ಸಾವಯವ ಪದ್ಧತಿಯಡಿ ತಂಬಾಕು ಬೆಳೆಯಿರಿ

Team Udayavani, Apr 27, 2019, 4:16 PM IST

HAS-

ರಾಮನಾಥಪುರ: ತಂಬಾಕು ಮಂಡಳಿ ವ್ಯಾಪ್ತಿಯ ರೈತರು ಅಧಿಕ ತಂಬಾಕು ಉತ್ಪಾದನೆ ಆಸೆಗೆ ಕಟ್ಟುಬಿದ್ದು ಬೆಳೆ ವಿಸ್ತೀರ್ಣ ಹೆಚ್ಚಿಸಿಕೊಳ್ಳುವ ಬದಲು ಕಡಿಮೆ ವಿಸ್ತೀರ್ಣದಲ್ಲಿಯೇ ಸಾವಯವ ಕೃಷಿಯಲ್ಲಿ ಗುಣಮಟ್ಟದ ತಂಬಾಕು ಬೆಳೆದರೆ ಮಣ್ಣಿನ ಫ‌ಲವತ್ತತೆಯನ್ನೂ ಕಾಪಾಡಿಕೊಳ್ಳಬಹುದು ಎಂದು ರಾಮನಾಥಪುರದ ತಂಬಾಕು ಮಾರುಕಟ್ಟೆ ಪ್ಲಾಟ್ ಫಾರಂ -7 ಅಧೀಕ್ಷಕ ಅಮಲ್ ಡಿ.ಸಾಮ್‌ ಹೇಳಿದರು.

ತಂಬಾಕು ಸಸಿಗಳ ತಾಕುಗಳಿಗೆ ಭೇಟಿ ನೀಡಿ ಬೆಳೆಯಲ್ಲಿ ಅನುಸರಿಸಬೇಕಾದ ಕೃಷಿ ಕಾರ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ತಂಬಾಕು ಬೆಳೆಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಕಡಿತಗೊಳಿಸಿ ಸಾವ ಯವ ಕೃಷಿ ನಡೆಸಿದರೆ ಮಣ್ಣಿನಲ್ಲಿ ಫ‌ಲ ವತ್ತತೆ ಕಾಪಾಡಿಕೊಳ್ಳುವುದರ ಜೊತೆಗೆ ಗಿಡಗಳಿಗೆ ಬಾಧಿಸುವ ಕೀಟಗಳ ಹಾವಳಿ ನಿಯಂತ್ರಿಸಬಹುದು. ಇದರಿಂದ ಮಣ್ಣಿನಲ್ಲಿ ಉಳಿಯುವ ತೇವಾಂಶದಿಂದ ಬೇಗನೆ ಬೆಳವಣಿಗೆ ಹೊಂದಲು ಸಹಾಯಕವಾಗಲಿದೆ ಎಂದರು.

ಹತೋಟಿಗೆ ಕ್ರಮ: ತಂಬಾಕು ಬೆಳೆಗೆ ಬಾಧಿಸುವ ಸೊರಗು ರೋಗ ಹಾಗೂ ಕೀಟಗಳ ಹಾವಳಿ ಹತೋಟಿಗೆ ತರ ಬೇಕಾದರೆ ರೈತರು ಕಡ್ಡಾಯವಾಗಿ ಐದು ಪಂಚಸೂತ್ರ ಅಳವಡಿಸಿಕೊಳ್ಳಬೇಕು. ಬೆಳೆ ಪರಿವರ್ತನೆಗೆ ಆದ್ಯತೆ ನೀಡಬೇಕು. ಸೊರಗು ರೋಗದ ಲಕ್ಷಣ ಕಂಡುಬಂದ ಕೂಡಲೇ ಬಾಸ್ಟಿನ್‌ ಔಷಧಿಯನ್ನು 1 ಲೀಟರ್‌ ನೀರಿಗೆ 2 ಗ್ರಾಂ. ಬೆರೆಸಿ 4 ಗಿಡಗಳಿಗೆ ಮಾತ್ರ ಸಿಂಪಡಿಸಬೇಕು. ಏಪ್ರಿಲ್ ಅಥವಾ ಮೇ ತಿಂಗಳ ಮುಂಗಾ ರಿನಲ್ಲಿ ಆಳವಾಗಿ ಭೂಮಿ ಉಳುಮೆ ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ ಟ್ರೈಕೋ ಡರ್ಮಾ ಔಷಧಿ ಬಳಸಿ ದರೆ ರೋಗದ ನಿವಾರಣೆ ಸಾಧ್ಯ. ಬೇವಿನ ಕಷಾಯ ಸಿಂಪಡಿಸುವುದ ರಿಂದಲೂ ಹತೋಟಿ ಮಾಡಬಹುದು ಎಂದು ಹೇಳಿದರು.

ಟ್ರೇ ಸಸಿ ಮಡಿ ಬೆಳೆಸುವಾಗ ಕೊಕೊಪಿಡ್‌ ಜೊತೆ ಟ್ರೈಕೋಡರ್ಮಾ ಬೆರಸಬೇಕು. ನಾಟಿಗೆ ಮುನ್ನ ಸಸಿಗಳನ್ನು ಬಾಸ್ಟಿನ್‌ ಔಷಧಿ ನೀರಿನಲ್ಲಿ ತೊಯ್ಯಿಸ ಬೇಕು. ಕಾಂಚನಾ, ಸಿ.ಎಚ್.3, ಎಫ್. ಸಿ.ಎಚ್. 222 ತಳಿಯ ಸಸಿ ಮಡಿ ಬೆಳೆಸಿ ಎಂದು ಸಲಹೆ ನೀಡಿದ ಅವರು, ಬೆಳೆಗೆ ವಿಪರೀತ ರಾಸಾಯನಿಕ ಅಂಶ ಸೇರ್ಪಡೆ ಆಗದಂತೆ ಹಂತ ಹಂತವಾಗಿ ಅಗತ್ಯ ಪ್ರಮಾಣದಲ್ಲಿ ನೀಡಿದರೆ ಗುಣಮಟ್ಟ ಕಾಯ್ದುಕೊಳ್ಳಬಹುದೆಂದರು.

35ರಿಂದ 40 ದಿನಗಳ ನಂತರ ಮೇಲುಗೊಬ್ಬರ ನೀಡುವಾಗ ಡಿಎಪಿ ಬÙಕೆ ನಿಲ್ಲಿಸಬೇಕು. ಇದರಿಂದ ಗಿಡಗಳು ಎತ್ತರವಾಗಿ ಬೆಳೆದು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಹಣ್ಣಾಗುವುದನ್ನು ತಪ್ಪಿಸಿ ಬಲಿಷ್ಠತೆ ಪಡೆದುಕೊಳ್ಳಲಿದೆ ಎಂದರು.

ಔಷಧಿ ಸಿಂಪರಣೆ: ಆರೋಗ್ಯಕ್ಕೆ ಹಾನಿ ಕಾರಕವಾದ ತಂಬಾಕಿನಲ್ಲಿ ಇನ್ನಷ್ಟು ರಾಸಾಯನಿಕ ಉಳಿಕೆ ಅಂಶ ಹೆಚ್ಚಿ ಪ್ರಾಮುಖ್ಯತೆ ಕಳೆದುಕೊಳ್ಳಲಿದೆ. ಸದ್ಯ ಇಲ್ಲಿನ ಉತ್ಪಾದಿತ ಹೊಗೆಸೊಪ್ಪನ್ನು ಅನ್ಯ ದೇಶಗಳಿಗೆ ಹೋಲಿಸಿದರೆ ರಾಸಾಯನಿಕ ಬಳಕೆ ಅಂಶ ಕಡಿಮೆಯಿದೆ. ಅದನ್ನು ಇನ್ನೂ ಕಡಿಮೆ ಮಾಡಬೇಕು. ಇಲ್ಲದಿದ್ದರೆ ವರ್ತಕರು ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬೇಕಾದ ಕಡೆ ಉತ್ಪನ್ನ ಕೊಳ್ಳುವ ಸಾಧ್ಯತೆಯಿದೆ. ರೈತರು ಎಚ್ಚೆತ್ತು ಕೊಂಡು ರಸಗೊಬ್ಬರ ಬಳಕೆ, ಔಷಧಿ ಸಿಂಪರಣೆ ಆದಷ್ಟೂ ಕಡಿಮೆ ಮಾಡಬೇಕೆಂದರು.

ಶಿಫಾರಸು ಪಾಲಿಸಿ: ಬೆಳೆ ನಿರ್ವಹಣೆ ಕುರಿತು ಕೃಷಿ ವಿಜ್ಞಾನಿಗಳು ಹಾಗೂ ಮಂ ಡಳಿ ಅಧಿಕಾರಿಗಳು ನೀಡಿದ ಶಿಫಾರಸು ಗಳನ್ನು ರೈತರು ತಪ್ಪದೇ ಪಾಲಿಸುವ ಮೂಲಕ ತಂಬಾಕಿನ ಗುಣಮಟ್ಟ ಹೆಚ್ಚಿಸಿ ಕೊಳ್ಳಬೇಕು. ಬೆಳೆದ ತಂಬಾಕು ಗಿಡಗ ಳಿಗೆ ಹೊಲಗಳಲ್ಲಿ ಎದುರಾಗುವ ಕೀಟ ಗಳ ಹಾವಳಿ ಕೊಂಚ ಮಟ್ಟಿಗೆ ತಗ್ಗಿಸುವ ಉದ್ದೇಶದಿಂದ ಪ್ರಾಯೋಗಾರ್ಥವಾಗಿ ಅಂಟು ಕಾಗದ ವಿತರಿಸಲಾಗುತ್ತಿದೆ. ಇವುಗಳನ್ನು ಬೆಳೆ ಜಮೀನಿನಲ್ಲಿ ನೆಟ್ಟರೆ ಬಿಸಿಲು, ಮಳೆ ಬಂದರೂ ಅಂಟು ಕರಗುವುದಿಲ್ಲ ಎಂದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

1-sswewqewq

Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.