ಹಾಸನ ಹಿಡಿತಕ್ಕೆ ಕೈ-ಕಮಲ ಮುಖಂಡರ ಕಸರತ್ತು!
Team Udayavani, Feb 26, 2023, 4:40 PM IST
ಹಾಸನ: ಚುನಾವಣೆ ದಿನಾಂಕ ಘೋಷಣೆಗೆ ಮೊದಲೇ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಬಿರುಸಿನ ಪ್ರಚಾರ ಆರಂಭಿಸಿವೆ. ಪಂಚರತ್ನ ಯಾತ್ರೆಯೊಂದಿಗೆ ಜೆಡಿಎಸ್ ಪ್ರಚಾರ ಆರಂಭಿಸಿದ್ದರೆ, ಕಾಂಗ್ರೆಸ್ ಪ್ರಜಾಧ್ವನಿ ಹಾಗೂ ಗ್ಯಾರಂಟಿ ಕಾರ್ಡ್‌ಗಳೊಂದಿಗೆ ಜನರ ಬಳಿ ಪ್ರಚಾರಕ್ಕೆ ತೆರಳುತ್ತಿವೆ.
ಬಿಜೆಪಿಯೂ ಪ್ರಗತಿ ರಥಯಾತ್ರೆಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಕಾರ್ಯಕ್ರಮದೊಂದಿಗೆ ಪ್ರಚಾರ ಕ್ಕಿಳಿದಿದೆ. ಹಾಸನದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರರು ಗ್ಯಾರಂಟಿ ಕಾರ್ಡ್‌ಗಳನ್ನು ಜನರಿಗೆ ವಿತರಿಸಿದರೆ, ಬಿಜೆಪಿ ಪ್ರಗತಿ ರಥದ ವಾಹನಗಳಿಗೆ ಚಾಲನೆ ನೀಡಿತು.
ಗ್ಯಾರಂಟಿ ಕಾರ್ಡ್ ವಿತರಣೆ: ಕಾಂಗ್ರೆಸ್ ಮುಖಂಡರಿಂದ ಪ್ರಚಾರ: ಹಾಸನ ತಾಲೂಕಿನ ಹನುಮಂತಪುರ ಗ್ರಾಮ ದಲ್ಲಿ ಶ್ರೀ ಪಂಚಮುಖಿ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾಂಗ್ರೆಸ್ ಮುಖಂ ಡರು 200ಯೂನಿಟ್ ಉಚಿತ ವಿದ್ಯುತ್ ಮತ್ತು ಗೃಹಿಣಿಯರಿಗೆ ಮಾಸಿಕ 2000 ಸಾವಿರ ರೂ. ಕೊಡುಗೆ ಭರವಸೆ ಒಳಗೊಂಡ ಗ್ಯಾರಂಟಿ ಕಾರ್ಡ್ ಗಳನ್ನು ವಿತರಿಸಿದರು. ಪಕ್ಷದ ಮುಖಂಡ ರಾದ ಮಾಜಿ ಸಂಸದ ಎಚ್.ಕೆ.ಜವರೇಗೌಡ, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ದೇವರಾಜೇ ಗೌಡ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬನವಾಸೆ ರಂಗಸ್ವಾಮಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಭರವಸೆ ಈಡೇರಿದೆ: ಇದೇ ವೇಳೆ ಮಾತನಾಡಿದ ಅವರು, ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯು ತ್, ಪ್ರತಿ ಕುಟುಂಬದ ಯಜಮಾನಿ ಖಾತೆಗೆ ಪ್ರತಿ ತಿಂಗಳೂ 2 ಸಾವಿರ ರೂ. ಪಾವತಿ, ಬಿಪಿಎಲ್ ಕಾರ್ಡ್‌ನ ಪ್ರತಿ ಸದಸ್ಯರಿಗೆ 10 ಕೆ.ಜಿ.ಅಕ್ಕಿ ಉಚಿತವಾಗಿ ನೀಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ಘೋಷಣೆ ಮಾಡಿದೆ. ಕಾಂಗ್ರೆಸ್ ಮುಖಂ ಡರು ನುಡಿದಂತೆ ನಡೆದುಕೊಳ್ಳು ತ್ತಾರೆ ಎಂಬುದಕ್ಕೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಚುನಾವಣೆ ಪ್ರಣಾಳಿಕೆಯ ಶೇ.90ಕ್ಕೂ ಹೆಚ್ಚು ಭರವಸೆ ಗಳನ್ನು ಈಡೇರಿಸಿದ್ದೇ ಉದಾ ಹರಣೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೇ ಭರವಸೆಗಳು ಜಾರಿಗೆ ಬರಲಿದೆ. ಕಾಂಗ್ರೆಸ್‌ನ ಭರವಸೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಇಂದಿನಿಂದ ಪ್ರತಿ ಗ್ರಾಮಗಳಿಗೆ ತೆರಳಿ ಬೂತ್ ಕಮಿಟಿ ಮೂಲಕ ಮನೆ, ಮನೆಗೂ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ವರ್ಗೀಸ್, ರತ್ನಕರ್, ಗಂಗಾಧರ್, ಗಿರೀಶ್, ಕುಮಾರಸ್ವಾಮಿ, ಕೃಷ್ಣಕುಮಾರ್, ಅಶೋಕ್, ಕೆ. ಬಿ.ವೆಂಕಟೇಗೌಡ, ಮಲ್ಲಿಗೆವಾಳು ದ್ಯಾವಪ್ಪ, ಚಂದ್ರು, ರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಪ್ರಗತಿ ರಥಗಳಿಗೆ ಚಾಲನೆ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮನ್ನು ಜನರಿಗೆ ಮನವರಿಕೆ ಮಾಡಿಕೊ ಡಲು ಬಿಜೆಪಿ ಪ್ರಗತಿ ರಥಯಾತ್ರೆಯನ್ನು ಆರಂಭಿಸಿದ್ದು, ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲ್ಲಿ ಪ್ರಗತಿ ರಥದ ಐದು ವಾಹನಗಳಿಗೆ ಶಾಸಕ ಪ್ರೀತಂ ಜೆ.ಗೌಡ ಅವರು ಚಾಲನೆ ನೀಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳ ಜನರಪರ ಕಾರ್ಯ ಕ್ರಮಗಳನ್ನು ಜನರಿಗೆ ಪ್ರದರ್ಶಿಸುವ ಪ್ರೊಜೆಕ್ಟರ್‌ಗಳನ್ನು ಪ್ರಗತಿ ರಥಗಳಲ್ಲಿ ಅಳವಡಿಸಲಾಗಿದೆ. ಹಾಸನದ ಎಂಜಿ. ರಸ್ತೆ ಗಾಂಧಿ ಪ್ರತಿಮೆ ಬಳಿ ಪ್ರಗತಿ ರಥಗಳಿಗೆ ಚಾಲನೆ ನೀಡಿದ ಸಂದ ರ್ಭದಲ್ಲಿ ಮಾತನಾಡಿದ ಶಾಸಕ ಪ್ರೀತಂ ಜೆ.ಗೌಡ ಅವರು ಡಬಲ್ ಎಂಜಿನ್ ಸರ್ಕಾರದಲ್ಲಿ ಪ್ರಧಾನಿ ಮೋದಿ ಹಾಗೂ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃ ತ್ವದ ಬಿಜೆಪಿ ಸರ್ಕಾರ ನೀಡಿರುವ ಕೊಡುಗೆ ಜನರಿಗೆ ತಿಳಿಸಲು ಅಧಿಕೃತವಾಗಿ ಪ್ರಗತಿ ರಥಗಳಿಗೆ ಚಾಲನೆ ಕೊಡಲಾಗಿದೆ. ಎರಡೂ ಸರ್ಕಾರಗಳ ಯೋಜನೆಗಳನ್ನು ಒಳಗೊಂಡ ಕಿರುಚಿತ್ರವನ್ನು ಈ ಪ್ರಗತಿ ರಥದ ಮೂಲಕ ಪ್ರಚಾರ ಮಾಡಿ ವಿಧಾನಸಭೆಯ 2023ರ ಚುನಾವಣೆಯಲ್ಲಿ ಬಿಜೆಪಿಯು 140ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಂಕಲ್ಪವನ್ನು ಮಾಡಿದೆ ಎಂದು ಹೇಳಿದರು.
ಹಾಸನ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣು ಗೋಪಾಲ್, ಗ್ರಾಮಾಂತರ ಉಪಾಧ್ಯ ಕ್ಷರಾದ ಗುರುಪ್ರಸಾದ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಹುಲ್ ಕಿಣಿ, ಗೋಪಿನಾಥ್, ಮುರುಳಿ, ಚಂದ್ರಶೇಖರ್, ದರ್ಶನ್, ಪ್ರೀತಿವರ್ಧನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.