ಹಸಿಮೆಣಸಿನಕಾಯಿ ಬೆಲೆ ಕುಸಿತ: ರೈತ ಕಂಗಾಲು

ಒಂದು ಎಕರೆ ಭೂಮಿಯಲ್ಲಿ ಬೆಳೆಯಲು ಸುಮಾರು 60 ಸಾವಿರ ರೂ. ಖರ್ಚಾಗುತ್ತದೆ.

Team Udayavani, Apr 27, 2022, 6:33 PM IST

ಹಸಿಮೆಣಸಿನಕಾಯಿ ಬೆಲೆ ಕುಸಿತ: ರೈತ ಕಂಗಾಲು

ಆಲೂರು: ರೈತರು ಕುಟುಂಬದ ಚಿಕ್ಕಪುಟ್ಟ ನಿರ್ವಹಣೆಗೆಂದು ಹಸಿರು ಮೆಣಸಿನಕಾಯಿ ಬೆಳೆಯುತ್ತಾರೆ. ಬೆಲೆ ವಾರದಿಂದ ವಾರಕ್ಕೆ ಕುಸಿತ ಕಾಣುತ್ತಿರುವುದರಿಂದ ರೈತರು ಆತಂಕ್ಕೀಡಾಗಿದ್ದಾರೆ. ಶುಂಠಿ ಬೆಳೆಗೆ ಅಧಿಕ ವೆಚ್ಚ ಹಿನ್ನೆಲೆ, ಮಧ್ಯಮ ವರ್ಗದ ರೈತರು ಮೆಣಸಿನಕಾಯಿ ಬೆಳೆಯಲು ಆಸಕ್ತಿ ಹೊಂದುತ್ತಾರೆ. ಫೆಬ್ರವರಿಯಿಂದ ಕೃಷಿ ಚಟುವಟಿಕೆ ಪ್ರಾರಂಭ ಮಾಡುತ್ತಾರೆ.

3 ತಿಂಗಳ ಬೆಳೆ: ಒಂದು ಎಕರೆ ಭೂಮಿಯಲ್ಲಿ ಸುಮಾರು 10 ಸಾವಿರ ಗುಣಿ ನಾಟಿ ಮಾಡಬಹುದು. ನಾಟಿ ಮಾಡಿದ ಎರಡು ತಿಂಗಳ ನಂತರ ಕೊಯ್ಲು ಪ್ರಾರಂಭವಾಗುತ್ತದೆ. ಸಮಯಕ್ಕೆ ತಕ್ಕಂತೆ ಗೊಬ್ಬರ ನೀರು ಬಳಸಿಕೊಂಡು ಉಪಚರಿಸಿದರೆ, ಒಂದು ಗಿಡದಲ್ಲಿ ಮೂರ್ನಾಲ್ಕು ತಿಂಗಳಲ್ಲಿ ಸುಮಾರು ಹತ್ತು ಕೊಯ್ಲು ಕೊಯ್ಯಬಹುದು.

ದರ ಕುಸಿತ: ಎರಡು ತಿಂಗಳಿನಿಂದ  ಮೆಣಸಿನಕಾಯಿ ಮಾರುಕಟ್ಟೆಗೆ ಬರಲಾರಂಭಿಸಿದೆ.ಪ್ರಾರಂಭದಲ್ಲಿ ಕ್ವಿಂಟಲ್‌ಗೆ ಹತ್ತು ಸಾವಿರ ರೂ. ಇತ್ತು. ಗುಣಮಟ್ಟದ ಮೆಣಸಿನಕಾಯಿ ಆಕಾಶ್‌  ತಳಿಗೆ ಪ್ರತಿ ಕೆಜಿಗೆ 100 ರೂ.ಗೆ ಮಾರಾಟವಾಗುತ್ತಿತ್ತು. ಇದೀಗ ಕ್ವಿಂಟಲ್‌ಗೆ ಮೂರುವರೆಯಿಂದ ನಾಲ್ಕು ಸಾವಿರ ರೂ.ಗೆ ಮಾರಾಟವಾಗುತ್ತಿದೆ.

ಎಕರೆಗೆ 60 ಸಾವಿರ ವೆಚ್ಚ: ಒಂದು ಎಕರೆ ಭೂಮಿಯಲ್ಲಿ ಬೆಳೆಯಲು ಸುಮಾರು 60 ಸಾವಿರ ರೂ. ಖರ್ಚಾಗುತ್ತದೆ. ಹತ್ತು ಕೊಯ್ಲು ಕೊಯ್ದರೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕಿದರೆ ಲಕ್ಷಾಂತರ ರೂ. ಅದಾಯ ಗಳಿಸಬಹುದಾಗಿದೆ.

ಮೆಣಸಿನಕಾಯಿ ಮೂರ್ನಾಲ್ಕು ತಿಂಗಳ ಬೆಳೆ. ಕೊಯ್ಲು ಮಾಡಿದ ನಂತರ ಗೊಬ್ಬರ ಹಾಕಿ ಕಾಪಾಡಿಕೊಂಡರೆ, ಅಲ್ಪ ಕಾಲದಲ್ಲಿ ಲಕ್ಷಾಂತರ ರೂ. ಆದಾಯ ಗಳಿಸಬಹುದು. ಅಧಿಕ ಮಳೆ, ಆಲಿಕಲ್ಲು ಮಳೆ ಸುರಿದರೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೆ ನಷ್ಟಕ್ಕೊಳಗಾಗಬೇಕಾಗುತ್ತದೆ ಎನ್ನುತ್ತಾರೆ ಮೋಹನ್‌.

ಬೆಂಬಲ ಬೆಲೆಗೆ ಒತ್ತಾಯ: ಮೂರ್ನಾಲ್ಕು ತಿಂಗಳು ಮೆಣಸಿನ ಗಿಡ ಬೆಳೆದು ಕೂಯ್ಲಿಗೆ ಬರುವಷ್ಟರೊಳಗೆ ಬೆಲೆ ಕಡಿಮೆಯಾ ಗುತ್ತದೆ. ಅದರ ಜೊತೆಗೆ ದಲ್ಲಾಳಿಗಳು ನಿಗದಿತ ಬೆಲೆ ನೀಡಲ್ಲ. ಎಲ್ಲಂದರಲ್ಲಿ ತೂಕದ ಯಂತ್ರ ಇಟ್ಟು ಬೇಕಾಬಿಟ್ಟಿ ಕೊಂಡು ರೈತರಿಗೆ ವಂಚಿಸುತ್ತಾರೆ. ಕಷ್ಟಪಟ್ಟು ಬೆಳೆದ ಬೆಳೆ ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಅದ್ದರಿಂದ ಆಲೂರಿನಲ್ಲಿ ಕೃಷಿ ಉತ್ಪನ್ನ ಉಪಮಾರುಕಟ್ಟೆ ತೆರೆದು ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಿಸಬೇಕು
ಎಂದು ರೈತ ಮುಖಂಡ ಮರುಗೇಶ್‌ ಅಗ್ರಹಿಸಿದರು.

ನೇರ ಮಾರುಕಟ್ಟೆ ಅಗತ್ಯ
ರೈತರು ಮೆಣಸಿನ ಗಿಡ ಬೆಳೆ ಬೆಳೆಯಲು ಸಾಕಷ್ಟು ಖರ್ಚು ಬರಿಸಬೇಕಾಗಿದೆ. ಫಸಲು ಬಂದ ಸಂದರ್ಭದಲ್ಲಿ ಅದರ ಕೊಯ್ಲಿಗೂ ದುಬಾರಿ ಖರ್ಚು ಬರುತ್ತದೆ. ಫಸಲು ಬಂದ ಸಂದರ್ಭದಲ್ಲಿ ಅವುಗಳನ್ನು ದಲ್ಲಾಳಿಗಳ ಮೂಲಕವೇ ಮಾರಟ ಮಾಡುವ ಅನಿವಾರ್ಯತೆ ಇದೆ. ಅದ್ದರಿಂದ ಸರ್ಕಾರವೇ ಬೆಂಬಲ ಬೆಲೆ ಘೋಷಿಸಿ ನೇರ ಖರೀದಿ ಮಾಡಿದರೇ ಮಧ್ಯವರ್ತಿಗಳಿಂದ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಬಹುದಾಗಿದೆ. ತಾಲೂಕಿನಲ್ಲಿ ಮಾರುಕಟ್ಟೆ ತೆರೆದು ಒಂದೇ ಕಡೆ ವ್ಯಾಪಾರ ವಹಿವಾಟು ಮಾಡಿದರೇ ರೈತರಿಗೆ ಇನ್ನೂ ಸ್ವಲ್ಪ ಲಾಭವಾಗುತ್ತದೆ ಪ್ರಗತಿಪರ ರೈತ ಎಚ್‌.ಎಸ್‌.ಸತೀಶ್‌ ಹೇಳಿದರು.

● ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ

ಟಾಪ್ ನ್ಯೂಸ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.