ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷರ-ಮುಖ್ಯಾಧಿಕಾರಿ ವಾಗ್ವಾದ
Team Udayavani, Aug 14, 2022, 4:30 PM IST
ಹೊಳೆನರಸೀಪುರ: ಪುರಸಭೆ ಅಧ್ಯಕ್ಷರ ಗಮನಕ್ಕೆ ಬಾರದೇ ಅಜೆಂಡಾ ನಕಲನ್ನು ಪುರಸಭೆ ಮುಖ್ಯಾಧಿ ಕಾರಿ ಅವರು ತಯಾರಿಸಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಸುಧಾನಳಿನಿ ತೀವ್ರ ಆಕ್ಷೇಪ ಪಡಿಸಿದ ಪ್ರಸಂಗ ಪಟ್ಟಣದ ಹೇಮಾವತಿ ನಿರೀಕ್ಷಣ ಮಂದಿರದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಪುರಸಭೆ ಕಚೇರಿಯಲ್ಲಿ ಅಧ್ಯಕ್ಷರ ಗಮನಕ್ಕೆ ಬಾರದೇ ಎಲ್ಲಾ ಕಾರ್ಯಚಟುವಟಿಕೆ ಗಳು ನಡೆಯು ತ್ತಿದೆ. ಅಧ್ಯಕ್ಷರ ಟೇಬಲ್‌ಗೆ ಸಹಿ ಹಾಕುವ ಕಡತಗಳನ್ನು ಹೇಳದೆ ಕೇಳದೆ ತೆಗೆದುಕೊಂಡು ಹೋಗುತ್ತಾರೆ. ಕಡತ ಗಳು ಮಾಯವಾಗುತ್ತವೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಡಿ. ಶಾಂತಲಾ ಅವರ ಮೇಲೆ ಪುರಸಭೆ ಅಧ್ಯಕ್ಷೆ ಸುಧಾನಳಿನಿ ಅವರು ಹರಿಹಾಯ್ದರು. ಮುಖ್ಯಾಧಿಕಾರಿಗಳು ಯಾವುದನ್ನು ನನ್ನ ಗಮನಕ್ಕೆ ತರದೇ ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇವರ ವರ್ತನೆ ಖಂಡನೀಯ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಇದಕ್ಕೆ ದ್ವನಿಗೂಡಿಸಿದ 11 ನೇ ವಾರ್ಡಿನ ಸದಸ್ಯ ಕೆ.ಆರ್. ಸುಬ್ರಮಣ್ಯ ರವರು ಜನರ ಹಿತಾ ಕಾಯುವ ಅಧ್ಯಕ್ಷರ ಲೋಪ ದೋಷದಿಂದ ಅಧಿಕಾರಿಗಳು ಹಿಡಿತದಲ್ಲಿಲ್ಲ. ಅಧ್ಯ ಕ್ಷರ ಸಹಿ ಇಲ್ಲದೆ ಕಡತಗಳು, ಅಜೆಂಡಾ ತಯಾರಾಗು ತ್ತಿರುವುದು ಹೇಗೆ ಸಾಧ್ಯ ಎಂದು ಗಂಭೀರವಾಗಿ ಆರೋಪ ಮಾಡಿದರು.
ಜಿಲ್ಲಾಧಿಕಾರಿಗಳ ಆದೇಶ ಮತ್ತು ಸೂಚನೆಗಳು ಪಾಲನೆ ಆಗುತ್ತಿಲ್ಲ. ನಾಮನಿರ್ದೇಶಿತ ಬಿಜೆಪಿ ಸದಸ್ಯ ಪ್ರಸನ್ನ ಅವರು ಮಾತನಾಡಿ ಸಭೆಯಲ್ಲಿ ನಡೆಯುವ ನಡಾವಳಿಕೆ ಯನ್ನು ನಡಾವಳಿ ಪುಸ್ತಕದಲ್ಲಿ ನಮೂದಿಸುವುದೇ ಇಲ್ಲ. ತಮಗೆ ಇಷ್ಟ ಬಂದಂತೆ ನಡಾವಳಿಗಳನ್ನು ಎಲ್ಲೋ ಕುಳಿತು ದಾಖಲಿಸುವುದು ನಡೆಯುತ್ತಿದೆ ಎಂದು ದೂರಿದರು. ಪುರಸಭೆಯಲ್ಲಿ ಬಯೋ ಮೆಟ್ರಿಕ್ ಅಳವಡಿಸುವಂತೆ ಹಲವಾರು ಬಾರಿ ಗಮ ನಕ್ಕೆ ತಂದರು ಕಾರ್ಯಗತ ಗೊಳಿಸಿಲ್ಲ. ಪಟ್ಟಣದ ಯುಜಿಡಿ ಕೊಳಚೆ ನೀರು ಹೇಮೆ ನದಿಗೆ ಹರಿಯು ತ್ತಿದೆ. ಇದನ್ನು ತಡೆಗಟ್ಟಲು ಕ್ರಮವಹಿಸಿಲ್ಲ ಎಂದು ಮುಖ್ಯಾಧಿಕಾರಿ ವಿ.ಡಿ.ಶಾಂತಲಾ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.
ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ತುರ್ತು ದುರಸ್ತಿಗೆ ಸ್ವತ್ಛತಾ ಯಂತ್ರ ಕಳಿಸುವಂತೆ ಮಾಹಿತಿ ನೀಡಿದರೆ, ಬಂದ ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಟ್ಟು ಮರಳುತ್ತಿದ್ದಾರೆ ಎಂದು ಪುರಸಭೆ ಸದಸ್ಯರು ಅಪಾದನೆ ಮಾಡಿದರು. ಈ ರೀತಿ ಹಣಕ್ಕಾಗಿ ಬೇಡಿಕೆಯಿಡುವುದು ಕಾನೂನು ಬಾಹಿರ. ಈ ಬಗ್ಗೆ ದೂರು ಬಂದರೆ ಶಿಸ್ತು ಕ್ರಮ ಕೈಗೊಳ್ಳುವೆ ಎಂದು ಅಧ್ಯಕ್ಷರು ಎಚ್ಚರಿಕೆ ನೀಡಿದರು.
ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ಸಮಸ್ಯೆಗಳು ಬಗೆಹರಿಯು ತ್ತಿಲ್ಲ. ಸಾರ್ವಜನಿಕರಿಗೆ ಉತ್ತರ ಕೊಡದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು 17 ನೇ ವಾರ್ಡಿನ ಪುರಸಭೆ ಸದಸ್ಯ ನಿಂಗಯ್ಯ ಬೇಸರ ಹೊರಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.