ಮಿಡತೆ ಹಾವಳಿ ನಿಯಂತ್ರಿಸದಿದ್ದರೆ ಸಂಕಷ್ಟ
Team Udayavani, Jun 1, 2020, 7:47 AM IST
ಚನ್ನರಾಯಪಟ್ಟಣ: ಕೊರೊನಾ ಮಹಾಮಾರಿಯಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿರುವ ವೇಳೆಯಲ್ಲಿ ಮರುಭೂಮಿಯ ಮಿಡತೆಗಳ ದಂಡಿನ ಆಗಮನ ರೈತರನ್ನು ಆತಂಕ ದೂಡುತ್ತಿವೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣ ಮಿನಿ ವಿಧಾನ ಸೌಧದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ಮರುಭೂಮಿ ಮಿಡತೆಗಳ ಜೀವನ ಚರಿತ್ರೆ ಹಾಗೂ ನಿಯಂತ್ರಣ ಕುರಿತು ಅರಿವು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಿಡತೆ ಹಾವಳಿ ನಿಯಂತ್ರಿಸದಿದ್ದರೆ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಡಿ.ಎಚ್.ಬಸವರಾಜ್ ಮಾತನಾಡಿದರು.
ಕೇವಲ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರಿಸುಮಾರು 4- 5 ಕೋಟಿ ಮಿಡತೆಗಳು ಒಮ್ಮೆಲೆ ಗಾಳಿ ಬೀಸಿದ ಕಡೆಗೆ ಪ್ರಯಾಣ ಬೆಳೆಸುತ್ತವೆ. ಭಾರತ, ಶ್ರೀಲಂಕಾ ಹಾಗೂ ಮಲೇಷಿಯಾ ದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿವೆ. ಪ್ರೌಢಾವಸ್ಥೆಗೆ ಬಂದ ಮಿಡತೆ ಮಣ್ಣಿನಲ್ಲಿ ಸರಿಸುಮಾರು 80 ರಿಂದ 100 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಆಳವಾಗಿ ಉಳುಮೆ ಮಾಡುವ ಮಿಡತೆಗಳ ಮೊಟ್ಟೆ ಗಳನ್ನು ನಾಶ ಮಾಡಬಹುದು. ಜತೆಗೆ ಕ್ಲೋರೊಪೈರಿ ಪಾಸ್ ಹಾಗೂ ಮೆಲಾಥಿಯಾನ್ ಕ್ರಿಮಿನಾಶಕ ಸಿಂಪ ಡಿಸಿ ಮಿಡತೆ ಹಾವಳಿ ನಿಯಂತ್ರಿಸಬಹುದು ಎಂದರು.
ಒಂದು ದಿನದಲ್ಲಿ 135 ಕಿ.ಮೀ. ಶ್ರಮಿಸುವ ಸಾಮರ್ಥ್ಯ ಹೊಂದಿರುವ ಮಿಡತೆ ದಂಡು ಮಧ್ಯ ಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಹಾಗೂ ಮಹಾ ರಾಷ್ಟ್ರದಲ್ಲಿ ಸದ್ಯ ಹಾವಳಿ ಪ್ರಾರಂಭಿಸಿದ್ದು, ಬೆಳಗಾವಿ ಮೂಲಕ ರಾಜ್ಯಕ್ಕೂ ಪ್ರವೇಶಿಸುವ ಸಾಧ್ಯತೆ ಇದೆ ಎಂದರು. ತಹಶೀಲ್ದಾರ್ ಜೆ.ಬಿ.ಮಾರುತಿ, ಕೃಷಿ ಇಲಾಖೆ ಅಧಿಕಾರಿ ರಶ್ಮಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸತೀಶ್, ವಲಯ ಅರಣ್ಯಾಧಿಕಾರಿ ಎಚ್. ಆರ್. ಹೇಮಂತ್‌ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.