ಕುಟುಂಬ ಅಭಿವೃದ್ಧಿಗೆ ರಾಜಕೀಯ ಬಳಸಿಕೊಂಡ ಗೌಡರು
Team Udayavani, Mar 25, 2019, 3:44 PM IST
ಅರಸೀಕೆರೆ: ಎಚ್.ಡಿ ದೇವೇಗೌಡರ ಕುಟುಂಬ ರಾಜಕಾರಣದಿಂದ ಬೇಸತ್ತಿರುವ ಹಾಸನ,ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು ಈ ಬಾರಿ ಜೆಡಿಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹಾಸನ ಲೋಕಸಭಾ ಬಿಜೆಪಿ ಅಭ್ಯರ್ಥಿ ಎ.ಮಂಜು ತಿಳಿಸಿದರು.
ಬಿಜೆಪಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಎ. ಮಂಜು ಅರಸೀಕೆರೆ ತಾಲೂಕಿನ ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಆಶೀರ್ವಾದ ಪಡೆದು ಬಳಿಕ ಜಗನ್ಮಾತೆ ಸ್ವರ್ಣಗೌರಿ ದೇವಿ ದೇವಾಲಯಕ್ಕೆಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿ ನಂತರ ದೇವಾಲಯದ ಮುಂದೆ ಸೇರಿದ್ದ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಚುನಾವಣೆ ಬಂದಾಗ ಮೈತ್ರಿ ಧರ್ಮ: ಚುನಾವಣೆಗೆ ಮೂರು ಪಕ್ಷಗಳು ನಿಂತಾಗ ಮಾತ್ರ ಅವರು ಲಾಭ ಪಡೆದುಕೊಳ್ಳಲು ಜೆಡಿಎಸ್‌ನವರು ಮುಂದಾಗುತ್ತಾರೆ.ಆದರೆ ನೇರವಾಗಿ ಬಂದರೆ ಹೆದರಿ ಸುಮ್ಮನಾಗುತ್ತಾರೆ.ಇದಕ್ಕೆ ಸ್ಪಷ್ಟ ನಿದರ್ಶನ ಈಗ ಕಳೆದ ಎರಡು ದಶಕಗಳಿಂದ ಹೆದರಿಸಿಕೊಂಡು ಬರುತ್ತಿದ್ದ ಕಾಂಗ್ರೆಸ್ ಮುಖಂಡರ ಮನೆ ಬಾಗಿಲಿಗೆ ಜೆಡಿಎಸ್ ಮುಖಂಡರು ಎಡತಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರಮೋದಿ ರಾಜಕೀಯ ಜೀವನವನ್ನು ಎಂದೂ ತಮ್ಮ ಸ್ವಾರ್ಥಹಾಗೂ ವೈಯುಕ್ತಿಕ ಅಭಿವೃದ್ಧಿಗೆ ದುರುಪಯೋಗಪಡಿಸಿಕೊಂಡಿಲ್ಲ.ಆದರೆ ದೇಶದ ಪ್ರಧಾನಿ ಆಗಿದ್ದ ದೇವೇಗೌಡರು ರಾಜಕೀಯವನ್ನು ತಮ್ಮ ಕುಟುಂಬದ ಅಭಿವೃದ್ಧಿಗೆ ಬಳಸಿಕೊಂಡಿದ್ದಾರೆ.
ಹಾಸನದಲ್ಲಿಜೆಡಿಎಸ್ ಹೊರತು ಪಡಿಸಿ ಉಳಿದ ರಾಜಕೀ ಯ ಪಕ್ಷಗಳ ಕಾರ್ಯಕರ್ತರಿಗೆ ಉಸಿರು ಬಿಗಿ ಹಿಡಿದು ಜೀವಿಸುವ ವಾತಾವರಣವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಡಿ.ರೇವಣ್ಣ ನಿರ್ಮಿಸುತ್ತಾರೆ. ದೇವೇಗೌಡ ಮತ್ತು ಅವರ ಮೊಮ್ಮಕ್ಕಳನ್ನು ಈ ಬಾರಿಯ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಜನತೆ ಸೋಲಿಸಿ ಮನೆಗೆ ಕಳಿಸುವುದು ನಿಶ್ಚಿತ ಎಂದು ಕುಟುಕಿದರು.
ಜೆಡಿಎಸ್‌ನಲ್ಲೂ ಭಿನ್ನಾಭಿಪ್ರಾಯ: ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಪರ 30ರಷ್ಟು ಇದ್ದರೆ 70ರಷ್ಟು ಮಂದಿ ಅವರ ವಿರುದ್ಧ ಇದ್ದಾರೆ. ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ನಂತರ ಜಿಲ್ಲೆಯಲ್ಲಿ ಜೆಡಿಎಸ್ ನೆಲಕಚ್ಚಲು ಆರಂಭಿಸಿದೆ.
ಜೆಡಿಎಸ್‌ನಲ್ಲೂ ಆಂತರಿಕ ಭಿನ್ನಾಭಿಪ್ರಾಯ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ದೇವೇಗೌಡರು ಹೇಗೆ ಕಾರ್ಯ ನಿರ್ವಹಿಸಿದರೋ ಅದೇ ರೀತಿ ಜಿಲ್ಲೆಯ ಮತದಾರರು ಮತದಾನ ಹತ್ತಿರ ಬರುತ್ತಿದ್ದಂತೆ ಕುಟುಂಬ ರಾಜಕಾರಣದಿಂದ ಬೇಸತ್ತು ಗುಪ್ತವಾಗಿ ಬಿಜೆಪಿಗೆ ಮತ ಚಲಾಯಿಸಲಿದ್ದಾರೆ ಎಂದುವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕುಟುಂಬ ರಾಜಕಾರಣವೇ ನಿಲ್ಲಬೇಕು ಎಂಬುದೇ ನನ್ನ ಮೊದಲ ಗುರಿಯಾಗಿದೆ ಎಂದರು. ಕಾಂಗ್ರೆಸ್ ಮುಖಂಡ ಅಣ್ಣಾಯಕನಹಳ್ಳಿ ವಿಜಯ್‌ಕುಮಾರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶಶಿವಾಳ ಗಂಗಾಧರ್,ಬಿಜೆಪಿ ಮುಖಂಡರಾದ ಬಸವರಾಜ್,
ಗ್ರಾಪಂ ಸದಸ್ಯ ಎಂ.ಡಿ ರಮೇಶ್,ಡಿ.ಎಂ.ಕುರ್ಕೆ ಎಂ.ಜಿ.ಲೋಕೇಶ್,ಎಂ.ಬಿ.ಅಶೋಕ್, ಕಲ್ಲುಸಾದರಹಳ್ಳಿ ದೀಪಕ್, ಎಂ.ಸಿ.ಚಂದ್ರಶೇಖರ್, ಎಂ.ಎಸ್. ಪುಟ್ಟಮಲ್ಲಪ್ಪ, ಎಂಬಿ ಕೊಟ್ಟೂರಪ್ಪ, ಎಂ.ಆರ್. ಕಾಂತರಾಜ್ ಎಂ. ಚನ್ನಬಸಪ್ಪ, ಎಂ.ಯೋಗೀಶ್, ಎಂ.ಎಸ್. ಗೋವಿಂದ,ಎಂ.ಟಿ. ಪ್ರವೀಣ್, ದಿವಾಕರ್ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.