ಇಂದಿನಿಂದ ಹಾಸನಾಂಬಾ ಜಾತ್ರಾ ಮಹೋತ್ಸವ
Team Udayavani, Oct 12, 2017, 6:45 AM IST
ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ಜಾತ್ರಾ ಮಹೋತ್ಸವ ಇಂದಿನಿಂದ ಅ. 21 ರವರೆಗೆ ನಡೆಯಲಿದೆ. ಗುರುವಾರ ಮಧ್ಯಾಹ್ನ 12.30ಕ್ಕೆ ದೇಗುಲ ದ್ವಾರ ತೆರೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.
ಭಕ್ತರ ಸರತಿ ನಿಲ್ಲುವ ಹಾಗೂ ವಿಶೇಷ ದರ್ಶನದ ಸರತಿ ಸಾಗುವ ಹೊಸಲೈನ್ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಮಳೆಯಿಂದ ರಕ್ಷಣೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿವ ನೀರು ಸೇರಿದಂತೆ ಮೂಲಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಅಲ್ಲದೆ ತುರ್ತು ಪರಿಸ್ಥಿತಿ ನಿರ್ವಹಿಸಲು ವೈದ್ಯ ಚಿಕಿತ್ಸೆಯ ವ್ಯವಸ್ಥೆಯೂ ಇದೆ.
ದೇವಿಯ ದರ್ಶನಕ್ಕೆ ಒಟ್ಟು 8 ದಿನಗಳು ಮಾತ್ರ ಅವಕಾಶವಿದ್ದು, ಗರ್ಭಗುಡಿಯ ಸ್ವತ್ಛತೆ ಹಾಗೂ ದೇವಿಗೆ ನೈವೇದ್ಯ ಅರ್ಪಿಸುವ ಸುಮಾರು 2 ಗಂಟೆ ಹೊರತುಪಡಿಸಿ ದಿನದ 22 ಗಂಟೆಗಳ ಕಾಲ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಭಕ್ತರ ವಾಹನಗಳ ನಿಲುಗಡೆಗೆ ಸಂತೆಪೇಟೆಯ ಗೊರೂರ ರಸ್ತೆಯ ಬದಿ ಹಾಗೂ ಕಸ ಸಂಸ್ಕರಣೆಯ ಘಟಕದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
ತ್ವರಿತ ನೇರ ದರ್ಶನಕ್ಕೆ 1000 ರೂ. ಮತ್ತು ವಿಶೇಷ ದರ್ಶನಕ್ಕೆ 300 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಜಿಲ್ಲಾ ಹೆಚ್ಚುವರಿ ಎಸ್ಪಿವಿ.ಎಂ.ಜ್ಯೋತಿ ನೇತೃತ್ವದಲ್ಲಿ 400 ಪೊಲೀಸ್ ಸಿಬ್ಬಂದಿ ಹಾಗೂ 100 ಮಂದಿ ಗೃಹ ರಕ್ಷಕರನ್ನು ಬಂದೋಬಸ್ತ್ ಮಾಡಲಾಗಿದೆ. ಮೂವರು ಡಿವೈಎಸ್ಪಿ$ಗಳು ಮೂರು ಶಿಪ್ಟ್ಗಳಲ್ಲಿ ಭದ್ರತೆಯ ಮೇಲುಸ್ತುವಾರಿ ವಹಿಸುವರು. ಜೊತೆಗೆ 12 ಸಿಸಿ ಕ್ಯಾಮೆರಾಗಳ ರಕ್ಷಣೆಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.