ಮಧ್ಯಾಹ್ನಕ್ಕೆ ಗ್ರಾಪಂ ಕಚೇರಿ ಬಂದ್: ಜನರ ಪರದಾಟ
Team Udayavani, Mar 14, 2021, 1:51 PM IST
ಚನ್ನರಾಯಪಟ್ಟಣ: ತಾಲೂಕಿನ ದಿಂಡಗೂರು ಗ್ರಾಪಂ ಕಚೇರಿಯನ್ನು ಮಧ್ಯಾಹ್ನಕ್ಕೆ ಮುಚ್ಚಲಾಗುತ್ತಿದೆ. ಅಲ್ಲದೆ, ವಾರದಲ್ಲಿ ಎರಡೂಮೂರು ದಿನ ಮಾತ್ರ ಅಧಿಕಾರಿಗಳು, ಸಿಬ್ಬಂದಿಸಮರ್ಪಕವಾಗಿ ಕರ್ತವ್ಯ ನಿರ್ವಹಣೆಮಾಡುತ್ತಿದ್ದಾರೆ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ಗ್ರಾಪಂ ಕಚೇರಿಯನ್ನು ಪ್ರತಿ ದಿನ ನಿಗದಿತ ಸಮಯಕ್ಕೆ ತೆರೆಯಲಾಗುತ್ತದೆ. ಆದರೆ,ಮಧ್ಯಾಹ್ನ ಊಟದ ಸಮಯಕ್ಕೆ ಬಾಗಿಲು ಹಾಕಿದರೆ ಪುನಃ ತೆರೆಯುವುದು ಬೆಳಗ್ಗಿಯೇ.ವಾರದಲ್ಲಿ ಎರಡು ಮೂರು ದಿನ ಮಾತ್ರ ಸರಿಯಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಗ್ರಾಪಂ ಸದಸ್ಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಅಧಿಕಾರಿಗಳುಹಾಗೂ ಸಿಬ್ಬಂದಿ ಕೇಳುವವರಿಲ್ಲದಂತಾಗಿದೆ. ಇದರಿಂದ ಗ್ರಾಪಂ ಕಚೇರಿಯಿಂದ ಆಗಬೇಕಿರುವ ಕೆಲಸಗಳನ್ನು ಮಾಡಿಸಿಕೊಳ್ಳಲು ಜನಪರದಾಡಬೇಕಾಗಿದೆ. ಮಾ.12ರಂದೂ ಇದೇಪರಿಸ್ಥಿತಿ ಎದುರಾಗಿತ್ತು. ಮಾ.11ರಂದು ಶಿವರಾತ್ರಿ ಹಬ್ಬ ಸರ್ಕಾರಿ ರಜೆ ಇತ್ತು. 13ರಂದು 2ನೇಶನಿವಾರ, 14 ಭಾನುವಾರ ಅಂದೂ ಸರ್ಕಾರಿರಜೆ ಇರುವುದರಿಂದ ಮಾ.10ರ ಮಧ್ಯಾಹ್ನವೇ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಬಾಗಿಲು ಹಾಕಿಕೊಂಡು ತೆರಳಿದ್ದಾರೆ. ಶುಕ್ರವಾರ ಬೆಳಗ್ಗೆತಡವಾಗಿ ಬಾಗಿಲು ತೆರೆದಿದ್ದ ಗ್ರಾಪಂ ಮಧ್ಯಾಹ್ನ 2 ಗಂಟೆ ವೇಳೆಗೆ ಬಾಗಿಲು ಮುಚ್ಚಿ ಬೀಗ ಹಾಕಲಾಗಿತ್ತು. ಇದರಿಂದ ಕಚೇರಿಗೆ ಆಗಮಿಸುತ್ತಿದ್ದ ಜನರಿಗೆ ತೊಂದರೆಯಾಗಿದೆ.
ಇದರಿಂದ ಕೋಪಗೊಂಡ ಯುವಕರ ಗುಂಪು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ತಾಲೂಕು ಆಡಳಿತದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಪಿಡಿಒಗೆ ದೂರವಾಣಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ, ಸೌಲಭ್ಯಕ್ಕಾಗಿಅರ್ಜಿ ಸಲ್ಲಿಸಿದ್ದು, ತಿಂಗಳಿಂದ ಯಾವುದೇ ಉತ್ತರ ನೀಡದೆ, ಉಡಾಫೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಜೋಗಿಪುರದ ಯುವಕ ನಂದನ್ ದೂರಿದರು.
ಕೆಲಸ ನಿಮಿತ್ತ ಗ್ರಾಪಂ ಕಚೇರಿಗೆ ಶುಕ್ರವಾರ ಮಧ್ಯಾಹ್ನ 2 ಗಂಟೆಯಲ್ಲಿಆಗಮಿಸಿದ್ದೆ. ಆದರೆ, ಬಾಗಿಲು ಮುಚ್ಚಿರುವುದು ಕಂಡುಬಂದಿತು. ಡಿ.ದರ್ಜೆ ನೌಕರರೂ ಇರಲಿಲ್ಲ. ತಕ್ಷಣ ಅಧಿಕಾರಿಗಳಿಗೆ ಕರೆಮಾಡಿದೆ. ಅವರೂ ಸ್ವೀಕರಿಸಲಿಲ್ಲ. ಈಗಾದ್ರೆಜನರು ತಮ್ಮ ಕೆಲಸ ಗಳನ್ನು ಮಾಡಿಸಿ ಕೊಳ್ಳಲು ಯಾರ ಬಳಿ ಹೋಗಬೇಕು. –ಅಭಿಷೇಕ್, ಜೋಗಿಪುರ ಗ್ರಾಮದ ಯುವಕ
ಗ್ರಾಮಗಳ ಅಭಿವೃದ್ಧಿಯೇ ನಮ್ಮ ಗುರಿ. ಕರ್ತವ್ಯದ ವೇಳೆ ಕಚೇರಿಬಾಗಿಲು ಹಾಕಿಕೊಂಡು ಹೋಗುವುದು ಸರಿಯಲ್ಲ. ಈ ಬಗ್ಗೆ ಇದೂವರೆಗೆ ಯಾವುದೇ ದೂರು ಬಂದಿಲ್ಲ, ಕೂಡಲೇ ಮಾಹಿತಿ ಪಡೆದು ಮೇಲಧಿಕಾರಿಗಳಗಮನಕ್ಕೆ ತಂದು ಪಿಡಿಒ ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು. –ಸುನೀಲ್ ಕುಮಾರ್, ತಾಪಂ ಇಒ, ಚನ್ನರಾಯಪಟ್ಟಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.