ಬಿಸಿಲಿನ ತಾಪಕ್ಕೆ ಬಸವಳಿದ ಮಲೆನಾಡಿಗರು

ಮಲೆನಾಡಲ್ಲಿ ಹಿಂದೆಂದೂ ಕಾಣದ ಬಿಸಿಲು

Team Udayavani, Mar 29, 2021, 3:12 PM IST

Untitled-1

ಸಕಲೇಶಪುರ: ಹಿಂದೆಂದೂ ಕಾಣದ ಬಿಸಿಲುಮಲೆನಾಡಿನಲ್ಲಿ ಕಾಣಿಸಿಕೊಂಡಿದ್ದು ಮಲೆನಾಡಿಗರುಮನೆಯಿಂದ ಹೊರಬರಲು ಅಂಜಬೇಕಾದ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ.

ಮಳೆ ಮತ್ತು ಚಳಿಗಾಲಕ್ಕೆ ಹೆಸರುವಾಗಿರುವಸಕಲೇಶಪುರದಲ್ಲಿ ಇದೀಗ ಬಿಸಿಲಿನ ಆರ್ಭಟ ಮಿತಿಮೀರಿದ್ದು ಬಯಲು ಸೀಮೆಯ ಪ್ರದೇಶಗಳ ಬಿಸಿಲನ್ನು ನಾಚಿಸುವಂತೆ ತಾಲೂಕಿನಲ್ಲಿ ಬಿಸಿಲುಏರುತ್ತಿದೆ. ಬಡವರ ಊಟಿಯೆಂದೆ ಖ್ಯಾತವಾಗಿರುವಸಕಲೇಶಪುರದ ವಾತಾವರಣ, ಗುಡ್ಡಗಾಡುಗಳಿಗೆಮನ ಸೋತು ಬ್ರಿಟಿಷರು, ಟಿಪ್ಪು, ಐಗೂರುಪಾಳೇಗಾರರು ಸೇರಿದಂತೆ ಇನ್ನು ಹಲವಾರು ರಾಜಮಹಾರಾಜರು ಪಾಳೇಗಾರರು ತಾಲೂಕಿಗೆ ಹೊರ ಊರುಗಳಿಂದ ಬಂದು ಹೋಗುತ್ತಿದ್ದರು.

ಕಳೆದ ಕೆಲವು ವರ್ಷಗಳಿಂದ ಸರ್ಕಾರದ ಉನ್ನತಅಧಿಕಾರಿಗಳು, ಅಧಿಕಾರಿಗಳು ಹಾಗೂ ರಾಜಕಾರಣಿಗಳು, ಉದ್ಯಮಿಗಳು ಇಲ್ಲಿನ ತಂಪು ವಾತಾವರಣವನ್ನುಇಷ್ಟ ಪಟ್ಟು ತಾಲೂಕಿನ ಹಲವಡೆ ಕಾಫಿ ತೋಟ,ಖಾಲಿ ಜಮೀನುಗಳನ್ನು ತೆಗೆದುಕೊಂಡು ಮನೆಯೊಂದನ್ನು ನಿರ್ಮಾಣ ಮಾಡಿ ಬೇಸಿಗೆ ಕಾಲದಲ್ಲೆಹೆಚ್ಚಾಗಿ ಇಲ್ಲಿಗೆ ಬಂದು ಇರಲು ಇಷ್ಟಪಡುತ್ತಿದ್ದರು.ಮಲೆನಾಡಿನ ವಾತಾವರಣ ಹೇಗಿತ್ತೆಂದರೆ ದೇಶಹಾಗೂ ರಾಜ್ಯದ ಎಲ್ಲೆಡೆ ಬೇಸಿಗೆ ಕಾಲದಲ್ಲಿ ಜನಆತಂಕಕ್ಕೆ ಈಡಾದರೆ ತಾಲೂಕಿನ ಜನ ಮಾತ್ರ ನೆಮ್ಮದಿಯಾಗಿ ಇರುತ್ತಿದ್ದರು.

ಮಲೆನಾಡಿನಲ್ಲಿ ಬದಲಾದ ವಾತಾವರಣ: ಆದರೆ ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ವಾತಾವರಣ ಸಂಪೂರ್ಣವಾಗಿ ಬದಲಾಗುತ್ತಿದೆ. ಬೇಸಿಗೆ ಕಾಲದಲ್ಲಿಮಿತಿ ಮೀರಿದ ಬಿಸಿಲಿನ ವಾತಾವರಣ ಉಂಟಾಗುತ್ತಿದೆ. ಕಳೆದ 5 ವರ್ಷಗಳ ಹಿಂದೆ ಬೇಸಿಗೆಯಲ್ಲಿಅಧಿಕವೆಂದರೆ 30 ಡಿಗ್ರಿ ಉಷ್ಣಾಂಶ ದಾಖ ಲಾಗುತ್ತಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ಉಷ್ಣಾಂಶ 33ಡಿಗ್ರಿಯಿಂದ 35 ಡಿಗ್ರಿವರೆಗೆ ದಾಖಲಾಗು ತ್ತಿರುವುದು ಮಲೆನಾಡಿ ಗರನ್ನು ಆತಂಕಕ್ಕೀಡು ಮಾಡಿದೆ.ಕೇವಲ ಉಷ್ಣಾಂಶ ಏರಿಕೆ ಮಾತ್ರವಲ್ಲ ಆರ್ದ್ರತೆ (ಹ್ಯೂಮಿಡಿಟಿ) ಸಹ ಏರುತ್ತಿದ್ದು ಇದರಿಂದ ಹೆಚ್ಚಿನ ಸೆಖೆಯುಂಟಾಗಿ ಜನ ಪರದಾಡಬೇಕಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಹ ಹ್ಯೂಮಿಡಿಟಿ ಪ್ರಮಾಣಕಡಿಮೆ ಯಿದ್ದು ಮಲೆನಾಡಿನಲ್ಲಿ ಹ್ಯೂಮಿಡಿಟಿ ಹೆಚ್ಚಾಗುತ್ತಿರುವುದು ಜನರನ್ನು ಬೇಸ್ತು ಬೀಳಿಸುತ್ತಿದೆ.

 ಕೃಷಿಕರಿಗೆ ಆತಂಕ: ಈಗಾಗಲೆ ಕಾಫಿ ಕೊಯ್ಲು ಬಹುತೇಕವಾಗಿ ಮುಗಿದಿದ್ದು, ಇತರೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಕೃಷಿಕರೇ ಆತಂಕಎದುರಿಸುತ್ತಿದ್ದಾರೆ. ಈಗಾಗಲೆ ತಾಲೂಕಿನಲ್ಲೆ ಸುರಿದಅಕಾಲಿಕ ಮಳೆಯಿಂದ ಕೃಷಿಕರು ತತ್ತರಿಸಿದ್ದು ಇದೀಗಬಿಸಿಲಿನಿಂದ ತತ್ತರಿಸಬೇಕಾಗಿದೆ. ಕಳೆದ ಫೆಬ್ರವರಿ 3ನೇವಾರದಲ್ಲಿ ಸುರಿದ ಮಳೆಯಿಂದಾಗಿ ಕಾಫಿ ಹಾಗೂಮೆಣಸು ಬೆಳೆಗಾರರಿಗೆ ಅನುಕೂಲವಾಗಿದ್ದುಇದರಿಂದಾಗಿ ಕೆಲವರಿಗೆ ಕೃತಕವಾಗಿ ನೀರು ಸಿಂಪಡಿಸುವ ಕೆಲಸ ತಪ್ಪಿತ್ತು. ಮತ್ತೂಂದು ಸುತ್ತು ಕಾಫಿಗಿಡಗಳಿಗೆ ನೀರು ಕೊಡಬೇಕಾದ ಅವಶ್ಯಕತೆಯಿದ್ದು ಈಗಾಗಲೆ ಕೆಲವರು ಕೃತಕವಾಗಿ ನೀರುಸಿಂಪಡಿಸುತ್ತಿದ್ದಾರೆ. ಆದರೆ ನೀರಾವರಿ ಸೌಲಭ್ಯವಿರದ ಹಲವು ರೈತರು ಮಳೆಯನ್ನೇ ನಂಬಿಕೊಂಡಿದ್ದು ಮಳೆಬೀಳದ ಕಾರಣ ಮಿತಿ ಮೀರಿದ ಬಿಸಿಲಿಗೆಆತಂಕಗೊಂಡಿದ್ದಾರೆ.

ಕೆಲವೆಡೆ ಜಲ ಮೂಲಗಳೆ ಬತ್ತಿಹೋಗುತ್ತಿದ್ದು ಕೃಷಿಚಟುವಟಿಕೆಗಳಿರಲಿಕುಡಿಯುವ ನೀರಿಗಾಗಿ ಸಹ ಪರದಾಡಬೇಕಾದ ಪರಿಸ್ಥಿತಿ ಮಲೆನಾಡಿನಲ್ಲಿ ಅಲ್ಲಲ್ಲಿಉಂಟಾಗಿದೆ. ಜಾನುವಾರುಗಳು ಕಾಡುಪ್ರಾಣಿಗಳುಸಹ ಬಿಸಿಲಿನಿಂದ ಪರದಾಡುತ್ತಿದ್ದುಕುಡಿಯುವ ನೀರಿಗಾಗಿ ಹುಡುಕಾಟ ಮಾಡುವಪರಿಸ್ಥಿತಿ ಜಾನುವಾರುಗಳು ಹಾಗೂ ಕಾಡುಪ್ರಾಣಿಗಳಿಗೆಉಂಟಾಗಿದೆ.

ಫ್ಯಾನ್‌ ಹಾಗೂ ಗಾಳಿ ಬೀಸುವ ವಸ್ತುಗಳಿಗೆ ಮೊರೆ: ಈ ಹಿಂದೆ ಮಲೆನಾಡಿನಲ್ಲಿ ಜನಫ್ಯಾನ್‌, ಎ.ಸಿಗಳನ್ನುಅಷ್ಟಾಗಿ ಬಳಸುತ್ತಿರಲಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿ ಕುಟುಂಬಗಳು ಅನಿವಾರ್ಯವಾಗಿ ಫ್ಯಾನ್‌ ಬಳಸುತ್ತಿದ್ದು ಜೊತೆಗೆ ಏರ್‌ ಕೂಲರ್‌, ಎಸಿಗಳನ್ನುಕೆಲವು ಕುಟುಂಬಗಳುಬಳಸುತ್ತಿದೆ. ಜನ ಬಿಸಿಲಿನಿಂದರಕ್ಷಣೆ ಪಡೆಯಲು ಮರಗಳ ಅಡಿಗಳಲ್ಲಿ,ಗಾಳಿ ಬೀಸುವ ವಸ್ತುಗಳಿಗೆ ಮೊರೆ ಹೋಗುತ್ತಿದ್ದಾರೆ.ಬಿಸಿಲ ಧಗೆಯಿಂದ ತಂಪು ಪಾನೀಯಗಳ ಮಾರಾಟಭರ್ಜರಿಯಾಗಿದ್ದು ಜನ ತಂಪು ಪಾನೀಯಗಳನ್ನುಹಣ್ಣು ಹಂಪಲುಗಳನ್ನು ಹೆಚ್ಚಾಗಿ ಬಳಸಲುಆರಂಭಿಸಿದ್ದಾರೆ. ಎಳನೀರು ಹಾಗೂ ಕಲ್ಲಂಗಡಿಹಣ್ಣುಗಳ ಬಳಕೆ ಹೆಚ್ಚಾಗಿದ್ದು ಇದರಿಂದಮಾರಾಟಗಾರರು ಉತ್ತಮ ಲಾಭ ಕಾಣುತ್ತಿದ್ದಾರೆ.

ಆರೋಗ್ಯದ ಮೇಲೆ ಪರಿಣಾಮ: ಅತಿಯಾದಬಿಸಿಲಿನಿಂದ ಜನರ ಆರೋಗ್ಯದ ಮೇಲೆದುಷ್ಪರಿಣಾಮ ಬೀರುತ್ತಿದೆ. ಮಿತಿ ಮೀರಿದ ತಂಪುಪಾನೀಯ ಹಾಗೂ ನೀರಿನ ಬಳಕೆಯಿಂದ ಜನ ಶೀತ ಸಂಬಂಧಿತ ರೋಗಗಳಿಗೆ ತುತ್ತಾಗುತ್ತಿದ್ದಾರೆ.ಬಿಸಿಲಿನಲ್ಲೇ ಕಾರ್ಯ ನಿರ್ವಹಿಸಬೇಕಾದವರು ಸನ್‌ ಬರ್ನ್ ಗೆ ತುತ್ತಾಗುತ್ತಿದ್ದಾರೆ.

ಕಡಿಮೆಯಾದ ಪ್ರವಾಸಿಗರು: ಮಲೆನಾಡಿನವಾತಾವರಣ ಸವಿಯಲು ಬರುತ್ತಿದ್ದ ಪ್ರವಾಸಿಗರಸಂಖ್ಯೆ ಕಡಿಮೆಯಾಗುತ್ತಿದ್ದು ಸದಾ ಹಸಿರಿನಿಂದತುಂಬಿರುತ್ತಿದ್ದ ಗುಡ್ಡ ಬೆಟ್ಟಗಳು ಇದೀಗ ಅತಿಯಾದಬಿಸಿಲಿನಿಂದ ಸೊಬಗನ್ನು ಕಳೆದುಕೊಂಡಿದ್ದು ಇದು ಪ್ರವಾಸಿಗರಿಗೆ ಬೇಸರ ತಂದಿದೆ.

ಪರಿಸರ ನಾಶ ಮಲೆನಾಡಿನ ವಿನಾಶ :

ಮಲೆನಾಡಿನಲ್ಲಿ ರಸ್ತೆಗಳ ಹೆಸರಿನಲ್ಲಿ ಮರ ಕಡಿಯುವಿಕೆ, ಟಿಂಬರ್‌ ಮಾಫಿಯಾ, ಎತ್ತಿನಹೊಳೆಯೋಜನೆ, ಕಿರು ವಿದ್ಯುತ್‌ ಯೋಜನೆಗಳು, ರೆಸಾರ್ಟ್‌ಗಳ ನಿರ್ಮಾಣ ಒಟ್ಟಾರೆಯಾಗಿ ಅಭಿವೃದ್ಧಿಯಹೆಸರಿನಲ್ಲಿ ಕಾಡುಗಳನ್ನು ನಾಶ ಮಾಡುತ್ತ ಬಂದಿರುವುದು ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿದೆ.ಇದರ ಜೊತೆಗೆ ಜಾಗತಿಕ ತಾಪಮಾನ ಏರಿಕೆಯು ಸಹ ಮಲೆನಾಡಿನ ಬಿಸಿಲ ಧಗೆ ಏರಲು ಕಾರಣವಾಗಿದೆ. ಒಟ್ಟಾರೆಯಾಗಿ ಮಲೆನಾಡಿನ ಪರಿಸರ ನಾಶದಿಂದ ಮಲೆನಾಡಿನ ತಂಪು ವಾತಾವರಣ ಸಂಪೂರ್ಣವಾಗಿ ಮಾಯ ವಾಗುತ್ತಿದೆ. ದೂರದ ಬಳ್ಳಾರಿ, ರಾಯಚೂರು, ಹುಬ್ಬಳ್ಳಿ,ಬಾಗಲಕೋಟೆಯಲ್ಲಿ ಉಂಟಾಗುತ್ತಿದ್ದ ವಾತಾವರಣ ಮಲೆನಾಡಿನಲ್ಲಿ ಕಾಣುತ್ತಿದ್ದು ಒಟ್ಟಾರೆಯಾಗಿ ತಾಲೂಕಿನಲ್ಲಿ ಮಳೆ ಬಂದು ತಂಪು ವಾತಾವರಣ ಮೂಡಲಿ ಎಂಬುದು ಜನ ಬಯಸುತ್ತಿದ್ದಾರೆ.

ಈ ಹಿಂದೆ ಸಕಲೇಶಪುರಕ್ಕೆ ಬರುವಾಗ ಖುಷಿಯಾಗುತ್ತಿತ್ತು.ಇಲ್ಲಿನ ವಾತಾವರಣ ನೋಡಿ ಇಲ್ಲಿಕಾಫಿ ತೋಟವೊಂದನ್ನು ಖರೀದಿಸಿದ್ದೆ.ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿನ ವಾತಾವರಣ ನನಗೆ ನಿರಾಸೆ ತಂದಿದೆ. ಶಂಕರ್‌, ಉದ್ಯಮಿ ಹಾಗೂ ಕಾಫಿ ತೋಟದ ಮಾಲಿಕ

ಮಲೆನಾಡಿನಲ್ಲಿ ಪರಿಸರ ಸಂರಕ್ಷಣೆಗೆಯಾರೂ ಮುಂದಾಗದ ಕಾರಣ ಈರೀತಿಯ ಪರಿಸ್ಥಿತಿ ಉಂಟಾಗಿದೆ. ಮನೆಗೊಂದುಮರ ಊರಿಗೊಂದು ವನ ಎಂಬ ಮಾತನ್ನುಪ್ರತಿಯೊಬ್ಬರೂ ಪಾಲಿಸಲು ಮುಂದಾಗಬೇಕು ಹಾಗೂ ದೊಡ್ಡ ದೊಡ್ಡ ಯೋಜನೆಗಳಿಗೆ ಇಲ್ಲಿ ಅನುಮತಿ ನೀಡಬಾರದು. ಇತಿಹಾಸ್‌, ಪರಿಸರ ಹೋರಾಟಗಾರ

 

ಸುಧೀರ್‌ ಎಸ್‌.ಎಲ್‌

 

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

11

Hasan: 100 ರೂ.ಗೆ ಸ್ನೇಹಿನನ್ನೇ ಹತ್ಯೆಗೈದ ಕಿರಾತಕರು

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

Hassan; ಟವಲ್‌ ಹೇಗೆ ಹಾಕುತ್ತಾರೆ: ಸಚಿವ ಕೆ.ಎನ್‌. ರಾಜಣ್ಣ ಪ್ರಶ್ನೆ

ಸರಕಾರದ ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

State Govt ಹಿಡಿತದಲ್ಲಿ ಸಿಲುಕಿದ ಎಸ್‌ಐಟಿ: ಎಚ್‌.ಡಿ. ರೇವಣ್ಣ

A vehicle caught fire at Shiradi Ghat

Shiradi ಘಾಟ್‌ನಲ್ಲಿ ವಾಹನ ಬೆಂಕಿಗೆ ಆಹುತಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.