ತಾಲೂಕಿನಲ್ಲಿ ಜ್ವರ, ತಲೆನೋವಿನ ಸಮಸ್ಯೆ ಉಲ್ಬಣ

ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣಿಸುವ ಭಯ • ಸಾರ್ವಜನಿಕರಿಗೆ ಅರಿವು ಮೂಡಿಸದ ಆರೋಗ್ಯ ಇಲಾಖೆ

Team Udayavani, Jul 17, 2019, 12:00 PM IST

hasan-tdy-1..

ಚನ್ನರಾಯಪಟ್ಟಣ: ಮುಂಗಾರು ಮಳೆ ಕೃಷಿ ಚಟುವಟಿಕೆಗೆ ತಕ್ಕಷ್ಟು ಆಗುತ್ತಿಲ್ಲ. ಆದರೆ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುಷ್ಟು ಮಳೆ ಮಾತ್ರ ಆಗಾಗ ಆಗುತ್ತಿದ್ದು, ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣಿಸುವ ಭಯ ಎಲ್ಲರಲ್ಲೂ ಕಾಡುತ್ತಿದ್ದರೂ ಈ ಬಗ್ಗೆ ಎಚ್ಚರ ವಹಿಸಬೇಕಿರುವ ಆರೋಗ್ಯ ಇಲಾಖೆ ಗಾಢನಿದ್ರೆಗೆ ಜಾರಿದೆ.

ಎಲ್ಲದಕ್ಕೂ ಜ್ವರವೇ ಆರಂಭ: ಹವಾಮಾನ ವೈಪರಿತ್ಯ ದಿಂದ ಕೆಮ್ಮು, ಶೀತ, ಜ್ವರ ಸಾಮಾನ್ಯ ಹಾಗಾಗಿ ಈ ಕುರಿತು ಸಾರ್ವಜನಿಕರು ನಿರ್ಲಕ್ಷಿಸುತ್ತಾರೆ. ಆದರೆ ಸೋಂಕಿನ ಕಾಯಿಲೆಗಳ ಮುಖ್ಯಲಕ್ಷಣವೇ ಜ್ವರ ಎಂಬುದನ್ನು ಮರೆಯುವಂತಿಲ್ಲ. ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಟೈಫಾಯ್ದ್, ವೈರಾಣುವಿನ ಜ್ವರ, ಕಾಲರಾ ಮುಂತಾದವುಗಳು ಆರಂಭದಲ್ಲಿ ಕಾಣಿಸಿ ಕೊಳ್ಳುವುದು ಜ್ವರದ ರೂಪದಲ್ಲೇ ಆದ್ದರಿಂದ ಈ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕಿದೆ.

ಫೋಟೋಗಾಗಿ ಜಾಥಾ: ಮಳೆಗಾದಲ್ಲಿ ಸಾಂಕ್ರಾಮಿಕ ರೋಗಳು ಹರಡುತ್ತವೆ ಎಂಬ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಆರೋಗ್ಯ ಇಲಾಖೆ ಮೂಲದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾಕಷ್ಟು ಅನುದಾನ ನೀಡುತ್ತದೆ. ಅರೋಗ್ಯ ಇಲಾಖೆ ಅಧಿಕಾರಿಗಳು ತಮ್ಮ ದಾಖಲೆಯಲ್ಲಿ ಹಾಗೂ ಮೇಲಧಿಕಾರಿಗಳಿಗೆ ವರದಿ ನೀಡುವ ಸಲುವಾಗಿ ಒಂದೆರಡು ಜಾಥಾ ಮಾಡಿ ವಿವಿಧ ಭಂಗಿಯಲ್ಲಿ ಫೋಟೋ ತೆಗೆದು ಅವುಗಳನ್ನು ನೀಡುವ ಮೂಲಕ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಕೊಂಡಿದ್ದಾರೆ.

ಲಾರ್ವಾ ಉತ್ಪತ್ತಿಯಾಗದಂತೆ ನೋಡಿಕೊಳ್ಳಿ: ಮಳೆ ಗಾಲದಲ್ಲಿ ಜ್ವರ, ಮಲೇರಿಯಾ, ಡೆಂಘೀ ಸೇರಿದಂತೆ ಬಹುತೇಕ ಸಾಂಕ್ರಾಮಿಕ ರೋಗಗಳು ಸೊಳ್ಳೆ ಕಾಟ ದಿಂದ ಹೆಚ್ಚಾಗಿ ಹರಡುತ್ತದೆ. ಆದ್ದರಿಂದ ಸಾರ್ವ ಜನಿಕರು ಗ್ರಾಮ ಪಂಚಾಯಿತಿ, ಪುರಸಭೆ ಅಧಿಕಾರಿ ಗಳ ಸಂಪರ್ಕ ಮಾಡಿ ಸೊಳ್ಳೆ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಿಸಲು ಮುಂದಾಗಬೇಕು. ಈ ಬಗ್ಗೆ ತಾಲೂಕು ಆರೋಗ್ಯ ಇಲಾಖೆಯಲ್ಲಿನ ಆರೋಗ್ಯ ಶಿಕ್ಷಣಾಧಿಕಾರಿಗಳು ಗ್ರಾಮಗಳಲ್ಲಿ ಆಶಾ ಕಾರ್ಯ ಕರ್ತೆಯರು, ಪಟ್ಟಣಗಳಲ್ಲಿ ನರ್ಸಿಂಗ್‌ ವಿದ್ಯಾರ್ಥಿ ಗಳು ಇಲ್ಲವೆ ಆಸ್ಪತ್ರೆ ಸಿಬ್ಬಂದಿ ಮೂಲಕ ಸಾರ್ವ ಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ.

ತಾಜ್ಯದ ಬಗ್ಗೆ ಎಚ್ಚರವಿರಲಿ: ಮನೆಗಳಲ್ಲಿ ಉತ್ಪತ್ತಿ ಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಪುರಸಭೆ ಅಧಿಕಾರಿಗಳು ಕಸದ ರಾಶಿಯನ್ನು ಸ್ವಚ್ಛ ಮಾಡಿಸಬೇಕು, ಚರಂಡಿ ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಒಂದೆಡೆ ಶೇಖರಣೆಯಾದರೆ ಸೊಳ್ಳೆಗಳ ಕಾಟಹೆಚ್ಚಾಗಲಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ತಪ್ಪಿಸಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಮುಂದಾಗಬೇಕಿದೆ.

ಶುದ್ಧ ಹಾಗೂ ಸ್ವಚ್ಛ ಆಹಾರ ಸೇವನೆ: ಮನೆಗಳಲ್ಲಿ ಕುದಿಸಿದ ನೀರು ಇಲ್ಲವೇ ಶುದ್ಧ ಕುಡಿಯುವ ನೀರಿನ ಘಟಕ ನೀರನ್ನು ಸೇವನೆ ಮಾಡಬೇಕು. ಬಿಸಿಯಾದ ಊಟ, ಶುದ್ಧವಾದ ಆಹಾರ ಪದಾರ್ಥ ಸೇವಿಸಬೇಕು. ಕಡ್ಡಾಯವಾಗಿ ಶೌಚಗೃಹ ಬಳಸಬೇಕು. ಶುಚಿತ್ವ ಕಾಪಾಡುವ ಹೋಟೆಲ್ಗಳಲ್ಲಿ ಆಹಾರ ಸೇವನೆಗೆ ಮುಂದಾಗಬೇಕು. ತೆರೆದಿಟ್ಟ ತಿಂಡಿ, ತಿನಿಸು ಮತ್ತು ಕತ್ತರಿಸಿದ ಇಟ್ಟಿರುವ ಹಣ್ಣುಗಳ ಸೇವನೆ ಮಾಡ ಬಾರದು. ರಸ್ತೆ ಬದಿಯಲ್ಲಿನ ಕ್ಯಾಂಟಿನ್‌ಗಳಲ್ಲಿ ಆಹಾರ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಅನೇಕ ಪರಿಣಾಮಗಳು ಎದುರಾಗಲಿವೆ. ಊಟಕ್ಕೆ ಮೊದಲು ನಂತರ ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕಿದೆ.

ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ: ಮನೆ ಸುತ್ತ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ಸೊಳ್ಳೆಯ ಸಂತತಿ ಹೆಚ್ಚಿದಂತೆ ಮುಂಜಾಗ್ರತೆ ವಹಿಸಬೇಕು. ಮನೆ ಯಲ್ಲಿ ಸೊಳ್ಳೆ ಕಾಟವಿದ್ದರೆ ಸೊಳ್ಳೆಪರದೆ ಬಳಸಬೇಕು. ನಿರಪಯುಕ್ತ ವಸ್ತುಗಳಲ್ಲಿ ನೀರು ಶೇಖರಣೆ ಯಾಗ ದಂತೆ ನೋಡಿಕೊಳ್ಳಬೇಕು, ಪ್ರತಿ ಮೂರು ದಿವಸಕ್ಕೆ ಒಮ್ಮೆ ನೀರು ಶೇಖರಣೆ ಮಾಡುವ ವಸ್ತುಗಳನ್ನು ತೊಳೆದು ಶುಚಿಯಾಗಿ ಇಟ್ಟುಕೊಳ್ಳಬೇಕಿದೆ.

ಸೊಳ್ಳೆ ಬಗ್ಗೆ ಎಚ್ಚರವಿರಲಿ: ಕೊಳಚೆ ನೀರಿನಲ್ಲಿ ಮಾತ್ರ ಸೊಳ್ಳೆಗಳು ಉತ್ಪತ್ತಿಯಾಗುವುದಿಲ್ಲ, ನಾವು ಕಡಿಯ ಲಿಕ್ಕೆಂದು ಅಡುಗೆ ಮನೆಯಲ್ಲಿ ಶೇಖರಣೆ ಮಾಡಿರುವ ನೀರಿನಲ್ಲಿಯೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಶುಚಿಯಾದ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಯ ಗಳಿಂದ ಡೆಂಘೀ ಇಲ್ಲವೇ ಚಿಕೂನ್‌ಗುನ್ಯಾ ಕಾಯಿಲೆ ಗಳು ಬರಲಿವೆ ಹಾಗಾಗಿ ಸೊಳ್ಳೆಯ ಬಗ್ಗೆ ಎಚ್ಚರ ವಹಿಸಬೇಕಾಗಿದೆ.

ಆರೋಗ್ಯ ಇಲಾಖೆ ಮಾಹಿತಿ: ಕಳೆದ ಎರಡು ವರ್ಷರಿಂದ ಪುರಸಭೆ ವ್ಯಾಪ್ತಿಯಲ್ಲಿ ತಿಂಗಳಿಗೆ ಎರಡು ದಿವಸ ಅಂದರೆ ತಿಂಗಳ ಮೊಲದನೇ ಹಾಗೂ ಮೂರನೇ ಶುಕ್ರವಾರ ಪಟ್ಟಣದ 23 ವಾರ್ಡ್‌ನಲ್ಲಿ ಲಾರ್ವಾ ಸಮೀಕ್ಷೆ ನಡೆಯುತ್ತಿದೆ. ತಾಲೂಕಿನಲ್ಲಿರುವ 40 ಮಂದಿ ಕಿರಿಯ ಆರೋಗ್ಯ ಸಹಾಯಕರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪಟ್ಟಣಕ್ಕೆ ನಿಯೋಜನೆ ಮಾಡುವ ಮೂಲಕ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂಬುದು ಆರೋಗ್ಯ ಇಲಾಖೆ ಮಾಹಿತಿ ದಾಖಲೆಯಲ್ಲಿದೆ.

ಯಾವಾಗ ಸಮೀಕ್ಷೆ ಮಾಡುತ್ತಾರೆ? :ಎರಡು ವರ್ಷ ನಿರಂತರವಾಗಿ ತಿಂಗಳಿಗೆ ಎರಡು ದಿವಸ ಪಟ್ಟಣದಲ್ಲಿ ಸಮೀಕ್ಷೆ ನಡೆಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದ್ದರೆ ಸಾಂಕ್ರಾಮಿಕ ರೋಗ ಕಡಿಮೆಯಾಗಬೇಕಿತ್ತು. ಮನೆ ಗಳ ಆವರಣದಲ್ಲಿ ಕೊಳಚೆ ನೀರು ಸಂಗ್ರಹವಾಗು ವುದು ನಿಲ್ಲಬೇಕಿತ್ತು. ಇದ್ಯಾವುದು ಆಗಿಲ್ಲ ಎಂದರೆ ಇನ್ನು ಯಾವ ರೀತಿಯಲ್ಲಿ ಸಮೀಕ್ಷೆಗಳು ಹಾಗೂ ಅರಿವು ಮೂಡಿಸುವ ಕೆಲಸ ಆಗುತ್ತಿದೆ ಎನ್ನುವುದು ಪಟ್ಟಣದ ಸಾರ್ವಜನಿಕರ ಪ್ರಶ್ನೆಯಾಗಿದೆ.

 

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hasanamabe

Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್‌ ರದ್ದು

HD-Revanna

Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್‌.ಡಿ.ರೇವಣ್ಣ ಕಿಡಿ

BYV-Hasan

Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್‌: ಬಿ.ವೈ.ವಿಜಯೇಂದ್ರ

1-wewqe

Hasan; ಹಾಸನಾಂಬೆಗೆ 4 ದಿನದಲ್ಲಿ 3 ಕೋಟಿ ರೂ. ಆದಾಯ

H. D. Kumaraswamy: ನಿಖಿಲ್‌ಗೆ ಅಭಿಮನ್ಯು ಪಾತ್ರ ಬೇಡ ಅರ್ಜುನನ ಪಾತ್ರ

H. D. Kumaraswamy: ನಿಖಿಲ್‌ಗೆ ಅಭಿಮನ್ಯು ಪಾತ್ರ ಬೇಡ ಅರ್ಜುನನ ಪಾತ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.