ಅತಿವೃಷ್ಟಿ: ಜಿಲ್ಲೆಯಲ್ಲಿ 620 ಕೋಟಿ ರೂ. ನಷ್ಟ
Team Udayavani, Aug 21, 2019, 3:46 PM IST
ಹಾಸನ ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹದಿಂದಾಗಿರುವ ಹಾನಿಯ ವಿವರವನ್ನು ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ಸುದ್ದಿಗೋಷ್ಠಿಯಲ್ಲಿ ನೀಡಿದರು.
ಹಾಸನ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿರುವ ಹಾನಿಯ ಶೇ.80ರಷ್ಟು ಅಂದಾಜು ಪ್ರಕ್ರಿಯೆ ಮುಗಿದಿದ್ದು, ಈ ವರೆಗೆ 620 ಕೋಟಿ ರೂ. ಹಾನಿಯ ಅಂದಾಜು ಮಾಡಲಾಗಿದೆ. ಪರಿಹಾರ ಕಾರ್ಯಗಳಿಗೆ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ 8 ತಾಲೂಕುಗಳ ಪೈಕಿ 6 ತಾಲೂಕುಗಳನ್ನು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಣೆ ಮಾಡಿದ್ದು, ಎನ್‌ಡಿಆರ್‌ಎಫ್ ನಿಯಮಗಳನ್ವಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿರುವ ಹಾನಿಯ ಅಂದಾಜನ್ನು ಇಲಾಖಾವಾರು ಸಿದ್ಧಪಡಿಸಿದ್ದು, ಬೆಳೆ ಹಾನಿಯನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಆಸ್ತಿ, ಪಾಸ್ತಿಯ ಹಾನಿಯ ಅಂದಾಜು ಮಾಡ ಲಾಗಿದ್ದು, ಶೇ.80ರಷ್ಟು ಹಾನಿಯ ಅಂದಾಜು ಮುಗಿದಿದೆ. ಇನ್ನು 8 ರಿಂದ 10 ದಿನಗಳಲ್ಲಿ ಬೆಳೆ ಹಾನಿಯೂ ಸೇರಿದಂತೆ ಸಂಪೂರ್ಣ ಹಾನಿಯ ಅಂದಾಜು ಮಾಡಲಾಗುವುದು ಎಂದು ಹೇಳಿದರು.
ಅತಿವೃಷ್ಟಿಯಿಂದ ನಾಲ್ವರ ಸಾವು: ಜಿಲ್ಲೆಯಲ್ಲಿ ಈ ವರಗೆ ನಾಲ್ಕು ಜೀವಹಾನಿಯಾಗಿದ್ದು, ಗಾಯಗೊಂಡ ಎರಡು ಪ್ರಕರಣಗಳು ಸೇರಿ 16.26 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಅತಿವೃಷ್ಟಿ ಮತ್ತು ಪ್ರವಾಹದಿಂದ ಬಾಧಿತ 1,738 ಕುಟುಂಬಗಳನ್ನು ಗುರ್ತಿಸಿದ್ದು, ಈ ಕುಟುಂಬಗಳಲ್ಲಿ ಒಟ್ಟು 66 ಲಕ್ಷ ರೂ. ಹಾನಿಯ ಅಂದಾಜು ಮಾಡಲಾಗಿದೆ. ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ 734 ಸಂತ್ರಸ್ತರನ್ನು ರಕ್ಷಿಸಲಾಗಿದೆ. 6 ಜಾನುವಾರುಗಳು ಸಾವನ್ನಪ್ಪಿವೆ ಎಂದು ವಿವರ ನೀಡಿದರು.
ಅತಿವೃಷ್ಟಿ ಹಾಗೂ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರಿಗೆ 12 ಪರಿಹಾರ ಕೇಂದ್ರ ಗಳನ್ನು ತೆರೆದು 9 ದಿನಗಳ ಕಾಲ ಅಶ್ರಯ ನೀಡ ಲಾಗಿತ್ತು. ಪರಿಹಾರ ಕೇಂದ್ರಗಳಲ್ಲಿ ಆಹಾರ ಮತ್ತಿತರ ಸೌಲಭ್ಯಗಳಿಗೆ 8.50 ಲಕ್ಷ ರೂ. ವೆಚ್ಚವಾಗಿದೆ ಪ್ರವಾಹ ಸಂತ್ರಸ್ತರಿಗೆ ಆರೋಗ್ಯ ಇಲಾಖೆಯಿಂದ 5 ಸಾವಿರ ಸಿಎಫ್ಟಿಆರ್‌ಐನಿಂದ 3 ಸಾವಿರ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
12,095 ಹೆಕ್ಟೇರ್‌ನಲ್ಲಿ ಬೆಳೆ ಹಾನಿ: ಅತಿವೃಷ್ಟಿಯಿಂದ ಒಟ್ಟು 1,395 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹೂಳು ತುಂಬಿದ್ದು, 350 ಹೆಕ್ಟೇರ್‌ಗಳಷ್ಟು ಕೃಷಿ ಜಮೀನಿನಲ್ಲಿ ಭೂಕುಸಿತ ಉಂಟಾಗಿದೆ. ಪರಿಹಾರ ಕಾರ್ಯಗಳಿಗೆ ಒಟ್ಟು 3 ಕೋಟಿ ರೂ. ಹಾನಿಯ ಅಂದಾಜು ಮಾಡಿದ್ದು, ಅತಿವೃಷ್ಟಿಯ ಸಂದರ್ಭದಲ್ಲಿ 2 ಹೆಕ್ಟೇರ್‌ಗಿಂತ ಕಡಿಮೆ ಜಮೀನಿಗೆ ಸಂಬಂಧಿಸಿದಂತೆ ಒಟ್ಟು 6,105 ಹೆಕ್ಟೇರ್ ಕೃಷಿ ಭೂಮಿ, 2,655 ಹೆಕ್ಟೇರ್ ತೋಟಗಾರಿಕಾ ಜಮೀನು, 3,712 ಹೆಕ್ಟೇರ್ ಪ್ಲಾಂಟೇಷನ್ ಜಮೀನು, 5,922 ಹೆಕ್ಟೇರ್ ದೀರ್ಘಕಾಲಿಕ ಜಮೀನು ಹಾಗೂ 6.60 ಹೆಕ್ಟೇರ್ ರೇಷ್ಮೆ ಬೆಳೆಗೆ ಹಾನಿಯುಂಟಾಗಿದ್ದು, ಒಟ್ಟು 184.ಕೋಟಿ ರೂ. ಹಾನಿಯಾಗಿರುವ ಅಂದಾಜು ಮಾಡಲಾಗಿದೆ. ನ್ನು ಅಂದಾಜಿಸಲಾಗಿದೆ.
ಪ್ರವಾಹ ಸಂದರ್ಭದಲ್ಲಿ 2 ಹೆಕ್ಟೇರ್‌ಗಿಂತ ಹೆಚ್ಚಿರುವ ಒಟ್ಟು 320 ಹೆಕ್ಟೇರ್ ಕೃಷಿ ಭೂಮಿ, 44 ಹೆಕ್ಟೇರ್ ತೋಟಗಾರಿಕಾ ಭೂಮಿ, 8045 ಹೆಕ್ಟೇರ್ ಪ್ಲಾಂಟೇಷನ್ ಜಮೀನು ಹಾಗೂ 8,985 ಹೆಕ್ಟೇರ್ ದೀರ್ಘಕಾಲಿಕ ಬೆಳೆಗಳ ಹಾನಿಯಾಗಿದ್ದು ಒಟ್ಟು 173.94 ಕೋಟಿ ರೂ. ಹಾನಿಯ ಅಂದಾಜು ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ ವಿವಿಧ ರೀತಿ ತೋಟಗಾರಿಕಾ ಹಾಗೂ ಕೃಷಿ ಬೆಳೆಗಳು ಒಟ್ಟು 12094.8 ಹೆಕ್ಟೇರ್ ಪ್ರದೇಶಗಳಲ್ಲಿ ಹಾನಿಯಾಗಿದೆ ಎಂದು ಹೇಳಿದರು.
201 ಮನೆ ಸಂಪೂರ್ಣ ನಾಶ: ಜಿಲ್ಲೆಯ ನದಿ ಪಾತ್ರದಲ್ಲಿ ಪ್ರವಾಹದಿಂದ ಮೀನುಗಾರರ ಒಟ್ಟು 5 ದೋಣಿಗಳು ಹಾಗೂ 7 ಬಲೆಗಳ ಹಾನಿಯಾಗಿದ್ದು, 69 ಸಾವಿರ ರೂ. ಹಾನಿಯನ್ನು ಅಂದಾಜಿಸಲಾಗಿದೆ. ಪ್ರವಾಹಕ್ಕೆ ಒಳಗಾದ 6 ತಾಲೂಕುಗಳಲ್ಲಿ 201 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, 793 ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಹಾಗೂ 744 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಸಂಬಂಧ ಒಟ್ಟು ರೂ. 3.89 ಕೋಟಿ ರೂ. ಹಾನಿಯ ಅಂದಾಜು ಮಾಡಲಾಗಿದೆ ಎಂದರು.
856 ಶಾಲಾ ಕಟ್ಟಡಗಳಿಗೆ ಹಾನಿ: ಪ್ರವಾಹ ಹಾಗೂ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಒಟ್ಟು 856 ಪ್ರಾಥಮಿಕ ಶಾಲೆಗಳು, 133 ಸಮುದಾಯ ಭವನಗಳು, 50 ಆರೋಗ್ಯ ಕೇಂದ್ರಗಳು ಹಾಗೂ 260 ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದ್ದು, ಒಟ್ಟು 33.98 ಕೋಟಿ ರೂ. ನಷ್ಟದ ಅಂದಾಜು ಮಾಡಲಾಗಿದೆ.
500 ಕಿ.ಮೀ. ರಸ್ತೆಗೆ ಹಾನಿ: ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಒಟ್ಟು 267 ಕಿ.ಮೀ. ಗಳ ರಾಜ್ಯ ಹೆದ್ದಾರಿ, 233 ಕಿ.ಮಿ ೕ.ಗಳ ಮುಖ್ಯ ಜಿಲ್ಲಾ ರಸ್ತೆಗಳು ಮತ್ತು 12 ಸೇತುವೆಗಳು ಹಾನಿಯಾಗಿದ್ದು, ಒಟ್ಟು 224.89 ಕೋಟಿ ರೂ. ಹಾನಿಯ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು.
•ಜಿಲ್ಲೆಯ 6 ತಾಲೂಕುಗಳನ್ನು ಅತಿವೃಷ್ಟಿ, ಪ್ರವಾಹ ಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಣೆ
•ಪ್ರವಾಹಕ್ಕೆ ಒಳಗಾದ 6 ತಾಲೂಕುಗಳಲ್ಲಿ 201 ಮನೆಗಳು ಸಂಪೂರ್ಣವಾಗಿ ನಾಶ
•ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿರುವ ಹಾನಿಯ ಶೇ.80ರಷ್ಟು ಅಂದಾಜು ಪ್ರಕ್ರಿಯೆ ಪೂರ್ಣ
•ಎನ್‌ಡಿಆರ್‌ಎಫ್ ನಿಯಮಗಳನ್ವಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.