ಜಲಶಕ್ತಿ, ಜಲಾಮೃತ ಯೋಜನೆಗೆ ಉತ್ತಮ ಪ್ರತಿಕ್ರಿಯೆ

ಶ್ರಮದಾನ ಮೂಲಕ ಪುರಾತನ ಕಲ್ಯಾಣಿ ಸ್ವತ್ಛತೆಗೆ ಮುಂದಾದ ಸಾರ್ವಜನಿಕರು,ಅಧಿಕಾರಿಗಳ ಇಚ್ಛಾಶಕ್ತಿಯಿಂದ ತಾಲೂಕು ರಾಜ್ಯಕ್ಕೆ ಪ್ರಥಮ

Team Udayavani, Aug 7, 2019, 4:09 PM IST

hasan-tdy-1

ಚನ್ನರಾಯಪಟ್ಟಣ: ಜಲಶಕ್ತಿ ಹಾಗೂ ಜಲಾಮೃತ ಯೋಜನೆಯಿಂದ ಪ್ರೇರಣೆ ಪಡೆದ ಬೆಳಗಿಹಳ್ಳಿ ಗ್ರಾಮದ ಜನತೆ ತಮ್ಮ ಗ್ರಾಮದಲ್ಲಿ ಹೂಳು ತುಂಬಿರುವ ಕಲ್ಯಾಣಿಯನ್ನು ಪುನರುಜ್ಜೀವನ ಮಾಡಲು ಮುಂದಾಗುವ ಮೂಲಕ ತಾಲೂಕು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ.

ಮಳೆ ಕೊರತೆಯಿಂದ ಕೃಷಿ ಮಾಡಲು ನೀರಿನ ಅಭಾವ ಉಂಟಾಗುತ್ತಿರುವುದಲ್ಲದೇ ಸಾವಿರಾರು ಅಡಿಗಳ ವರೆಗೆ ಅಂತರ್ಜಲ ಕುಸಿದ ಪರಿಣಾಮ ಕೇಂದ್ರ ಸರ್ಕಾರ ದೇಶ ವ್ಯಾಪಿ ಜಲಶಕ್ತಿ ಅಭಿಯಾನ ವನ್ನು ಜಾರಿಗೆ ತಂದಿದೆ. ಇದೇ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಲಮೃತ ಯೋಜನೆ ಎಂಬ ಹೆಸರಿನಲ್ಲಿ ಕೆರೆ-ಕಟ್ಟೆ, ಕಲ್ಯಾಣಿ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ.

ಶ್ರಮದಾನ: ತಾಲೂಕಿನ ಪ್ರತಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮೂಲಕ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಪ್ರತಿ ಗ್ರಾಮವನ್ನು ತಲುಪುವ ಉದ್ದೇಶ ಹೊಂದಿದ್ದು, ತಾಲೂಕಿನಲ್ಲಿ ಹೂಳುಗಳಿಂದ ಮುಚ್ಚಿಕೊಂಡಿರುವ ಪುರಾತನ ಕಲ್ಯಾಣಿಗಳನ್ನು ಪುನರುಜ್ಜೀವನ ಮಾಡಲು ಮುಂದಾ ಗುತ್ತಿದೆ. ಇದಕ್ಕೆ ಈಗಾಗಲೇ ಹಲವು ಗ್ರಾಮಗಳಲ್ಲಿ ಗ್ರಾಮಸ್ಥರೇ ಮುಂದೆ ಬಂದು ಶ್ರಮದಾನ ಮಾಡುವ ಮೂಲಕ ಕಲ್ಯಾಣಿ ಹೂಳು ತೆಗೆಯುತ್ತಿದ್ದಾರೆ.

ಧಾರ್ಮಿಕ ಕಾರ್ಯಗಳಿಗೆ ಉಪಯೋಗ: ಗ್ರಾಮ ದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಿಗೆ ಹಾಗೂ ಗ್ರಾಮದಲ್ಲಿನ ದೇವಾಲಯಗಳಿಗೆ ಕಲ್ಯಾಣಿಗಳ ಮೂಲಕ ನೀರನ್ನು ತೆಗೆದುಕೊಂಡು ಹೋಗುವ ಉದ್ದೇಶದಿಂದ ಶತಮಾನಗಳ ಹಿಂದೆ ಪೂರ್ವಜನರು ಪ್ರತಿ ಗ್ರಾಮದಲ್ಲಿ ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಆಧುನಿಕತೆ ಬೆಳೆದಂತೆ ಕಲ್ಯಾಣಿಗಳನ್ನು ಮುಚ್ಚಿಹಾಕಿ, ಕೊಳವೆ ಬಾವಿಗಳ ಮೂಲಕ ನೀರು ಉಪಯೋಗಿಸುತ್ತಿದ್ದಾರೆ.

42 ಕಲ್ಯಾಣಿ ಸ್ವಚ್ಛತೆ: ತಾಲೂಕಿನ 41 ಗ್ರಾಮ ಪಂಚಾಯಿತಿಯಿಂದ ಸುಮಾರು 65 ಪುರಾತನ ಕಲ್ಯಾಣಿಯನ್ನು ಗುರುತಿಸಿದ್ದು ಅವುಗಳಲ್ಲಿ 42 ಕಲ್ಯಾಣಿಗಳನ್ನು ಗ್ರಾಮಸ್ಥರ ಹಾಗೂ ಶಾಲಾ ವಿದ್ಯಾರ್ಥಿಗಳ ಸಹಾಯೊಂದಿಗೆ ಶ್ರಮದಾನದ ಮಾಡುವ ಮೂಲಕ ಸ್ವಚ್ಛತೆ ಮಾಡಲಾಗಿದೆ. ಉಳಿದ ಕಲ್ಯಾಣಿಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ಶ್ರಮದಾನ ಮಾಡುವ ಮೂಲಕ ಶೀಘ್ರದಲ್ಲಿ ಸ್ವಚ್ಛತೆ ಮಾಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ ಮುಂದಾಗಲಿದ್ದಾರೆ.

ಪಾಳು ಬಿದ್ದ ಜಲಮೂಲಗಳು: ಶತಮಾನದ ಇತಿಹಾಸ ಹೊಂದಿರುವ ಕಲ್ಯಾಣಿಗಳಲ್ಲಿ ನೀರು ಸಂಗ್ರಹವಾಗುತ್ತಿತ್ತು. ಈ ನೀರನ್ನು ಗ್ರಾಮಸ್ಥರು ಕುಡಿಯಲು, ಧಾರ್ಮಿಕ ಕಾರ್ಯಕ್ರಮಗಳ ಬಳಕೆಗೆ ಉಪಯೋಗಿಸುತ್ತಿದ್ದರು. ಮಳೆಗಾಲದಲ್ಲಿ ಕಲ್ಯಾಣಿಯ ತುಂಬಾ ನೀರು ಶೇಖರಣೆಯಾಗಿ ಅಂತರ್ಜಲ ವೃದ್ಧಿ ಆಗುತ್ತಿದ್ದರಿಂದ ಕಲ್ಯಾಣಿಗೆ ಸಮೀಪದಲ್ಲಿನ ಕೊಳವೆ ಬಾವಿಗಳಲ್ಲಿ ಉತ್ತಮವಾಗಿ ನೀರು ದೊರೆಯುತ್ತಿತ್ತು. ಕೊಳವೆ ಬಾವಿಯಲ್ಲಿ ನೀರು ದೊರೆಯುತ್ತಿದ್ದರಿಂದ ಗ್ರಾಮಸ್ಥರು ಕಲ್ಯಾಣಿಗಳ ಕಡೆ ಗಮನ ನೀಡದೇ ಇದುದ್ದರಿಂದ ಎಲ್ಲಾ ಕಲ್ಯಾಣಿಗಳು ಪಾಳು ಬಿದ್ದವು.

ಕಸದ ತೊಟ್ಟಿಯಾಗಿವೆ: ಹಲವು ವರ್ಷಗಳಿಂದ ಗ್ರಾಮಗಳಲ್ಲಿರುವ ಪುರಾತನ ಕಲ್ಯಾಣಿಗಳು ಪಾಳು ಬಿದಿದ್ದರಿಂದ ಪಾರ್ಥೇನಿಯಂ ಮೊದಲಾದ ಗಿಡಗಳು ಬೆಳೆಯಲಾರಂಭಿಸಿದವು. ಇದೇ ಕಲ್ಯಾಣಿಗಳಿಗೆ ಕೆಲವರು ಕಸ ಹಾಗೂ ಇತರ ಅನುಪಯುಕ್ತ ವಸ್ತುವನ್ನು ತುಂಬಿದ್ದರಿಂದ ಕಲ್ಯಾಣಿಗಳು ಸಂಪೂರ್ಣ ವಾಗಿ ಹಾಳಾದವು. ಮಳೆಗಾಲದಲ್ಲಿ ನೀರು ಶೇಖರಣೆ ಆಗಬೇಕಿದ್ದ ಕಲ್ಯಾಣಿಗಳು ಗ್ರಾಮದ ಕಸದ ತೊಟ್ಟಿಗಳಾಗಿ ಮಾರ್ಪಟ್ಟವು.

ಅಂತರ್ಜಲ ವೃದ್ಧಿಗೆ ಶ್ರಮಿಸಿ: ಯಾವಾಗ ಮಳೆ ಕಡಿಮೆಯಾಯಿತೋ ಅಂತರ್ಜಲದ ಕೊರೆತೆಯಿಂದ ಯಾವಾಗ ಕೊಳವೆ ಬಾವಿಗಳು ನೀರು ದೊರೆ ಯುವುದು ಸ್ಥಗಿತವಾಯಿತು. ಆಗ ಕಲ್ಯಾಣಿಗಳ ಕಡೆ ಗ್ರಾಮಸ್ಥರು ಮುಖ ಮಾಡಿದರು. ಇದೇ ವೇಳೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಜಲಸಂರಕ್ಷಣಾ ಅಭಿಯಾನ ಪ್ರಾರಂಭಿಸಿ ಕಲ್ಯಾಣಿಗಳು ಕೊಳವೆ ಬಾವಿಗೆ ಪೂರಕವಾಗಿ ನೀರಿನ ಸೆಲೆ ನೀಡುತ್ತವೆ ಇವುಗಳನ್ನು ಉಳಿಸದಿದ್ದರೆ ಮುಂದೆ ಗಂಡಾಂತರ ಕಾದಿದೆ ಎಂದು ತಿಳಿಸಿದ್ದರಿಂದ ಎಚ್ಚೆತ್ತ ಸಾರ್ವಜನಿಕರು ಮುಂದೆ ಬಂದು ಶ್ರಮದಾನ ಮೂಲಕ ಕಲ್ಯಾಣಿ ಸ್ವಚ್ಛತೆಗೆ ಮುಂದಾಗುತ್ತಿದ್ದಾರೆ.

 

● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.