![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 27, 2021, 2:16 PM IST
ಹಾಸನ: ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಹಾಸನ ತಾಲೂಕಿನಲ್ಲಿ ಒಂದು ಜಿಲ್ಲಾ ಪಂಚಾಯತಿ ಕ್ಷೇತ್ರ ಮತ್ತು 10 ತಾಲೂಕು ಪಂಚಾಯತಿ ಕ್ಷೇತ್ರಗಳು ಕೈ ಬಿಟ್ಟು ಹೋಗಿವೆ.
ಈ ಮೊದಲು ಹಾಸನ ತಾಲೂಕಿನಲ್ಲಿ 7 ಜಿಲ್ಲಾಪಂಚಾಯತಿ ಕ್ಷೇತ್ರಗಳುಹಾಗೂ 27ತಾಲೂಕು ಪಂಚಾ ಯತಿ ಕ್ಷೇತ್ರಗಳಿದ್ದವು. ಆದರೆ ಈಗಬೂವನಹಳ್ಳಿ ಜಿಲ್ಲಾಪಂಚಾಯತಿ ಕ್ಷೇತ್ರಕಣ್ಮರೆಯಾಗಿದ್ದರೆ, ತಾಲೂಕು ಪಂಚಾಯತಿಗಳ ಪೈಕಿ ಶೆಟ್ಟಿಹಳ್ಳಿ, ಕಿತ್ತಾನೆ,ಬೂವನಹಳ್ಳಿ, ಹೆರಗು, ನಿಟ್ಟೂರು ಸೇರಿದಂತೆ 10 ತಾಲೂಕು ಪಂಚಾಯತಿ ಕ್ಷೇತ್ರಗಳುಕಣ್ಮರೆಯಾಗಿದ್ದು, ಈಗ ಹಾಸನ ತಾಲೂಕಿನಲ್ಲಿ 6ಜಿಲ್ಲಾ ಪಂಚಾಯತಿ ಮತ್ತು 17 ತಾಲೂಕುಪಂಚಾಯತಿ ಕ್ಷೇತ್ರಗಳು ರಚನೆಯಾಗಿವೆ.ಬೂವನಹಳ್ಳಿ ಈಗ ಹಾಸನ ನಗರಸಭೆ ವ್ಯಾಪ್ತಿಗೆಸೇರಿರುವುದರಿಂದ ಇನ್ನು ಮುಂದೆ ಬೂವನಹಳ್ಳಿಗ್ರಾಪಂ, ತಾಪಂ, ಜಿಪಂ ಕ್ಷೇತ್ರ ನೆನಪಾಗಿಯಷ್ಟೇ ಉಳಿಯಲಿವೆ.
ಹೊಸದಾಗಿ ಪುನರ್‌ರಚನೆಯಾಗಿರುವಹಾಸನ ತಾಲೂಕು ವ್ಯಾಪ್ತಿಯಜಿಲ್ಲಾ ಮತ್ತು ತಾಲೂಕುಪಂಚಾಯತಿಗಳು, ಅವುಗಳ ವ್ಯಾಪ್ತಿಯ ಜನಸಂಖ್ಯೆ ಹಾಗೂಗ್ರಾಮ ಪಂಚಾಯತಿಗಳ ವಿವರ ಹೀಗಿದೆ.
ಕಟ್ಟಾಯ ಜಿಪಂ ಕ್ಷೇತ್ರ: ಈ ಕ್ಷೇತ್ರ ವ್ಯಾಪ್ತಿಯ ಒಟ್ಟುಜನಸಂಖೆ – 32,346. ಈಜಿಪಂ ಕ್ಷೇತ್ರ ವ್ಯಾಪ್ತಿಗೆ ಬರುವ ತಾಲೂಕು ಪಂಚಾಯತಿ ಕ್ಷೇತ್ರಗಳು ಗೊರೂರು ಮತ್ತುಕಟ್ಟಾಯ. ಗೊರೂರು ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 15,605. ಈ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಗ್ರಾಪಂಗಳು ಗೊರೂರು, ಅಂಕಪುರಮತ್ತು ಕಾರ್ಲೆ. ಕಟ್ಟಾಯ ತಾಪಂ ಕ್ಷೇತ್ರವ್ಯಾಪ್ತಿಯ ಒಟ್ಟು ಜನಸಂಖ್ಯೆ 16,941.ಒಳಪಡುವ ಗ್ರಾಪಂಗಳು ಕಟ್ಟಾಯ, ಶೆಟ್ಟಿಹಳ್ಳಿ, ಶಂಕರನಹಳ್ಳಿ.
ಸಾಲಗಾಮೆ ಜಿಪಂ ಕ್ಷೇತ್ರ: ಈ ಕ್ಷೇತ್ರ ವ್ಯಾಪ್ತಿಯ ಒಟ್ಟು ಜನಸಂಖ್ಯೆ – 33,043. ಈ ಜಿಪಂ ಕ್ಷೇತ್ರ ವ್ಯಾಪ್ತಿಗೆ ಬರುವ ತಾಲೂಕು ಪಂಚಾಯತಿ ಕ್ಷೇತ್ರಗಳು ಸಾಲಗಾಮೆ, ಯಲಗುಂದ, ಬೈಲಹಳ್ಳಿ. ಸಾಲಗಾಮೆ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ13,152. ಈ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಗ್ರಾಪಂಗಳು ಸಾಲಗಾಮೆ ಮತ್ತು ಸೀಗೆ ಗ್ರಾಮ ಪಂಚಾಯತಿ. ಯಲಗುಂದ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 9,299. ಈ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಗ್ರಾಪಂಗಳು ನಿಟ್ಟೂರು, ಯಲಗುಂದ. ಬೈಲಹಳ್ಳಿ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 11,592. ಈ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತಿಗಳು ಬೈಲಹಳ್ಳಿ ಮತ್ತು ಉಗನೆ.
ಕಂದಲಿ ಜಿಪಂ ಕ್ಷೇತ್ರ: ಈ ಕ್ಷೇತ್ರದ ವ್ಯಾಪ್ತಿಯ ಒಟ್ಟು ಜನಸಂಖ್ಯೆ 36,341. ಈ ಜಿಪಂ ಕ್ಷೇತ್ರವ್ಯಾಪ್ತಿಗೆ ಒಳಪಡುವ ತಾಪಂ ಕ್ಷೇತ್ರಗಳು ಕಂದಲಿ, ತಟ್ಟೇಕೆರೆ, ತೇಜೂರು. ಕಂದಲಿ ತಾಪಂಕ್ಷೇತ್ರದ ಒಟ್ಟು ಜನಸಂಖ್ಯೆ 12,428, ಈ ಕ್ಷೇತ್ರವ್ಯಾಪ್ತಿಗೆ ಒಳಪಡುವ ಗ್ರಾಪಂಗಳು ಕಂದಲಿ, ಹೂವಿನಹಳ್ಳಿ ಕಾವಲು. ತಟ್ಟೆಕೆರೆ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 15,022. ಈ ಕ್ಷೇತ್ರ ವ್ಯಾಪ್ತಿಯ ಒಳಪಡುವ ಗ್ರಾಮಪಂಚಾಯತಿಗಳೆಂದರೆ ತಟ್ಟೇಕೆರೆ ಮತ್ತು ಹನುಮಂತಪುರ. ತೇಜೂರು ತಾಪಂ ಕ್ಷೇತ್ರದಒಟ್ಟು ಜನಸಂಖ್ಯೆ 8,891. ಈ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯತಿಗಳು ದೊಡ್ಡಪುರ ಮತ್ತು ತೇಜೂರು.
ಮೊಸಳೆ ಹೊಸಹಳ್ಳಿ ಜಿಪಂ ಕ್ಷೇತ್ರ: ಈ ಕ್ಷೇತ್ರದ ಒಟ್ಟು ಜನಸಂಖ್ಯೆ 33,007. ಈ ಕ್ಷೇತ್ರವ್ಯಾಪ್ತಿಗೆ ಒಳಪಡುವ ತಾಪಂ ಕ್ಷೇತ್ರಗಳುಮೊಸಳೆ ಹೊಸಹಳ್ಳಿ, ಮರ್ಕುಲಿ, ಕೌಶಿಕ.ಮೊಸಳೆ ಹೊಸಹಳ್ಳಿ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 11,608. ಈ ಕೇತ್ರಕ್ಕೆ ಒಳಪಡುವಗ್ರಾಪಂಗಳು ಮೊಸಳೆ ಹೊಸಹಳ್ಳಿ, ಚನ್ನಂಗಿಹಳ್ಳಿ. ಮರ್ಕುಲಿ ತಾಪಂ ಕ್ಷೇತ್ರದ ಒಟ್ಟುಜನಸಂಖ್ಯೆ 11,357. ಈ ಕ್ಷೇತ್ರಕ್ಕೆ ಒಳಪಡುವಗ್ರಾಪಂಗಳೆಂದರೆ ಮರ್ಕುಲಿ, ಜಾಗರವಳ್ಳಿ.ಕೌಶಿಕ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ10,042. ಈ ಕ್ಷೇತ್ರಕ್ಕೆ ಒಳಪಡುವ ಗ್ರಾಮಪಂಚಾಯತಿ ಗಳೆಂದರೆ ಕೌಶಿಕ, ಅಂಬುಗ.
ಶಾಂತಿಗ್ರಾಮ ಜಿಪಂ ಕ್ಷೇತ್ರ :
ಈ ಕ್ಷೇತ್ರದ ಒಟ್ಟು ಜನಸಂಖ್ಯೆ 35,171. ಈ ಕ್ಷೇತ್ರ ವ್ಯಾಪ್ತಿಯ ತಾಪಂ ಕ್ಷೇತ್ರಗಳುಶಾಂತಿಗ್ರಾಮ, ಕೋರವಂಗಲ, ಮಡೆನೂರು.ಶಾಂತಿಗ್ರಾಮ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ11,475. ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವಗ್ರಾಮ ಪಂಚಾಯತಿಗಳೆಂದರೆ ಶಾಂತಿಗ್ರಾಮಮತ್ತು ದೊಡ್ಡಗೇಣಿಗೆರೆ. ಕೋರವಂಗಲ ತಾಪಂಕ್ಷೇತ್ರದ ಒಟ್ಟು ಜನಸಂಖ್ಯೆ 13,309. ಈ ಕ್ಷೇತ್ರವ್ಯಾಪ್ತಿಗೆ ಒಳಪಡುವ ಗ್ರಾಪಂಗಳೆಂದರೆಕೋರವಂಗಲ, ಗಾಡೇನಹಳ್ಳಿ, ಮೆಳಗೋಡು.ಮಡೆನೂರು ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 10,387. ಈ ಕ್ಷೇತ್ರ ವ್ಯಾಪ್ತಿಗೆ ಒಳಪಡುವಗ್ರಾಮ ಪಂಚಾಯತಿಗಳು ಹೆರಗು ಮತ್ತು ಮಡೆನೂರು.
ದುದ್ದ ಜಿಪಂ ಕ್ಷೇತ್ರ :
ಈ ಕ್ಷೇತ್ರದ ಒಟ್ಟು ಜನಸಂಖ್ಯೆ 33,268. ಈ ಕ್ಷೇತ್ರ ವ್ಯಾಪ್ತಿಯ ತಾಪಂ ಕ್ಷೇತ್ರಗಳು ದುದ್ದ, ಕಬ್ಬಳಿ ಮತ್ತು ಕುದುರುಗುಂಡಿ. ದುದ್ದ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 12,783.ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗ್ರಾಪಂಗಳೆಂದರೆ ದುದ್ದ ಮತ್ತು ಅಟ್ಟಾವರಹೊಸಹಳ್ಳಿ. ಕಬ್ಬಳಿ ತಾಪಂ ಕ್ಷೇತ್ರದ ಒಟ್ಟುಜನಸಂಖ್ಯೆ 9,836. ಈ ಕ್ಷೇತ್ರವ್ಯಾಪ್ತಿಗೊಳಪಡುವ ಗ್ರಾಪಂಗಳೆಂದರೆಕಬ್ಬಳಿ ಮತ್ತು ಹೊನ್ನಾವರ. ಕುದುರುಗುಂಡಿ ತಾಪಂ ಕ್ಷೇತ್ರದ ಒಟ್ಟು ಜನಸಂಖ್ಯೆ 9649. ಈ ಕ್ಷೇತ್ರ ವ್ಯಾಪ್ತಿಗೆ ಕುದುರುಗುಂಡಿ ಮತ್ತು ಬಸವಾಘಟ್ಟ ಗ್ರಾಮ ಪಂಚಾಯತಿಗಳು ಸೇರ್ಪಡೆಯಾಗಿವೆ.
-ಎನ್.ನಂಜುಂಡೇಗೌಡ
R. Ashok: ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.