ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ನೀತಿ ರೂಪಿಸಿ; ಸಿದ್ಧಗಂಗಾ ಶ್ರೀ
ಶಿಕ್ಷಣ ಕ್ಷೇತ್ರದಲ್ಲಿ ಅಶಾಂತಿ ವಾತಾವರಣ ಮೂಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
Team Udayavani, Jun 3, 2022, 6:17 PM IST
ಬೇಲೂರು: ಸರ್ಕಾರ ಶಿಕ್ಷಣದಲ್ಲಿ ಮಕ್ಕಳ ಭೌದ್ಧಿಕ ಗುಣ ಮಟ್ಟ ವೃದ್ಧಿಯಾಗುವಂಥಹ ಶಿಕ್ಷಣ ನೀತಿ ರೂಪಿಸಬೇಕೆ ಹೊರೆತು ಮೂಲ ತತ್ವ ಸಿದ್ಧಾಂತಗಳನ್ನು ತಿರುಚುವ ಕೆಲಸ ಮಾಡಬಾರೆಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿಗಳು ತಿಳಿಸಿದ್ದಾರೆ.
ಪಟ್ಟಣದ ಜ್ಯೂ.ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದಲ್ಲಿ ಶ್ರೀ ಜಗಜ್ಯೋತಿ ಬಸವೇ ಶ್ವರರ 889ನೇ ಹಾಗೂ ಶ್ರೀ ಶಿವಕುಮಾರಸ್ವಾಮೀಜಿ ಅವರ 115ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗಜ್ಯೋತಿ ಬಸವಣ್ಣನವರ ಜೀವನ, ತತ್ವ, ಆದರ್ಶ ಸಿದ್ಧಾಂತಗಳನ್ನು ಪಠ್ಯ ಕ್ರಮಗಳಲ್ಲಿ ಅಳವಡಿಸಿದಾಗ ಅದರಿಂದ ವಿದ್ಯಾರ್ಥಿಗಳ ನೈತಿಕ ಶಿಕ್ಷಣ ಗುಣಮಟ್ಟ ಹೆಚ್ಚಾಗಬೇಕೆ ಹೊರೆತು ಗೊಂದಲ ಸೃಷ್ಠಿಯಾಗಬಾರದು. ಇತ್ತೀಚಿನ ದಿನಗಳಲ್ಲಿ ಬಸವಣ್ಣನವರ ಇತಿಹಾಸ ಪಾಠದ ಮೂಲ ಪಠ್ಯಕ್ರಮದಲ್ಲಿರುವ ವಿಷಯ ತಿರುಚಲಾಗಿದೆ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿ ಸಮಿತಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಬಸವ ತತ್ವ ಪಾಲಿಸಿ: ಇಂದಿನ ಸಮಾಜಕ್ಕೆ ಬಸವಣ್ಣನವರ ತತ್ವ ಸಿದ್ಧಾಂತದ ಅವಶ್ಯಕತೆ ಇದೆ. ನಮ್ಮ ದಿನನಿತ್ಯ ಬದುಕಿನಲ್ಲಿ ಇದನ್ನು ಅಳಡಿಸಿ ಕೊಂಡು ಉತ್ತಮ ಜೀವನ ನಡೆಸಬೇಕು. ಅವರ ಮಾರ್ಗದರ್ಶನ ಇಡೀ ವಿಶ್ವಕ್ಕೆ ಬೆಳಕು ಮತ್ತು ಕನ್ನಡಿಯಂತೆ ಎಂದರು. ದಿನನಿತ್ಯ ಪೂಜೆ ವಿವಿಧ ದಾನಗಳನ್ನು ಮಾಡುವುದಕ್ಕಿಂತಲೂ ಬವಣ್ಣನವರ ವಚನ ಸಾಹಿತ್ಯ ತತ್ವಗಳನ್ನು ಮನನ ಮಾಡಿ ದಾಗ ತಮ್ಮ ಬದುಕಿನಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದರು.
ಉತ್ತಮ ಸಮಾಜ ನಿರ್ಮಾಣ: ಬಸಣ್ಣನವರು 12ನೇ ಶತನಮಾನದಲ್ಲಿ ಮಹಿಳೆಯರಿಗೆ ಪುರುಷ ಸಮಾನ ಸ್ವತಂತ್ರ ನೀಡಿ ಸಮಾಜದಲ್ಲಿ ವರ್ಣ ಜಾತಿಭೇದಗಳಿಲ್ಲದಂತೆ ಅನುಭವ ಮಂಟಪ ಸ್ಥಾಪಿಸಿದರು. ಎಲ್ಲ ವರ್ಗಗಳ ಶರಣ-ಶರಣೆಯರ ಜ್ಞಾನ ದಾಸೋಹ ಹಂಚಿ ಸಮಾನ ಸಮಾಜ ನಿರ್ಮಾಣ ಮಾಡುವಲ್ಲಿ ಕಳಕಳಿ ಹೊಂದಿದ್ದರು. ಸಿದ್ಧಗಂಗಾ ಮಠದ ಡಾ. ಶಿವಕುಮಾರ ಶ್ರೀಗಳು ಬಸ ವಣ್ಣನವರ ಹಾದಿಯಲ್ಲಿ ನಡೆದು ಉತ್ತಮ ಸಮಾಜ ನಿರ್ಮಿಸಲು ಶ್ರಮಿಸಿದ್ದರು ಎಂದರು.
ಮಕ್ಕಳ ಭೌತಿಕ ಬೆಳವಣಿಗೆಗೆ ಪಠ್ಯ ಕ್ರಮ: ಪುಷ್ಪಗಿರಿ ಮಠದ ಶ್ರೀ ಸೋಮಶೇಖರಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದಿನ ಸಮಾಜದಲ್ಲಿ ಬುದ್ದ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಕಡಿಮೆಯಾಗುತ್ತಿದೆ. ಇಂದು ಭಾಷೆ, ಧರ್ಮ, ಬಟ್ಟೆಯವರೆಗೆ ಧರ್ಮಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸಿ ಶಿಕ್ಷಣ ಕ್ಷೇತ್ರದಲ್ಲಿ ಅಶಾಂತಿ ವಾತಾವರಣ ಮೂಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರತಿಮೆಗೆ 5 ಲಕ್ಷ ರೂ.ದೇಣಿಗೆ: ಉಸ್ತುವಾರಿ ಸಚಿವ ಗೋಪಾಲಯ್ಯ ಮಾತನಾಡಿ, ಬಸಣ್ಣನವರು ತಮ್ಮ ಜೀವನದಲ್ಲಿ ಸರಳತೆ, ಸಾಮಾಜಿಕ ಕಳಕಳಿಯ ಮೂಲಕ ವಿಶ್ವ ಮಾನವರಾಗಿದ್ದಾ ರೆ. ಅವರ ವಚನ ಸಾಹಿತ್ಯ ಇಂದಿನ ಯುವಕರು ಅಳವಡಿಸಿಕೊಳ್ಳುವ ಮೂಲಕ ಸಮಾಜ ದಲ್ಲಿ ಶಾಂತಿ, ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದ ಅವರು, ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಬಸವಣ್ಣನವರ ಕಂಚಿನ ಪ್ರತಿಮೆ ಸ್ಥಾಪನೆ ಮಾಡಲು ತಮ್ಮ ಟ್ರಸ್ಟ್‌ನಿಂದ 5 ಲಕ್ಷ ರೂ.ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ಸಾಹಿತ್ಯದ ಮೂಲಕ ಸಮಾಜ ಸುಧಾರಣೆ: ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಸಮಾಜ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡುವ ಬಯಕೆಯಿಂದ ಬಸಣ್ಣನವರು ಹಲವು ಕ್ರಾಂತಿಕಾರ ಬದಲಾವಣೆಗಳನ್ನು ತಂದು ಮಹಾಪುರುಷ ಎನಿಸಿಕೊಂಡರು. ಮಹಿಳೆಯರಿಗೆ ವಿಶೇಷ ಸ್ಥಾನ ನೀಡುವ ಮೂಲಕ ಸಮಾಜ ಅವರಿಗೆ ಗೌರವ ನೀಡುವಂತೆ ಮಾಡಿದ ಅವರು ಅನುಭವನ ಮಂಟಪ ಸ್ಥಾಪಿಸುವ ಮೂಲಕ ಹಿಂದುಳಿದ ಎಲ್ಲ ವರ್ಗಗಳ ಪ್ರತಿನಿಧಿಗಳನ್ನು ಒಂದೆಡೆ
ಸೇರಿಸಿ ವಚನ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಡಿದರು ಎಂದು ಸ್ಮರಿಸಿದರು.
ಸಮಾರಂಭದಲ್ಲಿ ವೀರಶೈವ ಲಿಂಗಾಯಿತ ಮಹಾ ಸಭಾದ ಅಧ್ಯಕ್ಷ ರವಿಕುಮಾರ್, ಪುರಸಭಾಧ್ಯಕ್ಷ ದಾನಿ, ವೀರಶೈವ ಲಿಂಗಾುತ ಯುವ ಘಟದ ಅಧ್ಯಕ್ಷ ಚೇತನ್, ವೀರಶೈವ ಮುಖಂಡರಾದ ಚಂದ್ರ ಕಲಾ, ಮಾಜಿ ಶಾಸಕ ಗುರುದೇವ್, ಕೊರಟಿಕೆರೆ ಪ್ರಕಾಶ್, ರಾಜ ಶೇಖರ್, ದಯಾನಂದ್ ಇತರರು ಇದ್ದರು.
ಮಕ್ಕಳ ಭೌತಿಕ ಬೆಳವಣಿಗೆ ಪಠ್ಯಕ್ರಮ ರೂಪಿಸಿ
ಶಾಲೆಗಳಲ್ಲಿ ಮಕ್ಕಳ ಭೌತಿಕ ಬೆಳೆವಣಿಗೆಗೆ ಪಠ್ಯ ಕ್ರಮಗಳು ಬೇಕೆ ಹೊರೆತು ಧರ್ಮ, ಜಾತಿ ವಿಷ ಬೀಜ ಬಿತ್ತುವ ಬೆಳವಣಿಗೆಯಾಗಬಾರದು. ಬಸವಣ್ಣನವರ ಜೀವನ ಚರಿತ್ರೆ ಬದಲಿಸುವ ಪ್ರಯತ್ನ ಉತ್ತಮ ಬೆಳವಣಿಗೆಯಲ್ಲ. ಮುಂದೆ ಮಕ್ಕಳ ಭವಿಷ್ಯ ರೂಪಿಸುವ ನಾವು ಎತ್ತ ಸಾಗುತ್ತಿದ್ದೇವೆ ಎಂಬುದು ಕಳವಳಕಾರಿಯಾಗಿದೆ. ಇದನ್ನು ಸರ್ಕಾರ ಗಂಭೀರ ವಾಗಿ ಪರಿಗಣಿಸುವ ಅವಶ್ಯತೆ ಇದೆ ಎಂದು ಪುಷ್ಪಗಿರಿ ಮಠದ ಶ್ರೀ ಸೋಮಶೇಖರಶಿವಾಚಾರ್ಯ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.