ರಾಜಗೆರೆ ಗ್ರಾಮದಲ್ಲಿ ಭಯಾನಕ ರೋಗ ಹರಡಿಲ
Team Udayavani, Nov 15, 2018, 1:31 PM IST
ಹಳೇಬೀಡು: ರಾಜಗೆರೆ ಪರಿಶಿಷ್ಟ ಜನಾಂಗದ ಕಾಲೋನಿಯಲ್ಲಿ ಯಾವುದೇ ಅಪಾಯಕಾರಿ ರೋಗ ಹರಡಿಲ್ಲ. ತಪ್ಪು ಮಾಹಿತಿಗೆ ಕಿವಿಕೊಟ್ಟು ಜನರು ಗಾಬರಿಯಾಗಬಾರದು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ಸತೀಶ್ ಹೇಳಿದರು.
ರಾಜಗೆರೆಯಲ್ಲಿ 50 ಮಂದಿಗೆ ಪಾರ್ಶ್ವವಾಯು ರೋಗ ತಗುಲಿದೆ ಎಂದು ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಇಲಾಖೆಯ ವಿವಿಧ ಅಧಿಕಾರಿ ಗಳೊಂದಿಗೆ ಬುಧವಾರ ಸಂಜೆ ರಾಜಗೆರೆ ಪರಿಶಿಷ್ಟ ಜನಾಂಗದ ಕಾಲೋನಿಗೆ ಭೇಟಿ ನೀಡಿ ಗ್ರಾಮಸ್ಥರ ಸಭೆ ನಡೆಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಒಂದು ವರ್ಷದಿಂದ ಈಚೆಗೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅವರ ಪೈಕಿ ರಂಗಯ್ಯ(70) ಪಾರ್ಶ್ವವಾಯುವಿನಿಂದ ಮೃತ ಪಟ್ಟಿದ್ದಾರೆ. ಕಾಳಮ್ಮ(105)ಅವರಿಗೆ ಸಹಜವಾಗಿ ಸಾವನ್ನಪ್ಪಿದ್ದಾರೆ. ಭೈರೇಶ ಕಡ್ನಿ ವೈಫಲ್ಯದಿಂದ ಮೃತಪಟ್ಟರೆ, ರಂಗಯ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ದೇವರಾಜು ಹಾಗೂ ಸಗನಮ್ಮ ಮಾತ್ರ ಪಾರ್ಶ್ವವಾಯುವಿ
ನಿಂದ ನರಳುತ್ತಿದ್ದಾರೆ. ಹಲವು ಕಾರಣದಿಂದ ಗ್ರಾಮದಲ್ಲಿ ವರ್ಷಕ್ಕೆ ನಾಲ್ಕೈದು ಮಂದಿ ಮರಣ ಹೊಂದಿದ್ದಾರೆ. ತಪ್ಪುಕಲ್ಪನೆ ಮಾಡಿಕೊಂಡು ಭಯದ ವಾತಾ ವರಣದಲ್ಲಿ ಜನ ಬದುಕುವುದು ಬೇಡ. ಅಸಾಂಕ್ರಾಮಿಕ ರೋಗಗಳ ಘಟಕದಿಂದ ಗ್ರಾಮದಲ್ಲಿ ತಪಾಸಣೆ ಮಾಡಿಸಲಾಗಿದೆ ಎಂದು ಸತೀಶ್ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಸಿ.ಯೋಗೀಶ್ ಮಾತನಾಡಿ, ಗ್ರಾಮದ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರಿಗೆ ಪಾರ್ಶ್ವವಾಯು ಬರುತ್ತಿದೆ ಎಂದು ಕೆಲವರು ಆರೋಪಿಸಿದರು. ಗ್ರಾಮದ ಕುಡಿ ಯುವ ನೀರಿನಲ್ಲಿ 0.3 ಪ್ರಮಾಣ ಮಾತ್ರ ಫ್ಲೊರೈಡ್ ಇದೆ ಎಂದು ಪರೀಕ್ಷೆ ಯಿಂದ ಸಾಬೀತಾಗಿದೆ.
1ಕ್ಕಿಂತ ಹೆಚ್ಚು ಪ್ರಮಾಣ ಫ್ಲೋರೈಡ್ ಇದ್ದರೆ ಮಾತ್ರ ನೀರು ಬಳಸಲು ಯೋಗ್ಯವಾಗಿರುವುದಿಲ್ಲ. ಆದರೂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭ ವಾಗುತ್ತಿದೆ. ಗಾಬರಿ ಬಿದ್ದು, ಜನರಿಂದಲೇ ಜನರಿಗೆ ಗಾಬರಿ ಹುಟ್ಟಿಸಿ ಗ್ರಾಮದ
ನೆಮ್ಮದಿಗೆ ಭಂಗತರಬಾರದು ಎಂದು ಹೇಳಿದರು.
ಗ್ರಾಪಂ ಸದಸ್ಯ ನಾಗೇಶ್, ಎನ್‌ಸಿಡಿ ಘಟಕದ ಅಧಿಕಾರಿ ಡಾ.ಹಿರಣ್ಣಯ್ಯ, ವೈದ್ಯಾಧಿಕಾರಿ ಡಾ. ಗಗನ್, ಅಂಗನವಾಡಿ, ಆಶಾ ಕಾರ್ಯಕರ್ತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.