತಪ್ಪಿರುವ ಝರಿ, ತೊರೆಗಳು : ಸಕಲೇಶಪುರ – ಆಲೂರು ಗಡಿ ಭಾಗದ ಕೆಲವೆಡೆ ವಿವಿಧ ಅಭಿವೃದ್ಧಿಕಾಮಗಾರಿಗಾಗಿ ಕಲ್ಲು ಗಣಿ ಗಾರಿಕೆ ಮಾಡಲಾಗುತ್ತಿದೆ. ಇಲ್ಲೂ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇದರಿಂದ ಪರಿಸರದ ಮೇಲೆ ನೇರ ಹಾನಿಯುಂಟಾಗುತ್ತಿದೆ. ಸದ್ಯ, ಶಿರಾಡಿ ಘಾಟ್‌ ಸೇರಿ ಸಕಲೇಶಪುರ ತಾಲೂಕಿನ ವಿವಿಧೆಡೆಹರಿಯುತ್ತಿರುವ ಝರಿಗಳನ್ನೆಲ್ಲ ಎತ್ತಿನಹೊಳೆ ಯೋಜನೆಯ ಪಾತ್ರಕ್ಕೆಸೇರಿಸುವ ಕಾರ್ಯ ಅವ್ಯಾಹತವಾಗಿನಡಿಯುತ್ತಿದೆ. ಜೊತೆಗೆ ಮರಳುಗಣಿಗಾರಿಕೆಗಾಗಿ ನದಿ ಪಾತ್ರವನ್ನುಬಗೆಯಲಾ ಗುತ್ತಿದೆ. ರೆಸಾರ್ಟ್‌ಗಳ ಹೆಸರಿನಲ್ಲಿ ಕಾಡುಗಳನ್ನು ನಾಶಮಾಡಲಾಗುತ್ತಿದೆ. ಎತ್ತಿನಹೊಳೆ ಹಾಗೂ ಮರಳು ಗಣಿಗಾರಿಕೆಗಾಗಿಹರಿಯುವ ನದಿ ನೀರಿನ ಮಾರ್ಗವನ್ನೇ ಬದಲಾಯಿಸಲಾಗುತ್ತಿದೆ.

ಮಲೆನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯಗಳನ್ನು ನಾಶ ಮಾಡುತ್ತಿರುವುದು ಆತಂಕಕಾರಿ ಯಾಗಿದೆ. ಏನಾದರು ಅನಾಹುತ ಸಂಭವಿ ಸುವ ಮೊದಲು ನಾವು ಎಚ್ಚೆತ್ತು ಕೊಳ್ಳಬೇಕು. ಇತಿಹಾಸ್‌, ಪರಿಸರ ಪ್ರೇಮಿ

ಎತ್ತಿನಹೊಳೆ ಯೋಜನೆಗಾಗಿ ಸುರಂಗ  ಮಾರ್ಗ ಕೊರೆಯಲಾಗುತ್ತಿದೆ. ಅದರಲ್ಲಿಸಿಡಿಮದ್ದುಗಳನ್ನು ಅಕ್ರಮವಾಗಿ ಬಳಸಲು ಅನುಮತಿ ನೀಡಿಲ್ಲ. ಈ ಕುರಿತು ಯಾವುದೇ ಆತಂಕ ಬೇಡ. ಜಯಣ್ಣ, ಕಾರ್ಯಪಾಲಕ ಎಂಜಿನಿಯರ್‌, ವಿಶ್ವೇಶ್ವರಯ್ಯ ಜಲನಿಗಮ

ಎತ್ತಿನಹೊಳೆ ಸೇರಿ ವಿವಿಧ ಯೋಜನೆ ಗಳನ್ನು ಮಲೆನಾಡಿನಲ್ಲಿ ಕೈಗೆತ್ತಿಕೊಳ್ಳ ಲಾಗಿದೆ. ನೀರಾವರಿ ಯೋಜನೆಯ ಹೆಸರಿನಲ್ಲಿ ಝರಿ, ತೊರೆಗಳನ್ನು ಮುಚ್ಚಿಹಾಕಲಾಗಿದೆ. ಸುರಂಗ ಕೊರೆಯಲು ಅಕ್ರಮವಾಗಿ ಸ್ಫೋಟಕ ಬಳಸಲಾಗುತ್ತಿದೆ. ಪರಿಸರ ಸಂರಕ್ಷಣೆ ಕುರಿತು ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲೂಉತ್ತರ್‌ಖಂಡ್‌ನ‌ಲ್ಲಿ ಸಂಭವಿಸದಂತೆ ಇಲ್ಲಿಯೂ ಆಸ್ತಿ ಪಾಸ್ತಿ, ಮನೆ ನಾಶವಾಗುವುದರಲ್ಲಿ ಸಂದೇಹವಿಲ್ಲ.-ಕವನ್‌ಗೌಡ, ವಕೀಲರು

 

ಸುಧೀರ್‌ ಎಸ್‌.ಎಲ್‌.

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

1-sswewqewq

Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.