ನಗರ,ಪಟ್ಟಣ ಮಾರಾಟ ಸಮಿತಿ ರಚನೆ ಪ್ರಕ್ರಿಯೆ ಆರಂಭ
Team Udayavani, Sep 7, 2019, 11:53 AM IST
ಹಾಸನ: ಕೃಷಿಭೂಮಿ ಹೊಂದಿರುವ ರೈತರು ಮತದಾರರಾಗಿರುವ ಕೃಷಿ ಉತ್ಪನ್ನ ಮಾರಾಟ ಸಮಿತಿಗಳ ಮಾದರಿಯಲ್ಲೇ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಮತದಾರರಾಗಿರುವ ಮಾರಾಟ ಸಮಿತಿ ರಚನೆಗೆ ಪ್ರಕ್ರಿಯೆ ಆರಂಭವಾಗಿದೆ.
ಕರ್ನಾಟಕ ಬೀದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ನಿಯಮಗಳು 2019ರ ಅನುಷ್ಠಾನಕ್ಕಾಗಿ, ಪಟ್ಟಣ ಮಾರಾಟ ಸಮಿತಿಗೆ (ಟೌನ್ ವೆಂಡಿಂಗ್ ಕಮಟಿ) ಪ್ರತಿನಿಧಿಗಳನ್ನು ಪ್ರಜಾತಂತ್ರದ ವಿಧಾನ ಗಳಿಂದ ಆಯ್ಕೆ ಮಾಡಲು ಸೂಚಿಸಲಾಗಿದ್ದು, ಅರ್ಹ ಮತದಾರರ ಕರಡು ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸರ್ಕಾರ 2016 ರ ಸೆಪ್ಟೆಂಬರ್‌ನಲ್ಲಿ ರಚಿಸಿತ್ತು. ಈ ಇಲಾಖೆಯಡಿ ಕರ್ನಾಟಕ ಬೀದಿ ವ್ಯಾಪಾರದ (ಜೀವನೋಪಾಯದ ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ನಿಯಮವನ್ನು ಸರ್ಕಾರ ಕಳೆದ ಜೂ.12 ರಂದು ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಕಟಿಸಿತ್ತು. ಇದರ ಅನ್ವಯ ಹಾಗೂ ರಾಜ್ಯ ಹೈಕೋರ್ಟ್ ಆ.22 ರಂದು ನೀಡಿರುವ ತೀರ್ಪು ಆಧರಿಸಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಅವರ ಅಧ್ಯಕ್ಷತೆಯಲ್ಲಿ ಸೆ.3 ರಂದು ನಡೆದ ಸಭೆಯಲ್ಲಿ ಪಟ್ಟಣ ಮಾರಾಟ ಸಮಿತಿ ರಚಿಸಲು ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ನಿಗದಿತ ಅವಧಿಯಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ.
23ರೊಳಗೆ ಅಂತಿಮ ಪಟ್ಟಿ: ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸೆ.5 ರೊಳಗೆ ಬೀದಿ ವ್ಯಾಪಾರಿಗಳ ತಾತ್ಕಾಲಿಕ ಮತದಾರ ಪಟ್ಟಿ ಪ್ರಕಟಿಸಬೇಕು. ಅಲ್ಲಿಂದ 15 ದಿನ ಅಂದರೆ ಸೆ.22 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಸೆ.23 ರೊಳಗೆ ಅರ್ಹ ಮತದಾರರ ಅಂತಿಮ ಪಟ್ಟಿ ಪ್ರಕಟಿಸಬೇಕು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳವಾರು ಚುನಾವಣಾಧಿಕಾರಿಗಳನ್ನು ನೇಮಿಸಲು ಸ್ಥಳೀಯ ಸಂಸ್ಥೆಗಳ ಪಟ್ಟಿ ವಿವರವನ್ನು ಸಹಕಾರ ಇಲಾಖೆ ಸಹಕಾರಿ ಚುನಾವಣಾ ಪ್ರಾಧಿಕಾರಕ್ಕೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸಲ್ಲಿಸಬೇಕು ಎಂದು ಅಭಿವೃದ್ಧಿ ಆಯುಕ್ತರ ಸಭೆ ನಿರ್ದೇಶನ ನೀಡಿದೆ.
ಈ ನಿರ್ದೇಶನದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಮತದಾರರ ಕರಡು ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು ಸಹಕಾರಿ ಚುನಾವಣಾ ಪ್ರಾಧಿಕಾರ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ ಪಡೆದುಕೊಂಡ ನಂತರ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದೆ. ಆ ನಂತರ ಚುನಾವಣೆ ನಡೆದು ನಗರ-ಪಟ್ಟಣ ಮಾರಾಟ ಸಮಿತಿಗಳು (ಟೌನ್ ವೆಂಡಿಂಗ್ ಕಮಿಟಿಗಳು) ಅಸ್ತಿತ್ವಕ್ಕೆ ಬರಲಿವೆ.
ನಗರ- ಪಟ್ಟಣ ಮಾರಾಟ ಸಮಿತಿಗಳ ರಚನೆಗೆ ನಡೆಯುವ ಚುನಾವಣೆ ವೆಚ್ಚವನ್ನು ಡೇ ನಲ್ಮ್ ಯೋಜನೆಯ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ ಭರಿಸಬೇಕು. ಇದರ ಅಂದಾಜು ವೆಚ್ಚವನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇ ಶಕರು ಮತ್ತು ಸಹಕಾರಿ ಚುನಾವಣಾ ಪ್ರಾಧಿಕಾರ ಸಿದ್ಧಪಡಿಸಬೇಕು ಎಂದೂ ಸೂಚಿಸಲಾಗಿದೆ.
ಕೌಶಲ್ಯಾಭಿವೃದ್ಧಿ ಇಲಾಖೆ ರಚನೆ ರೂಪುರೇಷೆ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವ ನೋಪಾಯ ಇಲಾಖೆ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಸಿಬ್ಬಂದಿಗಳ ಕೊರತೆ ಇರುವುದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗ ಕಾರ್ಯ ನಿರ್ವಹಿ ಸುತ್ತಿರುವ ಸಮುದಾಯ ಸಂಘಟನಾಧಿಕಾರಿ(ಸಿಎಒ) ಮತ್ತು ಸಮುದಾಯ ಸಂಘಟಕ (ಸಿಒ)ರನ್ನು ನಗರಾ ಭಿವೃದ್ಧಿ ಇಲಾಖೆಯಿಂದ ಪೂರ್ಣ ಪ್ರಮಾಣದಲ್ಲಿ ಕೂಡಲೇ ಹಸ್ತಾಂತರಿಸಬೇಕು. ಕೌಶಲ್ಯಾಭಿವೃದ್ಧಿ ಇಲಾ ಖೆಯಡಿ ಹೊಸ ಲೆಕ್ಕ ಶೀರ್ಷಿಕೆ ಸೃಜಿಸಿ ಅನುದಾನವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಹಂಚಿಕೆ ಮಾಡುವ ವರೆಗೂ ನಗರಾಭಿವೃದ್ಧಿ ಇಲಾಖೆಯಿಂದಲೇ ಸಮು ದಾಯ ಸಂಘಟನಾಧಿಕಾರಿ ( ಸಿಎಒ) ಮತ್ತು ಸಮುದಾಯ ಸಂಘಟಕ (ಸಿಒ)ರಿಗೆ ವೇತನ ಮತ್ತು ಭತ್ಯೆ ಭರಿಸಬೇಕೆಂದು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಡೆ-ನಲ್ಮ್ ಯೋಜನಾ ಸಿಬ್ಬಂದಿ, ಸಮುದಾಯ ಸಂಘಟನಾಧಿಕಾರಿ, ಸಮುದಾಯ ಸಂಘಟಕರನ್ನು ಸಂಪರ್ಕಿಸಬಹುದು ಎಂದು ಹಾಸನ ನಗರಸಭೆ ಪೌರಾಯುಕ್ತ ಬಿ.ಎ. ಪರಮೇಶ್ ತಿಳಿಸಿದ್ದಾರೆ.
● ಎನ್.ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.