ಹಾಸನ ಜಿಲ್ಲೆಯಲ್ಲಿ ಈ ವರ್ಷ ಮೀನು ಕೃಷಿ ಚುರುಕು; 3 ಕೋಟಿ ಮರಿಗಳ ಬೇಡಿಕೆ
ಮೀನುಮರಿ ಪಾಲನಾ ಕೇಂದ್ರಗಳಿಂದಲೂ ಖರೀದಿಸಿ ಬಿತ್ತನೆ ಮಾಡುತ್ತಾರೆ
Team Udayavani, Nov 25, 2022, 6:15 PM IST
ಹಾಸನ: ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಬಹುತೇಕ ಕೆರೆಗಳು ಭರ್ತಿಯಾಗಿವೆ. ಜಲಾಶಯಗಳೂ ಭರ್ತಿಯಾಗಿದ್ದು, ಮೀನುಗಾರಿಕೆಗೆ ವಿಪುಲ ಅವಕಾಶಗಳಿದ್ದು, ಮೀನು ಕೃಷಿಕರಿಂದ ಮೂರು ಕೋಟಿ ಮೀನುಮರಿಗಳಿಗೆ ಬೇಡಿಕೆ ಬಂದಿದೆ.
ಮೀನುಗಾರಿಕೆ ಇಲಾಖೆ ವ್ಯಾಪ್ತಿಯಡಿ ಜಿಲ್ಲೆಯಲ್ಲಿ 172 ಕೆರೆಗಳಿವೆ. ಆ ಪೈಕಿ 97 ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, ಆ ಕೆರೆಗಳಲ್ಲಿ ಮೀನುಗಾರಿಕೆಗೆ ಇಲಾಖೆ ಹರಾಜಿನ ಮೂಲಕ ವಿಲೇವಾರಿ ಮಾಡಿದೆ. ಈ ಕೆರೆಗಳ ಲ್ಲಿ 5 ವರ್ಷಗಳ ಕಾಲ ಮೀನು ಸಾಕಾಣಿಕೆಗೆ ಇಲಾಖೆಯು ಲೈಸೆನ್ಸ್ ನೀಡಿದೆ. ಹಾಗೆಯೇ ನದಿಗಳಲ್ಲಿ ಹಾಗೂ ಜ ಲಾಶಯಗಳಲ್ಲಿಯೂ ಮೀನುಗಾರಿಕೆಗೆ ಇಲಾಖೆಯು ಪರವಾನಿಗೆ ನೀಡಿದ್ದು, ನದಿಗಳಲ್ಲಿ ಮೀನುಗಾರಿಕೆಯಿಂದ ಇಲಾಖೆಗೆ 2,76,500 ರೂ., ಜಲಾಶಯಗಳ ಮೀನುಗಾರಿಕೆಯಿಂದ 4,78,500 ರೂ. ಹಾಗೂ ಕೆರೆಗಳಲ್ಲಿ ಮೀನು ಕೃಷಿಗೆ ನೀಡಿರುವ ಪರವಾನಗಿಯಿಂದ 20,70,210 ರೂ. ಸೇರಿ ಒಟ್ಟು ಈ ವರ್ಷ 28.24 ಲಕ್ಷ ರೂ.ಗಳನ್ನು ಮೀನುಗಾರಿಕೆ ಇಲಾಖೆ ಆದಾಯ ನಿರೀಕ್ಷೆ ಮಾಡಿದೆ.
ಮೀನುಗಾರಿಕೆ ನಿಷೇಧ: ಜಿಲ್ಲೆಯಲ್ಲಿ ಒಟ್ಟು 17 ಮೀನುಗಾರಿಕಾ ಸಹಕಾರಿ ಸಂಘಗಳಿದ್ದು, ಈ ಸಂಘಗಳು ವಾರ್ಷಿಕ ಮೂರು ಸಾವಿರ ರೂ. ಪಾವತಿಸಿ ಲೈಸೆನ್ಸ್ ಪಡೆದು 10 ತಿಂಗಳು ಮೀನುಗಾರಿಕೆ ಮಾಡಲಿವೆ. ಈ ಸಂಘಗಳು ಗರಿಷ್ಠ ಮೂರು ಕೆರೆಗಳು ಅಥವಾ 300 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮೀನುಗಾರಿಕೆ ಮಾಡಬಹುದು. ಜೂನ್ ಮತ್ತು ಜುಲೈನಲ್ಲಿ ಮೀನುಗಳು ಸಂತಾನಾಭಿವೃದ್ಧಿಯ ಸಮಯವಾಗಿರುವುದರಿಂದ ಆ ಎರಡು ತಿಂಗಳು ನದಿ ಅಥವಾ ಡ್ಯಾಂಗಳಲ್ಲಿ ಮೀನುಗಾರಿಕೆ ನಿಷೇಧಕ್ಕೆ ಒಳಪಟ್ಟು ಸಹಕಾರಿ ಸಂಘಗಳಿಗೆ ಮೀನುಗಾರಿಕೆ ಇಲಾಖೆ ಲೈಸೆನ್ಸ್ ನೀಡಲಿದೆ.
ಅತಿ ಹೆಚ್ಚು ಬೇಡಿಕೆ: ವರ್ಷ ಮುಂಗಾರು ಹಂಗಾಮಿನಲ್ಲಿಯೇ ಕೆರೆಗಳು ಭರ್ತಿಯಾಗಿವೆ. ಹಾಗಾಗಿ ಮೀನು ಮರಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆಗಸ್ಟ್-ಸೆಪ್ಟಂಬರ್ ಅಂತ್ಯದವರೆಗೂ ಮಳೆ ಮುಂದುವರಿದಿದ್ದರಿಂದ ಮೀನು ಬಿತ್ತನೆ ಸಾಧ್ಯವಾಗಿರಲಿಲ್ಲ. ಆ ವೇಳೆ ಬಿತ್ತನೆ ಮಾಡಿದರೂ ಕೆರೆಗಳು ಕೋಡಿ ಹರಿಯುತ್ತಿದ್ದುದ್ದರಿಂದ ನೀರಿನಲ್ಲಿ ಮೀನುಮರಿಗಳು ಕೊಚ್ಚಿ ಹೋಗುತ್ತಿದ್ದವು. ಹಾಗಾಗಿ ಅಕ್ಟೋಬರ್‌ನಿಂದ ಮೀನು ಬಿತ್ತನೆ ಚುರುಕಾಗಿದೆ. ಈ ವರ್ಷ ಹಾಸನ ಜಿಲ್ಲೆಯ ಮೀನು ಕೃಷಿಕರಿಂದ ಸುಮಾ ರು 3 ಕೋಟಿ ಮೀನುಮರಿಗಳ ಬೇಡಿಕೆಯಿದೆ. ಜಿಲ್ಲೆಯಲ್ಲಿ ಕಾಟ್ಲಾ ಮತ್ತು ಕಾಮನ್ ಕಾರ್ಪ್ ಕೃಷಿ ಹೆಚ್ಚಿನ ಪ್ರಮಾಣದಲ್ಲಿದೆ. ಭದ್ರಾವತಿ ಖಾಸಗಿ ಮೀನುಮರಿ ಪಾಲನಾ ಕೇಂದ್ರಗಳಿಂದಲೂ ಖರೀದಿಸಿ ಬಿತ್ತನೆ ಮಾಡುತ್ತಾರೆ ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಆರ್.ವಿವೇಕ್ ಅವರು ಹೇಳಿದರು.
15.82 ಲಕ್ಷ ಮೀನು ಮರಿಗಳ ವಿತರಣೆ
ಮೀನುಗಾರಿಕೆ ಇಲಾಖೆ 7 ಪಾಲನಾ ಕೇಂದ್ರಗಳ ಮೂಲಕ ಮೀನು ಕೃಷಿಕರಿಗೆ ಮೀನು ಮರಿಗಳನ್ನು ವಿತರಣೆ ಮಾಡಲಿದೆ. 25 ರಿಂದ 30 ದಿನಗಳ ಮರಿಗಳನ್ನು ಮೀನು ಕೃಷಿಕರಿಗೆ ಇಲಾಖೆಯು ಮಾರಾಟ ಮಾಡಲಿದೆ ಒಂದು ಕಾಟ್ಲಾ ಮೀನುಮರಿಗೆ 1.50 ರೂ., ಕಾಮನ್ ಕಾರ್ಪ್ ಮೀನು ಮರಿಗೆ 1.20ರೂ. ದರ ನಿಗದಿಪಡಿಸಿದ್ದು, ಮೀನು ಕೃಷಿಕರು ಪಾಲನಾ ಕೇಂದ್ರಗಳಿಂದ ಮರಿಗಳನ್ನು ಕೊಂಡೊಯ್ದು ತಾವು ಗುತ್ತಿಗೆ ಪಡೆದ ಕೆರೆಗಳಲ್ಲಿ ಮೀನು ಸಾಕಾಣಿಗೆ ಮಾಡಬಹುದು. ಈ ವರ್ಷ ಇದುವರೆಗೂ ಇಲಾಖೆಯು ಮೀನು ಕೃಷಿಕರಿಗೆ 15.82 ಲಕ್ಷ ಮೀನು ಮರಿಗಳನ್ನು ವಿತರಿಸಿದ್ದು, ಇಲಾಖಾ ಕೆರೆಗಳಿಗೆ 91ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಿದೆ. ಇನ್ನೂ ಒಂದು ಕೋಟಿ ಮೀನುಮರಿಗಳನ್ನು ಇಲಾಖೆಯು ತನ್ನ ಪಾಲನಾ ಕೇಂದ್ರ ಗಳಲ್ಲಿ ದಾಸ್ತಾನಿರಿಸಿಕೊಂಡಿದೆ. ಕೃಷಿಕರಿಗೆ ಬೇಡಿಕೆಯಷ್ಟು ಮೀ ನು ಮರಿಗಳನ್ನು ಪೂರೈಕೆ ಮಾಡುತ್ತಿಲ್ಲ. ಹಾಗಾಗಿ ಮೀನು ಕೃಷಿಕರು ಶಿವಮೊಗ್ಗ ಜಿಲ್ಲೆ ಭದ್ರಾ ಡ್ಯಾಂ ಯೋಜನೆ ವ್ಯಾಪ್ತಿಯಲ್ಲಿ ಖಾಸಗಿಯವರ ಮೀನು ಮರಿಪಾಲನಾ ಕೇಂದ್ರಗಳಿಂದ ಖರೀದಿಸಿ ಮೀನು ಕೃಷಿ ನಡೆಸುತ್ತಿದ್ದಾರೆ.
ಉಚಿತ ಮೀನು ಮರಿ ಬಿತ್ತನೆ
ಈ ವರ್ಷ ಗ್ರಾಪಂ ಕೆರೆಗಳಿಗೆ ಮೀನುಗಾರಿಕೆ ಇಲಾಖೆಯು ಉಚಿತವಾಗಿ ಮೀನು ಮರಿಗಳನ್ನು ಬಿತ್ತನೆ ಮಾಡುವ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಒಂದು ಕೆರೆಗೆ ಗರಿಷ್ಠ 10ಸಾವಿರ ರೂ. ಮರಿಗಳನ್ನು ಇಲಾಖೆಯು ಉಚಿತವಾಗಿ ಬಿತ್ತನೆ ಮಾಡಲಿದ್ದು, ಒಟ್ಟು 545 ಗ್ರಾಪಂ ಕೆರೆಗಳ ಪೈಕಿ 500 ಕೆರೆಗಳಲ್ಲಿ ಮೀನು ಬಿತ್ತನೆ ಮಾಡು ವ ಗುರಿ ಹೊಂದಿದೆ.
ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.