ಮತದಾರರ ಸೆಳೆಯಲು ಹಣಹಂಚಿಕೆಗೆ ಸಜ್ಜು !
Team Udayavani, Dec 20, 2020, 7:38 PM IST
ಹಾಸನ: ಮೊದಲ ಹಂತದಲ್ಲಿ ಡಿ.22 ರಂದು ನಡೆಯಲಿರುವ ಗ್ರಾಮ ಪಂಚಾಯ್ತಿಯ ಚುನಾವಣೆಗೆ ಇನ್ನು ಮೂರು ದಿನ ಬಾಕಿಯಿದ್ದು, ಮತದಾರರ ಗಮನ ಸೆಳೆಯಲು ಅಭ್ಯರ್ಥಿಗಳು ಉಡುಗೊರೆಗಳ ಮಾಹಾಪೂರವನ್ನೇ ಹರಿಸುತ್ತಿದ್ದಾರೆ.
ಮುಂಜಾನೆ ಮನೆ, ಮನೆಗೆ ಎಡತಾಕಿ ಮತದಾರರ ಓಲೈಸುತ್ತಿರುವ ಅಭ್ಯರ್ಥಿಗಳು, ಮಧ್ಯಾಹ್ನದ ವೇಳೆಗೆ ತಮ್ಮ ಬೆಂಬಲಿಗರೊಂದಿಗೆ ನಗರ, ಪಟ್ಟಣ ಪ್ರದೇಶಗಳಿಗೆಬಂದು ಗ್ರಾಮಗಳಲ್ಲಿನ ಬೆಳವಣಿಗೆಗಳನ್ನು ತಮ್ಮ ಮುಖಂಡರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ನಗರ, ಪಟ್ಟಣ ಪ್ರದೇಶಗಳಿಗೆ ಅಭ್ಯರ್ಥಿ ಗಳು ಹಾಗೂ ಅವರ ಬೆಂಬಲಿಗರು ದಂಡು ದಂಡಾಗಿ ಆಗಮಿಸು ತ್ತಿರುವುದರಿಂದ ನಗರ ಮತ್ತು ಪಟ್ಟಣಗಳ ಹೋಟೆಲ್‌ಗಳು ತುಂಬಿ ತುಳುಕುತ್ತಿವೆ. ಮಾಂಸಾಹಾರಿ ಹೋಟೆಲ್ ಗಳು ಮತ್ತು ಮದ್ಯದಂಗಡಿಗಳಲ್ಲಿ ಮಧ್ಯಾಹ್ನದಿಂದ ರಾತ್ರಿವರೆಗೂ ಭರ್ಜರಿ ವ್ಯಾಪಾರ ವ್ಯಾಪಾರವಾಗುತ್ತಿವೆ.
ಬಿರಿಯಾನಿ ಪ್ಯಾಕೇಟ್ ಹಂಚಿಕೆ: ನಗರ ಮತ್ತು ಪಟ್ಟಣ ಸುತ್ತಮುತ್ತಲಿನ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸಂಜೆ ವೇಳೆ ಮನೆ, ಮನೆಗೆ ಚಿಕನ್ ಬಿರಿಯಾನಿ ಪ್ಯಾಕೇಟ್‌ಗಳ ಹಂಚಲಾಗುತ್ತಿದೆ. ಪಟ್ಟಣಗಳಿಂದ ದೂರದ ಗ್ರಾಮಗಳಲ್ಲಿ ಕೋಳಿ ಮತ್ತು ದಿನಸಿ ಕಿಟ್‌ಗಳನ್ನು ಅಭ್ಯರ್ಥಿಗಳು ಹಂಚುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆ ಪಕ್ಷಾತೀತ ಎಂದು ಹೇಳುತ್ತಿದ್ದರೂ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಬೆಂಬಗಲಿಗರನ್ನು ಗೆಲ್ಲಿಸಿಕೊಂಡು ಗ್ರಾಮ ಮಟ್ಟದಲ್ಲಿ ತಮ್ಮ ರಾಜಕೀಯ ನೆಲೆ ಭದ್ರ ಮಾಡಿ ಕೊಳ್ಳಲು ಲಕ್ಷಾಂತರ ರೂ. ವೆಚ್ಚ ಮಾಡುತ್ತಿದ್ದಾರೆ. ಹಾಗಾಗಿ ಈಗ ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ.
ಚುನಾವಣಾ ಮುನ್ನಾದಿನ ಹಣ ಹಂಚಿಕೆ: ಗ್ರಾಮ ಮಟ್ಟದಲ್ಲಿ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಟಕ್ಕೆ ಬಿದ್ದು ಹೋರಾಡುತ್ತಿರುವ ಅಭ್ಯರ್ಥಿಗಳು ಚುನಾವಣೆಯ ಮುನ್ನಾ ದಿನದವರೆಗೂ ಮತದಾರರಿಗೆ ವಿವಿಧ ಉಡುಗೊರೆ ನೀಡಿದರೂ ಮತದಾನದ ಮುನ್ನಾ ದಿನ ಈ ಬಾರಿ ಹಣ ಹಂಚಿಕೆ ನಡೆಯುವುದು ಖಚಿತ. ಉಡುಗೊರೆಗಳೆಲ್ಲಾ ಈಗ ಹಳೆಯ ಮಾದರಿ. ಈಗ ಏನಿದ್ದರೂ ನೇರಾನೇರಾ ವ್ಯವಹಾರವಾಗಿದ್ದು ಹಣ ಹಂಚದಿದ್ದರೆ ಗೆಲ್ಲುವುದು ಕಷ್ಟ ಎಂದು ಅಭ್ಯರ್ಥಿಯೊಬ್ಬರು ಹೇಳುತ್ತಾರೆ. ತಮ್ಮ ಎದುರಾಳಿಯ ಎಲ್ಲ ತಂತ್ರಗಳನ್ನೂ ಗಮನಿಸಿದ ನಂತರ ತಮಗೆ ಬರಬೇಕಾದ ಇಂತಿಷ್ಟು ಮತಗಳನ್ನು ಲೆಕ್ಕ ಹಾಕಿ ಮತದಾರರಿಗೆ ಹಣ ಹಂಚಿಯಾದರೂ ಗೆಲ್ಲಲೇ ಬೇಕು ಎಂಬ ಹಟ ಅಭ್ಯರ್ಥಿಗಳದ್ದು.
ಹಾಸನ ಕ್ಷೇತ್ರದಲ್ಲಿ ಹಣದ ವ್ಯವಹಾರ: ಪ್ರತಿ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ – ಕಾಂಗ್ರೆಸ್‌ನಡುವೆ ಹಣಾಹಣಿ ನಡೆಯುತ್ತಿತ್ತು. ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ವಾುಪ್ತಿಯ ಗ್ರಾಮ ಪಂಚಾಯ್ತಿಗಳಲ್ಲಿ ಜೆಡಿಎಸ್ – ಬಿಜೆಪಿ ನಡುವೆ ಹಣಾಹಣಿ ಏರ್ಪಟ್ಟಿದೆ. ಕೇವಲ 6 ಗ್ರಾಮ ಪಂಚಾಯ್ತಿಗಳಷ್ಟೇ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಎರಡೂ ಪಕ್ಷಗಳ ಮುಖಂಡರಿಗೂ ಈಗ ರಾಜಕೀಯ ಪ್ರತಿಷ್ಠೆಯಾಗಿದೆ. ಹಾಗಾಗಿ ಎದುರಾಳಿ ಪಕ್ಷದ ಪ್ರಭಾವಿ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸದಂತೆ ಹಾಗೂ ನಾಮಪತ್ರ ವಾಪಸ್ಸಾತಿಯ ಸಂದರ್ಭದಲ್ಲಿಯೂ ಲಕ್ಷಾಂತರ ರೂ ವ್ಯವಹಾರ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳಿಗೂ ಲೆಕ್ಕ ಹಾಕದೆ ಚುನಾವಣಾ ವೆಚ್ಚ ಮಾಡುತ್ತಿದ್ದಾರೆ. ಅಯಾಯ ಪಕ್ಷಗಳ ಮುಖಂಡರಿಂದಲೂ ಸಂಪನ್ಮೂಲ ಅಭ್ಯರ್ಥಿಗಳಿಗೆ ಹರಿದು ಬರುತ್ತಿದೆ.
-ನಂಜುಂಡೇಗೌಡ.ಎನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.