ಪದವೀಧರರ ಕ್ಷೇತ್ರಕ್ಕೆಆಕಾಂಕ್ಷಿಗಳ ಸಿದ್ಧತೆ
Team Udayavani, Sep 20, 2021, 2:24 PM IST
ಹಾಸನ: ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ದಕ್ಷಿಣಪದವೀಧರರ ಕ್ಷೇತ್ರವನ್ನು ಈಗ ಪ್ರತಿನಿಧಿಸುತ್ತಿರುವಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಅವರ ಅಧಿಕಾರಾವಧಿಜೂನ್‌ಗೆ ಮುಗಿಯಲಿದೆ.
ಆನಂತರ ಚುನಾವಣೆಅಧಿಸೂಚನೆ ಹೊರಬೀಳಲಿದ್ದು, ಚುನಾವಣೆಗೆ ಇನ್ನೂ9 ತಿಂಗಳಿದ್ದು, ಈಗಾಗಲೇ ಸ್ಪರ್ಧಾಕಾಂಕ್ಷಿಗಳು ತಮ್ಮಪಕ್ಷದಿಂದ ಟಿಕೆಟ್ ಪಡೆಯಲು ಮುಖಂಡರ ಭೇಟಿಹಾಗೂ ಪದವೀಧರರನ್ನು ಮತದಾರರನ್ನಾಗಿನೋಂದಣಿಯ ಚಟುವಟಕೆ ಆರಂಭಿಸಿದ್ದಾರೆ.ಕಳೆದ ಮೂರು ದಶಕಗಳಿಂದ ಬಿಜೆಪಿ ಮತ್ತುಜೆಡಿಎಸ್ ಅಭ್ಯರ್ಥಿ ಈ ಕ್ಷೇತ್ರವನ್ನು ಗೆಲ್ಲುತ್ತಾ ಬಂದಿದ್ದು,ಇತ್ತೀಚಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯ ರಾಜಕಾರಣಿಗಳು ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಪಾರಮ್ಯಸಾಧಿಸುತ್ತಾ ಬಂದಿದ್ದಾರೆ.
ಮರಿತಿಬ್ಬೇಗೌಡ ಮತ್ತುಕೆ.ಟಿ.ಶ್ರೀಕಂಠೇಗೌಡ ಈ ಕ್ಷೇತ್ರದಿಂದ ಗೆಲ್ಲುತ್ತಾಬಂದಿದ್ದಾರೆ.ಹಾಸನದ ಬಿ.ಆರ್. ಕೃಷ್ಣಮೂರ್ತಿ ಬಿಜೆಪಿ ತೆಕ್ಕೆಗೆದಕ್ಷಿಣ ಪದವೀಧರರ ಕ್ಷೇತ್ರವನ್ನು ಒಲಿಸಿದ್ದರು. ಅವರನಿಧನಾನಂತರ ಮೈಸೂರಿನ ಜಿ.ಎಸ್. ಮಧುಸೂಧನ್‌ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು.ಆನಂತರ ಮಂಡ್ಯದ ಮರಿತಿಬ್ಬೇಗೌಡ ಮತ್ತುಕೆ.ಟಿ.ಶ್ರೀಕಂಠೇಗೌಡ ಅವರು ದಕ್ಷಿಣ ಪದವೀಧರರಕ್ಷೇತ್ರವನ್ನು ಜೆಡಿಎಸ್ ತೆಗೆಕ್ಕೆಗೆ ತಂದು ಕೊಟ್ಟಿದ್ದಾರೆ.
ಇದುವರೆಗೂ ಹಾಸನ ಮತ್ತು ಚಾಮರಾಜನಗರಜಿಲ್ಲೆಯವರು ಪದವೀಧರ ಕ್ಷೇತ್ರದಿಂದ ಗೆಲ್ಲಲುಸಾಧ್ಯವಾಗಿಲ್ಲ. ಮುಂಬರುವ ಚುನಾವಣೆಯಲ್ಲೂ ಈಎರಡೂ ಜಿಲ್ಲೆಗೆ ಅವಕಾಶ ಸಿಗುವ ಲಕ್ಷಣಗಳಿಲ್ಲ.ಚುನಾವಣೆಗೆ ಇನ್ನೂ 9 ತಿಂಗಳಿದೆ. ಇನ್ನೂಮತದಾರರ ನೋಂದಣಿಗೆ ಚುನಾವಣಾ ಆಯೋಗಅಧಿಸೂಚನೆಯನ್ನೇ ಹೊರಡಿಸಿಲ್ಲ. ಆದರೂಸ್ಪರ್ಧಾಕಾಂಕ್ಷಿಗಳು ತಮ್ಮ ಬೆಂಬಲಿಗರ ಸಭೆಗಳನ್ನುನಡೆಸುತ್ತಿದ್ದಾರೆ. ತಮಗೆ ಟಿಕೆಟ್ ಖಾತರಿ ಪಡಿಸಿ ಚುನಾವಣಾ ಸಿದ್ಧತೆಗೆ ಅವಕಾಶ ಮಾಡಿಕೊಡಿ ಎಂದು ಅಯಾಯ ಪಕ್ಷಗಳ ಮುಖಂಡರ ಮೇಲೆ ಒತ್ತಡ ತರುತ್ತಿದ್ದಾರೆ.
ಪದವೀಧರರನ್ನು ಮತದಾರರನ್ನಾಗಿ ನೋಂದಾಯಿಸುವ ಚಟುವಟಿಕೆಯನ್ನೂ ಆರಂಭಿಸಿದ್ದಾರೆ.ಕಳೆದ ಬಾರಿಯ ಚುನಾವಣೆಯಲ್ಲಿ 1.16 ಲಕ್ಷಮತ ದಾರರಿದ್ದರು . ಸರ್ಧಾಕಾಂಕ್ಷಿಗಳ ಉತ್ಸಾಹನೋಡಿದರೆ ಮುಂದಿನ ವರ್ಷ ನಡೆಯಲಿರುವಚುನಾವಣೆಗೆ ಮತ ದಾರರ ಸಂಖ್ಯೆ 1.50 ಲಕ್ಷದಾಟುವ ನಿರೀಕ್ಷೆಯಿದೆ.ಸ್ಪರ್ಧಾಕಾಂಕ್ಷಿಗಳಾÂರು ?: ಪ್ರಮುಖವಾಗಿ ಜೆಡಿಎಸ್‌ನಿಂದ ನಿವೃತ್ತ ಪ್ರಾಂಶುಪಾಲ, ಮೈಸೂರು ವಿ.ವಿ.ಸೆನೆಟ್‌ಮಾಜಿ ಸದಸ್ಯ ಜಯರಾಂ ಕಿಲಾರ, ಸರ್ಕಾರಿ ನೌಕರರಸಂಘದ ಮಾಜಿ ಅಧ್ಯಕ್ಷ ಎನ್.ರಾಮು, ಬಿಜೆಪಿಯಿಂದಡಾ.ಈ.ಸಿ.ನಿಂಗರಾಜೇಗೌಡ ಅವರು ಚುನಾವಣೆಗೆಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಈ ಮೂವರೂ ಮಂಡ್ಯಜಿಲ್ಲೆಯವರು. ಜಯರಾಂ ಕಿಲಾರ ಅವರು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ಬೆಂಬಲದೊಂದಿಗೆ ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ರಾಮು ಅವರೂ ಶ್ರೀಕಂಠೇಗೌಡ ಅವರನ್ನು ಮುಂದಿಟ್ಟುಕೊಂಡು ಜೆಡಿಎಸ್ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ.ಹಾಸನ, ಮಂಡ್ಯ, ಮೈಸೂರು ಭಾಗದಲ್ಲಿ ಜೆಡಿಎಸ್‌ಪ್ರಬಲವಾಗಿರುವುದರಿಂದ ಹೆಚ್ಚು ಜೆಡಿಎಸ್ ಶಾಸಕರೂಇರುವುದರಿಂದ ಜೆಡಿಎಸ್ ಟಿಕೆಟ್‌ಗೆ ಪೈಪೋಟಿ ಇದೆ.ಮೈಸೂರು ವಿ.ವಿ.ಸಿಂಡಿಕೇಟ್ ಸದಸ್ಯಡಾ.ಇ.ಸಿ.ನಿಂಗರಾಜೇಗೌಡ ಅವರು ಈಗಾಗಲೇ ತಮ್ಮಬೆಂಬಲಿಗರ ಸಭೆ ನಡೆಸಿ ಮತದಾರರ ನೋಂದಣಿಆರಂಭಿಸಿದ್ದಾರೆ. ನಿಂಗರಾಜೇಗೌಡ ಅವರ ಜತೆಗೆಬಿಜೆಪಿ ಟಿಕೆಟ್‌ಗಾಗಿ ವಿಧಾನ ಪರಿಷತ್ ಮಾಜಿ ಸದಸ್ಯಮೈಸೂರಿನ ಜಿ.ಎಸ್. ಮಧುಸೂದನ್, ರವಿಶಂಕರ್,ಡಾ.ಚಂದ್ರಶೇಖರ್, ಅರಸೀಕೆರೆಯ ವಿನಯ್ ಅವರೂಪೈಪೋಟಿ ನಡೆಸಿದ್ದಾರೆ.
ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಮಾಜಿ ಸದಸ್ಯಮಂಡ್ಯದ ಮಧು ಮಾದೇಗೌಡ, ಬನ್ನೂರಿನರವಿಕೃಷ್ಣೇಗೌಡ ಅವರೂ ಆಕಾಂಕ್ಷಿಗಳಾಗಿದ್ದಾರೆ.ಚುನಾವಣೆ ವೇಳೆಗೆ ಮೂರು ಪಕ್ಷಗಳಲ್ಲೂಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಲೂಬಹುದು.
ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.