Hassan: ನಿವೇಶನ ಹಂಚಿಕೆ 2 ದಶಕಗಳಿಂದ ನನೆಗುದಿಗೆ
ನಿವೇಶನ ಸಮಸ್ಯೆ ಬಗೆಹರಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ
Team Udayavani, Aug 25, 2023, 6:31 PM IST
ಆಲೂರು: ಪಟ್ಟಣದ ನಿವೇಶನ ರಹಿತ ಹಾಗೂ ವಸತಿ ರಹಿತರಿಗೆ ಹಂಚಬೇಕಿದ್ದ 480 ನಿವೇಶನಗಳು, ನಾನಾ ರಾಜಕೀಯ ಕಾರಣಗಳಿಂದ 20 ವರ್ಷಗಳ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದರಿಂದ ಇಂದಿಗೂ ಅರ್ಹರಿಗೆ ನಿವೇಶನ ಮರೀಚಿಕೆಯಾಗಿದೆ. ಈ ಸಂಬಂಧ ಶಾಸಕ ಸಿಮೆಂಟ್ ಮಂಜು ನಿವೇಶನ ಸ್ಥಳಗಳಿಗೆ ಭೇಟಿ ನೀಡಿ ಜಮೀನು ಮಾಲೀಕರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.
ಬಿ.ಬಿ.ಶಿವಪ್ಪ ಶಾಸಕರಾಗಿದ್ದ ಅವಧಿಯಲ್ಲಿ ಆಲೂರು ಪಟ್ಟಣ ದಲ್ಲಿ ವಾಸಿಸುವ ಬಡ ತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ
ನಿವೇಶನ ನೀಡಬೇಕು ಎನ್ನುವ ಉದ್ದೇಶದಿಂದ ಪಟ್ಟಣದ ಹೊರ ವಲಯದಲ್ಲಿ ಜಮೀನು ಖರೀದಿಸಿ ನಿವೇಶನ ಮಾರ್ಪಾಡು ಮಾಡಲಾಗಿತ್ತು. ಆದರೆ ಕೆಲವು ರಾಜಕೀಯ ಕಾರಣಗಳಿಂದ ನನೆಗುದ್ದಿಗೆ ಬಿದ್ದಿತ್ತು. ಪುನಃ ಶಾಸಕ ಮಂಜು ಅವರು ಪಟ್ಟಣದ
ಬಡವರಿಗೆ ನಿವೇಶನ ಕೊಡಿಸಲು ಮುಂದಾಗಿರುವುದು ಖುಷಿ ಹಿಮ್ಮಡಿಗೊಳಿಸಿದೆ.
ಹಕ್ಕುಪತ್ರ ಕೊಡಿಸಿದ್ದರು: ಕಳೆದ ಬಾರಿ ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ಎ.ಮಂಜು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹೊನ್ನವಳ್ಳಿ ಗಣೇಶ್ ನೇತೃತ್ವದಲ್ಲಿ ಎ. ಮಂಜು ಅವರನ್ನ ಆಲೂರಿಗೆ ಕರೆಸಿ ಕಾರ್ಯಕ್ರಮದ ಮೂಲಕ ಕೆಲವರಿಗೆ ಹಕ್ಕುಪತ್ರ ಕೊಡಿಸಿದ್ದರು.
ಇತ್ಯರ್ಥ ಮಾಡಿ:ಆದರೆ, ಜಮೀನು ನೀಡಿದ ಮಾಲೀಕ ನಿಂಗೇಗೌಡ ಅವರ ಮಕ್ಕಳು ಕೋರ್ಟ್‌ಗೆ ಹೋಗಿದ್ದರಿಂದ ಹಕ್ಕುಪತ್ರ ಪಡೆದ ನಿವೇಶನ ಮಾಲೀಕರಿಗೆ ನಿರಾಸೆಯಾಯಿತು. ಪುನಃ ಆಲೂರು ಪಟ್ಟಣದ ಜನಸ್ಪಂದನ ಸಂಸ್ಥೆ ಮುಖ್ಯಸ್ಥ ಹೇಮಂತ್ ಕುಮಾರ್ ಹಿಂದೆ ಜಿಲ್ಲಾ ಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಜಿಲ್ಲಾಧಿಕಾರಿ ಗಿರೀಶ್ ಅವರನ್ನು ಭೇಟಿ ಮಾಡಿ ಜಮೀನು ಮಾಲೀಕರನ್ನು ಕರೆಸಿ ಮಾತುಕತೆ ಮೂಲಕ ಬಗೆಹರಿಸಿ, ಇಲ್ಲ ಕಾನೂನು ರೀತಿ ಬಗೆಹರಿಸಿ. ಒಟ್ಟಾರೆ ನಿವೇಶನ ರಹಿತರಿಗೆ ನಿವೇಶನ ನೀಡಿ ಬಡವರಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿ
ಕಾರಿಗಳು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿ ವರದಿ ತರಿಸಿಕೊಳ್ಳುವಷ್ಠರಲ್ಲಿ ಅವರು ಅನಾರೋಗ್ಯ ಕ್ಕೀಡಾಗಿದ್ದರಿಂದ ತಡವಾಯಿತು. ಅಷ್ಟರೊಳಗೆ ಜಿಲ್ಲಾಧಿಕಾರಿಗಳು ವರ್ಗಾವಣೆ ಯಾಗಿದ್ದರಿಂದ ಮಾಲೀಕರಿಗೆ ನಿವೇಶನ ಮರೀಚಿಕೆಯಾಗಿತು.
ಮರೀಚಿಕೆಯಾದ ನಿವೇಶನ
ನಿವೇಶನ ಫಲಾನುಭವಿ ಕಸ್ತೂರಿ ಮಾತನಾಡಿ, ನಿವೇಶನ ಹಂಚಿಕೆ ಸಂಬಂಧ ಹಲವು ವರ್ಷಗಳು ಕಳೆದಿವೆ. ನಾವು ಈಗ ಬಗೆಹರಿಯುತ್ತೆ, ಆಗ ಬಗೆಹರಿಯುತ್ತೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದೇವೆ. ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ ಇದುವರೆಗೂ ನಿವೇಶನ ಮಾತ್ರ ಮರೀಚಿಕೆಯಾಗಿದೆ. ಈಗ ಶಾಸಕರು ಜಮೀನು ಮಾಲೀಕರ ಜೊತೆ ಮಾತನಾಡಿ ನಿವೇಶನ ಸಮಸ್ಯೆ ಬಗೆಹರಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಜಮೀನು ಮಾಲೀಕರ ಜತೆ ಮಾತುಕತೆ, ನಿವೇಶನ ಹಂಚಿಕೆ ಭರವಸೆ ಬಿ.ಬಿ.ಶಿವಪ್ಪ ಅವರು ದೂರದೃಷ್ಟಿ ಹೊಂದಿ ಪಟ್ಟಣದ ಜನತೆಗೆ ನಿವೇಶನ ಹಂಚಿಕೆ ಮಾಡಬೇಕೆಂದು ನಿರ್ಧರಿಸಿದ್ದರು. ಹಲವು ರಾಜಕೀಯ ಕಾರಣಗಳಿಂದ ಆ ಸಂದರ್ಭದಲ್ಲಿ ನಿವೇಶನ ಹಂಚಿಕೆ ಆಗಲಿಲ್ಲ. ಆದರೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಪಟ್ಟಣದ ಜನರು ನಿವೇಶನ ವಂಚಿತರಾಗಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು ಉದಯವಾಣಿಗೆ ತಿಳಿಸಿದರು. ನಿವೇಶನ ಫಲಾನುಭವಿಗಳು ಈಗಾಗಲೇ ಕೆಲವರು ಮೃತಪಟ್ಟಿದ್ದಾರೆ. ಜಮೀನು ಮಾಲೀಕರ ಜೊತೆ ಮಾತುಕತೆ ಮಾಡಿದ್ದೇನೆ. ಪಕ್ಷ ತೆಲಂಗಾಣ ರಾಜ್ಯದ ಚುನಾವಣೆ ಜವಾಬ್ದಾರಿ ಹೊರಿಸಿದ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿದ್ದೇನೆ. ಜಮೀನು ಮಾಲೀಕರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಬಡವರಿಗೆ ನಿವೇಶನ ನೀಡಬೇಕು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿ ಕಚೇರಿ ಅಲೆದು ಅವರ ಗಮನ ಸೆಳೆದೆ. ಕೆಲವು
ಜನಪ್ರತಿನಿಧಿಗಳು, ಅಧಿಕಾರಿಗಳು ಕ್ಷುಲ್ಲಕ ಕಾರಣ ಮುಂದಿಟ್ಟು ನಿವೇಶನ ಹಂಚಿಕೆ ಮುಂದೂಡುತ್ತಾ ಬಂದಿದ್ದಾರೆ. ಶಾಸಕರು ಜಮೀನು ಮಾಲೀಕರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಮುಂದಾಗಿರುವುದು ನಿವೇಶನ ರಹಿತರ ಆಸೆ ಹಿಮ್ಮಡಿಗೊಳಿಸಿದೆ.
● ಹೇಮಂತ್ ಕುಮಾರ್, ರಾಧಮ್ಮ ಜನಸ್ಪಂದನ ಸಂಸ್ಥೆ ಮುಖ್ಯಸ್ಥ
ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.