ವಸತಿ ಯೋಜನೆ ಮನೆ ನಿರ್ಮಾಣಕ್ಕೆ ಮತ್ತೊಂದು ಅವಕಾಶ
Team Udayavani, Feb 24, 2020, 3:00 AM IST
ಸಕಲೇಶಪುರ: ವಿವಿಧ ಕಾರಣಗಳಿಂದಾಗಿ ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿರ್ಮಿಸಿಕೊಳ್ಳದ ಫಲಾನುಭವಿಗಳ ಮನೆಗಳ ನಿರ್ಮಾಣಕ್ಕೆ ಸರ್ಕಾರ ಇದೀಗ ಮನೆ ನಿರ್ಮಿಸಿಕೊಳ್ಳಲು ಮತ್ತೊಂದು ಅವಕಾಶ ನೀಡಿದೆ.
ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಮತ್ತು ಬಸವ ವಸತಿ ಯೋಜನೆಯಡಿ ಸಕಾಲದಲ್ಲಿ ಮನೆ ನಿರ್ಮಿಸಿಕೊಳ್ಳದ ಸಕಲೇಶಪುರ ತಾಲೂಕಿನ 1,160 ಮನೆಗಳ ನಿರ್ಮಾಣದ ತಡೆಯನ್ನು ಫೆ.14 ರಂದು ತೆರವುಗೊಳಿಸಿದ್ದು, 2020ರ ಮಾ.14 ರವರೆಗೆ ಮನೆಗಳ ನಿರ್ಮಾಣಕ್ಕೆ ಕಾಲಾವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಇದರ ಸದುಪಯೋಗವನ್ನು ಬಳಸಿಕೊಂಡು ಸಕಲೇಶಪುರ ತಾಲೂಕಿನ 26 ಗ್ರಾಮ ಪಂಚಾಯಿತಿಗಳ 1,160 ಮನೆಗಳ ಫಲಾನುಭವಿಗಳು ಮನೆಗಳನ್ನು ನಿರ್ಮಿಸಿಕೊಂಡು ಸರ್ಕಾರದ ಸಹಾಯಧನವನ್ನು ಪಡೆದುಕೊಳ್ಳುವಂತೆ ಸೂಚಿಸಿದೆ.
ಪಿಡಿಒಗಳಿಗೆ ನೋಟಿಸ್: ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬ್ಲಾಕ್ ತೆರವಾದ ಮನೆಗಳ ಫಲಾನುಭವಿಗಳಿಗೆ ನೋಟಿಸ್ ನೀಡಿ ತುರ್ತಾಗಿ ಮನೆಗಳ ನಿರ್ಮಾಣವಾಗುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ರದ್ದಾದ ಮನೆಗಳ ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮ ಪಂಚಾಯಿತಿ ಅಥವಾ ತಾಲೂಕು ಪಂಚಾಯಿತಿಗೆ ಭೇಟಿ ನೀಡಿ ವಿಚಾರಿಸಲು ಸೂಚಿಸಿದೆ.
ಪೋಟೋ ಅಪ್‌ಲೋಡ್ ಮಾಡಲು ಸೂಚನೆ: ಫಲಾನುಭವಿಗಳು ಈಗಾಗಲೇ ಅಡಿಪಾಯ ನಿರ್ಮಿಸಿಕೊಂಡಿದ್ದರೆ ಆ್ಯಂಡ್ರಾಯ್ಡ್ ಪೋನ್ ನ ಗೂಗಲ್ ಪ್ಲೇಸ್ಟೋರ್ ನಲ್ಲಿ ಇಂದಿರಾ ಮನೆ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ತಮ್ಮ ಮನೆಯ ಅಡಿಪಾಯದ ಪೋಟೋ ಅಪ್ ಲೋಡ್ ಮಾಡಲು ಸೂಚಿಸಿದೆ.
ವಸತಿ ಯೋಜನೆ ಪ್ರಗತಿ: ಈಗಾಗಲೇ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್‌ರವರ ಕಾರ್ಯದಕ್ಷತೆಯಿಂದ ತಾಲೂಕು ವಸತಿ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಸರ್ಕಾರದ ಈ ತೀರ್ಮಾನದಿಂದ ವಸತಿ ಯೋಜನೆಯ ಅನುಷ್ಠಾನದಲ್ಲಿ ಮತ್ತಷ್ಟು ಸಾಧನೆ ಮಾಡುವ ಎಲ್ಲಾ ಸಾಧ್ಯತೆಗಳಿದೆ.
ಸರ್ಕಾರ ಬಡವರಿಗೆ ಮನೆ ಕಟ್ಟಿಸಿಕೊಳ್ಳಲು ಅವಕಾಶ ನೀಡಿದ್ದು ಅರ್ಜಿ ಸಲ್ಲಿಸಿದವರು ಕೂಡಲೇ ಇದರ ಸದುಪಯೋಗ ಮಾಡಿಕೊಳ್ಳಬೇಕು.
-ಹರೀಶ್, ತಾಪಂ ಕಾರ್ಯನಿರ್ವಹಣಾಧಿಕಾರಿ
ಬಡವರ ಅನುಕೂಲಕ್ಕಾಗಿ ಬಿಜೆಪಿ ಸರ್ಕಾರ ಈ ಒಂದು ತೀರ್ಮಾನ ಕೈಗೊಂಡಿರುವುದು ಶ್ಲಾಘನೀಯ. ಸರ್ಕಾರದ ಈ ನಿರ್ಧಾರದಿಂದ ಹಲವಾರು ಬಡವರಿಗೆ ಅನುಕೂಲವಾಗುತ್ತದೆ.
-ಶ್ವೇತಾ, ತಾಪಂ ಅಧ್ಯಕ್ಷರು
* ಸುಧೀರ್ ಎಸ್.ಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.