ಕಾಂಗ್ರೆಸ್ ಅಲ್ಪಸಂಖ್ಯಾತರ ಕ್ಷೆಮೆ ಕೇಳಲಿ
Team Udayavani, Jan 1, 2022, 4:36 PM IST
ಹಾಸನ: ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ದ್ವಿಮುಖ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷ ಹೊಸ ವರ್ಷದಲ್ಲಾದರೂ ಅಲ್ಪ ಸಂಖ್ಯಾತರ ಕ್ಷಮೆ ಕೇಳಿ ಪಾಪ ವಿಮೋಚನೆ ಮಾಡಿಕೊಳ್ಳಲಿ ಎಂದು ಜೆಡಿಎಸ್ ಮುಖಂಡ, ಶಾಸಕ ಎಚ್.ಡಿ.ರೇವಣ್ಣ ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧಕಾಯ್ದೆಯನ್ನು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತರುವ ಪ್ರಯತ್ನ ನಡೆಸಿದ್ದು, ವಿಧಾನಸಭಾ ಅಧಿವೇಶನದಲ್ಲಿಯೇಬಹಿರಂಗವಾಯಿತು. ಮತಾಂತರ ನಿಷೇಧ ಕಾಯ್ದೆಜಾರಿಯನ್ನು ವಿರೋಧಿಸಿ ಕ್ರೈಸ್ತ ಸಮುದಾಯವರನ್ನುಕಾಂಗ್ರೆಸ್‌ನತ್ತ ಸೆಳೆಯಲು ಪ್ರಯತ್ನಿಸಿ ಕ್ರೈಸ್ತರಿಗೆ ಟೋಪಿಹಾಕಿರುವ ಕಾಂಗ್ರೆಸ್ ಮುಖಂಡರು ಚರ್ಚ್‌ಗಳಿಗೆಹೋಗಿ ಧರ್ಮಗುರುಗಳಿಗೆ ತಪ್ಪು ಕಾಣಿಕೆ ಒಪ್ಪಿಸಿ ಕ್ಷಮೆ ಕೇಳಲಿ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕ್ಷಮೆಯನ್ನೂ ಕೇಳಲಿ ಎಂದರು.
ಆದಾಯ ತೆರಿಗೆ ಇಲಾಖೆಯವರು ನನಗೂ ನೋಟಿಸ್ ಕೊಟ್ಟಿದ್ದಾರೆ. ನೋಟಿಸ್ ಕೊಟ್ಟ ನಂತರನನಗಿರುವ ಆದಾಯ, ತೆರಿಗೆ ಕಟ್ಟಿರುವ ಮಾಹಿತಿ ನೀಡುತ್ತೇನೆ. ನಾವು ನ್ಯಾಯ ಮಾರ್ಗದಲ್ಲಿ ಸಂಪಾದನೆಮಾಡಿದರೆ ಐಟಿ, ಇಡಿಗೆ ಏಕೆ ಹೆದರಬೇಕು? ನೋಟಿಸ್ ನೀಡಿದ ನಂತರ, ದಾಳಿ ನಡೆಸಿದಸಂದರ್ಭದಲ್ಲಿ ಮಾಹಿತಿ ನೀಡಲಿ. ಅದನ್ನು ಬಿಟ್ಟುಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ನಡುಗಬೇಕು ಎಂದು ಡಿ.ಕೆ.ಶಿವಕುಮಾರ್ ಅವರ ಹೆಸರೇಳದೆ ಪ್ರಶ್ನಿಸಿದರು.
ಜೆಡಿಎಸ್ ಬೆಂಬಲಿಗರೇ ಹೆಚ್ಚು: ಜಿಲ್ಲೆಯ 8 ಗ್ರಾಪಂಗಳಿಗೆ ನಡೆದ ಚುನಾವಣೆಯಲ್ಲಿ ಶೇ. 90 ಕ್ಕೂಜೆಡಿಎಸ್ ಬೆಂಬಲಿಗರೇ ಗೆದಿದ್ದಾರೆ. ಒಟ್ಟು 162 ಸದಸ್ಯಸ್ಥಾನಗಳಿಗೆ ಚುನಾವಣೆ ನಡೆದಿತ್ತ ಎಂದು ರೇವಣ್ಣವಿವರಿಸಿದರು. ರಾಮನಗರ ಜಿಲ್ಲೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಹಿಡಿತ ಸಡಿಲವಾಗುತ್ತಿದೆ ಎಂದು ಮಾಗಡಿಯ ಮುಖಂಡರೊಬ್ಬರುಹೇಳುತ್ತಿದ್ದರು. ಆದರೆ ಬಿಡದಿ ಪುರಸಭೆಯಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್‌ಗೆ ನಾಲ್ಕೂವರೆ ಸಾವಿರ ಮತಗಳು ಹೆಚ್ಚು ಜೆಡಿಎಸ್‌ಗೆ ಬಂದಿವೆ. ರಾಮನಗರ ಜಿಲ್ಲೆಯ ಜನರು ಕುಮಾರಸ್ವಾಮಿಅವರನ್ನು ಬಿಟ್ಟುಕೊಡುವುದಿಲ್ಲ. ದ್ರೋಹ ಮಾಡುವ ಲೀಡರ್‌ಗಳು ಕುಮಾರಸ್ವಾಮಿ ಅವರನ್ನು ಬಿಟ್ಟುಹೋದರೂ ಜನರು ಕುಮಾರಸ್ವಾಮಿ ಅವರ ಬಳಿ ಉಳಿದಿದ್ದಾರೆ ಎಂದು ಹೇಳಿದರು.
ಮುಜರಾಯಿ ಇಲಾಖೆ ಹಿಡಿತವಿರಲೇಬೇಕು: ಹಿಂದೂ ದೇವಾಲಯಗಳಿಗೆ ಸ್ವಾತಂತ್ರ್ಯ ನೀಡುವಮುಖ್ಯಮಂತ್ರಿಯವರ ಹೇಳಿಕೆಯನ್ನು ರೇವಣ್ಣ ಅವರುವಿರೋಧಿಸಿದರು. ದೇಗುಲಗಳ ಆದಾಯವನ್ನು ದೇವಾಲಯದ ಆಡಳಿತ ಮಂಡಳಿಯೇ ಸ್ವತಂತ್ರವಾಗಿ ಖರ್ಚು ಮಾಡಲು ಅವಕಾಶ ನೀಡಿದರೆ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ. ದೇವಾಲಯಗಳಆದಾಯ ಮತ್ತು ಖರ್ಚಿನ ಬಗ್ಗೆ ಜಿಲ್ಲಾಧಿಕಾರಿಯವರ ಹಿಡಿತ ಇರಲೇಬೇಕು ಎಂದರು.
ದೇಗುಲಗಳಿಗೆ ಕೊಟ್ಯಾಂತ ರೂ. ಆದಾಯ ಮತ್ತು ಆಸ್ತಿ ಇರುತ್ತದೆ. ಸರ್ಕಾರದ ಹಿಡಿತ ಇಲ್ಲದಿದ್ದರೆ ದೇವಾಲಯಗಳ ಆಸ್ತಿಯನ್ನು ದೋಚುವವರಿಗೆ ದಾರಿಮಾಡಿಕೊಟ್ಟಂತಾಗುತ್ತದೆ. ಸರ್ಕಾರ ದೇಗುಲಗಳ ಆಡಳಿತದ ಮೇಲೆ ಹಿಡಿತ ಇಟ್ಟುಕೊಳ್ಳಲಿ. ದೇವಾಲಯಗಳ ಅಭಿವೃದ್ಧಿ ಯೋಜನೆಗಳಿಗೂ ಅನುದಾನವನ್ನು ಸರ್ಕಾರ ಕೊಡಲಿ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ನಂಬಿಕೆ ದ್ರೋಹ :
ನಂಬಿದವರಿಗೆ ಟೋಪಿ ಹಾಕುತ್ತಲೇ ಬಂದಿರುವ ಕಾಂಗ್ರೆಸ್ ನಂಬಿಕೆ ದ್ರೋಹಿ. ಪ್ರಧಾನಿಗಳಾಗಿದ್ದ ಚರಣ್ ಸಿಂಗ್, ಚಂದ್ರಶೇಖರ್ , ದೇವೇಗೌಡರನ್ನು ಅಧಿಕಾರದಿಂದ ಇಳಿಸಿ ನಂಬಿಕೆ ದ್ರೋಹ ಮಾಡಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿಯೂ ಎಚ್.ಡಿ.ಕುಮಾರಸ್ವಾಮಿ ಅವರು 5 ವರ್ಷ ಮುಖ್ಯಮಂತ್ರಿಯಾಗಿರಲು ಬೆಂಬಲ ನೀಡುವುದಾಗಿ ಭರವಸೆ ನೀಡಿ 14 ತಿಂಗಳಿಗೇ ಅಧಿಕಾರದಿಂದ ಇಳಿಸಿ ದ್ರೋಹ ಮಾಡಿತು. ಕುಮಾರಸ್ವಾಮಿ ಅವರ ಜೊತೆಗಿದ್ದು ಸಹಾಯ ಪಡೆದವರೇ ಈಗ ಕುಮಾರಸ್ವಾಮಿ ಅವರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದೆ ತರಾಟೆಗೆ ತೆಗೆದು ಕೊಂಡರು. ಕಾಂಗ್ರೆಸ್ ಮತ್ತು ಬಿಜೆಪಿ ಅಲ್ಪಸಂಖ್ಯಾತರ ಪರ- ವಿರೋಧದ ನಾಟಕವಾಡಿ ಟೋಪಿ ಹಾಕುವ ಬದಲುಹೊಸ ವರ್ಷದಲ್ಲಾದರೂ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ರೇವಣ್ಣ ಅವರು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.