ಅಧಿಕಾರದಿಂದ ಬಿಎಸ್‌ವೈ ಇಳಿಸಿದ್ದೇ ಆರ್‌ಎಸ್ಸೆಸ್ : ಎಚ್‌ಡಿಕೆ
Team Udayavani, Oct 10, 2021, 3:45 PM IST
ಹಾಸನ/ಸಕಲೇಶಪುರ: ಆರ್‌ಎಸ್ಸೆಸ್ ಬಗ್ಗೆ ನಾನು ಆಡಿರುವ ಮಾತುಗಳಿಗೆ ಬದ್ಧನಿದ್ದೇನೆ. ಮಾತನಾಡುವುದು ಇನ್ನೂ ಬಹಳಷ್ಟಿದೆ, ಹಿಟ್ ಅಂಡ್ ರನ್ ಪಾಲಿಸಿ ನನ್ನದಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ ದರು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲೂ ಆರ್‌ಎಸ್ಸೆಸ್ ಕಾರಣ.
ತುವಕೂರು ಗ್ರಾಮಾಂತದ ಮಾಜಿ ಶಾಸಕ ಸುರೇಶ್ ಗೌಡ ಅವರೇ ಆರ್‌ಎಸ್ಸೆಸ್ ಬಗ್ಗೆ ನನಗಿಂತ ಹೆಚ್ಚು ಮಾತನಾಡಿದ್ದಾರೆ. ನಾನು ಮುಂದಿನ ದಿನಗಳಲ್ಲಿ ಮತ್ತಷ್ಟು ವಿವರವಾಗಿ ಆರ್‌ಎಸ್ಸೆಸ್ ಬಗ್ಗೆ ಹೇಳುವೆ ಎಂದರು. 2 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಿಂಧಗಿಯಲ್ಲಿ ಕಾಂಗ್ರೆಸ್ 3ನೇ ಸ್ಥಾನದಲ್ಲಿದೆ. ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಇರಲಿಲ್ಲ. ಹಾಗಾಗಿ ನಮ್ಮ ಪಕ್ಷದಲ್ಲಿದ್ದವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಸ್ಪರ್ಧೆಗಿಳಿಸಿದ್ದಾರೆ. ಮಾಜಿ ಸಚಿವ ಮನಗೂಳಿ ಅವರು ದೇವೇಗೌಡರಸಹೋದರನಂತಿದ್ದರು. ಅವರು ಸಿಂಧಗಿ ಕ್ಷೇತ್ರದಲ್ಲಿ ದೇವೇಗೌಡ ಪುತ್ಥಳಿ ಸ್ಥಾಪನೆ ಮಾಡಿದ್ದಾರೆ. ಅಂತಹ ಪಕ್ಷ ಬದ್ಧತೆಯ ಮನಗೂಳಿ ಅವರು ಮಗನನ್ನು ಕಾಂಗ್ರೆಸ್ ಮಡಿಲಿಗೆ ಹಾಕಿ ಹೋಗಿದ್ದರಂತೆ.
ಇದನ್ನೂ ಓದಿ:- ಅಮೃತಾಂಜನ್ ರಾಯಭಾರಿಗಳಾಗಿ ಒಲಿಂಪಿಕ್ ಪದಕ ವಿಜೇತ ಮೀರಾಬಾಯಿ ಚಾನು ಮತ್ತು ಪುನಿಯಾ
ಮನಗೂಳಿ ಯಾವಾಗ ಡಿ.ಕೆ.ಶಿವಕುಮಾರ್ ಮನೆಗೆ ಹೋಗಿದ್ದರು? ಇಷ್ಟೋಂದು ಹಸಿ ಸುಳ್ಳು ಹೇಳಿಕೊಂಡು ಕೀಳು ಮಟ್ಟದ ರಾಜಕಾರಣ ಮಾಡುವುದು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು.
ಎಚ್‌ಡಿ.ಕುಮಾರಸ್ವಾಮಿಗೆ ಕೇಸರಿ ಧ್ವಜ ಪ್ರದರ್ಶನ- ಆರ್‌ಎಸ್ಸೆಸ್ ವಿರುದ್ಧವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡುತ್ತಿರುವ ಬೆನ್ನಲ್ಲೇ ಸಕಲೇಶಪುರದಲ್ಲಿ ಆರ್‌ಎಸ್ಸೆಸ್‌ನ ಕೆಲ ಕಾರ್ಯಕರ್ತರು ಕುಮಾರಸ್ವಾಮಿ ಅವರ ಎದುರು ಕೇಸರಿ ಧ್ವಜ ಹಿಡಿದು ನಾನು ಆರ್‌ಎಸ್ಸೆಸ್ ಎಂದು ಕೂಗಿದ ಪ್ರಸಂಗ ನಡೆಯಿತು.
ಸಕಲೇಶಪುರ ಪ್ರವಾಸಿ ಮಂದಿದರಿಂದ ಮುಖ್ಯ ರಸ್ತೆಗೆ ಬರುತ್ತಿದ್ದಾಗ ಮೂರ್‍ನಾಲ್ಕು ಆರ್‌ಎಸ್ಸೆಸ್ ಕಾರ್ಯಕರ್ತರು ಎಚ್‌ಡಿಕೆ ಕಾರಿಗೆ ಅಡ್ಡಬಂದು ಧ್ವಜ ಪ್ರದರ್ಶಿಸಿದರು. ಪೊಲೀಸರು ಆರ್‌ಎಸ್ಸೆಸ್ ಕಾರ್ಯಕರ್ತರನ್ನು ದೂರ ತಳ್ಳಿ ಎಚ್‌ಡಿಕೆ ಯವರು ಮುಂದೆ ಸಾಗಲು ಅನುವು ಮಾಡಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.