![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Dec 8, 2020, 3:36 PM IST
ಆಲೂರು/ಸಕಲೇಶಪುರ: ಪ್ರತಿ ಹಂತದಲ್ಲೂ ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸುವ ಮೂಲಕ ಗ್ರಾಪಂ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಸೂಚಿಸಿದರು.
ಪಟ್ಟಣದಅಂಬೇಡ್ಕರ್‌ಭವನದಲ್ಲಿ ಸೋಮವಾರ ಡೇಟಾಎಂಟ್ರಿಆಪರೇಟರ್,ಚುನಾವಣಾಧಿಕಾರಿಗಳು ಮತ್ತು ಸಹ ಚುನಾವಣಾ ಧಿಕಾರಿಗಳಿಗೆ ನಡೆದ ತರಬೇತಿ ಶಿಬಿರದಲ್ಲಿ ಮಾತನಾಡಿ, ಡಿ.11ರಂದು ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿ ಮತ್ತು ಸೂಚಕರು ಕೋವಿಡ್ ನಿಯಪಾಲನೆ ಮಾಡಬೇಕು. ಡಿ.27ರಂದು ಚುನಾವಣೆ ನಡೆಸಲು ತಾಲೂಕು ಆಡಳಿತ ಸಜ್ಜಾಗಿದೆ. ಮತದಾರರು ಧೈರ್ಯವಾಗಿ, ಶಾಂತಿಯುತವಾಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರೀನ್‌ತಾಜ್ ಮಾತನಾಡಿ, ಹಂಚೂರು ಗ್ರಾಪಂ ಹೊರತುಪಡಿಸಿ ಉಳಿದ 14 ಪಂಚಾಯ್ತಿಗಳಿಗೆ ಎರಡನೇ ಹಂತದಲ್ಲಿ ನಡೆಯುವ ಚುನಾವಣೆಗೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಂತಿಯುತ ಮತದಾನಕ್ಕೆ ತಾಲೂಕು ಆಡಳಿತ ಸನ್ನದ್ಧವಾಗಿದೆ ಎಂದು ವಿವರಿಸಿದರು. ತಾಲೂಕು ಅರೋಗ್ಯಾಧಿಕಾರಿ ಡಾ.ಎಚ್.ಆರ್ .ತಿಮ್ಮಯ್ಯ ಮಾತನಾಡಿ, ಚುನಾವಣೆ ಪ್ರಕ್ರಿಯೆಗಳು ನಡೆಯುವಸಂದರ್ಭದಲ್ಲಿಕೋವಿಡ್‌ಮುಂಜಾಗ್ರತೆ
ಕ್ರಮಗಳಾದ ಸ್ಯಾನಿಟೈಸರ್, ಗ್ಲೌಸ್, ಥರ್ಮಲ್ ಸ್ಕ್ಯಾನಿಂಗ್, ಅಂತರ ಕಾಪಾಡಿಕೊಳ್ಳುವುದು ಸೇರಿಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುವುದು, ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಯೂ ಚುನಾವಣೆಗೆ ಸ್ಪರ್ಧಿಸಿ ಮತ ಚಲಾಯಿಸಬಹುದು. ಇವರಿಗೆ ಮತದಾನದ ದಿನ ಸಂಜೆ 5 ರಿಂದ 6 ರವರೆಗೆ ಪಿಪಿಇ ಕಿಟ್ ಧರಿಸಿ ಮತದಾನಕ್ಕೆ ಅವಕಾಶಕಲ್ಪಿಸಲಾಗುವುದು ಎಂದರು. ತಾಪಂ ಇಒ ಎಚ್.ಕೆ.ಸತೀಶ್ ಉಪಸ್ಥಿತರಿದ್ದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
You seem to have an Ad Blocker on.
To continue reading, please turn it off or whitelist Udayavani.