Arakalgudu: ದುರಸ್ತಿ ಕಾಣದ ತೂಗು ಸೇತುವೆ
Team Udayavani, Nov 28, 2023, 4:29 PM IST
ಅರಕಲಗೂಡು: ತಾಲೂಕಿನ ಕೊಣನೂರು ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ನಿರ್ವಣೆ ಇಲ್ಲದೆ ಅವಸಾನದ ಅಂಚಿಗೆ ತಲುಪಿದೆ. ಜಿ
ಪಂ ವ್ಯಾಪ್ತಿಗೆ ಒಳಪಡುವ ತೂಗುಸೇತುವೆ ಕಾಮಗಾರಿಯನ್ನು 1999-2000ನೇ ಸಾಲಿನಲ್ಲಿ ಅಂದಾಜು 30ಲಕ್ಷರು ವ್ಯಯಮಾಡಿ 196.0 ಮೀ. ಉದ್ದ ಹಾಗೂ 1.20 ಮೀ. ಅಳತೆಯಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಕೊಣನೂರು ಮತ್ತು ಕಟ್ಟೇಪುರ ನಡುವಿನ ಸಂಪರ್ಕಕ್ಕೆ ಕೇವಲ ಎರಡು ಕಿ.ಮೀ. ಇದೆ.ಆದರೆ ಬಸ್ ಮಾರ್ಗದಲ್ಲಿ ಈ ಗ್ರಾಮಕ್ಕೆ ಹೋಗಬೇಕಾದರೇ 10ಕಿಮೀ ದೂರ ಸುತ್ತಿ ಹೋಗಬೇಕು. ಇಷ್ಟು ಅನಿವಾರ್ಯ ಹಾಗೂ ಉಪಯುಕ್ತವಿರುವ ತೂಗುಸೇತುವೆ ಮಾರ್ಗದ ಭದ್ರತೆಯಲ್ಲಿ ಇಲಾಖೆ ಎಡವಿದೆ.
ಜಿಲ್ಲೆ ಮಟ್ಟಿಗೆ ಹೇಳಬೇಕೆಂದರೆ ಕೊಣನೂರು ತೂಗುಸೇತುವೆಯೇ ಪ್ರಥಮ ಹಾಗೂ ಕೊನೆ ಮಾರ್ಗ. ಇದು ರಮಣೀಯವಾದ ಸ್ಥಳದಲ್ಲಿ ನಿರ್ಮಾಣ ಗೊಂಡಿರುವ ಹಿನ್ನೆಲೆ ಪ್ರತಿದಿನ ನೂರಾರು ಮಂದಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅಲ್ಲದೆ, ಸೇತುವೆ ಕೆಳಗೆ ತುಂಬಾ ವಿಶಾಲವಾಗಿ ಹರಿವ ಕಾವೇರಿ ನದಿಯಲ್ಲಿ ಈಜು ಮಸ್ತಿ ಜೋರಾಗಿ ನಡೆಯುತ್ತದೆ. ಸೇತುವೆ ನಿರ್ಮಾಣಗೊಂಡು ಸುಮಾರು 23ವರ್ಷ ತುಂಬಿದ್ದು, ಅಂದಿನಿಂದ ಇಂದಿನವರೆಗೆ ಒಮ್ಮೆಯೂ ನಿರ್ವಹಣೆ ಮಾಡಿದಂತೆ ಕಂಡುಬಂದಿಲ್ಲ. ಜತೆಗೆ ನಡುವೆ ಅಕ್ಕಪಕ್ಕದ ಗ್ರಾಮಸ್ಥರು ತಾವು ಓಡಾಡುವ ಸೇತುವೆಯನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂಬ ಅರಿವಿಲ್ಲದಿರುವುದು ದುಸ್ಥಿತಿಗೆ ಕಾರಣವಾಗಿದೆ.
ಸೇತುವೆ ಮೇಲೆ ಹಿಂದೆ ಮೋಟಾರ್ ಬೈಕ್ ಹಾಗೂ ಸೈಕಲ್ ಸವಾರಿ ನಿರಂತರವಾಗಿ ನಡೆದಿರುವುದರಿಂದ ಸೇತುವೆಗೆ ಧಕ್ಕೆಯಾಗಿದೆ. ಇದನ್ನು ಮನಗಂಡ ಜಿಪಂ ಸೇತುವೆ ಎರಡು ಕಡೆ ಪ್ರವೇಶದ್ವಾರದಲ್ಲಿ ಗೇಟ್ ನಿರ್ಮಿಸಿದೆ. ಇದರಿಂದ ಮೋಟಾರ್ ಸೈಕಲ್ ಓಡಿಸಲು ಅಡಚಣೆಯಾದರೂ, ಸೈಕಲ್ ಸವಾರಿಗೆ ಸಮಸ್ಯೆಯಾಗಿಲ್ಲ. ಇಷ್ಟೊಂದು ಸಮಸ್ಯೆಗಳಿದ್ದರೂ ಸೇತುವೆ ಬಳಿ ರಕ್ಷಕರಿಲ್ಲದಿರುವುದು. ಒಬ್ಬ ಸಿಬ್ಬಂದಿಯನ್ನು ಕಡ್ಡಾಯವಾಗಿ ಇಲ್ಲಿಗೆ ನೇಮಕಮಾಡಿದರೇ ಸೇತುವೆ ರಕ್ಷಣೆ ಹಾಗೂ ನಿರ್ವಾಹಣೆ ಬಗ್ಗೆ ಎಚ್ಚರ ವಹಿಸಬಹುದಾಗಿದೆ.
ಸೇತುವೆಯನ್ನು ನಿರ್ಮಾಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದಾಗಿನಿಂದ ತಡೆಗೋಡೆಯಾಗಿರುವ ಕಬ್ಬಿಣದ ತಂತಿಗಳು, ನೆಲ ಹಾಸಿಗೆ ಹಾಗೂ ವೈರ್ ಗಳಿಗೆ ಬಣ್ಣ ಲೇಪಿಸಿಯೇ ಇಲ್ಲ. ಅವುಗಳು ತುಕ್ಕುಹಿಡಿಯುತ್ತಿವೆ. ಅಲ್ಲದೆ ಒಂದೆರಡು ನೆಲ ಹಾಸಿಗೆಯ ಕಬ್ಬಿಣದ ಮಣೆ ಕೂಡ ಹಾಳಾಗಿವೆ. ಇದು ಅನಾಹುತಕ್ಕೆ ದಾರಿಮಾಡಿದೆ.
ಜಿಲ್ಲಾಧಿಕಾರಿಯಿಂದ ನಿಷೇದಾಜ್ಞೆ ಜಾರಿ: ದೂರದ ಗುಜರಾತ್ ರಾಜ್ಯದಲ್ಲಿ ನಡೆದಿರುವ ತೂಗುಸೇತುವೆ ದುರಂತವನ್ನು ಅರಿತಿರುವ ಜಿಲ್ಲಾಡಳಿತ ದುರಸ್ತಿಗೆ ಒಳಗಾಗಿರುವ ಕೊಣನೂರು ತೂಗು ಸೇತುವೆಯ ಮೇಲಿನ ಸಾರ್ವಜನಿಕ ಸಂಚಾರವನ್ನು ಹಿಂದಿನ ಜಿಲ್ಲಾಧಿಕಾರಿ ಎಂಎಸ್ ಅರ್ಚನಾ ಅವರು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ಈ ಆದೇಶವನ್ನು ಸ್ಥಳೀಯ ಮಟ್ಟದ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕಿದೆ.ಅಲ್ಲದೆ ಜನರು ಸಹ ಸಹಕಾರ ನೀಡಬೇಕಿದೆ.
ಐತಿಹಾಸಿಕ ಕಟ್ಟೇಪುರ ಅಣೆಕಟ್ಟು ವೀಕ್ಷಣೆಗೆ ಹೋಗುವ ಪ್ರವಾಸಿಗರು ಹಾಗೂ ಗ್ರಾಮಸ್ಥರಿಗೆ ಹತ್ತಾರು ಕಿಮೀ ಸುತ್ತಿಹೋಗುವ ಬದಲು ಕಡಿಮೆ ಅವಧಿಯಲ್ಲಿ ಸಾಗಲು ಸರ್ಕಾರ ನಿರ್ಮಿಸಿರುವ ಕೊಣನೂರು ತೂಗುಸೇತುವೆಯನ್ನು ಸಂರಕ್ಷಿಸುವ ಕೆಲಸ ಇಲ್ಲಿ ಸಂಚರಿಸುವ ಪ್ರತಿಯೊಬ್ಬರ ಕರ್ತವ್ಯ. ಅದೇ ರೀತಿ ಇದರ ನಿರ್ವಹಣೆಯನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕು. ಕೂಡಲೇ ದುರಸ್ತಿ ಕೈಗೊಂಡು ಸಾರ್ವಜನಿಕರನ್ನು ರಕ್ಷಿಸಬೇಕು. ●ನಾಗರಾಜು, ಸ್ಥಳೀಯ
ಕೊಣನೂರು ತೂಗು ಸೇತುವೆ ನಿರ್ಮಾಣಗೊಂಡ ಬಳಿಕ 2-3 ಬಾರಿ ಸೇತುವೆಗೆ ಬಣ್ಣಲೇಪಿಸಲಾಗಿದೆ. ಕೆಲವೊಂದು ಸಣ್ಣಪುಟ್ಟ ಕೆಲಸವನ್ನು ನಿರ್ವಹಿಸಲಾಗಿದೆ. ಈ ಹಿಂದೆ ತೂಗು ಸೇತುವೆ ನಿರ್ಮಾಣಮಾಡಿರುವ ಕಂಪನಿ ಆಧುನಿಕವಾಗಿ ದುರಸ್ತಿಕಾರ್ಯ ಕೈಗೊಳ್ಳುವ ಸಲುವಾಗಿ 49 ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ. ಅನುಮೋದನೆ ಬಳಿಕ ಕೆಲಸ ಆರಂಭಗೊಳ್ಳಲಿದೆ. ನಿಷೇಧಾಜ್ಞೆಗೆ ಜನರ ಸಹಕಾರ ಮುಖ್ಯ.-ಓಬಯ್ಯ, ಎಇಇ, ಜಿಪಂ ಉಪ ವಿಭಾಗ ಅರಕಲಗೂಡು.
-ವಿಜಯ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.