ಗಾಳಿ ಮಳೆಗೆ ಕುಸಿದ ಮನೆಗಳು: ಅಪಾರ ನಷ್ಟ

ನೀರಿನ ಸಮಸ್ಯೆ ನಿವಾರಣೆಗೆ ನೋಡೆಲ್‌ ಅಧಿಕಾರಿಗಳ ನೇಮಕ

Team Udayavani, May 14, 2019, 9:45 AM IST

hasan-tdy-2..

ಹೊಳೆನರಸೀಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ಅವರ ಅಧ್ಯಕ್ಷತೆಯಲ್ಲಿ ಅತಿವೃಷ್ಟಿ ಅನಾವೃಷಿ ತುರ್ತುಸಭೆ ನಡೆಸಿದರು.

ಹೊಳೆನರಸೀಪುರ: ತಾಲೂಕಿನಲ್ಲಿ ಸುರಿದ ಗಾಳಿ ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಗಳು ಕುಸಿದು ಅಪಾರ ನಷ್ಟವಾಗಿದೆ ಎಂದು ತಹಶೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ನುಡಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪ್ರಸ್ತುತ ತಾಲೂಕಿನ ಗ್ರಾಮಿಣ ಪ್ರದೇಶಗಳಲ್ಲಿ ಬಿರುಗಾಳಿ ಸಮೇತ ಬಿದ್ದ ಮಳೆಯಿಂದ ಸಾಕಷ್ಟು ನಷ್ಟಕ್ಕೆ ಕಾರಣ ವಾಗಿದೆ ಎಂದರು.

ಕುಡಿಯುವ ನೀರಿನ ಸಮಸ್ಯೆ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಬಾರದೇ ಕುಡಿಯುವ ನೀರಿನ ಕೊರತೆಯಿಂದ ಜನತೆ ಸಂಕಷ್ಟ ಎದುರಿಸುವಂತಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತಾಲೂಕಿನ ಮೂರು ಹೋಬಳಿ ಗಳಿಗೆ ಮೂವರು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿ ಸಂಪೂರ್ಣ ತನಿಕೆ ನಡೆಸಿ ಪೂರ್ಣ ಮಾಹಿತಿ ನೀಡಿ ಸಂಕಷ್ಟದಲ್ಲಿರುವ ಜನತೆಗೆ ಸಹಕಾರ ನೀಡಲು ಮುಂದಾಗ ಬೇಕೆಂದು ಮನವಿ ಮಾತನಾಡಿದರು.

ನೋಡೆಲ್ ಅಧಿಕಾರಿಗಳ ನೇಮಕ: ತಾಲೂಕಿ ನಲ್ಲಿ ಮುಂಗಾರು ಮಳೆಯಿಂದಾಗಿ ಸಂಭವಿಸ ಬಹುದಾದ ನಷ್ಟಗಳನ್ನು ತಡೆಯಲು ಮುನ್ನೆಚ್ಚ ರಿಗೆ ಕ್ರಮವಾಗಿ ಮೂರು ಹೋಬಳಿಗಳಿಗೂ ಒಬ್ಬರಂತೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು.

ತಾಲೂಕಿನ ಕಸಬಾ ಹೋಬಳಿಗೆ ಪಶು ಸಂಗೋಪನಾ ಇಲಾಖೆಯ ವೈದ್ಯ ಡಾ.ತಿಪ್ಪೇ ಸ್ವಾಮಿ, ಹಳೇಕೋಟೆ ಹೋಬಳಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಲಿಂಗು ಹಾಗು ಹಳ್ಳಿಮೈಸೂರು ಹೋಬಳಿಗೆ ಲೊಕೋಪಯೋಗಿ ಇಲಾಖೆಯ ಎಇಇ ಮಲ್ಲಿಕಾರ್ಜುನ್‌ ಅವರನ್ನು ನೋಡೆಲ್ ಅಧಿಕಾರಿಗಳಾಗಿ ನೇಮಕ ಮಾಡಲಾಯಿತು.

ಮಳೆಯಿಂದ ಮನೆಗಳಿಗೆ ಹಾನಿ: ಈಗಾಗಲೇ ತಾಲೂಕಿನ ಗ್ರಾಮಿಣ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಬಿರುಗಾಳಿ ಸಮೇತ ಬಿದ್ದ ಮಳೆಯಿಂದ ತಾಲೂಕಿನ ಅತ್ತಿಚೌಡೇನಹಳ್ಳಿ ಗ್ರಾಮದ ಸುಬ್ಬೇಗೌಡ‌, ಅವರಿಗೆ ಸೇರಿದ ವಾಸದ ಮನೆ ಬಿರುಗಾಳಿಯಿಂದ ನೆಲಕಚ್ಚಿದೆ, ಶಿಗರನಹಳ್ಳಿ ಗ್ರಾಮದ ಶಾರದಮ್ಮ ಅವರಿಗೆ ಸೇರಿದ 15 ಸಾವಿರ ಬಾಳೆಗಿಡಗಳಲ್ಲಿ ಶೇ. 40 ಕ್ಕೂ ಹೆಚ್ಚು ಗಿಡಗಳು ನೆಲಕಚ್ಚಿವೆ. ಶಿಗರನಹಳ್ಳೀ ರಾಮೇಗೌಡ ಅವರ ಮನೆ ನೆಲಕಚ್ಚಿದೆ. ಕಾಮ ಸಮುದ್ರದ ಶಿವಣ್ಣ ಅವರಿಗೆ ಸೇರಿದ ಮನೆಗೆ ಅಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ಆಹಾರ ಪದಾರ್ಥಗಳು ಸೇರಿದಂತೆ ಸಾಕಷ್ಟು ಸುಟ್ಟುಕರಕಲಾಗಿದೆ.

ಅದೇ ರೀತಿ ಮಲ್ಲಪ್ಪನಹಳ್ಳಿ ಗ್ರಾಮ ವೃತ್ತಕ್ಕೆ ಸೇರಿದ ಕೃಷ್ಣಾಪುರ, ಸಂಕನಹಳ್ಳೀ, ಪಟ್ಟಣದ ಮಹದೇವಮ್ಮ, ಗಿರೀಶ್‌, ಬಂಡಿಶೆಟ್ಟಿಹಳ್ಳಿಯ ಯೋಗಣ್ಣ, ಗನ್ನಿಕಟ ಹುಲಿವಾಲ ಕಂಬೇಗೌಡ ಅವರಿಗೆ ಸೇರಿದ ಚಾವಣಿ ಸೇರಿದಂತೆ ಸಾಕಷ್ಟು ನಷ್ಟವಾಗಿದೆ. ಇದೇ ರೀತಿ ತಾಲೂಕಿನ ಹಾವಿನ ಮಾರನಹಳ್ಳಿ ಗ್ರಾಮದ ಕಮಲಮ್ಮ, ಬೋರೇ ಗೌಡ, ಶಾಂತಮ್ಮ ಹಾಗೂ ಕಾಳೇಗೌಡರಿಗೆ ಸೇರಿದ ಮನೆಗಳ ಹೆಂಚುಗಳು ಬಿರುಗಾಳಿಗೆ ತೂರಿ ಹೋಗಿ ಸಾಕಷ್ಟು ನಷ್ಟಕ್ಕೆ ಕಾರಣವಾಗಿದೆ.

ಈ ಬಗ್ಗೆ ತಾಲೂಕು ಆಡಳಿತ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ನೀಡಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿ ಸರ್ಕಾರ ನೀಡಿರು ಸುತ್ತೋಲೆ ಪ್ರಕಾರ ನಷ್ಟಕ್ಕೆ ಒಳಗಾಗಿರುವವರಿಗೆ ಸರ್ಕಾರದಿಂದ ಹಣ ಪಾವತಿಸಲು ಕ್ರಮಕೈಗೊಳ್ಳ ಲಾಗುವುದೆಂದು ತಿಳಿಸಿದರು.

ತಹಶೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ ತುರ್ತು ಸಭೇಯಲ್ಲಿ ತಾಪಂ ಇಒ ಕೆ.ಯೋಗೇಶ್‌, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿ ಮಹೇಶ್‌, ಜಿಪಂ ಎಂಜಿನಿಯರ್‌ ಪ್ರಭು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK-Shivakumar

Yettinahole: ನಮ್ಮ ಸರಕಾರದ ಸಾಕ್ಷಿಗುಡ್ಡೆ ಎತ್ತಿನಹೊಳೆ: ಡಿಸಿಎಂ ಡಿ.ಕೆ. ಶಿವಕುಮಾರ್‌

Yettinahole Project: ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Yettinahole Project: ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Sakleshpura ಇಂದಿನಿಂದ ನೀರೆತ್ತಿನ ಹೊಳೆ; ಸಿದ್ದು 2.0 ಸರಕಾರದ ಅತೀ ದೊಡ್ಡ ಭರವಸೆ ಜಾರಿ

Sakleshpura ಇಂದಿನಿಂದ ನೀರೆತ್ತಿನ ಹೊಳೆ; ಸಿದ್ದು 2.0 ಸರಕಾರದ ಅತೀ ದೊಡ್ಡ ಭರವಸೆ ಜಾರಿ

HDD-LARGE

HD Deve Gowda: ರಾಜ್ಯ ವಿದ್ಯಮಾನದ ಕುರಿತು ಈಗೇನೂ ಹೇಳಲಾರೆ

Devegowda

Hasana: ನಾಲ್ಕು ತಿಂಗಳ ಬಳಿಕ ತವರು ಜಿಲ್ಲೆಗೆ ಆ.31ರಂದು ದೇವೇಗೌಡ ಭೇಟಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.