ಪುರಸಭಾಧ್ಯಕ್ಷರಿಗೆ ಸ್ವಪಕ್ಷದ ಸದಸ್ಯ ತರಾಟೆ
ಶಾಸಕರ ಮನವಿಗೂ ಸುಮ್ಮನಾಗದ ಸದಸ್ಯ; ಧ್ವನಿಗೂಡಿಸಿದ ಎಂಎಲ್ಸಿ ಗೋಪಾಲಸ್ವಾಮಿ
Team Udayavani, Aug 14, 2021, 3:06 PM IST
ಚನ್ನರಾಯಪಟ್ಟಣ: ಆರು ತಿಂಗಳ ನಂತರ ನಡೆದ ಪುರಸಭಾ ಸಮಾನ್ಯ ಸಭೆಯಲ್ಲಿ ಪುರಸಭಾ ಅಧ್ಯಕ್ಷರ ವಿರುದ್ಧ ಸ್ವಪಕ್ಷದ ಸದಸ್ಯರೇ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಸಕರು ಮನವಿ ಮಾಡಿದರೂ ಸುಮ್ಮನಾಗದೆ ಹಠಕ್ಕೆ ಬಿದ್ದ ಸದಸ್ಯಕೋಟೆ ಮೋಹನ್, ತಾವು ಹೇಳಿದ ವಿಷಯ ಅಜಾಂಡಾಗೆ ಸೇರಿಸಿಲ್ಲ ಎಂದು ಖಾರವಾಗಿ ಮಾತನಾಡಿದರು.
ಹರಸಾಹಸ: ಪಟ್ಟಣ ಪುರಸಭಾಧ್ಯಕ್ಷ ನವೀನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಸದಸ್ಯರೇ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದರು. ಇದಕ್ಕೆ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಹಾಗೂ ಕಾಂಗ್ರೆಸ್‌ನ ಸದಸ್ಯ ಪ್ರಕಾಶ್ ಧ್ವನಿಗೂಡಿಸಿದ್ದಲ್ಲದೆ ತಾವು ಕುಳಿತಿದ್ದ
ಕುರ್ಚಿಯಿಂದ ಕೆಳಗೆ ಇಳಿದು ಅಧ್ಯಕ್ಷರ ಮುಂದೆ ಆಗಮಿಸಿ ಅಧ್ಯಕ್ಷರ ನಡವಳಿಕೆ ಸರಿ ಇಲ್ಲ ಎಂದು ಎಂಎಲ್ಸಿ ದೂರಿದರು. ಶಾಸಕ ಬಾಲಕೃಷ್ಣ ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟರು. ಕೋಟೆ ಮೋಹನ್ ಮಾತನಾಡಿ, ಪುರಸಭೆ 115 ಮಳಿಗೆ ಹರಾಜಿನ ವಿಷಯ ಚರ್ಚೆ ಮಾಡಿ ಪುರಸಭೆಗೆ ಆದಾಯ ತರುವ ನಿಟ್ಟಿನಲ್ಲಿ ಚರ್ಚಿಸುವ ವಿಷಯದ ಬಗ್ಗೆ ಅಧ್ಯಕ್ಷರಿಗೆ ಪತ್ರ ನೀಡಿದ್ದರು. ಅಜೆಂಡಾಗೆ ಸೇರಿಸಿರಲಿಲ್ಲ ಇದನ್ನು ಪ್ರಶ್ನಿಸಿದಲ್ಲದೆ ಅಜಾಂಡಾಗೆ ಸೇರಿಸಬೇಕು, ಇಲ್ಲದೆ ಹೋದರೆ ಸಭೆ ಮುಂದುವರಿಯಲು ಬಿಡುವುದಿಲ್ಲ ಎಂದು ಹಠಕ್ಕೆ ಬಿದ್ದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಪ್ರಕಾಶ್,ಕಳೆದ 8 ತಿಂಗಳಿನಿಂದ ಪುರಸಭೆ ಆಸ್ತಿ ಬಗ್ಗೆ ವಿಷಯ ಪ್ರಸ್ತಾಪಿಸಿದರೂ ಅಧ್ಯಕ್ಷರು ಮೌನಕ್ಕೆ ಶರಣಾಗುತ್ತಿದ್ದಾರೆಂದರು.
ಇದನ್ನೂ ಓದಿ:ಬ್ರಿಟಿಷರನ್ನು ಬೆಚ್ಚಿ ಬೀಳಿಸಿದ್ದ ವಿವಿಂಗ್ ಮಾಸ್ತರ್!
ಸದಸ್ಯರ ಮಾತಿಗೆ ಬೆಲೆ ಇಲ್ಲವೇ, ಪುರಸಭೆ ಆಸ್ತಿ ಖಾಸಗಿಯವರ ಪಾಲಾಗುತ್ತಿರುವ ಬಗ್ಗೆ ಕಳೆದ ಸಭೆಯಲ್ಲಿ ತಿಳಿಸಿದಾಗ ಮುಂದೆ ಸಭೆಯಲ್ಲಿ ಅಜೆಂಡಾಗೆ ಸೇರಿಸುತ್ತೇನೆ ಎಂದಿದ್ದರು. ಈಗಲೂ ವಿಷಯಸೇರಿಸದೆಅಧ್ಯಕ್ಷರುದೌರ್ಜನ್ಯವೆಸಗುತ್ತಿದ್ದಾರೆ. ಕಳೆದ 6 ತಿಂಗಳಿನಿಂದ ಸಭೆ ಮಾಡದೆ ದುರ್ಬಲ ಅಧ್ಯಕ್ಷರಾಗಿ ಆಡಳಿತ ಮಾಡುತ್ತಿದ್ದೀರ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಈ ವೇಳೆ ಜೆಡಿಎಸ್ ಸದಸ್ಯರು ಪ್ರಕಾಶ್ ವಿರುದ್ಧ ತಿರುಗಿ ಬಿದ್ದರು. ವಾದ ವಿವಾದ ನಡೆಯುತ್ತಿರುವಾಗಲೇ ಅಧ್ಯಕ್ಷ ನವೀನ್ ಅಜೆಂಡಾದಲ್ಲಿನ ವಿಷಯ ಓದುತ್ತಿದ್ದರು. ಎಲ್ಲರಿಗೂ ಮಾತನಾಡಲು ಅವಕಾಶ ನೀಡಿ ಸುಮ್ಮನೆ ಅಜೆಂಡಾ ಓದುವುದು ತರವಲ್ಲ ಎಂದು ಎಂಎಲ್ಸಿ ಹೇಳಿದರು. ಅಧ್ಯಕ್ಷ ನವೀನ್ ಯಾರ ಮಾತಿಗೂ ಸೊಪ್ಪು ಹಾಕದೆ ವಿಷಯ ಓದುತ್ತಿದ್ದರು. ಇದರಿಂದ ಕೋಪ ಗೊಂಡ ಎಂಎಲ್ಸಿ ವೇದಿಕೆ ಮೇಲಿಂದ ಇಳಿದು ಸಭೆಯಿಂದ ಹೊರ ನಡೆಯುತ್ತೇನೆ ಎಂದು ತೆರಳಲು
ಪ್ರಯತ್ನಿಸಿದರು. ಈ ವೇಳೆ ಶಾಸಕರು, ಕೆಲ ಸದಸ್ಯರು ಮಧ್ಯ ಪ್ರವೇಶ ಮಾಡಿ ಎಂಎಲ್ಸಿ ಅವರನ್ನು ವೇದಿಕೆ ಮೇಲಿನ ಕುರ್ಚಿಯಲ್ಲಿ ಕೂರಿಸಿದರು.
ಸಭೆಯಲ್ಲಿ ವಿವಿಧ ಕಾಮಗಾರಿಗಳಿಗೆ ಸದಸ್ಯರು ಅನುಮೋದನೆ ನೀಡಿದರು. ಪುರಸಭಾ ಉಪಾಧ್ಯಕ್ಷ ಯೋಗೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ, ಮುಖ್ಯಾಧಿಕಾರಿ ಕೃಷ್ಣಮೂರ್ತಿ ಇದ್ದರು.
ಪುರಸಭೆಯನ್ನು ಮೇಲ್ದರ್ಜೆಗೇರಿಸಲು ಒಪ್ಪಿಗೆ
ಚನ್ನರಾಯಪಟ್ಟಣ: ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸರ್ಕಾರದೊಂದಿಗೆ ಚರ್ಚಿಸಿದ್ದು ಸಭೆಯಲ್ಲಿ ಒಪ್ಪಿಗೆ ನೀಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸದಸ್ಯರಿಗೆ ತಿಳಿಸಿದರು. 2013-14ರಲ್ಲಿ ನಗರಸಭೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದೂ ಸಾಕಾರಗೊಳ್ಳಲಿಲ್ಲ. ಈಗ ರಾಜ್ಯ ಸರ್ಕಾರದ ಪೌರಾಡಳಿತ ಸಚಿವರು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಇದಕ್ಕೆ ಸದಸ್ಯರ ಸಹಕಾರ ಅತಿ ಮುಖ್ಯ ಎಂದು ಹೇಳಿದರು.ಸದಸ್ಯ ಪ್ರಕಾಶ್ ಮಾತನಾಡಿ, ಸಭೆಯಲ್ಲಿ ಅಂಗೀಕಾರವಾದ ವಿಷಯವನ್ನು ಮೇಲಧಿಕಾರಿಗಳಿಗೆ ಕಳುಹಿಸದೆ ಕಚೇರಿಯಲ್ಲಿ ಇಟ್ಟುಕೊಂಡರೆ ಏನು ಪ್ರಯೋಜನ. ಈ ಹಿಂದೆ ಮಾಡಿದ ತಪ್ಪನ್ನು ಪುರಸಭೆ ಅಧಿಕಾರಿಗಳು ಮಾಡಬಾರದು. ಕೂಡಲೇ ಇದನ್ನು
ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸುವ ಕೆಲಸ ಮಾಡಬೇಕು. ಇದರಿಂದ ಹೆಚ್ಚು ಅನುದಾನ ತರಲು ಸಹಕಾರ ಆಗಲಿದೆ ಎಂದು ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.