ಹಾಸನ: ಒಂದೇ ದಿನ 21 ಪಾಸಿಟಿವ್‌


Team Udayavani, May 21, 2020, 6:25 AM IST

hasa-21case

ಹಾಸನ: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 21 ಜನರಿಗೆ ಕೋವಿಡ್‌ 19 ಸೋಂಕು ಪತ್ತೆಯಾಗುವುದರೊಂದಿಗೆ ಒಟ್ಟು ಸಂಖ್ಯೆ 54ಕ್ಕೆ ಏರಿದೆ. ರಾಜ್ಯದಲ್ಲಿ ಒಂದೇ ದಿನ ಅತಿ ಹೆಚ್ಚು ಕೋವಿಡ್‌ 19 ಪಾಸಿಟಿವ್‌ ಪ್ರಕರಣಗಳು ವರದಿಯಾಗುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೋವಿಡ್‌ 19 ಸೋಂಕಿತರ ಸಂಖ್ಯೆ ಅರ್ಧ ಶತಕ ದಾಟಿದೆ. ಹಸಿರು ವಲಯದಲ್ಲಿದ್ದ ಹಾಸನ ಜಿಲ್ಲೆಗೆ ಮುಂಬೈನಿಂದ ಬಂದಿದ್ದ ಚನ್ನರಾಯಪಟ್ಟಣ ಮೂಲದ ಒಂದೇ ಕುಟುಂಬದ  ಐವರಲ್ಲಿ ಮೇ 12ರಂದು ಕೋವಿಡ್‌ 19 ಪಾಸಿಟಿವ್‌ ಕಂಡು ಬರುವುದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ 19 ಪ್ರಕರಣಗಳ ಖಾತೆ ತೆರೆಯಿತು.

ಆನಂತರ ಪ್ರತಿದಿನ ಸೋಂಕಿತರು ಪತ್ತೆ ಯಾಗುತ್ತಿದ್ದು, ಒಂದೇ ವಾರದಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಅರ್ಧ ಶತಕ ದಾಟಿದೆ. ಬುಧವಾರ ವರದಿಯಾದ 21 ಪ್ರಕರಣಗಳ ಪೈಕಿ 16 ಮಂದಿ ಚನ್ನರಾಯಪಟ್ಟಣ ತಾಲೂ  ಕಿನ ಮೂಲದವರಾಗಿದ್ದರೆ, ಇಬ್ಬರು ಹೊಳೆ ನರಸೀಪುರ ತಾಲೂಕಿನ ಮೂಲದವರು.  ಇನ್ನು ಮೂವರು ಹಾಸನ ತಾಲೂಕಿನವರು. ಚನ್ನರಾಯಪಟ್ಟಣ ತಾಲೂಕು ಮೂಲದ 16 ಜನರು ಹಾಗೂ ಹೊಳೆನರಸೀಪುರ ತಾಲೂಕು ಮೂಲದ ಇಬ್ಬರು ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ಕೇಂದ್ರದಲ್ಲಿದ್ದರು.

ಈಗ ಸೋಂಕು  ದೃಢಪಟ್ಟಿರುವ ಹೊಳೆನರಸೀಪುರ ಮೂಲದ ಇಬ್ಬರು ಮುಂಬೈನಿಂದ 27 ಜನರೊಂದಿಗೆ ಒಂದೇ ವಾಹನದಲ್ಲಿ ಮೇ 14 ರಂದು ಬಂದಿದ್ದರು. ಅವರಲ್ಲಿ ಇಬ್ಬರಿಗೆ ಈಗ ಸೋಂಕು ದೃಢಪಟ್ಟಿದೆ. ಇನ್ನು ನಾಲ್ವರು ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಗೆ ಹೋಗಿದ್ದಾರೆ. ಅವರೆ ಲ್ಲರ ಗಂಟಲು ದ್ರವ ಪರೀಕ್ಷೆಯಲ್ಲಿ ಕೋವಿಡ್‌ 19 ಪಾಸಿಟಿವ್‌ ಕಂಡು ಬಂದಿದೆ. ಇನ್ನುಳಿದ 21 ಜನರ ವರದಿ ಬರಬೇಕಾಗಿದೆ ಎಂದರು.

ತಮಿಳುನಾಡು ಕಾರ್ಮಿಕನಿಂದ ಆತಂಕ: ಹಾಸನ ತಾಲೂಕಿನ ಮೂಲದ ಮೂವರು ತಮಿಳುನಾಡು ರಾಜ್ಯದ ಸಂಪರ್ಕದವರು. ತಮಿಳುನಾಡಿನಿಂದ ಬಂದಿದ್ದ ವ್ಯಕ್ತಿಯೊಬ್ಬ ನೇರವಾಗಿ ಕಟ್ಟಡ ಕಾರ್ಮಿಕರಿದ್ದ ಕ್ಯಾಂಪಿಗೆ ಬಂದು  ಗಿದ್ದ. ಈಗ ಆತನಿಗೆ ಪಾಸಿಟಿವ್‌ ಕಂಡು ಬರುವುದರೊಂದಿಗೆ ಆತನ ಪತ್ನಿಗೂ ಈಗ ಕೋವಿಡ್‌ 19 ಪಾಸಿಟಿವ್‌ ಕಂಡು ಬಂದಿದೆ. ಇನ್ನೊಬ್ಬ ಕಾರ್ಮಿಕನಿಗೂ ಕೋವಿಡ್‌ 19 ಸೋಂಕು ದೃಢಪಟ್ಟಿದೆ.

ಆತ ಮುಂಬೈನಿಂದ ಬಂದಿದ್ದ. ಸೋಂಕಿತರ  ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನಲ್ಲಿಡುವ ಪ್ರಯತ್ನ ನಡೆದಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾಹಿತಿ ನೀಡಿದರು. ಕೋವಿಡ್‌ 19 ಸೋಂಕಿರುವ ಎಲ್ಲ 54 ಜನರೂ ಕೋವಿಡ್‌ 19 ಹಾಸನದ ವೈದ್ಯಕೀಯ  ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಅವರೆಲ್ಲರ ಆರೋಗ್ಯವೂ ಸ್ಥಿರವಾಗಿದ್ದು, ಗುಣಮುಖರಾಗುವ ವಿಶ್ವಾಸವಿದೆ ಎಂದರು.

400 ಜನರ ವರದಿ ಬರಬೇಕು: ವಿವಿಧ ರಾಜ್ಯಗಳಿಂದ ಬಂದು ಕ್ವಾರಂಟೈನ್‌ನಲ್ಲಿರುವ 400 ಜನರ ವರದಿ ಇನ್ನೂ ಬರಬೇಕಾಗಿದೆ. ಈಗ ಹೊರ ರಾಜ್ಯಗಳಿಂದ ಬರುವವರಿಗೆ ಪಾಸ್‌ ಕೊಡುವುದನ್ನು ನಿಲ್ಲಿಸಲಾಗಿದೆ. ಈಗಾಗಲೇ ಪಾಸ್‌  ಪಡೆದಿದ್ದವರೂ ಬರಬಾರದು ಎಂದು ಸೂಚನೆ ನೀಡಲಾಗಿದೆ. ಪಾಸ್‌ ಪಡೆದವರು ಬಂದರೂ ಅವರನ್ನು ಕ್ವಾರಂಟೈನ್‌ನಲ್ಲಿಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಕೋವಿಡ್‌ 19 ಸೋಂಕಿತರ ಚಿಕಿತ್ಸೆಗೆ ಹಿಮ್ಸ್‌ ಆಸ್ಪತ್ರೆಯಲ್ಲಿ  500 ಹಾಸಿಗೆಗಳ ವ್ಯವಸ್ಥೆ ಮಾಡ ಲಾಗಿದೆ. 350 ಹಾಸಿಗೆಗಳಿಗೆ ಹೈ ಆಕ್ಸಿಜನ್‌ ವ್ಯವಸ್ಥೆಯ ಸೌಲಭ್ಯಗಳಿದ್ದು, 150 ಹಾಸಿಗೆ ಗಳಿಗೆ ಸಾಮಾನ್ಯ ಆಕ್ಸಿಜನ್‌ ವ್ಯವಸ್ಥೆಯ ಸೌಲಭ್ಯವಿದೆ. ಸೋಂಕಿತರ ಸಂಖ್ಯೆ ಹೆಚ್ಚಾದರೂ ಚಿಕಿತ್ಸಾ ಸೌಲಭ್ಯಗಳನ್ನು  ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದರು. ಈವರೆಗೆ ಹಾಸನ ಜಿಲ್ಲೆಗೆ ಹೊರ ರಾಜ್ಯಗಳಿಂದ 1,541 ಜನರು ಬಂದಿದ್ದು, ಅವರೆಲ್ಲರೂ ಕ್ವಾರಂಟೈನ್‌ನಲ್ಲಿದ್ದಾರೆ ಎಂದರು.

ಮೂಡಿಗೆರೆಯ ವೈದ್ಯರೊಬ್ಬರಲ್ಲಿ ಕೋವಿಡ್‌ 19 ಪಾಸಿಟಿವ್‌ ಕಂಡು ಬಂದಿದ್ದು, ಹಾಸನ ಜಿಲ್ಲೆಯ ಜನರೂ ಆ ವೈದ್ಯರನ್ನು ಸಂಪರ್ಕಿ ಸಿದ್ದಾರೆ. ಅಂತಹ 15 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಈಗಾಗಲೇ ಗುರುತಿಸಲಾ ಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಸ್‌ ಕುಮಾರ್‌, ಹಾಸನ ವಿಭಾಗಾಧಿಕಾರಿ ಡಾ. ನವೀನ್‌ ಭಟ್‌ ಸುದ್ದಿಗೋಷ್ಠಿಯಲ್ಲಿದ್ದರು

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.