ಹಾಸನ ಮಸ್ಟರಿಂಗ್ ಕೇಂದ್ರದಲ್ಲಿ ಅವ್ಯವಸ್ಥೆ
Team Udayavani, May 12, 2018, 3:19 PM IST
ಹಾಸನ: ಮಸ್ಟರಿಂಗ್ ಕೇಂದ್ರದಲ್ಲಿನ ಅವ್ಯವಸ್ಥೆಯ ವಿರುದ್ಧ ಚುನಾವಣಾ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ
ಹಾಸನದಲ್ಲಿ ಶುಕ್ರವಾರ ನಡೆಯಿತು. ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ವ್ಯವಸ್ಥೆ ಮಾಡಿದ್ದ ಹಾಸನ ವಿಧಾನಸಭಾ
ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಮತಯಂತ್ರಗಳು, ವಿ.ವಿ.ಪ್ಯಾಟ್‌ಗಳನ್ನು ಪಡೆಯಲು ಬಂದಿದ್ದ ಮತಗಟ್ಟೆ
ಅಧ್ಯಕ್ಷಾಧಿಕಾರಿ ಮತ್ತು ಸಿಬ್ಬಂದಿ ಉಪಹಾರ, ಕುಡಿಯುವ ನೀರೂ ಇಲ್ಲದೆ ಪರದಾಡಿದರು.
ಬೆಳಗ್ಗೆ 8 ಗಂಟೆಯಿಂದಲೇ ಮಸ್ಟರಿಂಗ್ ಕೇಂದ್ರಕ್ಕೆ ಸಿಬ್ಬಂದಿ ಬರಲಾರಂಭಿಸಿದ್ದರು. ತಮಗೆ ನಿಗದಿಯಾದ ಮತಗಟ್ಟೆ ಮಾಹಿತಿ ಪಡೆದು ಇವಿಎಂ, ವಿ.ವಿ.ಪ್ಯಾಟ್ ಹಾಗೂ ಚುನಾವಣಾ ಸಾಮಗ್ರಿ ಪಡೆದು ಬಸ್ ಗಳಿಗಾಗಿ ಕಾಯುತ್ತಿ ಸಿಬ್ಬಂದಿಗೆ ಬೆಳಗ್ಗೆ 11.30ರ ವರೆಗೂ ಉಪಹಾರ ಸಿಗಲಿಲ್ಲ.
ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಯವರನ್ನು ಸಿಬ್ಬಂದಿ ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ ನಂತರ 11.30ಕ್ಕೆ ಉಪಹಾರ ಬಂದರೂ ಪ್ಲೇಟ್‌ಗಳ ಕೊರತೆ ಇತ್ತು. ಕೆಲವು ಸಿಬ್ಬಂದಿ ಪ್ಲೇಟ್‌ಗಾಗಿ ಪರದಾಡಿ ಕೊನೆಗೆ ಉಪಹಾರ ತಿಂದು ಬಿಸಾಡಿದ್ದ ಅಡಕೆ ಪ್ಲೇಟ್‌ಗಳನ್ನು ತೊಳೆದುಕೊಂಡು ಉಪಹಾರ ತಿಂದರು.
ಅವ್ಯವಸ್ಥೆಯ ಬಗ್ಗೆ ಜಿಪಂ ಸಿಇಒ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ನಂತರ ವ್ಯವಸ್ಥೆ ಸುಧಾರಿಸುವ ಪ್ರಯತ್ನ ನಡೆಯಿತು. ಮಸ್ಟರಿಂಗ್ ಕೇಂದ್ರದಲ್ಲಿನ ಅವ್ಯವಸ್ಥೆಯ
ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ಮುಂಜಾನೆ 5 ಗಂಟೆಗೇ ಮನೆ ಬಿಟ್ಟು ಬಂದಿರುವ ನಮಗೆ 11.30ರ ವರೆಗೂ ಉಪಹಾರ ನೀಡಲಿಲ್ಲ.
ರಕ್ತದೊತ್ತಡ, ಮಧುಮೇಹ ಇರುವ ಬಹುಪಾಲು ಸಿಬ್ಬಂದಿ ಉಪಹಾರವಿಲ್ಲದೇ ಪರದಾಡುವಂತಾಗಿದೆ. ಮಸ್ಟರಿಂಗ್ ಕೇಂದ್ರಕ್ಕೆ ಉಪಹಾರ ಸರಬರಾಜು ಮಾಡುವ ಹೊಣೆ ಹೊತ್ತವರ ನಿರ್ಲಕ್ಷ್ಯದಿಂದ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅವ್ಯವಸ್ಥೆಯ ನಡುವೆಯೇ ಇವಿಎಂ, ವಿ.ವಿ.ಪ್ಯಾಟ್ ಹಾಗೂ ಚುನಾವಣಾ ಸಾಮಗ್ರಿ ಪಡೆದು ಬಸ್‌ಗಳಲ್ಲಿ 2 ಗಂಟೆಯ ವೇಳೆಗೆ ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಯತ್ತ ಚುನಾವಣಾ ಸಿಬ್ಬಂದಿ ಹೊರಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.