ಕಲ್ಲುಗಣಿ ಸ್ಫೋಟದ ತಪ್ಪಿತಸ್ಥರ ವಿರುದ್ಧ ಕ್ರಮ
Team Udayavani, Apr 6, 2021, 3:09 PM IST
ಹೊಳೆನರಸೀಪುರ: ತಾಲೂಕಿನ ಚಾಕೇನಹಳ್ಳಿ ಕಲ್ಲುಗಣಿಗಾರಿಕೆ ಸಾಮಗ್ರಿಗಳ ಸ್ಫೋಟದ ಘಟನೆಗೆ ಕಾರಣರಾದವರ ವಿರುದ್ಧ ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಗೋಪಾಲಯ್ಯ ತಿಳಿಸಿದರು.
ಭಾನುವಾರ ಸಂಜೆ ತಾಲೂಕಿನ ಚಾಕೇನಹಳ್ಳಿ ಗ್ರಾಮದಲ್ಲಿ ಕಲ್ಲುಗಣಿಗಾರಿಕೆ ಸಾಮಗ್ರಿಗಳ ಸ್ಫೋಟದಿಂದ ಓರ್ವ ಸಾವನ್ನಪ್ಪಿದ್ದು ಉಳಿದ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಕಾರಣ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಅದರಂತೆ ಈಗಣಿ ಸಾಮಗ್ರಿಗಳನ್ನು ಶೇಖರಣೆ ಮಾಡಿರುವ ದುರ್ಗಾಂಭ ಎಂಟರ್‌ಪ್ರೈಸಸ್‌ನ ನಾಗೇಶ್ ಮಾಲಿಕರ ವಿರುದ್ಧವೂ ದೂರು ದಾಖಲಾಗಿದ್ದು ನಾಗೇಶ್ ಅವರುತಪ್ಪಿತಸ್ಥರೆಂದು ಸಾಬೀತಾದಲ್ಲಿ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದೆಂದರು.
ಸಾಮಗ್ರಿ ಸ್ಥಳ ಬದಲಾವಣೆಗೆ ಸೂಚನೆ: ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ,ಇಂತಹ ಘಟನೆಗಳು ಶಿವಮೊಗ್ಗ ಮತ್ತುಚಿಕ್ಕಬಳ್ಳಾಪುದಲ್ಲಿ ನಡೆದು ಸಾಕಷ್ಟು ಸಾವು ನೋವುಗಳಾಗಿವೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು ಉಳಿದ ಇಬ್ಬರು ರವಿ, ನಟರಾಜ್ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕುಟುಂಬಳಿಗೆ ದುರ್ಗಾ ಎಂಟರ್‌ಪ್ರೈಸಸ್‌ನ ಮಾಲೀಕರಿಂದಲೂ ಮತ್ತು ಸರ್ಕಾರದಿಂದಲೂ ಪರಿಹಾರ ಕೊಡಿಸಲು ತಾವು ಪ್ರಾಮಾಣಿಕ ಪ್ರಯತ್ನದಲ್ಲಿರುವುದಾಗಿ ತಿಳಿಸಿದರು.
ಈ ಹಿಂದೆ ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದು ಅವಘಡದ ನಂತರ ತಾವು ಜಿಲ್ಲಾಧಿಕಾರಿಗಳ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ಜಿಲ್ಲೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಸಾಮಗ್ರಿ ಮಾರಾಟ ಮಾಡುವ ಮತ್ತು ಕಲ್ಲುಕ್ವಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೆ ಎಂದು ಸ್ಮರಿಸಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಅಕಸ್ಮಾತ್ ತಮಿಳುನಾಡಿನಿಂದ ಬಂದಿದ್ದ ವಾಹನಕ್ಕೆ ತೀವ್ರ ತಗುಲಿದ್ದರೆ ಘಟನೆ ಸುತ್ತಮುತ್ತಲಿನ ಸುಮಾರು ನಾಲ್ಕಾರು ಕಿಲೋಮೀಟರ್‌ಗಳಲ್ಲಿ ಅವಘಡ ಸಂಭವಿಸುತ್ತಿತ್ತು ಎಂದರು.
ಪರಿಶೀಲನೆ: ಘಟನಾ ಸ್ಥಳದಿಂದ ಸುಮಾರು ಮೂನ್ನೂರು ಅಡಿ ದೂರದಲ್ಲೇ ಕೆಂಪು ಪಟ್ಟಿ ಕಟ್ಟಿ ಸಾರ್ವಜನಿಕರು ಮತ್ತು ಮಾಧ್ಯಮದವರು ಒಳ ಬಾರದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಘಟನಾ ಸ್ಥಳಕ್ಕೆ ತೆರಳುವವರ ಬಳಿ ಇದ್ದ ಮೊಬೈಲ್ ಕೊಂಡೊಯ್ಯುವಂತಿರಲಿಲ್ಲ. ಹೀಗಾಗಿ ಉನ್ನತ ಅಧಿಕಾರಿಗಳ ತಂಡ ಮತ್ತು ಬೆರಳೆಣಿಕೆ ಜನಪ್ರತಿನಿಧಿಗಳು ಮಾತ್ರ ಅವಘಡದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಹಿಂತಿರುಗಿದರು.
ಒಂದು ಮೂಲದ ಪ್ರಕಾರ ಭಾನುವಾರ ಮಧ್ಯಾಹ್ನ ಸಂಪತ್, ರವಿ ನಟರಾಜು ಎಂಬ ಮೂವರು ಬೈಕೊಂದರಲ್ಲಿ ಕಲ್ಲುಗಣಿಗಾರಿಕೆ ಶೇಖರಿಸಿದ್ದ ಗೋದಾಮಿಗೆ ಬಂದು ಜಿಲೆಟಿನ್, ಸಾಮಗ್ರಿ ಕೊಂಡು ಅವುಗಳನ್ನು ಬೈಕ್‌ನ ಟ್ಯಾಂಕ್ ಮೇಲಿರಿಸಿಕೊಂಡುಹೊರಡುವ ವೇಳೆ ಬೈಕ್ ಸ್ಟಾರ್ಟ್ ಆಗುತ್ತಿದ್ದಂತೆಟ್ಯಾಂಕಿನ ಮೇಲಿದ್ದ ಸಾಮಗ್ರಿ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.
ಉನ್ನತಾಧಿಕಾರಿಗಳೊಂದಿಗೆ ಡಿವೈಎಸ್‌ಪಿ ಲಕ್ಷ್ಮೇಗೌಡ, ಸರ್ಕಲ್ ಇನ್ಸ್‌ಪೆಕ್ಟರ್ ಅಶೋಕ್, ತಹಶೀಲ್ದಾರ್ ಶ್ರೀನಿವಾಸ್ ಮತ್ತಿತರರಿದ್ದರು.
ತನಿಖೆ ನಡೆಯುತ್ತಿದೆ :
ಈಗಾಗಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಒಂದೆರಡು ದಿನಗಳಲ್ಲಿ ವರದಿ ಬರಲಿದೆ. ವರದಿ ಬಂದ ನಂತರ ನಾನೇ ಖುದ್ದಾಗಿ ಮತ್ತೂಮ್ಮೆ ತಿಳಿಸುವುದಾಗಿ ಹೇಳಿದರು. ಅಲ್ಲದೇ, ತಮಗೆ ಬಂದ ಮಾಹಿತಿ ಪ್ರಕಾರ ಕಲ್ಲು ಗಣಿಗಾರಿಕೆಗೆ ಬೇಕಾದ ಸಾಮಗ್ರಿಗಳು ತಮಿಳುನಾಡಿನಿಂದ ಬಂದಿದೆ. ಬಂದ ಸಾಮಗ್ರಿಗಳನ್ನು ಕೆಳಗಿಳಿಸುವಾಗ ಈಅವಘಡ ನಡೆದಿದೆ ಎಂಬ ಮಾಹಿತಿ ಇದೆ. ಘಟನೆ ನಡೆ ಯಲು ಕಾರಣವೇನೆಂದು ತನಿಖೆಯಿಂದ ಮಾತ್ರ ಹೊರ ಬೀಳಲಿದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ಒಂದು ಮೂಲದ ಪ್ರಕಾರ ಕಲ್ಲುಗಣಿಗಾರಿಕೆ ಸಾಮಗ್ರಿ ಹೊತ್ತುತಂದಿರುವ ವಾಹನದಿಂದ ಗೋದಾಮಿಗೆಸಾಗಿಸುವ ವೇಳೆ ಈ ಅವಘಡ ನಡೆದಿದೆ. ಪ್ರಸ್ತುತ ದುರ್ಗಾ ಎಂಟರ್‌ಪ್ರೈಸಸ್‌ನಮಾಲೀಕ ನಾಗೇಶ್ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆದಿದೆ. – ಶ್ರೀನಿವಾಸಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.